ದೊಡ್ಮನೆಯ ಸಿಂಗಲ್ ಸಿಂಹ ಗಿಲ್ಲಿ! – ಹೋರಾಟಗಾರ್ತಿ ಅಶ್ವಿನಿ ಗೌಡ ತಾಕತ್ತಿಗೆ ಗಿಲ್ಲಿನಟ ಸವಾಲ್!

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿನಟ ಮೊದಲ ದಿನದಿಂದಲೂ ಸಖತ್ ಹೈಲೈಟ್. ಅಶ್ವಿನಿ ಗೌಡ ಸಣ್ಣ ಪುಟ್ಟ ವಿಚಾರಕ್ಕೂ ಜಗಳಕ್ಕೆ ಬಂದ್ರೆ ಗಿಲ್ಲಿನಟ ಕಾಮಿಡಿ ಮಾಡುತ್ತಲೇ ಆಕೆಗೆ ಬಿಸಿ ಮುಟ್ಟಿಸುತ್ತಾ ಬಂದಿದ್ದಾರೆ. ಇದೀಗ ಸಿಂಗಲ್ ಸಿಂಹ ಗಿಲ್ಲಿನಟ ಹೋರಾಟಗಾರ್ತಿ ಅಶ್ವಿನಿ ಗೌಡಗೆ ಸವಾಲ್ ಹಾಕಿದ್ದಾರೆ.
ಇದನ್ನೂ ಓದಿ:ಚಿಂತೆಯಲ್ಲೇ ಸೊರಗಿ ಸಣ್ಣ ಆದ ದರ್ಶನ್! – ಎರಡು ತಿಂಗಳಲ್ಲಿ ಬರೋಬ್ಬರಿ 10 ಕೆಜಿ ಇಳಿಕೆ!
ದೊಡ್ಮನೆಯಲ್ಲಿ ನಿನ್ನೆ ಡೊಡ್ಡ ಡ್ರಾಮವೇ ನಡೆದು ಹೋಯಿತು. ಕ್ಯಾಪ್ಟನ್ಸಿ ಓಟಕ್ಕಾಗಿ ನಡೆದು ನೀಲಿ ತಂಡ- ಕೆಂಪು ತಂಡ ನಡುವಣ ಟಾಸ್ಕ್ನಲ್ಲಿ ಅಂತಿಮವಾಗಿ ಕೆಂಪು ತಂಡ ಜಯ ಸಾಧಿಸಿತು. ಹೀಗಾಗಿ ಇವರ ತಂಡದಿಂದ ಓರ್ವ ಸದಸ್ಯನನ್ನು ಸ್ಟೂಡೆಂಟ್ ಆಫ್ ದಿ ವೀಕ್ಗೆ ಆಯ್ಕೆ ಮಾಡಬೇಕಿತ್ತು. ಅವರದ್ದೇ ತಂಡದ ಸದಸ್ಯರು ಒಮ್ಮತದ ನಿರ್ಧಾರ ಕೈಗೊಳ್ಳಬೇಕಿತ್ತು. ಅಶ್ವಿನಿ ಗೌಡ, ಕಾಕ್ರೋಚ್ ಸುಧಿ, ಧನುಷ್, ರಾಶಿಕಾ ಹಾಗೂ ಮಾಲು ರಾಶಿಕಾ ಹೆಸರನ್ನು ತೆಗೆದುಕೊಂಡರು. ಆದರೆ, ಗಿಲ್ಲಿ ಮತ್ತು ಸ್ಪಂದನಾ ತಮ್ಮ ತಮ್ಮ ಹೆಸರನ್ನು ತೆಗೆದುಕೊಂಡಿದ್ದಾರೆ. ಎಷ್ಟೇ ಚರ್ಚೆ ಮಾಡಿದರೂ ಗಿಲ್ಲಿ ಇತರರ ಹೆಸರು ಸೂಚಿಸಲು ತಯಾರಿರಲಿಲ್ಲ. ರಾಶಿಕಾಗೆ ಹೆಚ್ಚು ವೋಟ್ ಬಂದಿದ್ದರೂ ಇಲ್ಲಿ ಒಮ್ಮತದ ನಿರ್ಧಾರ ಇಲ್ಲದ ಕಾರಣ ಬಿಗ್ ಬಾಸ್ ಕೆಂಪು ತಂಡಕ್ಕೆ ಸಿಕ್ಕ ಸ್ಟೂಡೆಂಟ್ ಆಫ್ ದಿ ವೀಕ್ ಆಫರ್ ಅನ್ನು ರದ್ದುಗೊಳಿಸಿದರು. ಇಲ್ಲಿಂದ ಅಶ್ವಿನಿ ಹಾಗೂ ಗಿಲ್ಲಿ ನಡುವಣ ಜಟಾಪಟಿ ಮುಂದಿನ ಹಂತಕ್ಕೆ ಹೋಗಿದೆ. ಇದೀಗ ಕಲರ್ಸ್ ಕನ್ನಡ ಬಿಡುಗಡೆ ಮಾಡಿದೆ.
