ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ರೊಮ್ಯಾಂಟಿಕ್‌ ಮೂಡ್‌ನಲ್ಲಿ ಗಿಲ್ಲಿ-ಕಾವ್ಯ!

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ರೊಮ್ಯಾಂಟಿಕ್‌ ಮೂಡ್‌ನಲ್ಲಿ ಗಿಲ್ಲಿ-ಕಾವ್ಯ!

ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ಕಾವ್ಯ ಜೋಡಿ ಮೋಡಿ ಮಾಡ್ತಿದ್ದಾರೆ. ಜಂಟಿಯಾಗಿ ದೊಡ್ಮನೆಗೆ ಕಾಲಿಟ್ಟ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಆದ್ರೆ ಈ ಜೋಡಿಯನ್ನ ಕಂಡ್ರೆ ದೊಡ್ಮನೆಯಲ್ಲಿ ಉರಿದುಕೊಳ್ಳುವವರೇ ಜಾಸ್ತಿ. ಇದೀಗ ಗಿಲ್ಲಿ, ಕಾವ್ಯ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಅಂತಾ ಹೇಳ್ತಾ ರೊಮ್ಯಾಂಟಿಕ್‌ ಮೂಡ್‌ಗೆ ಹೋಗಿದ್ದಾರೆ.

ಇದನ್ನೂ ಓದಿ: ಸಿಲಿಕಾನ್‌ ಸಿಟಿ ಮಂದಿಗೆ ಗುಡ್‌ನ್ಯೂಸ್!‌ – ನಾಳೆಯಿಂದ ಯೆಲ್ಲೋ ಲೈನ್‌ನಲ್ಲಿ 15 ನಿಮಿಷಕ್ಕೊಂದು ರೈಲು ಸಂಚಾರ

ಬಿಗ್‌ ಬಾಸ್‌ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ಕಾಲೇಜು ಸ್ಟೂಡೆಂಟ್‌ ಆಗಿದ್ದಾರೆ. ಇದೀಗ ದೊಡ್ಮನೆಯಲ್ಲಿ ಬಿಬಿಕೆ ಫೆಸ್ಟ್‌ ನಡಿತಾ ಇದೆ. ನಿನ್ನೆ ಗಿಲ್ಲಿ ಅಶ್ವಿನಿ ಜೊತೆ ಡ್ಯಾನ್ಸ್‌ ಮಾಡಿದ್ರೆ, ಕಾವ್ಯ ಹಾಗೂ ಸೂರಜ್‌ ಡ್ಯಾನ್ಸ್‌ ಮಾಡಿದ್ರು. ಕಾವ್ಯ ಸೂರಜ್‌ ಡ್ಯಾನ್ಸ್‌ ಮಾಡ್ತಿರೋದನ್ನ ನೋಡಿ ಗಿಲ್ಲಿ ಸಪ್ಪೆ ಮೋರೆ ಹಾಕಿದ್ರು. ಈ ಸ್ಥಾನದಲ್ಲಿ ತಾನಿರಬೇಕಿತ್ತು ಅಂತ ಮನಸಲ್ಲೇ ಅಂದ್ಕೊಂಡಿದ್ರು. ಅನ್ಸುತ್ತೆ. ರೋಗಿ ಬಯಸಿದ್ದು ಹಾಲು, ಅನ್ನ. ವೈದ್ಯ ಹೇಳಿದ್ದು ಹಾಲು, ಅನ್ನ ಅನ್ನೋ ಮಾತಿನಂತೆ ಇದೀಗ ಗಿಲ್ಲಿಗೆ ಕಾವ್ಯ ಜೊತೆ ಡ್ಯಾನ್ಸ್‌ ಮಾಡೋ ಅವಕಾಶ ಸಿಕ್ಕಿದೆ. ಗಿಲ್ಲಿ, ಕಾವು ರೊಮ್ಯಾಂಟಿಕ್‌ ಹಾಡಿಗೆ ಭರ್ಜರಿ ಸ್ಟೆಪ್ಸ್‌ ಹಾಕಿದ್ದಾರೆ. ಇದ್ರ ಪ್ರೋಮೋವನ್ನ ಕಲರ್ಸ್‌ ಕನ್ನಡ ರಿಲೀಸ್‌ ಮಾಡಿದೆ.

ಕಳೆದ ಎಪಿಸೋಡ್‌ನಲ್ಲಿ ನಡೆದ ಬಿಬಿ ಫೆಸ್ಟ್‌ನಲ್ಲಿ ಸೂರಜ್‌ ಹಾಗೂ ಕಾವ್ಯ ಜೋಡಿ ರೊಮ್ಯಾಂಟಿಕ್‌ ಡ್ಯಾನ್ಸ್‌ ಮಾಡಿ ಎಲ್ಲರ ಗಮನ ಸೆಳೆದಿದ್ರು. ಇವರಿಬ್ಬರ ನಡುವಿನ ಕೆಮೆಸ್ಟ್ರಿ ಜಡ್ಜ್‌ಗಳಾಗಿ ಆಗಮಿಸಿದ್ದ ಭಾಗ್ಯ ಹಾಗೂ ಪ್ರೇಮರ ಮನಸ್ಸನ್ನೂ ಕದ್ದಿತ್ತು. ಎಲ್ಲರಿಗೂ ಖುಷಿಯಾಗಿದ್ರೆ ಗಿಲ್ಲಿ ಮಾತ್ರ ಈ ಪರ್ಫಾಮೆನ್ಸ್‌ ನೋಡಿ ಉರಿದು ಹೋಗಿದ್ರು. ತಾನಿರಬೇಕಾದ ಜಾಗದಲ್ಲಿ ಸೂರಜ್‌ ಇದ್ದಾನಲ್ಲ ಎಂದು ಹೊಟ್ಟೆ ಉರ್ಕೊಂಡಿದ್ರು. ಇದೀಗ ಬಿಗ್‌ಬಾಸ್‌ ಅವರಿಗೂ ಒಂದು ಅವಕಾಶ ನೀಡಿದ್ದಾರೆ. ಕಾವ್ಯ ಜೊತೆಗೆ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಹಾಡಿಗೆ ಡ್ಯಾನ್ಸ್‌ ಮಾಡೋ ಚಾನ್ಸ್‌ಕೊಟ್ಟಿದ್ದಾರೆ. ಇಂತದ್ದೊಂದು ಚಾನ್ಸ್‌ಗೆ ಕಾಯುತ್ತಲೇ ಇದ್ದ ಗಿಲ್ಲಿ ತಾನು ಕಾಮಿಡಿಯನ್‌ ಅನ್ನೋದನ್ನೂ ಮರೆತು ಸೂಪರ್‌ ಆಗಿ ಡ್ಯಾನ್ಸ್‌ ಮಾಡಿ ತಮ್ಮೊಳಗಿರುವ ಡ್ಯಾನ್ಸ್‌ನ್ನೂ ಹೊರಗೆ ತಂದಿದ್ದಾರೆ. ಗಿಲ್ಲಿ –ಕಾವ್ಯ ಕೆಮೆಸ್ಟ್ರಿ ಇನ್ನೂ ಅದ್ಭುತವಾಗಿ ಕಾಣಿಸಿದ್ದು, ಈ ಫರ್ಫಾಮೆನ್ಸ್‌ನ್ನು ನೋಡಿ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಈ ಜೋಡಿ ಹೀಗೆ ಖುಷಿಯಾಗಿರ್ಲಿ ಅಂತಾ ಅನೇಕರು ಕಮೆಂಟ್‌ ಮಾಡಿದ್ದಾರೆ.

Shwetha M