ಟಾಸ್ಕ್ ವೇಳೆಯೂ ರಾಶಿಕಾ-ಸೂರಜ್ ಪ್ರೇಮಗೀತೆ – ಕಿಚ್ಚನ ಮಾತಿಗೂ ಡೋಂಟ್‌ಕೇರ್!

ಬಿಗ್ ಬಾಸ್ ಮನೆ ಆಟ ದಿನದಿಂದ ದಿನಕ್ಕೆ ರೋಚಕತೆ ಮೂಡಿಸುತ್ತಿದೆ. ವೀಕೆಂಟ್‌ನಲ್ಲಿ ಕಿಚ್ಚ ಕಿವಿಮಾತು ಹೇಳ್ತಿದ್ದಂತೆ ಸೈಲೆಂಟ್ ಆಗಿದ್ದ ಕೆಲ ಸ್ಪರ್ಧಿಗಳು ತಮ್ಮ ಆಟ ಶುರುಮಾಡ್ಕೊಂಡಿದ್ದಾರೆ. ಆದ್ರೆ ಇಬ್ಬರು ಮಾತ್ರ ಕಿಚ್ಚ ಬುದ್ದಿಮಾತು ಹೇಳಿದ್ರೂ ಎಚ್ಚೆತ್ತುಕೊಳ್ಳುವಂತೆ ಕಾಣ್ತಿಲ್ಲ. ಎಲ್ಲರು ಬಿಗ್ ಬಾಸ್ ಟಾಸ್ಕ್ ಮಾಡ್ತಿದ್ರೆ, ರಾಶಿಕಾ ಹಾಗೂ ಸೂರಜ್ ಮಾತ್ರ ಬೇರೆ ಲೋಕದಲ್ಲಿ ತೇಲಾಡ್ತಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ! – ಹೈಕಮಾಂಡ್ ಮುಂದೆ ಡಿಕೆ ಶಿವಕುಮಾರ್!
ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಸೂರಜ್ ಎಂಟ್ರಿಯಾಗ್ತಿದ್ದಂತೆ ಲವ್ವರ್ ಬಾಯ್ ಆಗಿದ್ದಾರೆ. ಸೂರಜ್ ಮನೆಗೆ ಬರ್ತಿದ್ದಂತೆ ರಾಶಿಕಾಗೆ ಹೂ ಕೊಟ್ಟು ಇಷ್ಟ ಅಂತಾ ಹೇಳಿದ್ರು. ಇದೀಗ ಒಂದೇ ವಾರಕ್ಕೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ನೋಡುಗರಿಗೆ ಇದು ತುಂಬಾನೇ ನಾಟಕೀಯ ಎನಿಸುತ್ತಿದೆ. ಜನಪ್ರಿಯತೆ ಗಳಿಸಬೇಕು ಎಂಬ ಕಾರಣಕ್ಕೆ ರಾಶಿಕಾ ಅವರು ಈ ರೀತಿಯ ಪ್ರೀತಿ ನಾಟಕ ಮಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಸುದೀಪ್ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಹೀಗೆ ಮುಂದುವರಿದರೆ ಆಟ ಶೀಘ್ರವೇ ಕೊನೆ ಆಗುತ್ತದೆ ಎಂದು ರಾಶಿಕಾಗೆ ಸುದೀಪ್ ಬುದ್ಧಿಮಾತು ಹೇಳಿದ್ದಾರೆ. ಈ ವಾರ ಇವರಿಬ್ಬರು ಸಪರೇಟ್ ಆಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ಕಳೆದ ವಾರಕ್ಕಿಂತ ಈ ವಾರವೇ ಇವರಿಬ್ಬರ ಕ್ಲೋಸ್ನೆಸ್ ಜಾಸ್ತಿ ಆದಂತೆ ಕಾಣುತ್ತಿದೆ. ಇದೀಗ ಟಾಸ್ಕ್ ವೇಳೆಯೂ ಇವರಿಬ್ಬರು ಪ್ರೇಮಗೀತೆ ಹಾಡಿದ್ದಾರೆ.
