ODI ಸೋತ್ರೂ T-20I ನಮ್ದೇ – AUSಗಿಂತ IND ಹೇಗೆ ಸ್ಟ್ರಾಂಗ್?
ಅಭಿಷೇಕ್ & ಬುಮ್ರಾನೇ ಬಲನಾ?

ODI ಸೋತ್ರೂ T-20I ನಮ್ದೇ – AUSಗಿಂತ IND ಹೇಗೆ ಸ್ಟ್ರಾಂಗ್?ಅಭಿಷೇಕ್ & ಬುಮ್ರಾನೇ ಬಲನಾ?

ಏಕದಿನ ಸರಣಿ ಮುಕ್ತಾಯದ ಬೆನ್ನಲ್ಲೇ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಟಿ20ಐ ಸರಣಿಗೆ ಸಜ್ಜಾಗಿವೆ. ಅ.29 ರಂದು ಅಂದ್ರೆ ನಾಳೆ ಮೊದಲ ಟಿ20 ಪಂದ್ಯವನ್ನು ಆಡಲಿವೆ. ಏಕದಿನ ಸರಣಿ ಕಳ್ಕೊಂಡಿರೋ ಭಾರತಕ್ಕೆ ಟಿ-20ಐ ಸಿರೀಸ್ ಗೆದ್ದು ಸೇಡು ತೀರಿಸಿಕೊಳ್ಳೋ ಹಠದಲ್ಲಿದೆ. ಸದ್ಯ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಭರ್ಜರಿ ಪ್ರಾಕ್ಟೀಸ್​ನಲ್ಲಿದೆ. ಮ್ಯಾಚ್ ನಡೆಯೋದು ಆಸೀಸ್​ನಲ್ಲೇ ಆದ್ರೂ ಸರಣಿಯಲ್ಲಿ ಭಾರತವೇ ಗೆಲ್ಲುವಂತ ಮೋಸ್ಟ್ ಫೇವರೆಟ್ ಟೀಂ ಆಗಿದೆ. ಟಿ-20 ವಿಶ್ವಕಪ್ ಆದ್ಮೇಲೆ ಚುಟುಕು ಸಮರದಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡ್ತಿರೋ ಉಭಯ ತಂಡಗಳಲ್ಲಿ ಪವರ್​ಹಿಟ್ಟರ್ ಪ್ಲೇಯರ್​ಗಳೇ ಇರೋದು ಪಂದ್ಯದ ರೋಚಕತೆಯನ್ನ ಹೆಚ್ಚಿಸಿದೆ.

ಇದನ್ನೂ ಓದಿ : ಶ್ರೇಯಸ್ ಅಯ್ಯರ್ ಆರೋಗ್ಯ ಸ್ಥಿರ – ಐಸಿಯುನಿಂದ ಜನರಲ್ ವಾರ್ಡ್‌ಗೆ ಸ್ಥಳಾಂತರ

2024 ಟಿ-20 ವಿಶ್ವಕಪ್ ಬಳಿಕ ಭಾರತ ಸರಣಿ ಸೋತೇ ಇಲ್ಲ!

ಟೀಂ ಇಂಡಿಯಾ ಸದ್ಯ ಮೂರೂ ಮಾದರಿ ಕ್ರಿಕೆಟ್​​ನಲ್ಲಿ ಸಕ್ಸಸ್​ ಟೀಂ ಆಗಿದ್ರೂ ಟಿ-20ಐನಲ್ಲಂತೂ ದಿ ಬೆಸ್ಟ್ ಪರ್ಫಾಮೆನ್ಸ್ ಬರ್ತಿದೆ. ಅದ್ರಲ್ಲೂ 2024ರ ಟಿ20 ವಿಶ್ವಕಪ್​ ಚಾಂಪಿಯನ್ ಆದ ಭಾರತ ಆ ಬಳಿಕ ಆಡಿರುವ ಎಲ್ಲಾ ಟಿ20 ಸರಣಿಗಳನ್ನು ಗೆದ್ದುಕೊಂಡಿದೆ. ಟಿ20 ವಿಶ್ವಕಪ್​ ಬಳಿಕ ಇಲ್ಲಿಯವರೆಗೂ ಭಾರತ 5 ಸರಣಿಗಳನ್ನು ಆಡಿ ಎಲ್ಲದರಲ್ಲೂ ಗೆಲುವು ಸಾಧಿಸಿದೆ. ಇತ್ತೀಚೆಗೆ ನಡೆದಿದ್ದ ಏಷ್ಯಾಕಪ್​ನಂತಲ್ಲೂ ಅದ್ಭುತ ಪ್ರದರ್ಶನ ನೀಡಿ ಅಜೇಯವಾಗಿ ಟ್ರೋಫಿ ಗೆದ್ದು ಬೀಗಿದೆ. ಇದೀಗ ಆಸೀಸ್ ಸರಣಿಯಲ್ಲೂ ಭಾರತವೇ ಗೆಲ್ಲುವಂಥ ಮೋಸ್ಟ್ ಫೇವರೆಟ್ ಟೀಂ ಆಗಿದೆ. ಸೂರ್ಯನ ನಾಯಕತ್ವದಲ್ಲಿ ಭಾರತ ತಂಡ ಮತ್ತೆ ಬೌನ್ಸ್ ಬ್ಯಾಕ್ ಮಾಡೋ ಇಂಟೆನ್ಷನ್​ನಲ್ಲಿದ್ರೆ ಮಿಚೆಲ್ ಮಾರ್ಷ್ ನೇತೃತ್ವದ ಆಸ್ಟ್ರೇಲಿಯಾ ತಂಡವು ತಮ್ಮ ಗೆಲುವಿನ ಫಾರ್ಮ್​ನ ಹಾಗೇ ಕಂಟಿನ್ಯೂ ಮಾಡೋ ಪ್ಲ್ಯಾನ್​ನಲ್ಲಿದೆ. ಇನ್ನು ಭಾರತದ ಪರ ಟಿ-20ಐ ಸರಣಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಟೀಂ ಸ್ಟ್ರಾಂಗ್ ಆಗಿ ಕಾಣ್ತಿದೆ.

