ಬ್ರೇಕ್‌ಅಪ್‌ ಆಗಿದೆ.. ರಜೆ ಕೊಡಿ ಸಾರ್‌.. ಬಾಸ್‌ಗೆ ಇಮೇಲ್‌ ಕಳುಹಿಸಿದ ಉದ್ಯೋಗಿ!

ಬ್ರೇಕ್‌ಅಪ್‌ ಆಗಿದೆ.. ರಜೆ ಕೊಡಿ ಸಾರ್‌.. ಬಾಸ್‌ಗೆ ಇಮೇಲ್‌ ಕಳುಹಿಸಿದ ಉದ್ಯೋಗಿ!

ಕಾಲ ಬದಲಾಗೋದ್ರ ಜೊತೆಗೆ ಜನರ ಮನಸ್ಥಿತಿ ಕೂಡ ಬದಲಾಗಿದೆ. ಮೊದಲೆಲ್ಲಾ ಆಫೀಸ್‌ ನಲ್ಲಿ ರಜೆ ಕೇಳಲು ತುಂಬಾ ಹೆದರ್ತಿದ್ರು. ತೀರಾ ಅನಿವಾರ್ಯ ಇದ್ರೆ ಮಾತ್ರ ರಜೆ ತೆಗೆದುಕೊಳ್ತಿದ್ರು. ಇನ್ನು ಯುವಕರು ಗರ್ಲ್‌ಫ್ರೆಂಡ್‌ ಜೊತೆ ಸುತ್ತಾಡಲು ಏನಾದ್ರೂ ಸುಳ್ಳು ಹೇಳಿ ರಜೆ ತೆಗೆದುಕೊಳ್ತಿದ್ರು. ಆದ್ರೀಗ ಇಲ್ಲೊಬ್ಬ ಲವ್ವರ್‌ ಜೊತೆ ಬ್ರೇಕ್‌ಅಪ್‌ ಆಗಿದೆ ಎಂದು ಬಾಸ್‌ ಹತ್ರ ರಜೆ ಕೇಳಿದ್ದಾನೆ. ಆತ ಕಳುಹಿಸಿರೋ ಇಮೇಲ್‌ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ:  ಹಳೇ ಚಾಳಿ ಮುಂದುವರಿಸಿದ ಅಶ್ವಿನಿ ಗೌಡ – ರಕ್ಷಿತಾ ಶೆಟ್ಟಿ ಮತ್ತೆ ಟಾರ್ಗೆಟ್!‌

ಹೌದು, ವೈರಲ್ ಆಗಿರುವ ಪೋಸ್ಟ್‌ನಲ್ಲಿ, ಜನರಲ್ ಝಡ್ ಉದ್ಯೋಗಿಯೊಬ್ಬ CEO ಗೆ ರಜೆ ಬೇಕಾಗಿ ಮೇಲ್ ಮಾಡಿದ್ದಾನೆ. ಪ್ರಾಮಾಣಿಕ ಮತ್ತು ಹಾಸ್ಯಮಯವಾಗಿರುವ ರಜೆ ಮೇಲ್‍ ಅನ್ನು ಬಾಸ್ ಕೂಡ ಅನುಮೋದಿಸಿದ್ದಾರೆ. ನಾಟ್‌ಡೇಟಿಂಗ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಜಸ್ವೀರ್ ಸಿಂಗ್ ಅವರು ಎಕ್ಸ್‌ನಲ್ಲಿ ಈ ಅನುಭವದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇದನ್ನು ಅವರು ನೋಡಿದ ಅತ್ಯಂತ ಪ್ರಾಮಾಣಿಕ ರಜೆ ಅರ್ಜಿ ಎಂದು ಬಣ್ಣಿಸಿದ್ದಾರೆ.

ಸಿಇಒ ಜಸ್ವೀರ್ ಸಿಂಗ್ ತಮ್ಮ ಟ್ವೀಟ್‌ನಲ್ಲಿ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ- ನಮಸ್ಕಾರ ಸರ್, ನಾನು ಇತ್ತೀಚೆಗೆ ಬ್ರೇಕ್‌ಅಪ್ ಮಾಡಿಕೊಂಡೆ. ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ನನಗೆ ಸ್ವಲ್ಪ ವಿರಾಮ ಬೇಕು. ನಾನು ಇಂದು ಮನೆಯಿಂದಲೇ ಕೆಲಸ ಮಾಡುತ್ತಿದ್ದೇನೆ. ಆದ್ದರಿಂದ ನಾನು 28 ರಿಂದ 8 ರವರೆಗೆ ರಜೆ ತೆಗೆದುಕೊಳ್ಳಲು ಬಯಸುತ್ತೇನೆ ಎಂದು ಬರೆಯಲಾಗಿದೆ.

ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡುತ್ತಾ ಸಿಂಗ್ ಬರೆದಿದ್ದಾರೆ, ನಿನ್ನೆ ಅತ್ಯಂತ ಪ್ರಾಮಾಣಿಕ ರಜೆ ಅರ್ಜಿ ಸಿಕ್ಕಿತು. ಜನರಲ್ ಝಡ್ ಮಂದಿ ಫಿಲ್ಟರ್‌ ಮಾಡುವುದಿಲ್ಲ. ನೇರಾ ನೇರಾ ವಿಷಯವನ್ನು ಹೇಳಿಬಿಡುತ್ತಾರೆ ಎಂದು ಹೇಳಿದ್ದಾರೆ. ಇದ್ರ ಫೋಟೋ ಈಗ ಭಾರಿ ವೈರಲ್‌ ಆಗಿದೆ.

Shwetha M