RO-KO ಬೆಂಕಿಗೆ AUS ಶೇಕ್ – ಗಂಭೀರ್ ಗೆ HITಮ್ಯಾನ್ ಶತಕದೇಟು  
ಸರಣಿ ಸೋತ್ರೂ ಮನಗೆದ್ದ KOHLI

RO-KO ಬೆಂಕಿಗೆ AUS ಶೇಕ್ – ಗಂಭೀರ್ ಗೆ HITಮ್ಯಾನ್ ಶತಕದೇಟು  ಸರಣಿ ಸೋತ್ರೂ ಮನಗೆದ್ದ KOHLI

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಕೊನೇ ಮ್ಯಾಚ್ ಸಿಡ್ನಿ ಮೈದಾನದಲ್ಲಿ ನಡೀತು. ಮೊದಲ ಎರಡು ಪಂದ್ಯಗಳನ್ನ ಕಾಂಗರೂ ಪಡೆ ಗೆದ್ದಿದ್ರಿಂದ ಭಾರತಕ್ಕೆ ಸರಣಿ ಕೈತಪ್ಪಿಯಾಗಿತ್ತು. ಹೀಗಿದ್ರೂ ಲಾಸ್ಟ್ ಮ್ಯಾಚ್ ಗೆಲ್ಲೋದು ಕ್ಲೀನ್ ಸ್ವೀಪ್ ಮುಖಭಂಗ ತಪ್ಪಿಸಿಕೊಳ್ಳೋದ್ರ ಜೊತೆಗೆ ಪ್ರತಿಷ್ಠೆ ಕೂಡ ಆಗಿತ್ತು. ಅದೇ ಇಂಟೆನ್ಷನ್​ನಲ್ಲಿ ಕಣಕ್ಕಿಳಿದ ಭಾರತ ಗೆದ್ದು ಬೀಗಿದೆ. ಸತತ ಮೂರನೇ ಪಂದ್ಯದಲ್ಲೂ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡ್ಕೊಂಡಿತ್ತು. ಈ ಮ್ಯಾಚಲ್ಲಿ ಭಾರತದ ಬೌಲರ್​ಗಳು ಸಾಲಿಡ್ ಪ್ರದರ್ಶನ ನೀಡಿದ್ದು ಆಸೀಸ್ ಬ್ಯಾಟರ್​ಗಳ ನೀರಿಳಿಸಿದ್ರು.  ಪರಿಣಾಮ 46. 4 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳ್ಕೊಂಡು 236 ರನ್​​ಗಳಿಸಿತು. 237 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ಬ್ಯಾಟಿಂಗ್​ನಲ್ಲಿ ಪವರ್​ಶೋ ತೋರಿಸಿದೆ. ರೋಕೊ ಜೋಡಿ ತಾವು ಯಾಕೆ ಬೆಸ್ಟ್ ಜೋಡಿ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ.

ಇದನ್ನೂ ಓದಿ : ಆಸ್ಟ್ರೇಲಿಯಾವನ್ನು 236 ರನ್‌ಗಳಿಗೆ ನಿಯಂತ್ರಿಸಿದ ಭಾರತ – ಬೌಲಿಂಗ್‌ನಲ್ಲಿ ರಾಣಾ, ಫೀಲ್ಡಿಂಗ್‌ನಲ್ಲಿ ಕೊಹ್ಲಿ, ಶ್ರೇಯಸ್ ಕಮಾಲ್

ರೋಹಿತ್ ಶತಕ.. ಕೊಹ್ಲಿ ಅರ್ಧಶತಕ.. ಕೊನೆಗೂ ಗೆದ್ದ ಭಾರತ!