ಬ್ಯಾಟಿಂಗ್ ನಲ್ಲಿ ಅಭಿಷೇಕ್.. ಬೌಲಿಂಗ್ ನಲ್ಲಿ ಬುಮ್ರಾ ಬಲ!

ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸದ್ಯ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ ಐಸಿಸಿ ಟಿ20ಐ ಬ್ಯಾಟಿಂಗ್ ಶ್ರೇಯಾಂಕದಲ್ಲಿ 931 ರೇಟಿಂಗ್‌ನೊಂದಿಗೆ ಹೊಸ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದ್ದಾರೆ . 2025 ರ ಏಷ್ಯಾ ಕಪ್‌ನಲ್ಲಿ 200 ರ ಸ್ಟ್ರೈಕ್ ರೇಟ್‌ನಲ್ಲಿ 314 ರನ್ ಗಳಿಸಿ , ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದಿದ್ರು. ಅವ್ರ ಅಗ್ರೆಸ್ಸಿವ್ ಬ್ಯಾಟಿಂಗ್ ಹಾಗೇ ಕನ್ಸಿಸ್ಟೆಂಟಿ ಭಾರತಕ್ಕೆ ಪ್ಲಸ್ ಆಗುತ್ತೆ. ಅಭಿಷೇಕ್ ಶರ್ಮಾ ಅವರ ನಿರ್ಭೀತ ಬ್ಯಾಟಿಂಗ್ ಆಸ್ಟ್ರೇಲಿಯಾವನ್ನ ಶೇಕ್ ಮಾಡ್ಬೋದು. ಹಾಗೇ ಬೌಲಿಂಗ್​ನಲ್ಲಿ ಈ ಸಲ ಬುಮ್ರಾ ಇರೋದು ಕೂಡ ಪ್ಲಸ್ ಆಗುತ್ತೆ. ವಿಶ್ವ ದರ್ಜೆಯ ವೇಗದ ಬೌಲರ್ ಆಗಿರೋ ಬುಮ್ರಾ ಭಾರತದ ಟಿ20 ತಂಡಕ್ಕೆ ಬ್ರಹ್ಮಾಸ್ತ್ರವಾಗಿದ್ದಾರೆ. ಇದುವರೆಗೆ 74 ಟಿ20ಐ ಪಂದ್ಯಗಳನ್ನ ಆಡಿರೋ ಬುಮ್ರಾ 96 ವಿಕೆಟ್​ಗಳನ್ನ ಬೇಟೆಯಾಡಿದ್ದಾರೆ. 17.85ರ ಸರಾಸರಿ ಮತ್ತು 6.36ರ ಎಕಾನಮಿ ದರದಲ್ಲಿ ಬೌಲ್ ಮಾಡಿದ್ದಾರೆ. ಹೀಗಾಗಿ ಅಭಿಷೇಕ್ ಮತ್ತು ಬುಮ್ರಾ ಇರೋದೇ ಭಾರತಕ್ಕೆ ಅಡ್ವಾಂಟೇಜ್ ಆಗಬಹುದು.

