ಚೀನಾ ಕಳ್ಳಾಟ ಸೆಟ್ಲೈಟ್‌ನಲ್ಲಿ ಬಯಲು! ಗಡಿಯಲ್ಲಿ ಹೈಟೆಕ್ ಏರ್‌ಬೇಸ್!
ಭಾರತವನ್ನ ಭಯ ಬಿಳಿಸ್ತಿದ್ಯಾ ಡ್ರ್ಯಾಗನ್?
ಗಡಿ ವಿಚಾರದಲ್ಲಿ ಭಾರತದೊಂದಿಗೆ ಕ್ಯಾತೆ ತೆಗೆಯುವ ಚೀನಾ ಇದೀಗ ಅರುಣಾಚಲ ಗಡಿಯಲ್ಲಿ ಗಟ್ಟಿಮುಟ್ಟಾದ 36 ವಿಮಾನಗಳ ತಂಗುದಾಣ ನಿರ್ಮಾಣ ಮಾಡಿದೆ. ಅರುಣಾಚಲ ಪ್ರದೇಶದ ತವಾಂಗ್‌ನಿಂದ ಸುಮಾರು 107 ಕಿ.ಮೀ. ದೂರದಲ್ಲಿರುವ ಲುಂಜೆಯಲ್ಲಿ ಚೀನಾ 36 ವಿಮಾನಗಳ ಏರ್‌ಬೇಸ್ ನಿರ್ಮಾಣ ಮಾಡಿದೆ. ಅರುಣಾಚಲ ಪ್ರದೇಶ ಹಾಗೂ ಅಸ್ಸಾಂನಲ್ಲಿ ಭಾರತದ ವಾಯುನೆಲೆಗಳು ಇಲ್ಲದಿರುವುದರಿಂದ ಚೀನಾ ಈ ಪ್ಲ್ಯಾನ್ ಮಾಡಿ ಅಲ್ಲಿ ಏರ್‌ಬೇಸ್ ನಿರ್ಮಾಣ ಮಾಡಿದೆ. ಹೀಗಾಗಿ ಭಾರತಕ್ಕೆ ಇದು ಎಫೆಕ್ಟ್ ಆಗಬಹುದು
ಇದನ್ನೂ ಓದಿ: ದೆಹಲಿಯಲ್ಲಿ ಹದಗೆಟ್ಟ ವಾಯು ಮಾಲಿನ್ಯ – ದೆಹಲಿಯ ಕೆಲವು ಭಾಗಗಳಲ್ಲಿ ಮೋಡ ಬಿತ್ತನೆ
ಮ್ಯಾಕ್‌ಮೋಹನ್ ಗಡಿರೇಖೆಯಿಂದ 40 ಕಿ.ಮೀ ದೂರದ ಲೂನ್ಜ್ ಪ್ರದೇಶದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ತನ್ನ ಅತ್ಯಾಧುನಿಕ ಯುದ್ಧ ವಿಮಾನ, ಡ್ರೋನ್‌ಗಳನ್ನು ನಿಯೋಜಿಸಲಿದೆ. ಇದರ ಜೊತೆಗೆ ಇಲ್ಲಿ ಚೀನಾ ಹೊಸ ಆಡಳಿತಾತ್ಮಕ ಕಚೇರಿಯನ್ನೂ ಸ್ಥಾಪನೆ ಮಾಡಿದೆ ಅಂತ ಹೇಳಲಾಗ್ತಿದೆ. ಇದು ಸೆಟ್ಲೈಟ್‌ನಲ್ಲಿ ಸೆರೆಯಾಗಿದೆ. ಚೀನಾ ಮುಂದೆ ಯುದ್ಧ ಆದ್ರೆ ನಾವು ಹೇಗೆ ಎದುರಿಸಬೇಕು ಅನ್ನೋದ್ದಕ್ಕೆ ಈಗಿನ ತಯಾರಿ.. ಭಾರತದ ಮೇಲೆ ಅಟ್ಯಾಕ್ ಮಾಡೋಕೆ ಹುಡುಕಿಕೊಂಡಿರೋ ಹೊಸ ದಾರಿ ಅಂತಾನೇ ಹೇಳಬಹುದು. ಯುದ್ಧ ಸಂದರ್ಭದಲ್ಲಿ ಚೀನಾದ ವಾಯುಪಡೆಗೆ ಆದಷ್ಟು ಬೇಗ ದಾಳಿ ಮಾಡೋಕೆಇದು ಸಹಾಯ ಆಗಲಿದೆ.. ಹೀಗಾಗಿ ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿಗಳು ಕೂಡ, ಲುಂಜೆ ವಾಯುನೆಲೆಯಲ್ಲಿ ಚೀನಾದ ಚಟುವಟಿಕೆಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಹೇಳಿದ್ದಾರೆ.