ಆಸ್ಟ್ರೇಲಿಯಾ ನೀಡಿದ್ದ ಈಸಿ ಟಾರ್ಗೆಟ್ ಬೆನ್ನತ್ತಿದ ಭಾರತದ ಪರ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದ್ರು. ಕಳೆದೆರಡು ಪಂದ್ಯಗಳಲ್ಲೂ ಫಸ್ಟ್ ವಿಕೆಟ್​ಗೆ ಬಿಗ್ ಸ್ಕೋರ್ ಬಂದಿರ್ಲಿಲ್ಲ. ಬಟ್ ಈ ಮ್ಯಾಚಲ್ಲಿ 69 ರನ್​ಗಳ ಪಾರ್ಟ್ನರ್​ಶಿಪ್ ನೀಡಿದ್ರು. ಪವರ್ ಪ್ಲೇನಲ್ಲೇ ಒಂದೊಳ್ಳೆ ಇನ್ನಿಂಗ್ಸ್ ಬಂತು. ಪವರ್​ ಪ್ಲೇ ಮುಗಿದ ನೆಕ್ಸ್​ಟ್ ಓವರ್​ನಲ್ಲೇ 24 ರನ್ ಗಳಿಸಿದ್ದ ಗಿಲ್ ಹೇಜಲ್​ವುಡ್ ಬೌಲಿಂಗ್​ನಲ್ಲಿ ಔಟ್ ಆದ್ರು. ಆಮೇಲೇ ನೋಡಿ ರೋ-ಕೋ ಜೋಡಿ ಅಬ್ಬರ ಶುರುವಾಗಿದ್ದು. ಒಂದ್ಕಡೆ ರೋಹಿತ್ ಶರ್ಮಾ ಇನ್ನೊಂದ್ಕಡೆ ವಿರಾಟ್ ಕೊಹ್ಲಿ ಸೂಪರ್ ಸ್ಟ್ರಾಂಗ್ ಆಗಿ ನಿಂತು ಆಸ್ಟ್ರೇಲಿಯಾ ಬೌಲರ್​ಗಳ ನೀರಿಳಿಸಿದ್ರು. ಭಾರತ 69 ರನ್ಸ್ ಗಳಿಸಿದ್ದಾಗ ಒಂದಾದ ಈ ಜೋಡಿ ವಿನ್ನಿಂಗ್ ರನ್ಸ್ ಬರೋವರೆಗೂ ಜೊತೆಯಾಗಿ ನಿಂತು ಮ್ಯಾಚ್ ಗೆಲ್ಲಿಸಿಕೊಟ್ರು. ಇಬ್ಬರ ಜೊತೆಯಾಟದಲ್ಲಿ 168 ರನ್ಸ್ ಬಂತು. ಒಂದ್ಕಡೆ ರೋಹಿತ್ ಶರ್ಮಾ 125 ಎಸೆತಗಳಲ್ಲಿ 13 ಫೋರ್, 3 ಸಿಕ್ಸರ್​ಗಳೊಂದಿಗೆ 121 ರನ್ ಗಳಿಸಿ ಅಜೇಯರಾಗಿ ಉಳಿದ್ರು. ಇನ್ನೊಂದ್ಕಡೆ ವಿರಾಟ್ ಕೊಹ್ಲಿ ಪರ್ಫಾಮೆನ್ಸ್ ಕೂಡ ಸೂಪರ್. ಫಸ್ಟ್ ಮತ್ತು ಸೆಕೆಂಡ್ ಮ್ಯಾಚಲ್ಲಿ ಡಕ್ ಔಟ್ ಆಗಿದ್ದ ಕೊಹ್ಲಿ ಮೂರನೇ ಮ್ಯಾಚಲ್ಲಿ ಗ್ರೇಟ್ ಕಮ್ ಬ್ಯಾಕ್ ಮಾಡಿದ್ರು. ಮೊದ್ಲೇ ಚೇಸಿಂಗ್ ಕಿಂಗ್ ಇಂಥಾ ಚಾನ್ಸ್ ಬಿಡ್ತಾರಾ. 81 ಎಸೆತಗಳಲ್ಲಿ 7 ಫೋರ್​ಗಳೊಂದಿಗೆ 74 ರನ್ ಗಳಿಸಿ ಅಜೇಯರಾಗಿ ಉಳಿದ್ರು. ಈ ಮೂಲಕ ಭಾರತ ಇನ್ನೂ 69 ಎಸೆತಗಳು ಬಾಕಿ ಇರುವಂತೆಯೇ 9 ವಿಕೆಟ್​ಗಳಿಂದ ಪಂದ್ಯವನ್ನ ಗೆದ್ದುಕೊಳ್ತು.

ಶತಕಗಳ ಅರ್ಧಶತಕ.. ಹಿಟ್ ಮ್ಯಾನ್ ಅಬ್ಬರ!

