1 ಕ್ಯಾಚ್.. ICU ಸೇರಿದ ಶ್ರೇಯಸ್ – ಆಂತರಿಕ ರಕ್ತಸ್ರಾವ ಎಷ್ಟು ಡೇಂಜರ್?
ಅಯ್ಯರ್ ಕ್ರಿಕೆಟ್ ಭವಿಷ್ಯಕ್ಕೆ ಕರಿನೆರಳು

1 ಕ್ಯಾಚ್.. ICU ಸೇರಿದ ಶ್ರೇಯಸ್ – ಆಂತರಿಕ ರಕ್ತಸ್ರಾವ ಎಷ್ಟು ಡೇಂಜರ್?ಅಯ್ಯರ್ ಕ್ರಿಕೆಟ್ ಭವಿಷ್ಯಕ್ಕೆ ಕರಿನೆರಳು

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಗೆದ್ದು ಬೀಗಿತ್ತು. ಈ ಮ್ಯಾಚಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ಖದರ್​ಗೆ ಕ್ರಿಕೆಟ್ ಜಗತ್ತೇ ಫಿದಾ ಆಗಿದೆ. ಌಂಡ್ ಇದೇ ಮ್ಯಾಚಲ್ಲಿ ಶ್ರೇಯರ್ ಅಯ್ಯರ್ ಹಿಡಿದಿದ್ದ ಕ್ಯಾಚ್ ಕೂಡ ಅಷ್ಟೇ ಅದ್ಭುತವಾಗಿತ್ತು. ಶ್ರೇಯಸ್ ಫೀಲ್ಡಿಂಗ್ ಎಫರ್ಟ್​ಗೆ ಶಹಬ್ಬಾಸ್ ಅಂದಿದ್ರು. ಬಟ್ ಈಗ ಅದೇ ಕ್ಯಾಚ್​ನಿಂದ ಇಂಟರ್ನಲ್ ಬ್ಲೀಡಿಂಗ್ ಆಗಿದೆ. ಶ್ರೇಯಸ್ ಅಯ್ಯರ್ ಐಸಿಯು ಸೇರಿದ್ದಾರೆ. ಸದ್ಯ ಟೀಂ ಇಂಡಿಯಾ ಆಟಗಾರರ ಬಗ್ಗೆ ಮೇಜರ್ ಅಪ್​ಡೇಟ್ ಹೊರಬಿದ್ದಿದೆ.

ಇದನ್ನೂ ಓದಿ : 

ಟೀಂ ಇಂಡಿಯಾದಲ್ಲಿ ಸ್ಟಾರ್ ಬ್ಯಾಟರ್ ಆಗಿರೋ ಶ್ರೇಯಸ್ ಅಯ್ಯರ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಸೆಲೆಕ್ಟ್ ಆಗಿದ್ರು. ವೈಸ್ ಕ್ಯಾಪ್ಟನ್ಸಿಯೂ ಸಿಕ್ಕಿತ್ತು. ಹಾಗೇ ಮೂರೂ ಪಂದ್ಯಗಳಲ್ಲೂ ಪ್ಲೇಯಿಂಗ್​ 11ನಲ್ಲೂ ಚಾನ್ಸ್ ಗಿಟ್ಟಿಸಿಕೊಂಡಿದ್ರು. ಮೊದಲ ಪಂದ್ಯದಲ್ಲಿ 11 ರನ್ ಗಳಿಸಿದ್ದ ಶ್ರೇಯಸ್ ಎರಡನೇ ಪಂದ್ಯದಲ್ಲಿ 61 ರನ್ ಬಾರಿಸಿದ್ರು. ಆದ್ರೆ ಮೂರನೇ ಪಂದ್ಯದಲ್ಲಿ ಫೀಲ್ಡಿಂಗ್​ ವೇಳೆ ಗಂಭೀರವಾಗಿ ಗಾಯಗೊಂಡು ಮೈದಾನದಿಂದ ಹೊರನಡೆದಿದ್ರು. ಈಗ ಶ್ರೇಯಸ್ ಇಂಜುರಿ ಬಗ್ಗೆ ಬಿಸಿಸಿಐ ಮಾಹಿತಿ ನೀಡಿದ್ದು ಅಭಿಮಾನಿಗಳು ಆಘಾತಗೊಂಡಿದ್ದಾರೆ.

