2027ರ ವಿಶ್ವಕಪ್ ಗೆದ್ದೇ ಗುಡ್ ಬೈ – 2 ವರ್ಷ HITಮ್ಯಾನ್ ಗಿಲ್ಲ ನಿವೃತ್ತಿ
1 ಕಪ್.. RO-KO ಟಾರ್ಗೆಟ್ ಏನು?

2027ರ ವಿಶ್ವಕಪ್ ಗೆದ್ದೇ ಗುಡ್ ಬೈ – 2 ವರ್ಷ HITಮ್ಯಾನ್ ಗಿಲ್ಲ ನಿವೃತ್ತಿ1 ಕಪ್.. RO-KO ಟಾರ್ಗೆಟ್ ಏನು?

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಚಾರ ಬಂದಾಗ್ಲೆಲ್ಲಾ ನಿವೃತ್ತಿಯದ್ದೇ ಮಾತು. ಟಿ-20ಐ ಹಾಗೇ ಟೆಸ್ಟ್ ಫಾರ್ಮೆಟ್​ಗೆ ಗುಡ್ ಬೈ ಹೇಳಿರೋದ್ರಿಂದ ಏಕದಿನ ಮಾದರಿಗೂ ಜಾಸ್ತಿ ದಿನ ಇರಲ್ಲ ಅನ್ನೋ ಟಾಕ್ ಬರ್ತಾನೇ ಇರುತ್ತೆ. ಬಟ್ ಅಭಿಮಾನಿಗಳಿಗೆ ಇನ್ಮೇಲೆ ಈ ಟೆನ್ಷನ್ ಬೇಡ. ಯಾಕಂದ್ರೆ 2027ರ ವಿಶ್ವಕಪ್​ವರೆಗೂ ಈ ಜೋಡೆತ್ತು ಜೊತೆಯಾಗೇ ಭಾರತದ ಪರ ಕಣಕ್ಕಿಳಿಯೋದು ಕನ್ಫರ್ಮ್ ಆಗಿದೆ.

ಇದನ್ನೂ ಓದಿ : RO-KO ಫೈರ್​ಗೆ ಗಂಭೀರ್ ಗಿರಗಿಟ್ಲೆ – ಫಾರ್ಮ್, ಫಿಟ್ ನೆಸ್, ಬ್ಯಾಟಿಂಗ್ ಪಾಸ್

ಹಿಟ್​ಮ್ಯಾನ್ ಅಂತಾನೇ ಕರೆಸಿಕೊಳ್ಳೋ ರೋಹಿತ್ ಶರ್ಮಾ.. ರನ್ ಮಿಷನ್ ಅಂತಾನೇ ಫೇಮಸ್ ಆಗಿರೋ ವಿರಾಟ್ ಕೊಹ್ಲಿ. ಇಬ್ಬರೂ ಕೂಡ ಜೋಡೆತ್ತುಗಳಂತೆ 17 ವರ್ಷ ಟೀಂ ಇಂಡಿಯಾದ ನೊಗ ಹೊತ್ತಿದ್ದಾರೆ. ಈಗಲೂ ಕೂಡ ಅಷ್ಟೇ ಪವರ್​ಫುಲ್ ಆಗಿ ಬ್ಯಾಟ್ ಬೀಸ್ತಿದ್ದಾರೆ. ಹೀಗಿದ್ರೂ ಕೆಲವೊಂದಷ್ಟು ಜನ ನಿವೃತ್ತಿ ನಿವೃತ್ತಿ ಅಂತಾ ಬೆನ್ನು ಬಿದ್ದಿದ್ದಾರೆ. ಆದ್ರೆ ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. 2027ರ ಏಕದಿನ ವಿಶ್ವಕಪ್​ವೆರಗೂ ಈ ಸ್ಟಾರ್ ಜೋಡಿ ಏಕದಿನ ಫಾರ್ಮೆಟ್​ಮಲ್ಲಿ ಮುಂದುವರಿಯೋದು ಫಿಕ್ಸ್ ಆಗಿದೆ.

