ಕಬಾಲಿ ಕಿತಾಪತಿಗೆ 18 ಗಂಟೆ ರೋಡ್‌ ಬ್ಲಾಕ್!‌ –  ರಸ್ತೆಗೆ ಮರ ಬೀಳಿಸಿ ಸೊಪ್ಪು ತಿನ್ನುತ್ತಾ ಮಜಾ ಮಾಡಿದ ಆನೆ!

ಕಬಾಲಿ ಕಿತಾಪತಿಗೆ 18 ಗಂಟೆ ರೋಡ್‌ ಬ್ಲಾಕ್!‌ –  ರಸ್ತೆಗೆ ಮರ ಬೀಳಿಸಿ ಸೊಪ್ಪು ತಿನ್ನುತ್ತಾ ಮಜಾ ಮಾಡಿದ ಆನೆ!

ಕೇರಳದಲ್ಲಿ ಪ್ರಸಿದ್ದ ಒಂಟಿ ಸಲಗ ಕಬಾಲಿಯ ಉಪಟಳ ದಿನೇ ದಿನೇ ಹೆಚ್ಚಾಗ್ತಿದೆ. ರಸ್ತೆಯಲ್ಲಿ ಓಡಾಡುವ ವಾಹನಗಳೇ ಇದರ ಟಾರ್ಗೆಟ್‌. ಇದೀಗ ಕಬಾಲಿ ಕೊಟ್ಟ ಕಾಟಕ್ಕೆ ವಾಹನ ಸವಾರರು ಸುಸ್ತಾಗಿ ಹೋಗಿದ್ದಾರೆ. ಆನೆಗೆ ಆಟ.. ಜನರಿಗೆ ಪ್ರಾಣ ಸಂಕಟ ಎನ್ನುವಂತಾಗಿದೆ.. ಇದೀಗ ರಸ್ತೆಗೆ ಮರವೊಂದನ್ನ ಬೀಳಿಸಿ ಬರೋಬ್ಬರಿ 18 ಗಂಟೆ ರೋಡ್‌ ಬ್ಲಾಕ್‌ ಆಗುವಂತೆ ಮಾಡಿದ್ದಾನೆ ಗಜರಾಜ ಕಬಾಲಿ.

ಇದನ್ನೂ ಓದಿ: ತಪ್ಪಾಗಿ ಆಡಿರೋ ಮಾತಿಗೆ ಲಗಾಮು ಹಾಕೋಕೆ ಕಿಚ್ಚ ಬಂದಾಯ್ತು!‌ – ಅಶ್ವಿನಿ, ಸುಧಿಗೆ ಮಾರಿಹಬ್ಬ.. ರಕ್ಷಿತಾಗೆ ಕಿಚ್ಚನ ಚಪ್ಪಾಳೆ?

