ಗಂಡ ಬಿಟ್ಟು ಬಂದ ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಯುವಕ! – ಆಮೇಲೆ ಆಗಿದ್ದೇನು ಗೊತ್ತಾ?

ಪ್ರೀತಿ ಅಂದ್ರೇನೆ ಹಾಗೇ.. ಪ್ರೀತಿಸಿದವರಿಗಾಗಿ ಏನ್ ಬೇಕಾದ್ರೂ ಮಾಡೋದಿಕ್ಕೆ ರೆಡಿ ಇರ್ತಾರೆ. ಆದ್ರೀಗ ಇಲ್ಲೊಬ್ಬ ಭೂಪ ಪ್ರೇಯಸಿಗಾಗಿ ಕಳ್ಳತನಕ್ಕೆ ಇಳಿದು ಸಿಕ್ಕಿಬಿದ್ದಿದ್ದಾನೆ. ಇದೀಗ ಆತನ ಪೊಲೀಸರ ಅತಿಥಿಯಾಗಿದ್ದಾನೆ.
ಇದನ್ನೂ ಓದಿ: ದೊಡ್ಡವ್ವ ಚಿಕ್ಕವ್ವ ದೂರ ದೂರ – ಜಾಹ್ನವಿ, ಅಶ್ವಿನಿ ಗೌಡಗೆ ಪಾಠ ಕಲಿಸಿದ ಬಿಗ್ ಬಾಸ್
ಈ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ನಡೆದಿದೆ. ಬಂಧಿತರನ್ನು ದಿವಾಸ್ ಕಮಿ, ಆರೋಹನ್ ತಾಪಾ ಮತ್ತು ಅಸ್ಮಿತಾ ಎಂದು ಗುರುತಿಸಲಾಗಿದ್ದು, ಬಂಧಿತರಿಂದ 30 ಲಕ್ಷ ರೂ. ಮೌಲ್ಯದ ಐಫೋನ್ 17ನ ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಏನಿದು ಘಟನೆ?
ಪ್ರೇಯಸಿ ಅಸ್ಮಿತಾ ಗಂಡನನ್ನ ಬಿಟ್ಟು ಪ್ರಿಯತಮ ದಿವಾಸ್ ಜೊತೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಿಂದ ವಾಸವಾಗಿದ್ದರು. ಕಡಿಮೆ ಸಮಯದಲ್ಲಿ ದುಪ್ಪಟ್ಟು ಹಣ ಸಂಗ್ರಹಿಸಬೇಕೆಂಬ ಆಸೆಯಿಂದ ಕಳ್ಳತನಕ್ಕಿಳಿಯುವ ಪ್ಲ್ಯಾನ್ ಮಾಡಿದ್ದರು. ಪ್ರಿಯತಮ ದಿವಾಸ್ ತನ್ನ ಸ್ನೇಹಿತ ಆರೋಹನ್ ತಾಪಾ ಜೊತೆ ಸೇರಿಕೊಂಡು ದೊಡ್ಡ ದೊಡ್ಡ ಮೊಬೈಲ್ ಶೋಂರೂಂಗಳಿಗೆ ಕನ್ನ ಹಾಕಲು ಯೋಜಿಸುತ್ತಾರೆ.
24 ಗಂಟೆಯೊಳಗೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಒಂದೇ ಕಂಪನಿಯ ಎರಡು ಶೋರೂಂಗೆ ಕನ್ನ ಹಾಕಿದ್ದರು. ಶೋರೂಂ ಡೋರ್ ಒಡೆದು ಒಳನುಗ್ಗಿ ದುಬಾರಿ ಮೊಬೈಲ್‌ಗಳನ್ನು ದೋಚಿ, ಎಮರ್ಜೆನ್ಸಿ ಎಕ್ಸಿಟ್ ಮೂಲಕ ಹೊರಹೋಗುತ್ತಿದ್ದರು. ಬಳಿಕ ಕದ್ದ ಮೊಬೈಲ್‌ಗಳನ್ನು ಪ್ರೇಯಸಿ ಅಸ್ಮಿತಾ ಮಾರಾಟ ಮಾಡುತ್ತಿದ್ದಳು. ಈ ಸಂಬಂಧ ವರ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 30 ಲಕ್ಷ ರೂ. ಮೌಲ್ಯದ 25ಕ್ಕೂ ಅಧಿಕ ಮೊಬೈಲ್ ಹಾಗೂ ಒಂದು ವಾಚ್ ವಶಕ್ಕೆ ಪಡೆಡಿದ್ದಾರೆ. ಸದ್ಯ ತನಿಖೆ ಮುಂದುವರೆದಿದೆ.

ನೋಡಿರಿ

