ಫಸ್ಟ್ T-20I ಫೈಟ್.. ಯಾರು ಬೆಸ್ಟ್? – ಅಭಿ & ಮಾರ್ಷ್ ಬ್ಯಾಟಿಂಗ್ ಚಾಲೆಂಜ್
ಆಸೀಸ್ ಗೆ ಆಘಾತ ನೀಡುತ್ತಾ ಇಂಡಿಯಾ?

ಭಾರತ ವರ್ಸಸ್ ಆಸ್ಟ್ರೇಲಿಯಾ ನಡುವಿನ ಟಿ-20ಐ ಮೊದಲ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಉಭಯ ತಂಡಗಳಲ್ಲೂ ಪಂದ್ಯದ ಗತಿಯನ್ನೇ ಬದಲಿಸುವ ಸೂಪರ್ ಸ್ಟಾರ್ ಆಟಗಾರರೇ ಇದ್ದಾರೆ. ಬ್ಯಾಟಿಂಗ್ ಌಂಡ್ ಬೌಲಿಂಗ್ ಬ್ಯಾಲೆನ್ಸ್ಡ್ ಆಗಿ ಇರೋದ್ರಿಂದ ನೆಕ್ ಟು ನೆಕ್ ಫೈಟ್ ಅಂತೂ ಪಕ್ಕಾ. ಸದ್ಯ ಈ ಹಿಂದಿನ ರೆಕಾರ್ಡ್ಗಳನ್ನ ನೋಡಿದ್ರೆ ಭಾರತವೇ ಗೆಲ್ಲುವಂತ ಚಾನ್ಸಸ್ ಜಾಸ್ತಿ ಇದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಇದುವರೆಗೆ ಒಟ್ಟಾರೆಯಾಗಿ 32 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಮೆನ್ ಇನ್ ಬ್ಲೂ ತಂಡ 20 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಆಸ್ಟ್ರೇಲಿಯಾ 11 ಪಂದ್ಯಗಳಲ್ಲಿ ಜಯಗಳಿಸಿದೆ. 1 ಪಂದ್ಯ ರಿಸಲ್ಟ್ ಬಂದಿಲ್ಲ. ಸೋ ಅಲ್ಲಿಗೆ 70ಪರ್ಸೆಂಟ್ ಭಾರತವೇ ವಿನ್ ಆಗಿದೆ. ಬಟ್ ಕ್ಯಾನ್ಬೆರಾ ಪಿಚ್ ಭಾರತಕ್ಕೆ ಸ್ವಲ್ಪ ಚಾಲೆಂಜ್ ಆಗ್ಬೋದು.
ಇದನ್ನೂ ಓದಿ : ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ನಾಲ್ಕು ವರ್ಷ – ನಗುಮೊಗದ ಅಪ್ಪು ಅಭಿಮಾನಿಗಳ ಮನದಲ್ಲಿ ಶಾಶ್ವತ!
ಅಭಿಷೇಕ್ ಮತ್ತು ಮಾರ್ಷ್ ನಡುವೆ ಬ್ಯಾಟಿಂಗ್ ಫೈಟ್!
ಈ ಪಂದ್ಯದಲ್ಲಿ ಭಾರತದ ಪರ ಅಭಿಷೇಕ್ ಶರ್ಮಾ ಮತ್ತು ಆಸೀಸ್ ಮಿಚೆಲ್ ಮಾರ್ಷ್ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಆಸ್ಟ್ರೇಲಿಯಾವನ್ನು ಮುನ್ನಡೆಸುತ್ತಿರುವ ಮಿಚೆಲ್ ಮಾರ್ಷ್ , 2024 ರ T20 ವಿಶ್ವಕಪ್‌ನಿಂದ ಈಚೆಗೆ ಸಾಲಿಡ್ ಫಾರ್ಮ್‌ನಲ್ಲಿದ್ದಾರೆ. 16 ಪಂದ್ಯಗಳಲ್ಲಿ , ಅವರು 168.19 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 439 ರನ್ ಗಳಿಸಿದ್ದಾರೆ , ಈ ಅವಧಿಯಲ್ಲಿ ಕನಿಷ್ಠ 15 ಪಂದ್ಯಗಳನ್ನು ಆಡಿದ ಯಾವುದೇ ನಾಯಕನಿಗೆ ಇದು ಅತ್ಯಧಿಕವಾಗಿದೆ. ಮತ್ತೊಂದೆಡೆ, ಭಾರತದ ಆಟಗಾರ ಅಭಿಷೇಕ್ ಶರ್ಮಾ 849 ರನ್‌ಗಳೊಂದಿಗೆ ಪೂರ್ಣ ಸದಸ್ಯ ರಾಷ್ಟ್ರಗಳ ಬ್ಯಾಟ್ಸ್‌ಮನ್‌ಗಳಲ್ಲಿ ಮೂರನೇ ಅತಿ ಹೆಚ್ಚು ಸ್ಕೋರರ್ ಆಗಿದ್ದಾರೆ. ಆದರೆ ಅವರ ಸಿಕ್ಸರ್‌ಗಳಂತೂ ಅಲ್ಟಿಮೇಟ್. ಕಳೆದ ವಿಶ್ವಕಪ್ ನಂತರ ವಿಶ್ವದ ಅತಿ ಹೆಚ್ಚು ಅಂದ್ರೆ 60 ಸಿಕ್ಸರ್‌ಗಳನ್ನ ಸಿಡಿಸಿದ್ದಾರೆ.
