ಶತಕ ಸಿಡಿಸಿದ ಜೆಮಿಮಾಗೆ ಸಲಾಂ – ಆಸೀಸ್ ವಿರುದ್ಧ ಭಾರತದ ಸಿಂಹಿಣಿಯ ಕೆಚ್ಚೆದೆಯ ಹೋರಾಟ

ಶತಕ ಸಿಡಿಸಿದ ಜೆಮಿಮಾಗೆ ಸಲಾಂ – ಆಸೀಸ್ ವಿರುದ್ಧ ಭಾರತದ ಸಿಂಹಿಣಿಯ ಕೆಚ್ಚೆದೆಯ ಹೋರಾಟ

ಭಾರತ-ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯದಲ್ಲಿ, ಭಾರತ ಗೆದ್ದು ಬೀಗಿದೆ. ಆಸ್ಟ್ರೇಲಿಯಾ ನೀಡಿದ 339 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಬಲ ತಂದುಕೊಟ್ಟಿದ್ದು ಜೆಮಿಮಾ ರಾಡ್ರಿಗಸ್ ಅವರ ಭರ್ಜರಿ ಶತಕ. ಇದು ಜೆಮಿಮಾ ವೃತ್ತಿಜೀವನದ 3ನೇ ಹಾಗೂ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಶತಕವಾಗಿದೆ.

ಇದನ್ನೂ ಓದಿ:ವಿಶ್ವಕಪ್ ಫೈನಲ್‌ಗೇರಿದ ಟೀಂ ಇಂಡಿಯಾ – ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಮುಖಭಂಗ

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಸೆಮಿಫೈನಲ್‌ ಪಂದ್ಯ ರೋಚಕವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 339 ರನ್ ಕಲೆಹಾಕಿದೆ.ಈ ಗುರಿ ಬೆನ್ನಟ್ಟಿರುವ ಟೀಂ ಇಂಡಿಯಾ ಪರ ಜೆಮಿಮಾ ರೋಡ್ರಿಗಸ್ (Jemimah Rodrigues) ಸ್ಮರಣೀಯ ಶತಕ ಸಿಡಿಸಿದ್ದಾರೆ. ಆಸ್ಟ್ರೇಲಿಯಾ ನೀಡಿದ 338 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 59 ರನ್‌ಗಳಿಗೆ ಇಬ್ಬರು ಆರಂಭಿಕರನ್ನು ಕಳೆದುಕೊಂಡಿತು. ಈ ಹಂತದಲ್ಲಿ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡ ಜೆಮಿಮಾ ರೋಡ್ರಿಗಸ್, ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಜೊತೆಯಾಟ ಉತ್ತಮವಾಗಿತ್ತು. ಆಸ್ಟ್ರೇಲಿಯಾದ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಜೆಮಿಮಾ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿ 57 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಗೆಯೇ ನಾಯಕಿ ಹರ್ಮನ್​ಪ್ರೀತ್ ಕೌರ್ ಅವರೊಂದಿಗೆ 167 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಗುರಿಯತ್ತ ಕೊಂಡೊಯ್ದರು. ಶತಕದಂಚಿನಲ್ಲಿ ಎಡವಿದ ಹರ್ಮನ್‌ಪ್ರೀತ್ ಕೌರ್ 89 ರನ್‌ಗಳಿಗೆ ಔಟಾದರು. ಆದರೆ, ದೃಢವಾಗಿ ನಿಂತ ಜೆಮಿಮಾ115 ಎಸೆತಗಳಲ್ಲಿ ತಮ್ಮ ಚೊಚ್ಚಲ ವಿಶ್ವಕಪ್ ಶತಕ ದಾಖಲಿಸಿದರು. ಇದು ಜೆಮಿಮಾ ಅವರ ವೃತ್ತಿಜೀವನದ ಮೂರನೇ ಶತಕವಾಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಮೊದಲ ಹಾಗೂ ವಿಶ್ವಕಪ್‌ನಲ್ಲಿ ಮೊದಲ ಶತಕವಾಗಿದೆ.

Sulekha