ಕೇರಳದ 33 ವರ್ಷದ ಈ ಒಂಟಿ ಸಲಗಕ್ಕೆ ನಟ ರಜನಿಕಾಂತ್ ಅವರ 2016 ರ ಚಲನಚಿತ್ರ ‘ಕಬಾಲಿ’ ಯ ಹೆಸರಿಡಲಾಗಿದೆ. ಈ ಒಂಟಿ ಸಲಗ ಜನರಿಗೆ ತೊಂದರೆ ಕೊಡೋದ್ರಲ್ಲಿ ಫೇಮಸ್‌. ಇದೀಗ ಕಬಾಲಿ ರಸ್ತೆಗೆ ಮರ ಬೀಳಿಸಿ ಮಜಾ ತೆಗೆದುಕೊಂಡಿದ್ದಾನೆ. ಇದ್ರಿಂದಾಗಿ ಸುಮಾರು 18 ಗಂಟೆಗ ಕಾಲ ರೋಡ್‌ ಬ್ಲಾಕ್‌ ಆಗಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಅತ್ತಿರಪ್ಪಿಲ್ಲಿ-ಮಲಕ್ಕಪ್ಪರಾ ವ್ಯಾಪ್ತಿಯಲ್ಲಿ ಬರುವ ಅಂತಾರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಕಬಾಲಿ ರಸ್ತೆಯೊಂದರ ಮೇಲೆ ತಾಳೆ ಮರವೊಂದರನ್ನು ಬೀಳಿಸಿ ಅಲ್ಲೇ ಅತ್ತಿತ್ತ ಓಡಾಡುತ್ತಲೇ ಇದ್ದ. ಅರಣ್ಯ ಅಧಿಕಾರಿಗಳು ಆನೆಯನ್ನ ಓಡಿಸಲು ಪ್ರಯತ್ನಿಸಿದಾಗ ಅವರ ಮೇಲೆ ದಾಳಿ ಮಾಡಿದೆ. ಸ್ಪಲ್ಪದರಲ್ಲೇ ಅರಣ್ಯಾಧಿಕಾರಿಗಳು ಬಚಾವ್‌ ಆಗಿದ್ದಾರೆ. ಸುಮಾರು ಗಂಟೆಗಳ ಬಳಿಕ ರಸ್ತೆ ಮಧ್ಯೆ ನಿಂತು ಸೊಂಡಿಲಿನಲ್ಲಿ ಮರವನ್ನು ತುಳಿದು ಸೀಳು ಅದನ್ನು ನಿಧಾನವಾಗಿ ತಿನ್ನುವುದಕ್ಕೆ ಶುರು ಮಾಡಿದೆ. ಅರಣ್ಯ ಅಧಿಕಾರಿಗಳು ಎಷ್ಟು ಓಡಿಸಲು ಪ್ರಯತ್ನಪಟ್ರೂ ಆನೆ ಹೋಗಿಲ್ಲ. ಇಂದ್ರಿಂದಾಗಿ ವಾಹನಗಳು ಮುಂದೆ ಚಲಿಸಲಾಗದೇ ಸುಮಾರು 18 ಗಂಟೆಗಳ ಕಾಲ ಬ್ಲಾಕ್ ಆಗಿವೆ. ಅರಣ್ಯ ಅಧಿಕಾರಿಗಳ ನಿರಂತರ ಪ್ರಯತ್ನದ ನಂತರ ಆನೆ ತಡರಾತ್ರಿ ನಿಧಾನವಾಗಿ ಆ ರಸ್ತೆಯಿಂದ ಬೇರೆಡೆ ಸಂಚರಿಸಿದ ನಂತರವಷ್ಟೇ ಆ ರಸ್ತೆ ಸಂಚಾರಕ್ಕೆ ತೆರವುಗೊಂಡಿದೆ. ಟ್ರಾಫಿಕ್ ಜಾಮ್ ನಿಂದಾಗಿ ಹಲವಾರು ಪ್ರವಾಸಿಗರು ಆಹಾರ ಮತ್ತು ನೀರಿಲ್ಲದೆ ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಂಡರು. ಆದರೆ ಹೀಗೆ ಹೋದ ಕಬಾಲಿ ಮತ್ತೆ ಸ್ವಲ್ಪ ಹೊತ್ತಿನಲ್ಲಿ ವಾಪಸ್ ಬಂದಿದ್ದು, ಇದ್ರಿಂದಾಗಿ ಮುಂಜಾನೆ 7 ಗಂಟೆಯವರೆಗೂ ಮತ್ತೆ 100 ವಾಹನಗಳು ಅಲ್ಲಿ ಸಿಲುಕಿಕೊಂಡಿದ್ದವು.

ಪದೇ ಪದೇ ಈ ಭಾಗದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಸ್ಥಳೀಯ ಜನರು ಹಾಗೂ ಅಲ್ಲಿನ ಸರ್ಕಾರಿ ಅಧಿಕಾರಿಗಳು ಈ ಕಾಡಾನೆಯನ್ನು ಹಿಡಿದು ಬೇರೆಡೆಗೆ ಸಾಗಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಏಕೆಂದರೆ ಈ ಭಾಗದಲ್ಲಿ ಹಲವು ಭಾರಿ ಈ ಕಾಡಾನೆ ಕಬಾಲಿ ದಾಳಿ ಮಾಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Shwetha M