ಚಿಂತೆಯಲ್ಲೇ ಸೊರಗಿ ಸಣ್ಣ ಆದ ದರ್ಶನ್! – ಎರಡು ತಿಂಗಳಲ್ಲಿ ಬರೋಬ್ಬರಿ 10 ಕೆಜಿ ಇಳಿಕೆ!

ಚಿಂತೆಯಲ್ಲೇ ಸೊರಗಿ ಸಣ್ಣ ಆದ ದರ್ಶನ್! – ಎರಡು ತಿಂಗಳಲ್ಲಿ ಬರೋಬ್ಬರಿ 10 ಕೆಜಿ ಇಳಿಕೆ!
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ದಾಸನಿಗೆ ನರಕ ದರ್ಶನವಾಗಿದೆ. ಮೂಲಭೂತ ಸೌಕರ್ಯ ನೀಡುವಂತೆ ಕೋರ್ಟ್‌ ಮೊರೆ ಹೋಗಿದ್ದ ದರ್ಶನ್‌ಗೆ ಹಿನ್ನಡೆಯಾಗಿದೆ. ದಿನದಿಂದ ದಿನಕ್ಕೆ ದಾಸನಿಗೆ ಕಷ್ಟಗಳು ಹೆಚ್ಚುತ್ತಿವೆ. ಜೈಲು ಸೇರಿದ ಮೇಲೆ ದಾಸ ಈಗ ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿದ್ದಾರೆ.

ಇದನ್ನೂ ಓದಿ: ನವೆಂಬರ್‌ನಲ್ಲಿ ಕಾಂಗ್ರೆಸ್‌ನ ಕಿತ್ತಾಟಕ್ಕೆ ತಾರ್ಕಿಕ ಅಂತ್ಯ! – ಬಿ.ವೈ.ವಿಜಯೇಂದ್ರ

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ದರ್ಶನ್‌ನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಜೈಲಿನಲ್ಲಿ ನಟ ದರ್ಶನ್‌ ಹಾಸಿಗೆ ಹಾಗೂ ದಿಂಬು ನೀಡುವಂತೆ ನ್ಯಾಯಾಲಯದ ಮೂಲಕ ಸಲ್ಲಿಸಿದ್ದ ವಿನಂತಿಯನ್ನು ಜೈಲು ಅಧಿಕಾರಿಗಳು ತಿರಸ್ಕರಿಸಿರುವುದು ವರದಿಯಾಗಿದೆ. ನ್ಯಾಯಾಲಯದ ವಿಚಾರಣೆ ಮತ್ತು ಸೌಲಭ್ಯಗಳು ಸಿಗದಿರುವುದರಿಂದ ದರ್ಶನ್‌ ಈಗ ತೀವ್ರವಾಗಿ ಮಾನಸಿಕವಾಗಿ ಕುಗ್ಗಿದ್ದು, ದೈಹಿಕವಾಗಿ ತೂಕ ಇಳಿದಿದೆ ಎಂದು ಜೈಲು ಮೂಲಗಳು ಹೇಳಿವೆ. ಅತಿಯಾದ ಒತ್ತಡ ಹಾಗೂ ಆತಂಕದಿಂದಾಗಿ ದರ್ಶನ್ ಸುಮಾರು 10 ಕಿಲೋ ತೂಕ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ನನ್ನು ಪ್ರಸ್ತುತ 20×30 ಅಳತೆಯ ಕ್ವಾರಂಟೈನ್ ಸೆಲ್‌ನಲ್ಲೇ ಇರಿಸಲಾಗಿದೆ. ಯಾವುದೇ ರೀತಿಯ ವ್ಯಾಯಾಮ ಅಥವಾ ಚಟುವಟಿಕೆಗಳಲ್ಲಿ ಭಾಗವಹಿಸದೇ, ದರ್ಶನ್ ಬಹುತೇಕ ಸಮಯವನ್ನು ಒಂಟಿಯಾಗಿ ಬ್ಯಾರಕ್‌ನಲ್ಲೇ ಕಳೆಯುತ್ತಿದ್ದಾರೆ. ಸಹ ಆರೋಪಿಗಳಾದ ಅನು, ಜಗದೀಶ್, ಪ್ರದೋಶ್, ನಾಗರಾಜ್ ಮತ್ತು ಲಕ್ಷ್ಮಣ್ ಅವರೊಂದಿಗೆ ಕೂಡ ಹೆಚ್ಚಿನ ಸಂವಹನ ನಡೆಸದೇ, ಒಂಟಿಯಾಗಿ ದರ್ಶನ್‌ ತೀವ್ರ ಮೌನವಾಗಿದ್ದಾರಂತೆ. ದರ್ಶನ್ ಇದ್ದ ಸೆಲ್‌ನಲ್ಲಿ ಟಿವಿ ವ್ಯವಸ್ಥೆ ಇಲ್ಲ, ಆದರೆ ಎರಡು ಸಿಸಿಟಿವಿ ಕ್ಯಾಮರಾಗಳು ಅಳವಡಿಸಲಾಗಿದೆ. ಬೆಳಿಗ್ಗೆ 6.30ಕ್ಕೆ ಜೈಲು ಸಿಬ್ಬಂದಿ ಸೆಲ್‌ಗೆ ಭೇಟಿ ನೀಡಿ ತಪಾಸಣೆ ನಡೆಸುತ್ತಾರೆ.

ಬ್ಯಾರಕ್‌ನಲ್ಲಿ ಕರ್ತವ್ಯ ನಿರ್ವಹಿಸುವ ನಾಲ್ವರು ಸಿಬ್ಬಂದಿಗಳಿಗೆ ಬಾಡಿ ಕ್ಯಾಮರಾ ಅಳವಡಿಸಲಾಗಿದೆ. ಪ್ರತಿ ಸಿಬ್ಬಂದಿ ತಮ್ಮ ಶಿಫ್ಟ್‌ ಅವಧಿಯವರೆಗೆ ಬಾಡಿ ಕ್ಯಾಮರಾ ಆನ್‌ನಲ್ಲಿರಬೇಕು. ಶಿಫ್ಟ್‌ ಮುಗಿದ ಬಳಿಕ ಆ ದಿನದ ರೆಕಾರ್ಡ್‌ ಆಗಿರುವ ದೃಶ್ಯಾವಳಿಗಳನ್ನು ಜೈಲು ಸರ್ವರ್‌ಗೆ ಅಪ್‌ಲೋಡ್‌ ಮಾಡುವುದು ಕಡ್ಡಾಯ. ಈ ಕ್ರಮವನ್ನು ಜೈಲು ಅಧಿಕಾರಿಗಳು ಭದ್ರತಾ ದೃಷ್ಟಿಯಿಂದ ಹಾಗೂ ಯಾವುದೇ ಅನಾಹುತಗಳನ್ನು ನಡೆಯದಂತೆ ತಡೆಯಲು ಅಳವಡಿಸಿದ್ದಾರೆ.

Shwetha M