ಕಿಚ್ಚ ಸುದೀಪ್ ಕಿವಿ ಮಾತಿಗೆ ಅಶ್ವಿನಿ ಡೋಂಟ್‌ಕೇರ್ – ಗೌರವ ಅಶ್ವಿನಿಗೆ ಮಾತ್ರ ಬೇಕಾ, ಬೇರೆಯವರಿಗೆ ಕೊಡೋದಕ್ಕಲ್ವಾ?

ಕಿಚ್ಚ ಸುದೀಪ್ ಕಿವಿ ಮಾತಿಗೆ ಅಶ್ವಿನಿ ಡೋಂಟ್‌ಕೇರ್ – ಗೌರವ ಅಶ್ವಿನಿಗೆ ಮಾತ್ರ ಬೇಕಾ, ಬೇರೆಯವರಿಗೆ ಕೊಡೋದಕ್ಕಲ್ವಾ?

ಬಿಗ್‌ಬಾಸ್ ಮನೆಗೆ ಬರುವ ಮೊದಲೇ ಅಶ್ವಿನಿ ಗೌಡ ತಾನೇ ಲೀಡರ್ ಅಂತಾ ಮನಸಲ್ಲಿ ಇಟ್ಟುಕೊಂಡು ಬಂದಿದ್ದರೋ ಏನೋ, ಯಾರ ಮಾತಿಗೂ ಗೌರವ ಇಲ್ಲ. ಗೌರವ ಕೊಡುವುದನ್ನೂ ಕೂಡಾ ಕಲಿತಿಲ್ಲ. ಅಶ್ವಿನಿ ಗೌಡ ನೆಮ್ಮದಿಯಾಗಿ ಮಾತಾಡುವುದು ಒಂದೇ ಒಂದು ಎಪಿಸೋಡ್‌ನಲ್ಲಿ ಪ್ರಸಾರವಾಗಿಲ್ಲ. ಬರೀ ಹಾರಾಟ, ಕಿರುಚಾಟದಲ್ಲಿಯೇ ಅಶ್ವಿನಿ ಗೌಡ ಹೈಲೆಟ್ ಆಗಿದ್ದಾರೆ. ಇದೀಗ ಮತ್ತೊಮ್ಮೆ ಕಿಚ್ಚ ಸುದೀಪ್ ಮಾತನ್ನು ಮೀರಿ ಅಶ್ವಿನಿ ಗೌಡ ಏಕವಚನದಲ್ಲಿ ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ:ದೊಡ್ಡವ್ವ ಚಿಕ್ಕವ್ವ ದೂರ ದೂರ – ಜಾಹ್ನವಿ, ಅಶ್ವಿನಿ ಗೌಡಗೆ ಪಾಠ ಕಲಿಸಿದ ಬಿಗ್ ಬಾಸ್

ಸುದೀಪ್ ಅವರು ಕಳೆದ ವಾರ ಗೌರವ ಎಂಬ ವಿಚಾರದ ಬಗ್ಗೆ ಪಾಠ ಮಾಡಿದ್ದರು. ಬೇರೆಯವರಿಂದ ಗೌರವ ನಿರೀಕ್ಷೆ ಮಾಡುತ್ತೇವೆ ಎಂದರೆ ನಾವು ಮೊದಲು ಗೌರವ ಕೊಡಬೇಕು ಎಂದು ಹೇಳಿದ್ದರು. ಅಶ್ವಿನಿ ಗೌಡ ಅವರಿಗೆ ಮುಖ್ಯವಾಗಿ ಇದನ್ನು ಹೇಳಲಾಗಿತ್ತು. ಆದರೆ, ಈಗ ಈ ಪಾಠ ಮರೆತಿದ್ದಾರೆ. ಕಾವ್ಯಾಗೆ ಅವರು ಏಕವಚನದಲ್ಲೇ ಮಾತನಾಡಿಸಿದ್ದಾರೆ. ಇದು ಕಾವ್ಯಾಗೆ ಸಿಟ್ಟು ತರಿಸಿದೆ. ಈ ಕಾರಣದಿಂದ ಅಶ್ವಿನಿ ಅವರಿಗೆ ಅವರು ಏಕವಚನ ಬಳಕೆ ಮಾಡಿದ್ದಾರೆ. ಇದರಿಂದ ಅಶ್ವಿನಿ ಸಿಟ್ಟಾಗಿದ್ದಾರೆ. ಗೌರವ ಕೊಟ್ಟು ಗೌರವ ತೆಗೆದುಕೊಳ್ಳಬೇಕು ಎಂಬ ಸುದೀಪ್ ಮಾತು ಇಲ್ಲಿ ಮರೆತೇ ಹೋಗಿದೆ.

ಅಶ್ವಿನಿ ಗೌಡ ಅವರಿಗೆ ಇಲ್ಲಿ ತಾನೊಬ್ಬ ಪ್ರಬಲ ಸ್ಪರ್ಧಿಯೆಂಬ ಅಹಂ ತಲೆಗೇರಿದಂತಿದೆ. ತನ್ನ ಹೆಸರೇ ಕಾವ್ಯಗೆ ಪವರ್ ಕಾರ್ಡ್ ಅನ್ನೋ ರೀತಿಯಲ್ಲಿ ಮಾತಾಡಿದ್ದಾರೆ. ಇದು ಕಾವ್ಯಾಗೂ ಸಿಟ್ಟು ತರಿಸಿದೆ. ಹೀಗಾಗಿ ನಿನ್ನ ಅನ್ನೋ ಪದ ಯೂಸ್ ಮಾಡಿದ್ದಾರೆ. ಇದು ಅಶ್ವಿನಿಗೆ ಉರಿದಿದೆ. ನಂತರ ಅಶ್ವಿನಿ ಬಾಯಲ್ಲಿ ಬಂದ ಪದಗಳು ಕೇಳಿದರೆ ಇವರೇನಾ ಕನ್ನಡ ಹೋರಾಟಗಾರ್ತಿ ಅನ್ನೋ ಅನುಮಾನ ಬರುವಷ್ಟು ಕಿರುಚಾಡಿದ್ದಾರೆ.

ಮತ್ತೊಂದೆಡೆ ರಕ್ಷಿತಾ ಶೆಟ್ಟಿ ವಿರುದ್ಧ ಅಶ್ವಿನಿ ಗೌಡ ಮತ್ತು ರಾಶಿಕಾ ಪಿತೂರಿ ಮಾಡಿರುವುದು ಬಿಗ್‌ಬಾಸ್ ಮನೆಯ ಕೆಲವರಿಗೆ ಬೇಸರ ತರಿಸಿದೆ. ಅಡುಗೆ ಮಾಡಲು ಕುಂಟು ನೆಪ ಹೇಳಿದ ರಾಶಿಕಾ, ರಕ್ಷಿತಾ ಕೈಯಲ್ಲೇ ಎಲ್ಲಾ ಕೆಲಸ ಮಾಡಿಸಿದ್ದಾಳೆ. ಇದಕ್ಕೆ ಅಶ್ವಿನಿ ಗೌಡ ಸಾಥ್ ನೀಡಿದ್ದಾರೆ.

Sulekha