ದೊಡ್ಡವ್ವ ದೊಡ್ಡವ್ವ ದೋಸೆ ಕೊಡು..! – ಬಿಗ್ಬಾಸ್ ಗಿಲ್ಲಿ ಸಾಂಗ್ ಟ್ರೆಂಡ್
ಅಶ್ವಿನಿಗೆ ಟಾಂಗ್.. ಎಲ್ಲೆಲ್ಲೂ ಗಿಲ್ಲಿ ಗುಂಗು

ಬಿಗ್ಬಾಸ್ ಮನೆಯಲ್ಲೀಗ ಗಿಲ್ಲಿಯದ್ದೇ ಹವಾ. ಗಿಲ್ಲಿ ನಟನ ಪ್ರಾಪರ್ಟಿ ಕಾಮಿಡಿ ನಿಮಗೆಲ್ಲರಿಗೂ ಗೊತ್ತೇ ಇದೆ. ಇದೇ ಟ್ರಿಕ್ ಯೂಸ್ ಮಾಡ್ಕೊಂಡ ಗಿಲ್ಲಿ ನಟ ಬಿಗ್ಬಾಸ್ ಮನೆಯಲ್ಲೂ ಕಾಮಿಡಿ ಮಾಡ್ತಾ ಇರ್ತಾರೆ. ಜೊತೆಗೆ ಒಳ್ಳೆ ಎಂಟರ್ಟೈನರ್ ಕೂಡಾ. ಗಿಲ್ಲಿಯ ಹವಾ ದೊಡ್ಮನೆಯಲ್ಲಿ ಜೋರಾಗೇ ಇದೆ ಅನ್ನೋ ಕಾರಣಕ್ಕೆ ಮತ್ತೊಬ್ಬ ಸ್ಪರ್ಧಿ ಅಶ್ವಿನಿ ಗೌಡ ಗಿಲ್ಲಿಯನ್ನ ಕಂಡ್ರೆ ಉರಿದುಬೀಳ್ತಾರೆ. ಇದೀಗ ಅಶ್ವಿನಿ ಗೌಡಗೆ ಟಾಂಗ್ ಕೊಟ್ಟು ಜೊತೆಗೆ ಬಕೆಟ್ ಜಾನ್ವಿಯನ್ನೂ ಸೇರಿಸಿಕೊಂಡು ಗಿಲ್ಲಿ ಹಾಡಿದ ಹಾಡು ಫುಲ್ ಟ್ರೆಂಡಿಂಗ್ನಲ್ಲಿದೆ.
ಇದನ್ನೂ ಓದಿ:ಸ್ಪರ್ಧಿಗಳಿಗೆ ಮನೆಯಿಂದ ಕಾಲ್ ಬಂದ್ರೂ ಮಾತಾಡಿಲ್ಲ ಯಾಕೆ? – ಬಿಗ್ಬಾಸ್ನಲ್ಲಿ ರಘು ಫೇವರಿಸಂ ಆಟ?
ಸ್ನೇಹಿತರೇ, ಈಗ ಒನ್ ವೀಕ್ನಿಂದ ಈ ಸಾಂಗ್ ಒಂದು ಫುಲ್ ಟ್ರೆಂಡ್ ಕ್ರಿಯೇಟ್ ಮಾಡಿದೆ. ದೊಡ್ಡವ್ವ ದೊಡ್ಡವ್ವ ದೋಸೆ ಕೊಡು, ಚಿಕ್ಕವ್ವ ಚಿಕ್ಕವ್ವ ಚಕ್ಲಿ ಕೊಡು. ನಮ್ಮಪ್ಪ ರಾಜಾ. ಕೊತ್ತಂಬರಿ ಬೀಜ. ಸಾರಿಗಾಕೋ ಸೊಪ್ಪು. ನೀವ್ ಮಾಡಿದ್ ತಪ್ಪು. ಗಿಲ್ಲಿ ಏನ್ ದಬ್ಬಾಗಿದ್ದೀಯಾ. ನಾನ್ ಬಕೆಟ್ ದಬ್ಬಾಗಿದ್ದೀನಿ. ಈ ಡೈಲಾಗ್ಗೆ ನೀವೆಲ್ಲಾ ಮನಸಾರೆ ನಕ್ಕೀದ್ದೀರಿ. ದುರಂಹಂಕಾರದ ಜೋಡಿಗೆ ಗಿಲ್ಲಿ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾನೆ ಅನ್ನೋ ಮಾತು ಕೂಡಾ ಕೇಳಿಬಂದಿತ್ತು. ಈಗ ಇದೇ ಡೈಲಾಗ್ ಕಮ್ ಸಾಂಗ್.. ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡಿಂಗ್ನಲ್ಲಿದ್ದಾರೆ. ಈ ಸಾಂಗ್ ಗೆ ಭರ್ಜರಿ ಸ್ಟೆಪ್ ಹಾಕಿ ರೀಲ್ಸ್ ಮಾಡಲಾಗ್ತಿದೆ. Rap ಸಾಂಗ್ಅಂತೂ ಫುಲ್ ಜೋಶ್ ನೀಡ್ತಿದೆ.
