ಬಿಗ್ಬಾಸ್ ಮನೆಯಲ್ಲಿ ಪ್ರಣಯ ಪಕ್ಷಿಗಳಿಗೆ ಕಿಚ್ಚನ ವಾರ್ನಿಂಗ್ – ಸೂರಜ್ ಪ್ರೀತಿಯಲ್ಲಿ ರಾಶಿಕಾ ಕಳೆದುಹೋದರೆ ಮನೆಗೆ ಗ್ಯಾರಂಟಿ..!

ಬಿಗ್ಬಾಸ್ ಮನೆಯಲ್ಲಿ ಲವ್ ಟ್ರ್ಯಾಕ್ ಶುರುವಾಗಿದೆ. ಕೈ ಕೈ ಹಿಡಿದುಕೊಂಡು ರೋಮ್ಯಾನ್ಸ್ ಮಾಡುವುದು, ಚಾನ್ಸ್ ಸಿಕ್ಕಾಗ ರೋಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡುತ್ತಾ ಸೂರಜ್ ಮತ್ತು ರಾಶಿಕಾ ಪ್ರೀತಿಯಲ್ಲಿ ಮುಳುಗಿದ್ದಾರೆ. ಬಿಗ್‌ಬಾಸ್ ಮನೆಯನ್ನ ಪ್ರೇಮಲೋಕ ಮಾಡಿಕೊಂಡ ಈ ಜೋಡಿಗೆ ಕಿಚ್ಚ ಸುದೀಪ್ ಸರಿಯಾಗಿಯೇ ವಾರ್ನಿಂಗ್ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಲವ್ ಟ್ರ್ಯಾಕ್ ಶುರುವಾಗಿದೆ. ಈ ಸೀಸನ್ ಅಲ್ಲಿ ರಾಶಿಕಾ ಶೆಟ್ಟಿ ಅವರು ಲವ್ ಟ್ರ್ಯಾಕ್ ಆರಂಭಿಸಲು ಪ್ರಯತ್ನಿಸಿದ್ದಾರೆ. ಸೂರಜ್ ಸಿಂಗ್ ಜೊತೆ ಜಾಸ್ತಿ ಸಮಯ ಕಳೆಯುತ್ತಿದ್ದಾರೆ. ಸಮಯ ನೋಡಿ ಸೂರಜ್ ಜೊತೆ ರೋಮ್ಯಾಂಟಿಕ್ ಆಗಿ ಇರಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಇಬ್ಬರೂ ಸೇರಿ ರೋಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಹೀಗಿರುವಾಗಲೇ ಸುದೀಪ್ ಅವರು ಎಚ್ಚರಿಕೆ ನೀಡಿದ್ದಾರೆ. ಹೀಗೆ ಆದ್ರೆ ರಿಶಿಕಾ ಔಟ್ ಆಗ್ತಾರೆ ಎಂದು ಸುದೀಪ್ ನೇರವಾಗಿ ಹೇಳಿದ್ದಾರೆ.
ರಾಶಿಕಾ ಅವರು ಮೊದಲಿನಿಂದಲೂ ಬಿಗ್ ಬಾಸ್ ಮನೆಯಲ್ಲಿ ಜೋಡಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ, ಯಾರೂ ಅವರಿಗೆ ಸೆಟ್ ಆಗಿರಲಿಲ್ಲ. ಈ ವಿಚಾರದಲ್ಲಿ ಅವರಿಗೆ ಬೇಸರ ಇತ್ತು. ಅನೇಕ ಬಾರಿ ಈ ವಿಚಾರವನ್ನು ಅವರೇ ಹೇಳಿಕೊಂಡಿದ್ದರಂತೆ. ಈಗ ಬಿಗ್ ಬಾಸ್ ಮನೆಗೆ ಸೂರಜ್ ಬರುತ್ತಿದ್ದಂತೆ ಅವರಿಗೆ ಖುಷಿ ಆಗಿದೆ ಮತ್ತು ಅವರು ನೇರವಾಗಿ ಹೇಳಿಕೊಂಡಿದ್ದಾರೆ. ರಾಶಿಕಾ ಅವರು ಸೂರಜ್ ಅವರ ಕೈ ಕೈ ಹಿಡಿದುಕೊಂಡು ಮಾತನಾಡಲು ಆರಂಭಿಸಿದ್ದರು. ಪ್ರೀತಿ ವಿಚಾರವನ್ನು ದಾಳವಾಗಿ ಬಳಕೆ ಮಾಡಿಕೊಂಡು ಗೆಲ್ಲಲು ಅವರು ಪ್ಲ್ಯಾನ್ ರೂಪಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಇದಕ್ಕೆ ಸುದೀಪ್ ಅವರು ನೇರವಾಗಿ ಮಾತನಾಡಿ ಎಚ್ಚರಿಕೆ ನೀಡಿದ್ದಾರೆ. ‘ನೀವು (ಸೂರಜ್) ಬಂದು ಶರ್ಟ್ ತೆಗೆದಿದ್ದು ನೋಡಿ ಕೆಲವರು ಆಟ ಆಡುವುದನ್ನೇ ನಿಲ್ಲಿಸಿದ್ದಾರೆ. ಅಲ್ಲಿ ಚೇಂಜ್ ಆದವರು ಆಟವನ್ನೇ ಆಡುತ್ತಿಲ್ಲ. ಹೀಗೆ ಮುಂದುವರಿದರೆ ನೀವು ಅಲ್ಲೇ ಇರ್ತೀರಿ, ನೀವು ಔಟ್ ಆಗ್ತೀರಾ’ ಎಂದು ಸುದೀಪ್ ಅವರು ರಾಶಿಕಾಗೆ ಎಚ್ಚರಿಕೆ ನೀಡಿದರು.

ನೋಡಿರಿ

