ದಶಕಗಳಿಂದ ಖಾಕಿ ಸಮವಸ್ತ್ರದ ಮೇಲೆ ಬಳಸುತ್ತಿದ್ದ ಸ್ಲೋಚ್ ಕ್ಯಾಪ್ಗೆ ಕೊಕ್ – ರಾಜ್ಯದ ಪೊಲೀಸರಿಗೆ ಇವತ್ತಿಂದ ಪಿ-ಕ್ಯಾಪ್ ಭಾಗ್ಯ

ಕರ್ನಾಟಕ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ಟೆಬಲ್ ಮತ್ತು ಕಾನ್ಸ್ಟೆಬಲ್ಗಳು ಬಹಳ ವರ್ಷಗಳಿಂದ ಬ್ರಿಟಿಷ್ ಕಾಲದ ಟೋಪಿಗಳನ್ನು ಧರಿಸುತ್ತಿದ್ದಾರೆ. ಇದು ಆರೋಗ್ಯ ಮತ್ತು ಇತರೆ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎನ್ನಲಾಗಿದೆ. ಇದೀಗ ರಾಜ್ಯದ ಪೊಲೀಸರಿಗೆ ಸ್ಲೋಚ್ ಹ್ಯಾಟ್ ಬದಲಿಗೆ ಪಿ-ಕ್ಯಾಪ್ಗಳನ್ನು ವಿತರಣೆ ಮಾಡಲಾಗುತ್ತಿದೆ. ಹೊಸ ಟೋಪಿಗಳು ಇಂದಿನಿಂದಲೇ ಪೊಲೀಸರ ಕೈಸೇರಲಿವೆ.
ಇದನ್ನೂ ಓದಿ: ಮೊಂಥಾ ಚಂಡಮಾರುತ ಎಫೆಕ್ಟ್! – ತಿಮ್ಮಪ್ಪನ ಭಕ್ತರಿಗೆ ತಿರುಪತಿ ಜಿಲ್ಲಾಡಳಿತದಿಂದ ಮಹತ್ವದ ಸೂಚನೆ!
ಜೂನ್ನಲ್ಲಿ ನಡೆದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಹೊಸ ಕ್ಯಾಪ್ ವಿತರಣೆಗೆ ನಿರ್ಧರಿಸಲಾಗಿತ್ತು. ಅದಾದ ಮೇಲೆ ತೆಲಂಗಾಣ ಪೊಲೀಸರು ಧರಿಸುತ್ತಿರುವ ತೆಳುವಾದ ಪಿ ಕ್ಯಾಪ್ ವಿತರಣೆ ಮಾಡಲು ರಾಜ್ಯ ಸರ್ಕಾರವು ಒಪ್ಪಿಗೆ ಸೂಚಿಸಿತ್ತು. ಆ.7 ರಂದು ನಡೆದಿದ್ದ ಕಿಟ್ ನಿರ್ದಿಷ್ಟಿತಾ ಸಮಿತಿ ಸಭೆಯಲ್ಲಿ ಟೆಂಡರ್ ಅಂತಿಮಗೊಳಿಸಲಾಗಿತ್ತು. ಇದೀಗ ಹೊಸ ಟೋಪಿಗಳು ಸಿದ್ಧಗೊಂಡಿದ್ದು, ಮೊದಲ ಹಂತದಲ್ಲಿ ಪೊಲೀಸರಿಗೆ ಪಿ ಕ್ಯಾಪ್ ವಿತರಣೆ ನಡೆಯಲಿದೆ.
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರು ಹೊಸ ಕ್ಯಾಪ್ಗಳನ್ನು ವಿತರಣೆ ಮಾಡಿದ್ದಾರೆ. ಇನ್ನು ಹಂತಹಂತವಾಗಿ ವಿವಿಧ ಜಿಲ್ಲೆಗಳ ಕಾನ್ಸ್ಟೆಬಲ್ ಹಾಗೂ ಹೆಡ್ಕಾನ್ಸ್ಟೆಬಲ್ಗಳಿಗ ಹೊಸ ಕ್ಯಾಪ್ ವಿತರಣೆ ನಡೆಯಲಿದೆ.
ಬದಲಾವಣೆ ಯಾಕೆ?
ದೀರ್ಘಾವಧಿಯಲ್ಲಿ ಸ್ಲೌಚ್ ಹ್ಯಾಟ್ಗಳ ಬಳಕೆ ಉಸಿರಾಟದ ತೊಂದರೆಗೆ ಕಾರಣವಾಗಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆಯ ವರದಿಗಳು ಹೇಳಿದ್ದವು. ಅಲ್ಲದೆ ಇವುಗಳನ್ನು ಧರಿಸುವುದರಿಂದ ತಲೆ ಭಾಗದಲ್ಲಿ ಗಾಳಿಯ ಸಂಚಾರದ ಕೊರತೆಯೂ ಉಂಟಾಗಿ ಕಾನ್ಸ್ಟೇಬಲ್ಗಳಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಕೊಳ್ಳುತ್ತಿದ್ದವು. ಪ್ರತಿಭಟನೆಗಳು, ಮೆರವಣಿಗೆಗಳು, ಸಾರ್ವಜನಿಕ ಬಂದೋಬಸ್ತ್ನಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಈ ಮಾದರಿಯ ಹ್ಯಾಟ್ಗಳು ಅನುಕೂಲಕರವಾಗಿಲ್ಲ. ಅದರ ಗಾತ್ರ ಮತ್ತು ಆಕಾರದಿಂದ ಅದು ಬಿದ್ದುಹೋಗುವ ಅಥವಾ ಜಾರುವ ಸಾಧ್ಯತೆ ಹೆಚ್ಚಿದೆ ಎಂದು ಬಹಳ ಸಮಯದಿಂದ ಕಾನ್ಸ್ಟೇಬಲ್ಗಳು ದೂರುತ್ತಿದ್ದರು. ಹೀಗಾಗಿ ಹಳೆ ಮಾದರಿಯ ಸ್ಲೌಚ್ ಹ್ಯಾಟ್ಗಳನ್ನ ರಾಜ್ಯ ಸರ್ಕಾರ ಬದಲಾಯಿಸಿದೆ.

ನೋಡಿರಿ

