ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಕೇಸ್ – ಐವರಿಗೆ ನೋಟಿಸ್ ನೀಡಿದ SIT!

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ದೇಶದಾದ್ಯಂತ ಭಾರಿ ಸದ್ದು ಮಾಡಿತ್ತು. ಇದೀಗ ಈಗ ಪ್ರಕರಣದ ತನಿಖೆಯನ್ನ ಎಸ್‌ಐಟಿ ನಡೆಸುತ್ತಿದೆ. ಈ ಕೇಸ್ ಇನ್ನೇನು ತಾರ್ಕಿಕ ಅಂತ್ಯ ಕಾಣುವ ಹಂತಕ್ಕೆ ಬರುವಂತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರಿಗೆ ಮತ್ತೊಂದು ಸುತ್ತಿನ ವಿಚಾರಣೆಗೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಹಾಜರಾಗಲು ಐವರಿಗೆ ವಿಶೇಷ ತನಿಖಾ ತಂಡ ನೋಟಿಸ್ ನೀಡಿದೆ.
ಇದನ್ನೂ ಓದಿ: ಕೆಎಸ್ ಆರ್‌ಟಿ ಬಸ್‌ಗಳಲ್ಲಿ ಇನ್ಮುಂದೆ ಈ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ!
ಧರ್ಮಸ್ಥಳ ಬುರುಡೆ ಪ್ರಕರಣದ ಸೂತ್ರಧಾರಿಗಳನ್ನ ಎಸ್‌ಐಟಿ ತೀವ್ರ ವಿಚಾರಣೆಗೆ ಒಳಪಡಿಸುತ್ತಲೇ ಇದೆ. ಇದೀಗ ಮತ್ತೊಂದು ಸುತ್ತಿನ ವಿಚಾರಣೆಗೆ ಹಾಜರಾಗಬೇಕು ಎಂದು ಎಸ್‌ಐಟಿ ತನಿಖಾಧಿಕಾರಿ ಎಸ್.ಪಿ ಜಿತೇಂದ್ರ ದಯಾಮಾ ಅವರು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ , ಜಯಂತ್. ಟಿ, ವಿಠಲ ಗೌಡ, ಸುಜಾತ ಭಟ್‌ಗೆ ನೋಟಿಸ್ ನೀಡಿದ್ದಾರೆ. ಒಂದ್ವೇಳೆ ವಿಚಾರಣೆಗೆ ಹಾಜರಾಗದಿದ್ದರೆ, ಬಂಧನ ಮಾಡುವ ಎಚ್ಚರಿಕೆಯೊಂದಿಗೆ ನೋಟಿಸ್ ನೀಡಲಾಗಿದೆ. ಬಿಎನ್‌ಎಸ್‌ಎಸ್ 35(3) ಅಡಿಯಲ್ಲಿ ಪ್ರದತ್ತವಾದ ವಿಶೇಷ ಅಧಿಕಾರ ಬಳಸಿಕೊಂಡು ಪ್ರಕರಣದ ಸೂತ್ರಧಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಇನ್ನು ತನಿಖಾಧಿಕಾರಿ ದಯಾಮ ಐವರಿಗೆ ನೀಡಿರುವ ನೊಟೀಸ್‌ನಲ್ಲಿ ಹಲವು ಅಂಶ ಉಲ್ಲೇಖಿಸಿದ್ದಾರೆ. ತನಿಖೆಯಲ್ಲಿ ಕಂಡುಕೊಂಡಂತೆ ಪ್ರಕರಣದ ಹಲವು ಸಂಗತಿಗಳನ್ನು ಮತ್ತು ಸಂದರ್ಭಗಳನ್ನು ತಮ್ಮಿಂದ ಖಚಿತಪಡಿಸಿಕೊಳ್ಳುವ ಅಗತ್ಯವಿದೆ. ಹೀಗಾಗಿ ನಿಮ್ಮನ್ನ ವಿಚಾರಿಸುವುದು ಅಗತ್ಯವಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಪ್ರಕರಣದ ಐವರು ಸೂತ್ರಧಾರಿಗಳು ಮತ್ತೊಂದು ಸುತ್ತಿನ ವಿಚಾರಣೆಗೆ ಹಾಜರಾಗ್ತಾರಾ ಎಂದು ಕಾದುನೋಡ್ಬೇಕು.

ನೋಡಿರಿ