ರೋಹಿತ್ ಶರ್ಮಾ ಫಿಟ್ ಆಗಿಲ್ಲ ಫಾರ್ಮ್​ನಲ್ಲಿಲ್ಲ ಅಂತಿದ್ದೋರಿಗೆಲ್ಲಾ ರೋಹಿತ್ ಶರ್ಮಾ ತಮ್ಮ ಸ್ಟಾಮಿನಾ ಏನು ಅನ್ನೋದನ್ನ ತೋರಿಸಿಕೊಟ್ರು. 2027 ರ ವಿಶ್ವಕಪ್ ಗೆ ಬೇಡ ಅಂತಿದ್ದವ್ರಿಗೆ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. 2027 ರ ವೇಳೆಗೆ ರೋಹಿತ್ ವಯಸ್ಸು 40 ವರ್ಷ ಕ್ರಾಸ್ ಮಾಡಿರುತ್ತೆ. ಈ ವಯಸ್ಸಲ್ಲಿ ವಿಶ್ವಕಪ್ ಆಡೋಕೆ ಸಾಧ್ಯ ಇಲ್ಲ ಅಂತಾ ಕೆಲವ್ರು ವಾದ ಮಾಡ್ತಿದ್ರು. ಆದ್ರೆ 7 ತಿಂಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬ್ಯಾಟ್ ಹಿಡಿದರೂ ಅದೇ ಫಾರ್ಮ್​ನಲ್ಲೇ ಬ್ಯಾಟ್ ಬೀಸಿದ್ರು. ಆಸ್ಟ್ರೇಲಿಯಾ ಪ್ರವಾಸದ ಮೊದಲ ಪಂದ್ಯದಲ್ಲಿ ಬೇಗ ಔಟ್ ಆಗಿದ್ದ ರೋಹಿತ್ ಎರಡನೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಇದೀಗ ಮೂರನೇ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ. ತಮ್ಮ ಏಕದಿನ ವೃತ್ತಿಜೀವನದ 33 ನೇ ಶತಕ ಪೂರೈಸಿದ್ದಾರೆ. ಅಲ್ದೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಶತಕಗಳ ಅರ್ಧಶತಕ ಪೂರೈಸಿದ್ದಾರೆ. ಅಂದರೆ ರೋಹಿತ್ ಶರ್ಮಾ ಇದುವರೆಗೆ 50 ಶತಕಗಳನ್ನು ಬಾರಿಸಿದ್ದಾರೆ. ಹಾಗೇ ಕಾಂಗರೂ ನಾಡಿನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ವಿದೇಶಿ ಬ್ಯಾಟರ್ ಎಂಬ ದಾಖಲೆ ಬರೆದ್ರು. 5 ಶತಕ ಬಾರಿಸಿರುವ ವಿರಾಟ್‌ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ. ರೋಹಿತ್‌ ಸಿಡ್ನಿಯಲ್ಲಿ ಶತಕ ಬಾರಿಸುವ ಮೂಲಕ ಆಸೀಸ್‌ ನೆಲದಲ್ಲಿ 6ನೇ ಶತಕ ಪೂರೈಸಿದರು.

ಎರಡು ಡಕ್ ಬಳಿಕ 3ನೇ ಮ್ಯಾಚಲ್ಲಿ ಕೊಹ್ಲಿ ಕಮ್ ಬ್ಯಾಕ್!