ಇಂಟರ್ನಲ್ ಬ್ಲೀಡಿಂಗ್.. ಐಸಿಯುನಲ್ಲಿ ಚಿಕಿತ್ಸೆ!

ಸಿಡ್ನಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಟಾಸ್ ಗೆದ್ರೂ ಫಸ್ಟ್ ಬ್ಯಾಟಿಂಗ್ ಸೆಲೆಕ್ಟ್ ಮಾಡಿಕೊಂಡಿತ್ತು. ಈ ವೇಳೆ ಆಸ್ಟ್ರೇಲಿಯಾದ ಇನ್ನಿಂಗ್ಸ್​ನ 33.4 ನೇ ಓವರ್‌ನಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಸ್ಟ್ರೈಕ್​ನಲ್ಲಿದ್ರು. ಇತ್ತ ಹರ್ಷಿತ್ ರಾಣಾ ಬೌಲಿಂಗ್​ ಮಾಡ್ತಿದ್ರು. 24 ರನ್ ಗಳಿಸಿ ಆಡ್ತಿದ್ದ ಅಲೆಕ್ಸ್ ಕ್ಯಾರಿ ಹೈ ಶಾಟ್​ಗೆ ಮುಂದಾಗಿದ್ರು. ಆಗ ಫೀಲ್ಡಿಂಗ್​ನಲ್ಲಿದ್ದ ಶ್ರೇಯಸ್ ಅಯ್ಯರ್ ಕ್ಯಾಚ್ ಹಿಡಿಯೋದಕ್ಕಾಗಿ ಹಿಂದಕ್ಕೆ ಓಡಿ ಬಾಲ್​ನ ಯಶಸ್ವಿಯಾಗಿ ಹಿಡಿದಿದ್ರು. ಆದ್ರೆ ಈ ಟೈಮಲ್ಲಿ ಕೆಳಗೆ ಬಿದ್ದು ನೋವಿನಿಂದ ನರಳಾಡಿದ್ರು. ಈ ವೇಳೆ ಮೈದಾನಕ್ಕೆ ಬಂದ ಪಿಸಿಯೋ, ಶ್ರೇಯಸ್ ಅವರನ್ನು ಪರೀಕ್ಷಿಸಿ ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋದ್ರು. ನಾರ್ಮಲಿ ಮ್ಯಾಚ್ ಟೈಮಲ್ಲಿ ಇದೆಲ್ಲಾ ಆಗೋದು ಕಾಮನ್. ಸ್ವಲ್ಪ ಇಂಜುರಿ ಆಗಿರ್ಬೋದು ಅಂತಾನೇ ಎಲ್ರೂ ಭಾವಿಸಿದ್ರು. ಹಾಗೇ ಶ್ರೇಯಸ್ ಎಫರ್ಟ್​ಗೆ ಶಹಬ್ಬಾಸ್ ಅಂದಿದ್ರು. ಸೋಶಿಯಲ್ ಮೀಡಿಯಾದಲ್ಲೂ ವಾಟ್ ಎ ಸ್ಟನ್ನಿಂಗ್ ಕ್ಯಾಚ್ ಅಂತೆಲ್ಲಾ ಪೋಸ್ಟ್​ಗಳು ಹರಿದಾಡಿದ್ವು. ಆದ್ರೆ ಶ್ರೇಯಸ್​ಗೆ ದೊಡ್ಡ ಮಟ್ಟದಲ್ಲೇ ಪೆಟ್ಟು ಬಿದ್ದಿದೆ. ಈ ಬಗ್ಗೆ ಬಿಸಿಸಿಐ ಅಪ್​ಡೇಟ್ ನೀಡಿದೆ.