ಕ್ಯಾನ್ ಬೆರಾದಲ್ಲಿ ಬೌನ್ಸಿ ಪಿಚ್ ಯಾರಿಗೆ ಪ್ಲಸ್?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ T20I ಪಂದ್ಯ ನಡೆಯಲಿರೋ ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್‌ಬೆರಾದ ಮನುಕಾ ಓವಲ್ ಮೈದಾನ T20 ಪಂದ್ಯಗಳಿಗೆ ಪ್ಲಸ್ ಎನ್ನುವಂತಿದೆ. ಅಂದ್ರೆ ಇಲ್ಲಿ ಬ್ಯಾಟಿಂಗ್ ಗೆ ಹೆಚ್ಚು ಅನುಕೂಲ ಆಗ್ಬೋದು. ಬೌನ್ಸಿ ಪಿಚ್ ಆಗಿರೋದ್ರಿಂದ ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುವ ನಿರೀಕ್ಷೆಯಿದೆ. ಇನ್ನು ಬೌಲರ್‌ಗಳು ಚೆಂಡನ್ನು ಕರೆಕ್ಟ್ ಪ್ಲೇಸ್ಗೆ ಹಾಕಿ ಬೌನ್ಸ್ ಮಾಡಿದ್ರೆ ಬ್ಯಾಟರ್‌ಗಳನ್ನ ಕಾಡಬಹುದು. ಈ ಪಿಚ್ನಲ್ಲಿ ಮೊದಲು ಬ್ಯಾಟ್ ಮಾಡುವ ತಂಡವು ಕನಿಷ್ಠ 180-190 ರನ್ ಗಳಿಸುವತ್ತ ಗಮನಹರಿಸಬೇಕು, ಏಕೆಂದರೆ ಅದಕ್ಕಿಂತ ಕಡಿಮೆಯಿದ್ದರೆ ಅದನ್ನು ಡಿಫೆನ್ಸ್ ಮಾಡಿಕೊಳ್ಳೋದು ತುಂಬಾ ಕಷ್ಟ. ಬ್ಯಾಟರ್ ಫ್ರೆಂಡ್ಲಿ ಪಿಚ್ ಆಗಿರೋದ್ರಿಂದ ಹೆಚ್ಚಿನ ರನ್ಸ್ ಬಂದ್ರಷ್ಟೇ ಗೆಲ್ಲೋಕೆ ಸಾಧ್ಯವಾಗೋದು. ಇಲ್ಲಿ ದಾಖಲಾದ ಅತ್ಯಧಿಕ ಟಿ20ಐ ಸ್ಕೋರ್ ಇಂಗ್ಲೆಂಡ್‌ನದ್ದಾಗಿದ್ದು, 2022 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಳು ವಿಕೆಟ್‌ಗೆ 178 ರನ್ ಗಳಿಸಿತ್ತು. ಓವಲ್‌ನಲ್ಲಿ ಕೇವಲ ಐದು ಟಿ20ಐಗಳನ್ನು ಆಡಲಾಗಿದ್ದು, ಮೊದಲು ಬ್ಯಾಟ್ ಮಾಡುವ ತಂಡ ಎರಡರಲ್ಲಿ ಗೆದ್ದರೆ, ಎರಡನೇ ಬ್ಯಾಟ್ ಮಾಡುವ ತಂಡ ಅಷ್ಟೇ ಸಂಖ್ಯೆಯ ಪಂದ್ಯಗಳನ್ನು ಗೆದ್ದಿದೆ.

ನೋಡಿರಿ

