ನಟ‌ ದರ್ಶನ್, ಪವಿತ್ರಾ ವಿರುದ್ಧ ದೋಷಾರೋಪ ನಿಗದಿಗೆ ಡೇಟ್‌ ಫಿಕ್ಸ್!‌ – ನ. 3 ಕ್ಕೆ ಡಿ ಗ್ಯಾಂಗ್‌ ಕೋರ್ಟ್‌ಗೆ ಹಾಜರ್!‌

ನಟ‌ ದರ್ಶನ್, ಪವಿತ್ರಾ ವಿರುದ್ಧ ದೋಷಾರೋಪ ನಿಗದಿಗೆ ಡೇಟ್‌ ಫಿಕ್ಸ್!‌ – ನ. 3 ಕ್ಕೆ ಡಿ ಗ್ಯಾಂಗ್‌ ಕೋರ್ಟ್‌ಗೆ ಹಾಜರ್!‌

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ ಗ್ಯಾಂಗ್‌ ಜೈಲು ಸೇರುವಂತೆ ಆಗಿದೆ. ಇದೀಗ ಈ ಪ್ರಕರಣದ ಸಂಬಂಧಿಸಿದಂತೆ ನ.3ಕ್ಕೆ ಚಾರ್ಜ್‌ಫ್ರೇಮ್ ನಿಗದಿ ಮಾಡಲಾಗಿದೆ ಎಂದು ಸೆಷನ್ಸ್ ಕೋರ್ಟ್ ಹೇಳಿದೆ.

ಇದನ್ನೂ ಓದಿ: ಮಾಟ – ಮಂತ್ರ ವಿಚಾರವಾಗಿ ಜಗಳ – ಹೆಂಡ್ತಿ ಮೇಲೆ ಬಿಸಿ ಮೀನು ಸಾರು ಎರಚಿದ ಪಾಪಿ ಪತಿ

ಇಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ರು. ಈ ವೇಳೆ ದೋಷಾರೋಪ ವಿಚಾರಣೆ ನಿಗದಿ ಬಗ್ಗೆ ಕೋರ್ಟ್ ಮಾಹಿತಿ ನೀಡಿದೆ. ಸೋಮವಾರ ಎಲ್ಲಾ ಆರೋಪಿಗಳು ಹಾಜರಿರಬೇಕು. ಗೈರಾದವರ ಬಂಧನಕ್ಕೆ ಕೋರ್ಟ್ ಸೂಚನೆ ನೀಡಿದೆ.

ಕೊಲೆ ಪ್ರಕರಣ ಸಂಬಂಧ ಆರೋಪಿಗಳು ವಿಚಾರಣೆಗೆ ಹಾಜಗಿದ್ದ ವೇಳೆ, ನಾವು ಮಾತನಾಡೋದು ಕೇಳಿಸ್ತಾ ಇದ್ಯಾ ಎಂದು ನ್ಯಾಯಾಧೀಶರು ಕೇಳಿದರು. ಕೇಳುತ್ತಾ ಇದೆ ಅಂತ ಆರೋಪಿಗಳು ಹೇಳಿದರು. ಚಾರ್ಜ್‌ಫ್ರೇಮ್ ಮಾಡುತ್ತೀವಿ ಕೇಳ್ತಾ ಇದೆ ಅಲ್ವಾ ಎಂದು ನ್ಯಾಯಾಧೀಶರು ಕೇಳಿದರು. ಈ ವೇಳೆ ಆರೋಪಿಗಳ ಹೆಸರು ಕೂಗಿ ಹಾಜರಾತಿ ಪಡೆಯಲಾಯಿತು. 16 ಮತ್ತು 17ನೇ ಆರೋಪಿಗಳು ಗೈರಾಗಿದ್ದರು. ಕುಟುಂಬದಲ್ಲಿ ಸಮಸ್ಯೆ ಇದೆ. ಹೀಗಾಗಿ ಹಾಜರಾಗಿಲ್ಲ ಎಂದು ಕೋರ್ಟ್‌ಗೆ ತಿಳಿಸಲಾಯಿತು.

ಫಿಸಿಕಲ್ ಆಗಿ ಹಾಜರಾಗಲು ಅವಕಾಶ ಮಾಡಿಕೊಡಿ. ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ಪಷ್ಟನೆ ಇರೋದಿಲ್ಲ ಎಂದು ದರ್ಶನ್ ಪರ ವಕೀಲ ಸುನಿಲ್ ಮನವಿ ಮಾಡಿಕೊಂಡರು. ಇದೇ ವೇಳೆ, ಆರೋಪಿಗಳ ಭೇಟಿ ಮಾಡಲು ವಕೀಲರಿಗೆ ಅವಕಾಶ ನೀಡಲು ಮನವಿ ಮಾಡಲಾಯಿತು. ನಾಳೆ ಜೈಲಿನಲ್ಲಿ ಆರೋಪಿಗಳ ಭೇಟಿಗೆ ನ್ಯಾಯಾಲಯ ಅವಕಾಶ ನೀಡಿತು.

ನವೆಂಬರ್ 3ಕ್ಕೆ ಚಾರ್ಜ್‌ಫ್ರೇಮ್ ನಿಗದಿ ಮಾಡಿ ಸೋಮವಾರಕ್ಕೆ ವಿಚಾರಣೆ ಮುಂದೂಡಲಾಗಿದೆ. ಎಲ್ಲಾ ಆರೋಪಿಗಳು ಹಾಜರಾಗಬೇಕು. ಗೈರಾದ್ರೆ ಅವತ್ತೆ ಬಂಧನಕ್ಕೆ ಆದೇಶ ನೀಡುವುದಾಗಿ ಕೋರ್ಟ್ ಎಚ್ಚರಿಕೆ ನೀಡಿದೆ.

Shwetha M