ಶನಿವಾರದ ಮ್ಯಾಚಲ್ಲಿ ನರಳುತ್ತಲೇ ಡ್ರೆಸ್ಸಿಂಗ್ ರೂಮ್​ಗೆ ಬಂದ ಶ್ರೇಯಸ್ ಅವ್ರನ್ನ ಕೂಡಲೇ ಆಸ್ಪತ್ರೆಗೆ ದಾಖಲು ಮಾಡ್ಲಾಗಿತ್ತು. ಚಿಕಿತ್ಸೆ ವೇಳೆ ಅವ್ರಿಗೆ ಆಗಿರೋ ಇಂಜುರಿ ಡೆಪ್ತ್ ಗೊತ್ತಾಗಿದೆ. ಅಂದ್ರೆ ಕೆಳಗೆ ಬಿದ್ದಾಗ ಅವ್ರ ಎಡಭಾಗದ ಪಕ್ಕೆಲುಬಿಗೆ ಗಂಭೀರವಾಗಿ ಪೆಟ್ಟಾಗಿದೆ. ಸದ್ಯ ಎರಡು ದಿನಗಳಿಂದ ಶ್ರೇಯಸ್‌ ಅಯ್ಯರ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯಕೀಯ ವರದಿಯಲ್ಲಿ ಇಂಟರ್ನಲ್ ಬ್ಲೀಡಿಂಗ್ ಅಂದ್ರೆ  ಆಂತರಿಕ ರಕ್ತಸ್ರಾವವಾಗಿರುವುದು ಪತ್ತೆಯಾಗಿದೆ. ಕೂಡಲೆ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ರಕ್ತಸ್ರಾವದಿಂದ ಸೋಂಕು ಹರಡದಂತೆ ತಡೆಯಲೆಂದೇ ಏಳು ದಿನಗಳ ಕಾಲ ಮೆಡಿಕಲ್ ಅಬ್ಸರ್ವೇಷನ್​ನಲ್ಲಿ ಇಡಬೇಕಾಗುತ್ತದೆ. ಈ ಬಗ್ಗೆ ಬಿಸಿಸಿಐ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ. ಶ್ರೇಯಸ್ ಅಯ್ಯರ್ ಅವ್ರ  ಗಾಯದ ಗಂಭೀರತೆಯನ್ನು ಪರಿಗಣಿಸಿ ಡ್ರೆಸ್ಸಿಂಗ್ ರೂಮ್‌ಗೆ ಬರುತ್ತಿದ್ದಂತೆ ಬಿಸಿಸಿಐ ವೈದ್ಯಕೀಯ ತಂಡ ಯಾವುದೇ ಪ್ರಾಥಮಿಕ ಚಿಕಿತ್ಸೆ ನೀಡದೆ ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. ತಕ್ಷಣ ಆಸ್ಪತ್ರೆಗೆ ಕರೆತರದಿದ್ದರೆ ಅವರ ಸ್ಥಿತಿ ಗಂಭೀರವಾಗುವ ಸಾಧ್ಯತೆ ಇತ್ತು. ಅವರು ಶೀಘ್ರದಲ್ಲೇ ಗುಣಮುಖರಾಗುತ್ತಾರೆ ಎಂದು ಮೂಲಗಳು ತಿಳಿಸಿವೆ. ಆರಂಭದಲ್ಲಿ ಶ್ರೇಯಸ್ ಸುಮಾರು ಮೂರು ವಾರಗಳ ಕಾಲ ಆಟದಿಂದ ಹೊರಗುಳಿಯಬೇಕಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗಿನ ಸಿಚುಯೇಷನ್ ನೋಡಿದ್ರೆ ರಿಕವರ್ ಆಗೋಕೆ ಸಾಕಷ್ಟು ಟೈಂ ತಗೊಳ್ಳೋ ಸಾಧ್ಯತೆ ಇದೆ. ಬಟ್ ಈ ಫ್ರ್ಯಾಕ್ಚರ್ ಶ್ರೇಯಸ್ ಭವಿಷ್ಯಕ್ಕೆ ದೊಡ್ಡ ಹೊಡೆತವನ್ನೇ ಕೊಡೋ ಅಪಾಯ ಇದೆ.

