ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟ ಪಟಾಪಟಿ ಚಡ್ಡಿ! – ಅಬ್ಬಬ್ಬಾ ಇದ್ರ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರ!

ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟ ಪಟಾಪಟಿ ಚಡ್ಡಿ! – ಅಬ್ಬಬ್ಬಾ ಇದ್ರ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರ!

ಹಿಂದಿನ ಕಾಲದಿಂದಲೂ ಹಳ್ಳಿ ಕಡೆಗಳಲ್ಲಿ ಹೆಚ್ಚಾಗಿ ಅಜ್ಜಂದಿರು ಪಟಾಪಟಿ ಚಡ್ಡಿ ಧರಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಈಗ ಪಟಾಪಟಿ ಚಡ್ಡಿ  ಹಾಕುವವರ ಸಂಖ್ಯೆ ಕಡಿಮೆ ಆಗಿದೆ. ಇದನ್ನ ಹಾಕಿದ್ರೆ ಜನ ತಮಾಷೆ ಮಾಡ್ತಾರೆ ಅನ್ನೋ ಕಾರಣಕ್ಕೆ ಇದನ್ನ ಧರಿಸೋದನ್ನೇ ಬಿಟ್ಟಿದ್ದಾರೆ. ಆದ್ರೀಗ ಹಿಂದಿನ ಕಾಲದಲ್ಲಿ ಅಜ್ಜಂದಿರು ಹಾಕ್ತಿದ್ದ ಪಟಾಪಟಿ ಚಡ್ಡಿ ಫ್ಯಾಷನ್‌ ಸದ್ದು ಮಾಡ್ತಿದೆ. ಆನ್‌ಲೈನ್‌ನಲ್ಲಿ ಇದ್ರ ಬೆಲೆ ನೋಡಿ ಜನ ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: ಕಾವೇರಿ, ಕೃಷ್ಣಾನದಿ ಜೀವ ಜಲ ಆಗಿ ಉಳಿದಿಲ್ಲ – 12 ನದಿಗಳ ನೀರು ಕುಡಿಯಲು ಯೋಗ್ಯವಿಲ್ಲ..!

ಅಳಿವಿನಂಚಿಗೆ ಹೋಗ್ತಿದ್ದ ಪಟಾಪಟಿ ಚಡ್ಡಿ ಈಗ ಫ್ಯಾಷನ್‌ ಲೋಕದಲ್ಲಿ ಮತ್ತೆ ಸದ್ದು ಮಾಡ್ತಿದೆ.ಇದೀಗ  ಹೊಸ ಲುಕ್‍ನೊಂದಿಗೆ ಪಟಾಪಟಿ ಚಡ್ಡಿ ಫ್ಯಾಶನ್ ಲೋಕಕ್ಕೆ ಮರಳಿದೆ. ಒಂದು ಕಾಲದಲ್ಲಿ ಹಳೆಯದು ಎಂದು ಪರಿಗಣಿಸಿ ತಿರಸ್ಕಾರಕ್ಕೊಳಪಟ್ಟ ಪಟಾಪಟಿ ಚಡ್ಡಿ ಇದೀಗ ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿದ್ದು, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳು ಇದನ್ನು ಹೆಮ್ಮೆಯಿಂದ ಧರಿಸುತ್ತಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಈ ವಿಂಟೇಜ್ ವಿನ್ಯಾಸವನ್ನು ಪ್ರದರ್ಶಿಸುತ್ತಿರುವ ಜನರ ಗುಂಪೊಂದು ಕಂಡುಬಂದಿದೆ. ಈ ವಿಡಿಯೊದಲ್ಲಿ, ವಿಮಾನ ನಿಲ್ದಾಣದ ಆವರಣದಲ್ಲಿ ಯುವಕರು ಮತ್ತು ಯುವತಿಯರು ವಿವಿಧ ಬಣ್ಣಗಳಲ್ಲಿ ಕ್ಲಾಸಿಕ್ ಪಟಾಪಟಿ ಚಡ್ಡಿ (ಒಳ ಉಡುಪು) ಗಳನ್ನು ಧರಿಸಿ ಸ್ಟೈಲ್ ಆಗಿ ನಡೆಯುವುದನ್ನು ತೋರಿಸುತ್ತದೆ.

H&M ಒಂದು ಜನಪ್ರಿಯ ಬ್ರ್ಯಾಂಡ್ ಆಗಿದ್ದು, ಅಜ್ಜಂದಿರು ಧರಿಸುತ್ತಿದ್ದ ಪಟಾಪಟಿ ಚಡ್ಡಿಯಂತೆಯೇ ತೋರುವ ಶಾರ್ಟ್ಸ್‌ ಅನ್ನು ವಿಡಿಯೊ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಪಟ್ಟೆ ಮತ್ತು ತಿಳಿ ಬಣ್ಣದ ಈ ಶಾರ್ಟ್ಸ್ ತಕ್ಷಣವೇ ದೇಸಿಗಳ ಗಮನ ಸೆಳೆಯಿತು. ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ, ಆ ವ್ಯಕ್ತಿ ಪಟ್ಟೆ ಇರುವ ಶಾರ್ಟ್ಸ್ ಅನ್ನು ಹಿಡಿದುಕೊಂಡು, ನನ್ನ ಅಜ್ಜ ಪ್ರತಿದಿನ ಒಳ ಉಡುಪುಗಳಾಗಿ ಧರಿಸುತ್ತಿದ್ದದ್ದು ಇಲ್ಲಿದೆ. ಈಗ ಅದನ್ನು H&M ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.  ಇದ್ರ ಬೆಲೆ ಇದೀಗ 2,500 ರಿಂದ 11,000 ರೂ.ಗಳವರೆಗೆ ಇದೆ. ಇದ್ರ ಬೆಲೆ ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.

Shwetha M