ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ! – ಹೈಕಮಾಂಡ್ ಮುಂದೆ ಡಿಕೆ ಶಿವಕುಮಾರ್!

ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ ಜೋರಾಗಿ ಸದ್ದು ಮಾಡ್ತಿದೆ. ನವೆಂಬರ್ 20ಕ್ಕೆ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸುತ್ತಿದ್ದು, ಆಂತರಿಕ ಚಟುವಟಿಕೆಗಳು ಜೋರಾಗಿ ನಡೆಯುತ್ತಿದೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನವೆಂಬರ್ 15ಕ್ಕೆ ದೆಹಲಿಗೆ ತೆರಳುತ್ತಿದ್ದಾರೆ. ಇದ್ರ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹಾಜರ್ ಹಾಕಿದ್ದಾರೆ.
ಇದನ್ನೂ ಓದಿ: ರಿಷಾ ತೊಡೆ ಮೇಲೆ ಚಂದ್ರಪ್ರಭ! – ಆಚೆ ಬಾ.. ಕಣ್ಣೀರು ಹಾಕಿಸ್ತೀನಿ ಎಂದು ವಾರ್ನ್ ಮಾಡಿದ ಪತ್ನಿ ಭಾರತಿ!
ಇತ್ತೀಚೆಗೆ ಸಿಎಂ ಪುತ್ರ ಯತೀಂದ್ರ ಸಿಡಿಸಿದ ಉತ್ತರಾಧಿಕಾರಿ ಬಾಂಬ್ಕಾಂಗ್ರೆಸ್ ನಾಯಕರಲ್ಲಿ ನಡುಕ ಶುರುವಾಗಿದೆ. ಹೀಗಿರುವಾಗ ಸಂಪುಟ ಪುನಾರಚನೆ ಮಾಡಿ ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ, ನವೆಂಬರ್ 15ಕ್ಕೆ ದೆಹಲಿಗೆ ತೆರಳುತ್ತಿದ್ದಾರೆ. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಸಂಪುಟ ಪುನಾರಚನೆ ಕುರಿತು ಚರ್ಚಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಹೋಗಲ್ಲ ಎನ್ನುತ್ತಲೇ, ಭಾನುವಾರವೇ ದೆಹಲಿ ತಲುಪಿದ್ದಾರೆ.
ನೋ ಡೆಲ್ಲಿ, ಯಾವ ಹೈಕಮಾಂಡ್ ನಾಯಕರನ್ನೂ ಭೇಟಿಯಾಗಲ್ಲ ಎಂದು ಭಾನುವಾರ ಬೆಳಗ್ಗೆ 11 ಗಂಟೆಗೆ ಹೇಳಿದ್ದ ಡಿಸಿಎಂ ಡಿಕೆ ಶಿವಕುಮಾರ್, ಮಧ್ಯಾಹ್ನ 1.30 ರ ಸುಮಾರಿಗೆ ದೆಹಲಿ ವಿಮಾನ ಹತ್ತಿದ್ದಾರೆ. ಇದು ತೀವ್ರ ಕುತೂಹಲ ಮೂಡಿಸಿದೆ. ಇದೀಗ ನವೆಂಬರ್ ಕ್ರಾಂತಿ ಸಂಭವಿಸಲಿದೆಯೇ? ಕ್ರಾಂತಿ ಅಂದರೆ ಸಂಪುಟ ಸರ್ಜರಿಯಾ ಅಥವಾ ಸಂಪುಟ ವಿಸ್ತರಣೆಯಾ? ನಾಯಕತ್ವವನ್ನೇ ಅದಲು ಬದಲು ಮಾಡುವ ಆಟವೇ? ಹೀಗೆ ಹತ್ತಾರು ಪ್ರಶ್ನೆಗಳು ಹುಟ್ಟಿಕೊಂಡಿವೆ.

ನೋಡಿರಿ