ರಿಬ್ ಕೇಜ್ ಅಂದ್ರೆ ಪಕ್ಕೆಲುಬು. ದೇಹದ ಕೆಲ ಪ್ರಮುಖ ಅಂಗಗಳಾಗಿರುವಂಥ ಶ್ವಾಸಕೋಶ, ಹೃದಯ ಮತ್ತು ಪ್ರಮುಖ ರಕ್ತನಾಳಗಳನ್ನು ರಕ್ಷಿಸುವ ಮೂಳೆಗಳ ಕರ್ವ್ ಶೀಲ್ಡ್. ಒಂಥರಾ ರಕ್ಷಕವಚ ಇದ್ದಂತೆ. ಕ್ರಿಕೆಟ್​ನಲ್ಲಿ   ಬಲವಾಗಿ ಚೆಂಡು ಬಿದ್ದಾಗ ಅಥವಾ ಡೈವ್ ಹೊಡೆದಾಗ ಇಲ್ಲ ಪರಸ್ಪರ ಆಟಗಾರರ ಡಿಕ್ಕಿಯಂಥ ಟೈಮಲ್ಲಿ ಪಕ್ಕೆಲುಬುಗಳನ್ನು ಬಿರುಕುಗೊಳಿಸಬಹುದು ಅಥವಾ ಮುರಿಯಬಹುದು. ಸದ್ಯ ಶ್ರೇಯಸ್ ಕೇಸಲ್ಲಿ ಪಕ್ಕೆಲುಬಿನ ಮುರಿತ ಅಥವಾ ಮೂಗೇಟು ಆಗಿರೋದೇ ರಕ್ತಸ್ರಾವಕ್ಕೆ ಕಾರಣವಾಗಿದೆ ಅಂತಾ ಮೆಡಿಕಲ್ ರಿಪೋರ್ಟ್ಸ್ ಹೇಳ್ತಿವೆ. ವೈದ್ಯಕೀಯವಾಗಿ ಇದನ್ನ ರಿಬ್ ಫ್ರಾಕ್ಚರ್ ಅಂತಾ ಕರೆಯಲಾಗುತ್ತೆ. ಌಕ್ಚುಲಿ ಒಬ್ಬ ಕ್ರೀಡಾಪಟುವಿಗೆ ಇದು ತುಂಬಾನೇ ಡೇಂಜರಸ್. ಯಾಕಂದ್ರೆ ಪಕ್ಕೆಲುಬಿನ ಗಾಯ ಉಸಿರಾಟದ ಮೇಲೆ ತೀವ್ರ ಪರಿಣಾಮ ಬೀರುತ್ತೆ. ಡೀಪ್ ಬ್ರೀತ್, ಕೆಮ್ಮುವಾಗ ಪಕ್ಕೆಲುಬುಗಳಲ್ಲಿ ನೋವು ಕಾಣಿಸಿಕೊಳ್ಳುತ್ತೆ. ಇದ್ರ ಜೊತೆಗೆ ಆಂತರಿಕ ರಕ್ತಸ್ರಾವ ಆದಾಗ ಚೆಸ್ಟ್ ಕೇವಿಟಿಯೊಳಗೆ ರಕ್ತ ಸಂಗ್ರಹ ಆಗ್ಬೋದು. ಅಥವಾ ಗಾಳಿ ಅದರೊಳಗೆ ಹೋಗಬಹುದು. ಇದಕ್ಕೆ ನ್ಯೂಮೋಥೊರಾಕ್ಸ್ ಅಂತಾರೆ. ಹಾಗೇ ರಿಬ್ ಫ್ರ್ಯಾಕ್ಚರ್ ಆದಾಗ ಲಂಗ್ಸ್​ನ ಕಂಪ್ರೆಸ್ ಮಾಡುತ್ತೆ. ಅಂದ್ರೆ ಉಸಿರಾಡುವಾಗ ಶ್ವಾಸಕೋಶವನ್ನು ಸಂಕುಚಿತಗೊಳಿಸಬಹುದು. ಹೀಗಾದಾಗ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡಬಹುದು. ಇಂಥಾ ಟೈಮಲ್ಲಿ ಬೇಗ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯಕಾರಿಯಾಗುವಂಥ ಚಾನ್ಸಸ್ ಕೂಡ ಇರುತ್ತೆ.  