ಟಿ-20 ಫಾರ್ಮೆಟ್ ನಲ್ಲಿ ಭಾರತ ನಂ.1, ಆಸೀಸ್ ನಂ.2

ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಈ ಸರಣಿ ಮದಗಜಗಳ ನಡುವಿನ ಕಾದಾಟವಾಗಲಿದೆ. ಭಾರತ ಟ-20 ವಿಶ್ವಕಪ್​ನ ಹಾಲಿ ಚಾಂಪಿಯನ್ಸ್ ಹಾಗೇ ಇತ್ತೀಚೆಗೆ ಏಷ್ಯಾಕಪ್ ಟ್ರೋಫಿ ವಿನ್ನರ್ಸ್. ಇನ್ನು ಈ ಲಿಸ್ಟ್​ನಲ್ಲಿ ಆಸ್ಟ್ರೇಲಿಯಾ, ನಂ 2 ಸ್ಥಾನದಲ್ಲಿದೆ. ಹೀಗಾಗಿ ಈ ಸರಣಿ ಅಗ್ರ ಶ್ರೇಯಾಂಕಿತ ತಂಡಗಳ ನಡುವಿನ ಸಮರವಾಗಲಿದೆ.

2024ರ ವಿಶ್ವಕಪ್ ಬಳಿಕ ಪ್ರದರ್ಶನ!

ಮಾದರಿ                  ಭಾರತ               ಆಸ್ಟ್ರೇಲಿಯಾ

ಪಂದ್ಯ                     27                    19

ಗೆಲುವು                   22                      16

ಸೋಲು                   3                        2

ಟೈ                         2                         1

ರನ್ ರೇಟ್               9.69                    10.07

ಬೌಲಿಂಗ್ ಆವರೇಜ್    17.09                    19.38

ಎಕಾನಮಿ                7.65                      8.62

ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಕೊನೇದಾಗಿ ಟಿ-20 ಮಾದರಿಯಲ್ಲಿ ಮುಖಾಮುಖಿಯಾಗಿದ್ದು 2024 ಟಿ-20 ವಿಶ್ವಕಪ್​ನಲ್ಲಿ. ಮಾರ್ಚ್ 11 ರಂದು ನಡೆದಿದ್ದ ಸೂಪರ್ 8 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 5 ವಿಕೆಟ್ ನಷ್ಟಕ್ಕೆ 205 ರನ್ಸ್ ಕಲೆ ಹಾಕಿತ್ತು. ಈ ಮ್ಯಾಚಲ್ಲಿ ರೋಹಿತ್ ಶರ್ಮಾ 92 ರನ್ ಗಳಿಸಿ ಔಟಾದ್ರೆ ವಿರಾಟ್ ಡಕ್ ಔಟ್ ಆಗಿದ್ರು. 206 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ಸ್ ಅಷ್ಟೇ ಕಲೆ ಹಾಗಿತ್ತು. ಭಾರತ ಈ ಪಂದ್ಯವನ್ನ 24 ರನ್​ಗಳಿಂದ ಗೆದ್ಕೊಂಡಿತ್ತು. ಹೀಗಾಗಿ ಈ ಸಲವೂ ಭಾರತವೇ ವಿನ್ ಆಗೋ ನಿರೀಕ್ಷೆಯಲ್ಲಿದೆ. ಇನ್ನು ಪಂದ್ಯಗಳು  ಆಸ್ಟ್ರೇಲಿಯಾದಲ್ಲಿ ನಡೀತಾ ಇರೋದ್ರಿಂದ ಭಾರತೀಯ ಕಾಲಮಾನ ಮಧ್ಯಾಹ್ನ 1.45ಕ್ಕೆ ಪಂದ್ಯ ಶುರುವಾಗುತ್ತೆ. ಅದಕ್ಕೂ ಮುನ್ನ 1.15ರ ಸುಮಾರಿಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.  ಮೊದಲ ಪಂದ್ಯವು ಕ್ಯಾನ್​ಬೆರಾದಲ್ಲಿ ನಡೆದರೆ, ಎರಡನೇ ಪಂದ್ಯವು ಅಕ್ಟೋಬರ್ 31 ರಂದು ಮೆಲ್ಬೋರ್ನ್​​ನಲ್ಲಿ ಜರುಗಲಿದೆ. ಇನ್ನು ಮೂರನೇ ಪಂದ್ಯವು ನವೆಂಬರ್ 2 ರಂದು ಹೋಬರ್ಟ್​​ನಲ್ಲಿ ನಡೆಯಲಿದೆ. ನಾಲ್ಕನೇ ಮತ್ತು ಐದನೇ ಪಂದ್ಯವು ಕ್ರಮವಾಗಿ ನವೆಂಬರ್ 6 ಮತ್ತು 8 ರಂದು ಗೋಲ್ಡ್ ಕೋಸ್ಟ್ ಹಾಗೂ ಬ್ರಿಸ್ಬೇನ್​​ನಲ್ಲಿ ನಡೆಯಲಿದೆ.

Shantha Kumari