ಹೇಳಿದ ದಿನ ಬ್ಲೌಸ್‌ ಸ್ಟಿಚ್‌ ಮಾಡಿ ಕೊಡದ ಟೈಲರ್‌.. – ಭಾರಿ ದಂಡ ವಿಧಿಸಿದ ಕೋರ್ಟ್!‌

ಹೇಳಿದ ದಿನ ಬ್ಲೌಸ್‌ ಸ್ಟಿಚ್‌ ಮಾಡಿ ಕೊಡದ ಟೈಲರ್‌.. – ಭಾರಿ ದಂಡ ವಿಧಿಸಿದ ಕೋರ್ಟ್!‌

ಇತ್ತೀಚೆಗೆ ಬೇಕಾದಷ್ಟು ರೆಡಿಮೆಡ್‌ ಬಟ್ಟೆಗಳು ಸಿಗುತ್ತವೆ. ಆದ್ರೆ ಸೀರೆ ಬ್ಲೌಸ್‌, ಕೆಲವೊಂದು ಡ್ರೆಸ್‌ಗಳನ್ನ  ಹೊಲಿಯಲು ಟೈಲರ್‌ಗೆ ಕೊಡುತ್ತೇವೆ. ಕೆಲವರು ನಾವು ಹೇಳಿದ ಡೇಟ್‌ಗೆ ಬಟ್ಟೆ ಹೊಲಿದು ಕೊಟ್ರೆ, ಇನ್ನೂ ಕೆಲವರು ಏನೇನೋ ಕಾರಣ ಕೊಟ್ಟು ಹಾಗೇ ಇಟ್ಟುಕೊಳ್ಳುತ್ತಾರೆ. ಆದ್ರೀಗ ಇಲ್ಲೊಬ್ಬರು ಮಹಿಳೆ ಬಟ್ಟೆ ಸ್ಟಿಚ್‌ ಮಾಡದೇ ಸತಾಯಿಸಿದ್ದ ಟೈಲರ್‌ಗೆ ಸರಿಯಾಗೇ ಪಾಠ ಕಲಿಸಿದ್ದಾರೆ.

ಇದನ್ನೂ ಓದಿ: ಚಿಂತೆಯಲ್ಲೇ ಸೊರಗಿ ಸಣ್ಣ ಆದ ದರ್ಶನ್! – ಎರಡು ತಿಂಗಳಲ್ಲಿ ಬರೋಬ್ಬರಿ 10 ಕೆಜಿ ಇಳಿಕೆ!

ಏನಿದು ಘಟನೆ?  

ಮಹಿಳೆಯೊಬ್ಬರು ಸಂಬಂಧಿಕರ ಮದುವೆಯಲ್ಲಿ ಧರಿಸುವುದಕ್ಕಾಗಿ ಬ್ಲೌಸ್​ ಹೊಲಿಯಲು ಕೊಟ್ಟಿದ್ದರು. ಅದಕ್ಕಾಗಿ ಮುಂಗಡವಾಗಿ 4,395 ರೂ.ಗಳನ್ನು ಕೂಡ ಪಾವತಿಸಿದ್ದರು. ಅದು ಡಿಸೈನಿಂಗ್​ ರವಿಕೆ ಆದ್ದರಿಂದ ಮದುವೆಯಲ್ಲಿ ಅದನ್ನು ಹಾಕಿಕೊಂಡು ಮಿಂಚುವ ಆಸೆ ಹೊಂದಿದ್ದರು. ಆದರೆ ನಿಗದಿತ ದಿನ ಹೋಗಿ ಕೇಳಿದರೂ, ರವಿಕೆಯನ್ನು ಹೊಲಿದಿರಲಿಲ್ಲ. ಮದುವೆಗೂ ಮುಂಚೆಯೇ ಕೊಡುವುದಾಗಿ ಪುನಃ ಟೈಲರ್​ ಭರವಸೆ ಕೊಟ್ಟರೂ ಅದನ್ನು ಈಡೇರಿಸಲಿಲ್ಲ. ಇದರಿಂದ ಬೇರೆ ರವಿಕೆಯನ್ನು ತೊಟ್ಟು ಮದುವೆಗೆ ಅಟೆಂಡ್​ ಆಗಬೇಕಾಯಿತು. ಇದ್ರಿಂದ ಸಿಟ್ಟಾದ ಮಹಿಳೆ ಟೈಲರ್​ ವಿರುದ್ಧ ಅಹಮದಾಬಾದ್​ನ ಗ್ರಾಹಕರ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಿಳಂಬದಿಂದ ತಮಗೆ ಮಾನಸಿಕ ಕಿರುಕುಳ ತಂದಿದೆ ಎಂದು ದೂರಿದ್ದರು.

ನ್ಯಾಯಾಲಯವು ಬ್ಲೌಸ್ ವಿಳಂಬದಿಂದಾಗಿ ದರ್ಜಿಯನ್ನು ತಪ್ಪಿತಸ್ಥರೆಂದು ಪರಿಗಣಿಸಿತು. ನೋಟಿಸ್​ ಕಳುಹಿಸಿದರೂ ಟೈಲರ್​ ಕೋರ್ಟ್​ ಮುಂದೆ ಹಾಜರಾಗಲಿಲ್ಲ. ಇದನ್ನು ಕೋರ್ಟ್​ ಗಂಭೀರವಾಗಿ ಪರಿಗಣಿಸಿ, ವಿಳಂಬ ಮತ್ತು ಕಳಪೆ ಸೇವೆಗಾಗಿ ಗ್ರಾಹಕ ನ್ಯಾಯಾಲಯವು ದಂಡ ವಿಧಿಸಿದೆ.  ಬ್ಲೌಸ್ ತಲುಪಿಸಲು ವಿಫಲವಾದ ಕಾರಣ ಸೇವೆಯಲ್ಲಿನ ಕೊರತೆಗಾಗಿ ಸಮಿತಿಯು ಅವರನ್ನು ತಪ್ಪಿತಸ್ಥರೆಂದು ಆದೇಶಿಸಿದೆ. ನ್ಯಾಯಾಲಯವು ಟೈಲರ್​ಗೆ ವಾರ್ಷಿಕ ಶೇಕಡಾ 7 ರಷ್ಟು ಬಡ್ಡಿಯೊಂದಿಗೆ 4,395 ರೂ.ಗಳನ್ನು ಮರುಪಾವತಿಸಲು ಮತ್ತು ಮಾನಸಿಕ ತೊಂದರೆ ಮತ್ತು ಮೊಕದ್ದಮೆ ವೆಚ್ಚಗಳಿಗೆ ಹೆಚ್ಚುವರಿ ಪರಿಹಾರವನ್ನು ಪಾವತಿಸಲು ನಿರ್ದೇಶಿಸಿತು, ಇದು ಸುಮಾರು 7,000 ರೂ.ಗಳಷ್ಟಿತ್ತು.

 

Shwetha M