ರಿಷಾ ತೊಡೆ ಮೇಲೆ ಚಂದ್ರಪ್ರಭ!‌ – ಆಚೆ ಬಾ.. ಕಣ್ಣೀರು ಹಾಕಿಸ್ತೀನಿ ಎಂದು ವಾರ್ನ್‌ ಮಾಡಿದ ಪತ್ನಿ ಭಾರತಿ!

ರಿಷಾ ತೊಡೆ ಮೇಲೆ ಚಂದ್ರಪ್ರಭ!‌ – ಆಚೆ ಬಾ.. ಕಣ್ಣೀರು ಹಾಕಿಸ್ತೀನಿ ಎಂದು ವಾರ್ನ್‌ ಮಾಡಿದ ಪತ್ನಿ ಭಾರತಿ!

ಬಿಗ್‌ ಬಾಸ್‌ ಮನೆಯಲ್ಲಿ ಆರಂಭದಲ್ಲಿ ಸೈಲೆಂಟ್‌ ಆಗಿದ್ದ ಚಂದ್ರಪ್ರಭ ಈಗ ಫುಲ್‌ ಆಕ್ಟಿವ್‌ ಆಗಿದ್ದಾರೆ.. ಅದೂ ಕೂಡ ರಿಷಾ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಾದ್ಮೇಲೆ.. ಕಳೆದ ಒಂದು ವಾರದಿಂದ ಚಂದ್ರಪ್ರಭ ಲವ್ವರ್‌ ಬಾಯ್‌ ಆಗಿ ಕಾಣಿಸಿಕೊಂಡಿದ್ದಾರೆ. ಆದ್ರೀಗ ರಿಷಾ ಜೊತೆ ಕ್ಲೋಸ್‌ ಆಗ್ತಿದ್ದಂತೆ ಚಂದ್ರಪ್ರಭ ಪತ್ನಿ ವಾರ್ನಿಂಗ್‌ ಕೊಟ್ಟಿದ್ದಾರೆ. ಹೊರಗೆ ಬಂದ್ಮೇಲೆ ಕಣ್ಣೀರು ಹಾಕಿಸ್ತೀನಿ ಅಂತಾ ಹೇಳಿದ್ದಾರೆ.

ಇದನ್ನೂ ಓದಿ:  ಅಶ್ವಿನಿ ಗೌಡ, ಜಾಹ್ನವಿ ಫ್ರೆಂಡ್‌ಶಿಪ್‌ ಕಟ್!‌ – ಜೋಡೆತ್ತುಗಳು ದೂರ ಆಗಿದ್ದು ಗೇಮ್‌ ಸ್ಟ್ರಾಟರ್ಜಿ?

ಚಂದ್ರಪ್ರಭ ದೊಡ್ಮನೆಗೆ ಜಂಟಿಯಾಗಿ ಎಂಟ್ರಿ ಕೊಟ್ಟಿದ್ರು. ಇವರಿಗೆ ಡಾಗ್‌ ಸತೀಶ್‌ ಜೋಡಿಯಾಗಿದ್ರು. ಆದ್ರೆ ಸತೀಶ್‌ ಬರೀ ಬಾತ್‌ರೂಮ್‌ನಲ್ಲೇ ಕಾಲ ಕಳಿತಾ ಇದ್ರು.  ಇಂದ್ರಿಂದಾಗಿ ಚಂದ್ರಪ್ರಭಗೆ ಸರಿಯಾಗಿ ಆಟ ಆಡೋಕೆ ಆಗ್ತಿರ್ಲಿಲ್ಲ. ಸತೀಶ್‌ ಎಲಿಮಿನೇಟ್‌ ಆಗ್ತಿದ್ದಂತೆ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿದೆ. ರಿಷಾ ಗೌಡ ಅವರ ಜೊತೆ ಚಂದ್ರಪ್ರಭ ಕ್ಲೋಸ್‌ ಆಗಿದ್ದಾರೆ. ರಿಷಾ ಗೌಡ ತೊಡೆ ಮೇಲೆ ಮಲಗಿದ್ದರು, ಇಲ್ಲಿ ಗಿಲ್ಲಿ ನಟ ಕೂಡ ಇದ್ದರು. ಚಂದ್ರಪ್ರಭ ಪತ್ನಿಯಿಂದ ವಾರ್ನಿಂಗ್‌ ಮಾಡಿದ್ದಾರೆ. ಇದ್ರ ವಿಡಿಯೋವನ್ನ ಮನೆಮಂದಿಗೆ ತೋರಿಸಿದ್ದಾರೆ ಕಿಚ್ಚ ಸುದೀಪ್!