2027ರವರೆಗೂ ರೋಹಿತ್ ನಿವೃತ್ತಿ ಇಲ್ಲವೆಂದ ಬಾಲ್ಯದ ಕೋಚ್!

ನಿವೃತ್ತಿ ಟಾಕ್ ನಡುವೆಯೇ ಆಸ್ಟ್ರೇಲಿಯಾ ಟೂರ್​ನಲ್ಲಿ  ರೋಹಿತ್ ಶರ್ಮಾ ಶತಕ ಹಾಗೂ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದರು. ಅಡಿಲೇಡ್​ನಲ್ಲಿ 73 ರನ್ ಬಾರಿಸಿದ್ದ ಹಿಟ್​ಮ್ಯಾನ್ ಸಿಡ್ನಿಯಲ್ಲಿ ಅಜೇಯ 121 ರನ್ ಬಾರಿಸಿ ನಿವೃತ್ತಿ ಸುದ್ದಿಗಳಿಗೆ ಬ್ರೇಕ್ ಹಾಕಿದ್ರು. ಆದ್ರೆ ಹಿಟ್​ಮ್ಯಾನ್​ನ ಈ ಅಬ್ಬರ ಯಾವುದಕ್ಕೂ ಕ್ಲಾರಿಟಿ ಕೊಟ್ಟಿರಲಿಲ್ಲ. ಆದ್ರೀಗ ರೋಹಿತ್​ರ ಬಾಲ್ಯದ ಕೋಚ್ ದಿನೇಶ್ ಲಾಡ್ ಉತ್ತರ ನೀಡಿದ್ದಾರೆ. ರೋಹಿತ್ ಶರ್ಮಾ ಸದ್ಯಕ್ಕಂತು ನಿವೃತ್ತಿ ನೀಡುವುದಿಲ್ಲ. ಇನ್ನೂ 2 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮುಂದುವರೆಯಲಿದ್ದಾರೆ ಎಂದು ತಿಳಿಸಿದ್ದಾರೆ. ರೋಹಿತ್ ಶರ್ಮಾ ಅವರ ಕನಸು ಏಕದಿನ ವಿಶ್ವಕಪ್ ಗೆಲ್ಲುವುದು. ಹೀಗಾಗಿ 2027ರ ಏಕದಿನ ವಿಶ್ವಕಪ್​ ಆಡಲಿದ್ದಾರೆ. 2027ರ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡ ಆಡುವ ಕೊನೆಯ ಪಂದ್ಯದ ಮೂಲಕ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಲಿದ್ದಾರೆ ಎಂದು ದಿನೇಶ್ ಲಾಡ್ ತಿಳಿಸಿದ್ದಾರೆ. ಈ ಮೂಲಕ  ಹಿಟ್​ಮ್ಯಾನ್ 2027 ರವರೆಗೆ ಭಾರತ ತಂಡದಲ್ಲಿ ಮುಂದುವರೆಯುವುದು ಕನ್ಫರ್ಮ್ ಆಗಿದೆ. ಸೋ ರೋಹಿತ್ ಕಂಟಿನ್ಯೂ ಆದ್ರೆ ವಿರಾಟ್ ಕೊಹ್ಲಿ ಕೂಡ ಟೀಂ ಇಂಡಿಯಾ ಪರ ಇನ್ನೂ ಎರಡು ವರ್ಷಗಳ ಆಡೋದು ಫಿಕ್ಸ್ ಆಗಿದೆ.

ಏಕದಿನ ವಿಶ್ವಕಪ್ ಗೆಲ್ಲೋದೇ ರೋ-ಕೊ ಕನಸು!