ಮನೆಯ ಈ ವಾರದ ಕ್ಯಾಪ್ಟನ್ ಆಗಿರುವ ರಘು, ನಿಮ್ಮ ಪ್ರಕಾರ ಡೇರಿಂಗ್ ಎಂದರೇನು ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಗಿಲ್ಲಿ, ಒಂದು ಟೀಮ್ನಲ್ಲಿ ಎಂಟು ಜನ ಇರುತ್ತಾರೆ ಸರ್.. ಅದರಲ್ಲಿ ಏಳು ಜನ ಒಬ್ಬರಿಗೆ ಸ್ಟೂಡೆಂಟ್ ಆಫ್ ದಿ ವೀಕ್ ಅವಾರ್ಡ್ ಕೊಡಬೇಕು ಅಂತ ಸರ್. ಆದ್ರೆ ಒಬ್ಬ ಸಿಂಗಲ್ ಸಿಂಹ ನನಗೆ ಬೇಕು ಅಂತ ನಿಂತುಕೊಳ್ಳುತ್ತಾನೆ. ಅದು ಸರ್ ಡೇರಿಂಗ್ ಎಂದು ಹೇಳಿದ್ದಾರೆ.
ಅತ್ತ ಅಶ್ವಿನಿ ಗೌಡ ಬಳಿ ಕೇಳಿದಾಗ, ನನ್ನ ಪ್ರಕಾರ ಅಶ್ವಿನಿ ಗೌಡ ಅಂದ್ರೆ ತಾಕತ್ತು.. ತಾಕತ್ತು ಅಂದ್ರೆ ಅಶ್ವಿನಿ ಗೌಡ ಎಂದು ಹೇಳಿದರು. ಹೀಗೆ ಹೇಳುತ್ತಿದ್ದಂತೆ ಗಿಲ್ಲಿ ಕ್ಯಾಪ್ಟನ್ ಬಳಿ ಬಂದು, ನನ್ಗೆ ಇದನ್ನೆಲ್ಲ ನೋಡೋಕೆ ಆಗ್ತಾ ಇಲ್ಲ ಅಂತ ನನ್ನ ಡಿಬಾರ್ ಮಾಡಿ ಸರ್ ಎಂದು ಹೇಳಿದ್ದಾರೆ. ಮಾತು ಮುಂದುವರೆಸಿದ ಅಶ್ವಿನಿ, ನಾವು ಹೋರಾಟ ಅಂತ ಬಂದಾಗ ನಮ್ಮನ್ನ ಬಕೆಟ್ ಅಂತ ಕರೆದಿದ್ದಾರೆ.. ಸೌಟು ಅಂತ ಕರೆದಿದ್ದಾರೆ.. ಇನ್ನೊಂದು ಅಂತ ಬಹಳ ಕೀಳು ಮಟ್ಟದಲ್ಲಿ ಮಾತನಾಡಬಹುದು. ಆದ್ರೆ ಎಲ್ಲವನ್ನೂ ಎದುರಿಸಿ ನಿಂತಿರುವುದು ನನ್ನ ತಾಕತ್ತು ಸರ್ ಎಂದು ಹೇಳಿದ್ದಾರೆ. ಇದೀಗ ಇವರಿಬ್ಬರ ನಡುವಿನ ಸಂಭಾಷಣೆ ಭಾರಿ ಕ್ಯೂರಿಯಾಸಿಟಿ ಮೂಡಿಸಿದೆ. ಮಾತಿನ ಯುದ್ದದಲ್ಲಿ ಯಾರು ಗೆಲ್ತಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

ನೋಡಿರಿ