ಇನ್ನೊಂದು ಮೇನ್ ಏನಪ್ಪಾ ಅಂದ್ರೆ ಪಕ್ಕೆಲುಬಿನ ಇಂಜುರಿಗಳು ಸದ್ಯಕ್ಕೆ ವಾಸಿಯಾದಂತೆ ಕಂಡ್ರೂ ಭವಿಷ್ಯದಲ್ಲಿ ಮತ್ತೆ ಕಾಣಿಸಿಕೊಳ್ಳೋ ಚಾನ್ಸಸ್ ಇರುತ್ತೆ. ಅದೂ ಅಲ್ದೇ ಶ್ರೇಯಸ್ ಬ್ಯಾಟರ್ ಆಗಿರೋದ್ರಿಂದ ಬ್ಯಾಟಿಂಗ್ ರೊಟೇಷನ್, ಫೀಲ್ಡಿಂಗ್ ಟೈಮಲ್ಲಿ ಅಪ್ಪರ್ ಬಾಡಿ ಕಂಪ್ಲೀಟ್ ಆಗಿ ಫ್ಲೆಕ್ಸಿಬಲಿಟಿ ಬೇಕಾಗುತ್ತೆ. ಜೊತೆಗೆ ಎಫರ್ಟ್​ಲೆಸ್ ಬ್ರೀತಿಂಗ್ ಈಸ್ ಮೋರ್ ಇಂಪಾರ್ಟೆಂಟ್. ಆನ್ ಫೀಲ್ಡ್​ನಲ್ಲಿ ಏನಾದ್ರೂ ಮತ್ತೆ ಅದೇ ಜಾಗಕ್ಕೆ ಸಣ್ಣದೊಂದು ಪೆಟ್ಟು ಬಿದ್ರೂ ರೀ ಇಂಜುರಿಯಾಗ್ಬೋದು, ದೀರ್ಘಕಾಲದ ನೋವು ತರಿಸಬಹುದು. ಸದ್ಯದ ರಿಪೋರ್ಟ್ಸ್ ಪ್ರಕಾರ ಸಿಡ್ನಿಯ ವೈದ್ಯಕೀಯ ಸಿಬ್ಬಂದಿ ಮುನ್ನೆಚ್ಚರಿಕೆಯಾಗಿ ಅವರನ್ನು ಐಸಿಯುನಲ್ಲಿ ಇರಿಸಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡವು ಸಿಡ್ನಿ ಮತ್ತು ಭಾರತದ ತಜ್ಞರೊಂದಿಗೆ ಸಮಾಲೋಚಿಸಿ ಅವರ ಗಾಯದ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತೀಯ ತಂಡದ ವೈದ್ಯರು ಶ್ರೇಯಸ್ ಅವರೊಂದಿಗೆ ಸಿಡ್ನಿಯಲ್ಲಿಯೇ ಇರುತ್ತಾರೆ, ಅವರ ರೆಗ್ಯುಲರ್ ಡವಲಪ್​ಮೆಂಟ್ಸ್​ನ ಮಾನಿಟರ್ ಮಾಡ್ತಿದ್ದಾರೆ.  ಇಂಜುರಿ ಯಾವ ಲೆವೆಲ್​ನಲ್ಲಿ ಇದೆ ಅನ್ನೋದನ್ನ ಅಬ್ಸರ್ವ್ ಮಾಡಿ ಚಿಕಿತ್ಸೆಯನ್ನ ಕಂಟಿನ್ಯೂ ಮಾಡ್ತಾರೆ.

Shantha Kumari