ಅಷ್ಟಕ್ಕೂ ಇಷ್ಟೆಲ್ಲಾ ಚರ್ಚೆಗಳ ನಡುವೆ ರೋಹಿತ್ ಮತ್ತು ಕೊಹ್ಲಿ ಏಕದಿನ ಫಾರ್ಮೆಟ್​ನಲ್ಲಿ ಕಂಟಿನ್ಯೂ ಆಗೋಕೆ ಕಾರಣವೇ ಕನಸಿನ ಕೂಸಾಗಿರುವ ಏಕದಿನ ವಿಶ್ವಕಪ್ ಗೆಲ್ಲೋದು. 2023ರಲ್ಲಿ ಭಾರತ ತಂಡವನ್ನ ಅಜೇಯವಾಗಿ ಫೈನಲ್​ಗೆ ಮುನ್ನಡೆಸಿದ್ದ ರೋಹಿತ್ ಶರ್ಮಾ ಕಪ್ ಎತ್ತಿ ಹಿಡಿರೋ ಕನಸಿನಲ್ಲಿದ್ರು. ಆದ್ರೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಬೇಕಾಯ್ತು. ರನ್ನರ್​ಅಪ್​ಗೆ ತೃಪ್ತಿ ಪಡಬೇಕಾಯ್ತು. ಭಾರತದಲ್ಲೇ ನಡೆದಿದ್ದ ಆ ಟೂರ್ನಿಯಲ್ಲಿ ಕಪ್ ಗೆಲ್ಲೋಕೆ ಆಗಿಲ್ವಲ್ಲ ಅನ್ನೋ ನೋವು ಇಬ್ಬರು ಲೆಜೆಂಡರಿ ಆಟಗಾರರನ್ನ ಕಾಡ್ತಿದೆ. ಹೀಗಾಗಿ 2027ರವರೆಗೂ ತಂಡದಲ್ಲಿ ಮುಂದುವರಿಯೋ ನಿರ್ಧಾರ ಮಾಡಿದ್ದಾರೆ. ಈ ನಡುವೆ ಬಿಸಿಸಿಐ ಕ್ಯಾಪ್ಟನ್ಸಿ ಕಿತ್ಕೊಂಡ್ರೂ ಕೂಡ ಜಗ್ಗದ ಹಿಟ್​ಮ್ಯಾನ್ ಆಟಗಾರನಾಗಿಯಾದ್ರೂ ಸರಿಯೇ ವಿಶ್ವಕಪ್ ಗೆದ್ದೇ ತೀರಬೇಕೆಂಬ ಪಣ ತೊಟ್ಟಿದ್ದಾರೆ. ಕೆಜಿಗಟ್ಟಲೆ ತೂಕ ಇಳಿಸ್ಕೊಂಡು ಫಿಟ್​ನೆಸ್ ಮೇಂಟೇನ್ ಮಾಡ್ಕೊಂಡು ಫಾರ್ಮ್ ಜೊತೆ ಸಾಲಿಡ್ ಪ್ರದರ್ಶನ ನೀಡ್ತಾ ತಮ್ಮ ಪವರ್ ಏನು ಅನ್ನೋದನ್ನ ತೋರಿಸ್ತಿದ್ದಾರೆ. ಹೀಗಾಗಿ ಹಿಟ್​ಮ್ಯಾನ್ ಇನ್ನೂ 2 ವರ್ಷಗಳ ಕಾಲ ಭಾರತದ ಪರ ಆಡೋದು ಕನ್ಫರ್ಮ್ ಆಗಿದೆ. ರೋಹಿತ್ ಶರ್ಮಾ ಅವರಿಗೆ ಸದ್ಯ 38 ವರ್ಷ. 2027ರ ಏಕದಿನ ವಿಶ್ವಕಪ್ ಟೂರ್ನಿ ವೇಳೆಗೆ ಹಿಟ್‌ಮ್ಯಾನ್‌ಗೆ 40 ವರ್ಷವಾಗಿರಲಿದೆ. ಅಲ್ಲಿಯವರೆಗೂ ಫಾರ್ಮ್‌ ಹಾಗೂ ಫಿಟ್ನೆಸ್ ಕಾಯ್ದುಕೊಳ್ಳುವುದು ರೋಹಿತ್ ಶರ್ಮಾ ಅವರ ಮುಂದಿರುವ ದೊಡ್ಡ ಸವಾಲಾಗಿದೆ.

Shantha Kumari