ಬಿಗ್ ಬಾಸ್ ಮನೆ ಈ ವಾರ ಬಿಗ್ ಬಾಸ್ ಕಾಲೇಜ್ ಆಗಿ ಮಾರ್ಪಾಡಾಗಿದೆ. ಹಿಂದಿನ ಸೀಸನ್ಗಳಲ್ಲಿ ಬಿಗ್ ಬಾಸ್ ಸ್ಕೂಲ್ ಎಂಬ ಟಾಸ್ಕ್ ನೀಡಲಾಗಿತ್ತು. ಆದರೆ ಈ ಬಾರಿ ಇದು ಕಾಲೇಜ್ ಆಗಿ ಕನ್ವರ್ಟ್ ಆಗಿದೆ. ನಿಮ್ಮ ಜೀವನದ ಒಂದು ಗೋಲ್ಡನ್ ಪಿರೇಡ್ಗೆ ಮತ್ತೆ ನೀವೆಲ್ಲರು ಹಿಂದಿರುಗಲಿದ್ದೀರಿ. ಈ ವಾರ ಇಡೀ ಬಿಗ್ ಬಾಸ್ ಮನೆ ಬಿಬಿ ಕಾಲೇಜ್ ಕ್ಯಾಂಪಸ್ ಆಗಿರಲಿದೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಈ ಅವಕಾಶವನ್ನು ಸ್ಪರ್ಧಿಗಳು ಮೊದಲ ಸಖತ್ ಆಗಿ ಉಪಯೋಗಿಸಿಕೊಂಡಂತೆ ಕಂಡುಬರುತ್ತಿದೆ. ಈ ವಾರದ ಕ್ಯಾಪ್ಟನ್ ಆಗಿರುವ ಮ್ಯುಟೆಂಟ್ ರಘು ಪ್ರಿನ್ಸಿಪಲ್ ಜವಾಬ್ದಾರಿ ಹೊತ್ತಿದ್ದಾರೆ. ಅಶ್ವಿನಿ ಗೌಡ ಬಹುಶಃ ಟೀಚರ್ ಆಗಿರುವ ಸಾಧ್ಯತೆ ಇದೆ. ಚಂದ್ರಪ್ರಭ ಅವರು, ನಮಸ್ತೆ ಸರ್ ನನ್ನ ಹೆಸರು ಚಂದ್ರಪ್ರಭ ಅಂತ ವಯಸ್ಸು 21 ಎಂದು ಹೇಳಿರುವುದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಇತರೆ ಪುರುಷ ಸ್ಪರ್ಧಿಗಳು ಮಹಿಳಾ ಸ್ಪರ್ಧಿಗಳಿಗೆ ತುಂಬಾ ಕೀಟಲೆ ಕೊಟ್ಟಿದ್ದಾರೆ. ಅಭಿ ಅವರು ಸ್ಪಂದನಾ ಕೆನ್ನೆ ಸವರಿ ರೇಗಿಸಲು ಮುಂದಾಗಿದ್ದಾರೆ.
ಇವೆಲ್ಲ ಒಂದುಕಡೆ ಆದರೆ, ಮತ್ತೊಂದು ಕಡೆ ಸೂರಜ್ ಹಾಗೂ ರಾಶಿಕಾ ಪ್ರೇಮಗೀತೆ ಕೂಡ ಬಿಬಿ ಕ್ಯಾಂಪಸ್ನಲ್ಲಿ ಸದ್ದು ಮಾಡುತ್ತಿದೆ. ಇಬ್ಬರೂ ಜೊತೆಯಾಗಿ ಪ್ರೇಮಪಕ್ಷಿಯಂತೆ ಇಲ್ಲೂ ಕಾಣಿಸಿಕೊಂಡಿದ್ದಾರೆ. ಲೈನ್ ಹೊಡೆಯಬಹುದು ಎಂದು ಸೂರಜ್ ಫುಲ್ ರಾಶಿಕಾ ಹಿಂದೆ ಬಿದ್ದಿದ್ದಾರೆ. ರಾಶಿಕಾ ಹಾಗೂ ಸೂರಜ್ ಬಿಹೇವಿಯರ್ ನೋಡಿದವರು, ಅಯ್ಯಯ್ಯೋ ಇದೆಲ್ಲ ಟಾಸ್ಕ್‌ನಲ್ಲಿ ಇಲ್ವೇ ಇಲ್ಲ ಎಂದು ಹೇಳಿದ್ದಾರೆ.

ನೋಡಿರಿ