ರಕ್ಷಿತಾ ವಿಚಾರದಲ್ಲಿ ಸ್ಟ್ಯಾಂಡ್ ತೆಗೆದುಕೊಂಡು ಗಿಲ್ಲಿ ಕಿಚ್ಚನ ಚಪ್ಪಾಳೆ ಪಡೆದ ಉರಿ ಅಶ್ವಿನಿ ಗೌಡ ಮತ್ತು ಜಾನ್ವಿಗೆ. ಅದಕ್ಕೂ ಮೊದಲು ಪ್ರೆಸ್ ಮೀಟ್ ನೆಪದಲ್ಲಿ ಅಶ್ವಿನಿ ಗೌಡ ಗಿಲ್ಲಿಗೆ ದೊಡ್ಮನೆಗೆ ಬಂದು ಏನ್ ದಬ್ಬಾಕಿದ್ಯಾ ಅಂತಾ ಪ್ರಶ್ನೆ ಮಾಡಿದ್ರು. ಅದಕ್ಕೆ ಗಿಲ್ಲಿ ಬಕೆಟ್ ದಬ್ಬಾಗಿದ್ದೀನಿ ಅಂತಾ ಸರಿಯಾಗಿಯೇ ಉರಿಸಿದ್ರು. ಈ ಉತ್ತರ ಕೇಳಿ ಅಶ್ವಿನಿಗೇನೇ ಶೇಪ್ ಔಟ್ ಆಗಿತ್ತು. ಇದಾದ ನಂತರ ವೀಕೆಂಡ್ ಶೋನಲ್ಲಿ ಗಿಲ್ಲಿ ನಟ ತಾನು ಬಾಲ್ಯದಲ್ಲಿ ಹೇಳುತ್ತಿದ್ದ ಚಿಕ್ಕ ಪದ್ಯಗಳನ್ನು ಕರೆಕ್ಟ್ ಟೈಮ್ಗೇನೇ ಹೇಳಿದ್ರು. ಅದು ಕೂಡಾ ಅಶ್ವಿನಿಗೂ ಜಾನ್ವಿಗೂ ಸರಿಯಾಗಿಯೇ ಟಾಂಗ್ ಕೊಟ್ಟೇ ಹೇಳಿದ್ರು. ಜಗಳದ ಮಧ್ಯೆ ಗಿಲ್ಲಿ ಇದನ್ನು ಹಾಡಿದ್ದರು. ಇದೀಗ ಭಾರೀ ವೈರಲ್ ಆಗ್ತಿದೆ. ಇವೆಲ್ಲವೂ ಟ್ಯೂನ್, ರಿಧಮ್ ಸಮೇತ ಹಾಡಾಗಿದ್ದು, ಇದಕ್ಕೆ ಕೆಲವರು ಡ್ಯಾನ್ಸ್ ಮಾಡಿದ್ದಾರೆ. ಅದು ಕೂಡಾ ಫಂಕ್ಷನ್ನಲ್ಲಿ, ಡ್ಯಾನ್ಸ್ ಕ್ಲಾಸ್ನಲ್ಲಿ, ಚಿಕ್ಕಮಕ್ಕಳಿಂದ ಹಿಡಿದು ಯುವಕರು, ಮಹಿಳೆಯರು ಕೂಡಾ ದೊಡ್ಡವ್ವ ದೊಡ್ಡವ್ವ ದ್ವಾಸೆ ಕೊಡು ಅನ್ನೋ ಸಾಂಗ್ಗೆ ಭರ್ಜರಿ ಸ್ಟೆಪ್ಸ್ ಹಾಕ್ತಿದ್ದಾರೆ.
ಗಿಲ್ಲಿ ನಟ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಮನರಂಜನೆ ನೀಡ್ತಿದ್ದಾರೆ. ದೊಡ್ಮನೆಯಲ್ಲಿರೋ ಸ್ಪರ್ಧಿಗಳಿಗೂ, ಬಿಗ್ಬಾಸ್ ವೀಕ್ಷಕರಿಗೂ ಕೂಡಾ ಸಖತ್ ಮಜಾ ನೀಡ್ತಿದ್ದಾರೆ. ಅದ್ರಲ್ಲೂ ಈಗ ಮಂಡ್ಯದ ಹಳ್ಳಿ ಸೊಗಡಿನ ಭಾಷೆಯಲ್ಲಿ ದೊಡ್ಡವ್ವ ದೊಡ್ಡವ್ವ ದ್ವಾಸೆ ಕೊಡು ಅನ್ನೋ ಚಿಕ್ಕ ಪದ್ಯ, ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಟ್ರೆಂಡ್ ಕ್ರಿಯೇಟ್ ಮಾಡಿರೋದು ಗಿಲ್ಲಿ ನಟನ ಜನಪ್ರಿಯತೆಗೆ ಸಾಕ್ಷಿ. ಗುಡ್ ಲಕ್ ಗಿಲ್ಲಿ.

ನೋಡಿರಿ

