ಬೆಳ್ಳಂ ಬೆಳಗ್ಗೆ ಕೈಕೊಟ್ಟ ನಮ್ಮ ಮೆಟ್ರೋ! – ಏಕಕಾಲಕ್ಕೆ ಎರಡು ರೈಲುಗಳಲ್ಲಿ ತಾಂತ್ರಿಕ ದೋಷ!

ಬೆಳ್ಳಂ ಬೆಳಗ್ಗೆ ಕೈಕೊಟ್ಟ ನಮ್ಮ ಮೆಟ್ರೋ! – ಏಕಕಾಲಕ್ಕೆ ಎರಡು ರೈಲುಗಳಲ್ಲಿ ತಾಂತ್ರಿಕ ದೋಷ!

ಸಿಲಿಕಾನ್‌ ಸಿಟಿ ಬೆಂಗಳೂರಿನ ಜನರಿಗೆ ಮಹತ್ವದ ಸುದ್ದಿಯಿದೆ. ನಗರದ ಜೀವನಾಡಿ ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ಗುರುವಾರ ಬೆಳಗ್ಗೆ ವ್ಯತ್ಯಯ ಉಂಟಾಗಿದೆ. ಪ್ರಯಾಣಿಕರು ಮೆಟ್ರೋ ನಿಲ್ದಾಣದಲ್ಲೇ ಕಾಯುವ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ:ನೆಕ್ಟ್ಸ್ ಸಿಎಂ ಸತೀಶ್‌ ಜಾರಕಿಹೊಳಿ‌ ಅಲ್ಲ ಮಲ್ಲಿಕಾರ್ಜುನ ಖರ್ಗೆ! – ಸ್ಪೋಟಕ ಹೇಳಿಕೆ ನೀಡಿದ ಯತ್ನಾಳ್!‌

ನಮ್ಮ ನೇರಳೆ ಮಾರ್ಗದ ರೈಲು ಏಕಾಏಕಿ ಕೈಕೊಟ್ಟಿದೆ. ಇದ್ರಿಂದಾಗಿ ಬೆಳಗ್ಗೆ ಕಚೇರಿ ಹಾಗೂ ಇತರೆ ಕೆಲಸಗಳಿಗೆ ತೆರಳುವ ಅವಸರದಲ್ಲಿದ್ದ ಜನರಿಗೆ ಶಾಕ್‌ ಆಗಿದೆ. ಚಲ್ಲಘಟ್ಟದಿಂದ ವೈಟ್ ಫೀಲ್ಡ್​​ಗೆ ಸಂಚರಿಸುವ ನೇರಳೆ ಮಾರ್ಗದಲ್ಲಿ ಸುಮಾರು 9 ಗಂಟೆ ಹೊತ್ತಿಗೆ ದೀಪಾಂಜಲಿನಗರ ಮೆಟ್ರೋ ನಿಲ್ದಾಣದಲ್ಲಿ ರೈಲೊಂದು ಸುಮಾರು 10 ನಿಮಿಷಗಳ ಕಾಲ ನಿಂತಿದೆ. ಇದರಿಂದಾಗಿ ಹಿಂದಿನ ಹಾಗೂ ಮುಂದಿನ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿ, ಪ್ಲಾಟ್‌ಫಾರ್ಮ್‌ಗಳು ಜನರಿಂದ ತುಂಬಿ ತುಳುಕಿದವು.

ಇದಾದ ಕೆಲವೇ ನಿಮಿಷಗಳಲ್ಲಿ, ಅಂದರೆ ಒಂಬತ್ತು ಕಾಲು ಸುಮಾರಿಗೆ ವಿಜಯನಗರ ನಿಲ್ದಾಣದಲ್ಲೂ ಮತ್ತೊಂದು ರೈಲು ತಾಂತ್ರಿಕ ಕಾರಣಗಳಿಂದ ನಿಂತಿದೆ. ಸಂಚಾರವನ್ನು ಸುಗಮಗೊಳಿಸಲು ಇನ್ನೂ 10 ನಿಮಿಷಗಳು ಬೇಕಾಗಬಹುದು ಎಂದು ಮೆಟ್ರೋ ಸಿಬ್ಬಂದಿ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಅರ್ಧ ಗಂಟೆಯಾದರೂ ಸಮಸ್ಯೆ ಬಗೆಹರಿದಿಲ್ಲ. ಬೆಳಗ್ಗಿನ ಪೀಕ್ ಅವರ್‌ನಲ್ಲಿ ಉಂಟಾದ ಈ ಸಮಸ್ಯೆಯಿಂದಾಗಿ ಸಾವಿರಾರು ಪ್ರಯಾಣಿಕರು ನಿಲ್ದಾಣಗಳಲ್ಲೇ ಕಾದು ನಿಲ್ಲುವಂತಾಯಿತು. ಇನ್ನು ಸಮಸ್ಯೆ ಯಾವಾಗ ಬಗೆಹರಿಯಲಿದೆ ಎನ್ನುವುದರ ಬಗ್ಗೆ ಬಿಎಂಆರ್‌ಸಿಎಲ್‌ ಇದುವರೆಗೆ ಯಾವುದೇ ಅಪ್ಡೇಟ್‌ ನೀಡಿಲ್ಲ.

Shwetha M