ಇನ್ನು ಈ ಇನ್ನಿಂಗ್ಸ್ ಕಿಂಗ್ ಕೊಹ್ಲಿ ಪಾಲಿಗೆ ಮೋಸ್ಟ್ ವ್ಯಾಲ್ಯೂಯೇಬಲ್ ರನ್ಸ್ ಆಗುತ್ತೆ. ಯಾಕಂದ್ರೆ ವಿರಾಟ್ ಕೊಹ್ಲಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಮುಗಿದೇ ಹೋಯ್ತು ಅಂತಿದ್ದವ್ರಿಗೆ ಖಡಕ್ ಕೌಂಟರ್ ಕೊಟ್ಟಿದ್ದಾರೆ. ತಮ್ಮನ್ನ ಯಾಕೆ ಚೇಸಿಂಗ್ ಕಿಂಗ್ ಅಂತಾರೆ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಪರ್ತ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 8 ಎಸೆತಗಳನ್ನು ಎದುರಿಸಿದರೂ ಅವರು ಖಾತೆ ತೆರೆಯೋಕೂ ಸಾಧ್ಯ ಆಗಿರಲಿಲ್ಲ. ಅದೇ ರೀತಿ ಅಡಿಲೇಡ್ ನಲ್ಲಿ ನಡೆದ ಎರಡನೇ ಪಂದ್ಯದಲ್ಲೂ ಅವರು 4 ಎಸೆತಗಳನ್ನು ಆಡಿ ಖಾತೆ ತೆರೆಯುವ ಮುನ್ನವೇ ಔಟ್ ಆಗಿದ್ದರು. ಬಟ್ ಮೂರನೇ ಮ್ಯಾಚ್​ನಲ್ಲಿ ಎಲ್ಲಿ ಹ್ಯಾಟ್ರಿಕ್ ಡಕ್ ಆಗುತ್ತೋ ಅನ್ನೋ ಆತಂಕ ಶುರುವಾಗಿತ್ತು. ಬಟ್ ಕಿಂಗ್ ಅದನ್ನ ಸುಳ್ಳಾಗಿಸಿದ್ರು. ರೋಹಿತ್ ಜೊತೆಗೂಡಿ ಆಸೀಸ್ ಬೌಲರ್​ಗಳನ್ನ ಚೆಂಡಾಡಿದ್ರು. ಌಂಡ್ ಇನ್ನೊಂದು ವಿಚಾರ ಹೇಳ್ಳೇಬೇಕು. ವಿರಾಟ್ ಕೊಹ್ಲಿ ನಂಬರ್ 3ನಲ್ಲಿ ಬ್ಯಾಟಿಂಗ್​ಗೆ ಬರುವಾಗ್ಲೇ ಸ್ಟಾಂಡಿಂಗ್ ಅವೇಶನ್ ಸಿಕ್ಕಿತ್ತು. ಕೊಹ್ಲಿ ಸಂಪಾದಿಸಿರೋ ಅಭಿಮಾನ ಅಂಥಾದ್ದು. ಹೀಗೆ ರೋಕೊ ಜೋಡಿ ಕೊನೇ ಮ್ಯಾಚಲ್ಲಿ ಬಿಗ್ ಪಾರ್ಟ್ನರ್ಶಿಪ್ ಮೂಲಕ ಮ್ಯಾಚ್ ಗೆಲ್ಲಿಸಿಕೊಟ್ಟಿದ್ದಾರೆ. ಇನ್ನು ಓವರ್ ಆಲ್ ಆಗಿ ಭಾರತ ಈ ಪಂದ್ಯವನ್ನ ಗೆಲ್ಲೋಕೆ ಏನೆಲ್ಲಾ ಅಡ್ವಾಂಟೇಜ್ ಆಯ್ತು ಅನ್ನೋದನ್ನ ನೋಡ್ತಾ ಹೋಗೋಣ.

ಭಾರತಕ್ಕೆ ಏನೆಲ್ಲಾ ಪ್ಲಸ್ ಆಯ್ತು!

  1. ಟಾಸ್ ಸೋತ್ರೂ ಫಸ್ಟ್ ಬೌಲಿಂಗ್
  2. ಭಾರತದ ಪರ ಬೌಲರ್ಸ್ ಪವರ್ ಶೋ
  3. 236 ರನ್ ಗಳಿಗೆ ಆಲೌಟ್ ಮಾಡಿದ್ದು
  4. ರೋಹಿತ್-ಗಿಲ್ ಜೊತೆಯಾಟ (68)
  5. ರೋಹಿತ್ -ಕೊಹ್ಲಿ ಪಾರ್ಟ್ನರ್ ಶಿಪ್ (168)

ಹೀಗೆ ಲಾಸ್ಟ್ ಮ್ಯಾಚಲ್ಲಿ ಟೀಂ ಇಂಡಿಯಾ ಆಲ್​ರೌಂಡ್ ಪ್ರದರ್ಶನ ನೀಡಿ ಪಂದ್ಯವನ್ನ ಗೆದ್ದುಕೊಳ್ತು. ಹಾಗೇ ವೈಟ್ ವಾಶ್ ಮುಖಭಂಗ ತಪ್ಪಿಸಿಕೊಂಡ್ರು. ಹಾಗೇ ಮೊದಲೇ ಎರಡು ಮ್ಯಾಚ್​ಗಳನ್ನ ಗೆದ್ದಿದ್ದ ಆಸ್ಟ್ರೇಲಿಯಾ ಸರಣಿಯನ್ನ ಗೆದ್ದು ಬೀಗಿತ್ತು. ಫೈನಲಿ ಮ್ಯಾಚ್ ರಿಸಲ್ಟ್ ಏನಾದ್ರೂ ಆಗಿರ್ಲಿ ಬಟ್ ರೋಹಿತ್ ಌಂಡ್ ಕೊಹ್ಲಿ ತಮ್ಮ ಸಾಮರ್ಥ್ಯ ಏನು ಅನ್ನೋದನ್ನ ಪ್ರೂವ್ ಮಾಡಿದ್ರಲ್ಲ ಅಷ್ಟೇ ಸಾಕು.

Shantha Kumari