ರಿಷಾ ಜೊತೆ ಡ್ಯಾನ್ಸ್‌ ಮಾಡಿದ್ದು, ಸ್ವಿಮ್ಮಿಂಗ್‌ಫೂಲ್‌ವೊಳಗಡೆ ಇಳಿದಿದ್ದು, ಎತ್ತಿಕೊಂಡಿದ್ದು ಎಲ್ಲವನ್ನು ಸಂಡೇ ವಿಥ್‌ ಸುದೀಪ ಎಪಿಸೋಡ್‌ನಲ್ಲಿ ಮತ್ತೊಮ್ಮೆ ವಿಡಿಯೋ ಹಾಕಿ ಪ್ಲೇ ಮಾಡಲಾಯ್ತು. ಅದೇ ಟೈಮ್‌ನಲ್ಲಿ ಚಂದ್ರಪ್ರಭ ಹೆಂಡ್ತಿ ಕೂಡ ಮಾತನಾಡಿರುವ ವಿಡಿಯೋ ಪ್ಲೇ ಆಗಿದೆ. ಬಿಗ್‌ ಬಾಸ್‌ ಮನೆಯಲ್ಲಿ ನಿನ್ನ ಆಟ, ಅವತಾರ ನೋಡಿ ದಿಲ್‌ ಖುಷ್‌ ಆಗಿದೆ ಅಂತ ಅನ್ಕೋಬೇಡ. ನನ್ನ ಸ್ನೇಹಿತರು, ಫ್ಯಾಮಿಲಿ ಕಡೆಯಿಂದ ಫೋನ್‌ ಬರ್ತಿದೆ. ಮೊದಲ ವಾರದಲ್ಲಿ ಸತೀಶ್‌ ಸರ್‌ ಜೊತೆ ಸಾಕು ಪ್ರಾಣಿ ಥರ ಇದ್ಯಾ? ಈಗ ಇನ್ನೊಂದು ಪ್ರಾಣಿಯನ್ನು ಸಾಕೋ ಥರ ಆಗಿದ್ಯಾ. ನಿನಗೆ ನಾನು ನಿನ್ನ ಹೆಂಡ್ತಿ ಎನ್ನೋದು ನೆನಪಿರಲಿ ಎಂದು ಚಂದ್ರಪ್ರಭ ಪತ್ನಿ ಭಾರತಿ ಹೇಳಿದ್ದಾರೆ.

ನಿಮ್ಮ ವೈಫ್‌ ವೈಲ್ಡ್‌ಕಾರ್ಡ್‌ ಎಂಟ್ರಿ ಬರಲಿ ಎಂದು ಕಿಚ್ಚ ಸುದೀಪ್‌ ಹೇಳಿದ್ದರು. ನಾನು ಬಿಗ್‌ ಬಾಸ್‌ ಮನೆಗೆ ಬಂದ್ರೆ ಏನಾಗತ್ತೆ? ನನ್ನ ಹೆಂಡ್ತಿಯೂ ವೈಲ್ಡ್‌ಕಾರ್ಡ್‌ ಎಂಟ್ರಿ ಕೊಡಲಿ, ಬಿಗ್‌ ಬಾಸ್‌ ಮನೆಗೆ ಬರಲಿ, ಬಿಗ್‌ ಬಾಸ್‌ ಮನೆ ನೋಡಲಿ, ಇಷ್ಟಪಡಲಿ ಅಂತ ಅಂದುಕೋ. ಯಾಕೆ ಬೇಡ ಎಂದು ಹೇಳಿದೆ? ಎಂದು ಭಾರತಿ ಹೇಳಿದ್ದಾರೆ.

ಯಾವುದೋ ಕಾಯಿನ್‌ ಗೇಮ್‌ ನೋಡಿದೆ. ಕಾಕ್ರೋಚ್‌ ಸುಧಿ ಅವರು ಸ್ವೀಟ್‌ ಕೊಟ್ಟಾಕ್ಷಣ, ಮುದ್ದು ಮಾಡೋದೇನು, ತಿನ್ನಿಸಿದೇನೋ, ಲವ್‌ ಸಿಂಬೋಲ್‌ ತಿನಿಸೋದೇನು? ಕಣ್ಣೀರು ಒರೆಸೋದೇನು. ನೀನು ನನಗೆ ಒಂದು ದಿನ ಆದರೂ ಹೀಗೆ ಮಾಡಿದ್ಯಾ? ನನಗೂ ನಿನ್ನ ಕಣ್ಣಲ್ಲಿ ನೀರು ತರಿಸಬೇಕು ಅಂತ ಅನಿಸ್ತಿದೆ, ಬೇಗ ಮನೆಗೆ ಬಾ ಎಂದು ಭಾರತಿ ಹೇಳಿದ್ದಾರೆ.

ನನ್ನ ಹೆಂಡ್ತಿ ಮಲೆ ಮಾದೇಶ್ವರ ಬೆಟ್ಟದಲ್ಲಿರೋದು, ಅವಳು ಹೇಗೆ ಇದನ್ನೆಲ್ಲ ನೋಡಿದಳು ಅಂತ ಗೊತ್ತಾಗಲಿಲ್ಲ ಎಂದು ಚಂದ್ರಪ್ರಭ ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಚಂದ್ರಪ್ರಭ ಹೇಗೆ ಆಟ ಆಡಲಿದ್ದಾರೆ ಎಂದು ಕಾದು ನೋಡಬೇಕಿದೆ.

Shwetha M