ಚೀನಾ ಈ ಏರ್‌ಬೇಸ್ ನಿರ್ಮಾಣ ಮಾಡೋ ಮೂಲಕ ಚೀನಾವನ್ನು ನಂಬುವುದು ಬಹಳ ಕಷ್ಟ ಎಂಬುದನ್ನು ಖುದ್ದು ಚೀನಾವೇ ಮತ್ತೊಮ್ಮೆ ಭಾರತಕ್ಕೆ ಮನವರಿಕೆ ಮಾಡಿಕೊಟ್ಟಿದೆ. 2021ರಲ್ಲಿ ಅರುಣಾಚಲದಲ್ಲಿ ಚೀನಾ ನೂರಕ್ಕೂ ಹೆಚ್ಚು ಮನೆಗಳಿರುವ ಗ್ರಾಮ ನಿರ್ಮಾಣ ಮಾಡಿತ್ತು. ಈಗ ಈ ಏರ್‌ಬೇಸ್ ನಿರ್ಮಾಣ ಮಾಡಿದೆ.
ಇಷ್ಟೇ ಅಲ್ಲದೇ ಚೀನಾವು ಈ ಪ್ರದೇಶದ ಭೂಗತ ಸುರಂಗಗಳಲ್ಲಿ ಮದ್ದುಗುಂಡುಗಳು ಮತ್ತು ಇಂಧನವನ್ನು ಶೇಖರಿಸಿ ಇಟ್ಟಿದೆ ಅನ್ನೋ ವರದಿ ಕೂಡ ಇದೆ.. ಹೀಗೆ ಚೀನಾ ಕಳೆದ ಮೂರು ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಎಲ್‌ಎಸಿ ಬಳಿ ತನ್ನ ವಾಯುನೆಲೆ ವಿಸ್ತರಣೆ ಮಾಡುತ್ತಿದೆ. ವಿಶೇಷವಾಗಿ 2020ರಿಂದ ನಡೆಯುತ್ತಿರುವ ಭಾರತ-ಚೀನಾ ಗಡಿ ಬಿಕ್ಕಟ್ಟಿನಿಂದ ಚೀನಾ ಗಡಿಯಲ್ಲಿ ಭದ್ರತೆ ಹೆಚ್ಚಿಸಿಕೊಳ್ಳುತ್ತಿದೆ. ಇದು ಭಾರತಕ್ಕೆ ಮಗ್ಗಲ ಮಳ್ಳಾಗುವುದು ಗ್ಯಾರಂಟಿ.. ಮುಂದೆ ಎಲ್ಲಾದ್ರೂ ಚೀನಾ ಮತ್ತು ಭಾರತ ನಡುವೆ ಯುದ್ಧ ನಡೆದ್ರೆ ಇದು ಚೀನಾಕ್ಕೆ ತುಂಬಾ ಉಪಯೋಗ ಆಗುತ್ತೆ.. ತುಂಬಾ ಸುಲಭವಾಗಿ ಭಾರತದ ಮೇಲೆ ದಾಳಿ ಮಾಡುತ್ತೆ.. ಹೀಗಾಗಿ ಭಾರತ ಇದ್ದಕ್ಕೆ ತಿರುಮಂತ್ರ ಹಾಕೋಕೆ ಪ್ಲ್ಯಾನ್ ಮಾಡಬೇಕಿದೆ. ನಾವು ಕೂಡ ಅರುಣಾಚಲ ಪ್ರದೇಶದ ಬಳಿ ಭದ್ರತೆ ಹೆಚ್ಚಿಸಿಕೊಳ್ಳಬೇಕು, ಹಾಗೇ ಇಂತಹ ಏರ್‌ಬೇಸ್ ನಿರ್ಮಾಣ ಮಾಡಲೇ ಬೇಕು.. ಅವರು ದಾಳಿ ಮಾಡಿದ್ರೆ ಪ್ರತಿದಾಳಿ ಮಾಡೋಕೆ ನಾವು ಕೂಡ ತಯಾರು ಇರಬೇಕು.. ಹೀಗಾಗಿ ಭಾರತ ಈ ವಿಷ್ಯವನ್ನ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ.

ನೋಡಿರಿ

