ದುಬೈನಿಂದ ಚಿನ್ನ ಖರೀದಿಸೋ ಪ್ಲ್ಯಾನ್‌ ಮಾಡಿದ್ದೀರಾ? – ಈ ರೂಲ್ಸ್ ಒಮ್ಮೆ ನೋಡಿ

ದುಬೈನಿಂದ ಚಿನ್ನ ಖರೀದಿಸೋ ಪ್ಲ್ಯಾನ್‌ ಮಾಡಿದ್ದೀರಾ? – ಈ ರೂಲ್ಸ್ ಒಮ್ಮೆ ನೋಡಿ

ಚಿನ್ನದ ಮೇಲೆ ದಿನ ನಿತ್ಯ ಏರುತ್ತಿದೆ.  ಚಿನ್ನದ ರೇಟ್ ನೋಡಿದ ಜನ ನನ್ನ ಫ್ರೆಂಡ್ ದುಬೈನಲ್ಲಿ ಇರಬೇಕಿತ್ತು.. ದುಬೈನಿಂದ ಚಿನ್ನವನ್ನ ತರಿಸಬಹುದಿತ್ತು ಅಂತಾರೆ. ಇನ್ನೂ ಕೆಲವರೂ ನಾವೇ ದುಬೈಗೆ ಹೋಗಿ ಚಿನ್ನ ತಂದ್ರೆ ದುಡ್ಡು ಉಳಿಯುತ್ತೆ ಅಂತಾರೆ.. ಹಾಗಿದ್ರೆ ದುಬೈನಿಂದ ಅಷ್ಟು ಸುಲಭವಾಗಿ ಚಿನ್ನವನ್ನ ತೆಗೆದುಕೊಂಡು ಬರಬಹುದಾ?. ಎಷ್ಟು ಚಿನ್ನವನ್ನ ತೆೆಗೆದುಕೊಂಡು ಬರಬಹುದು? ಏನೆಲ್ಲಾ ರೂಲ್ಸ್ ಇದೆ ಅನ್ನೋದ್ದನ್ನ ನೋಡೋಣ.

ದುಬೈನಿಂದ ಚಿನ್ನವನ್ನ ತರಬಹುದಾ?

  • ದುಬೈಯಿಂದ ಭಾರತಕ್ಕೆ ಹಿಂದಿರುಗುವ ಭಾರತೀಯ ಪ್ರಯಾಣಿಕರು ಕಸ್ಟಮ್ಸ್ ಶುಲ್ಕ  ಇಲ್ಲದೇ ಚಿನ್ನವನ್ನು ತರಬಹುದು. ಆದರೆ, ಅದು ಸರ್ಕಾರ ನಿಗದಿಪಡಿಸಿರುವ ನಿರ್ದಿಷ್ಟ ಮಿತಿಯೊಳಗಿರಬೇಕು.
  • ಪುರುಷ ಪ್ರಯಾಣಿಕರಿಗೆ, ₹50,000 ಮೌಲ್ಯ ಮೀರದ ಅಥವಾ 20 ಗ್ರಾಂವರೆಗೆ ಚಿನ್ನಾಭರಣ ಖರೀದಿಗೆ ಯಾವುದೇ ಸುಂಕ ಇಲ್ಲ.
  • ಮಹಿಳಾ ಪ್ರಯಾಣಿಕರಿಗೆ ಖರೀದಿ ಪ್ರಮಾಣ ಹೆಚ್ಚಾಗಿದ್ದು, 40 ಗ್ರಾಂ ಅಥವಾ ಗರಿಷ್ಠ ₹1,00,000 ಮೌಲ್ಯದ ಚಿನ್ನಾಭರಣ ಸುಂಕವಿಲ್ಲದೇ ಖರೀದಿಸಬಹುದು.
  • ಈ ವಿನಾಯಿತಿಗಳು ಕೇವಲ ಚಿನ್ನಾಭರಣಗಳಿಗೆ ಮಾತ್ರ; ಚಿನ್ನದ ನಾಣ್ಯಗಳು, ಬಾರ್‌ಗಳು ಅಥವಾ ಬಿಸ್ಕತ್ತುಗಳಿಗೆ ಅನ್ವಯಿಸುವುದಿಲ್ಲ.
  • ಜೊತೆಗೆ, ಪ್ರಯಾಣಿಕರು ಕನಿಷ್ಠ ಒಂದು ವರ್ಷ ವಿದೇಶದಲ್ಲಿ ನೆಲೆಸಿದ್ದರೆ ಮಾತ್ರ ಈ ಸುಂಕ-ರಹಿತ ಸೌಲಭ್ಯಕ್ಕೆ ಅರ್ಹರಾಗುತ್ತಾರೆ. ಪ್ರಸ್ತುತ ಕಸ್ಟಮ್ಸ್ ನಿಯಮಗಳ ಪ್ರಕಾರ, ಮಕ್ಕಳು ಯಾವುದೇ ಚಿನ್ನದ ಡ್ಯೂಟಿ-ಫ್ರೀ ಮಿತಿಗೆ ಅರ್ಹರಾಗುವುದಿಲ್ಲ.
  • ಪ್ರಯಾಣಿಕರು ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಚಿನ್ನವನ್ನು ದುಬೈನಿಂದ ತಂದರೆ, ಅವರು ಭಾರತ ತಲುಪುವಾಗ ಅದನ್ನು ಕಸ್ಟಮ್ಸ್ ವಿಭಾಗಕ್ಕೆ ಘೋಷಿಸಿ ಸುಮಾರು 15.75% (ಸೆಸ್ ಮತ್ತು ಸರ್‌ಚಾರ್ಜ್ ಸೇರಿ) ತೆರಿಗೆ ಪಾವತಿಸಬೇಕು. ಘೋಷಣೆ ಮಾಡದಿದ್ದರೆ ಕಸ್ಟಮ್ಸ್ ಅಧಿಕಾರಿಗಳು ದಂಡ, ವಶಪಡಿಸಿಕೊಳ್ಳುವಿಕೆ ಅಥವಾ ಕಾನೂನು ಕ್ರಮ ಕೈಗೊಳ್ಳಬಹುದು.
  • ಸಮಸ್ಯೆಗಳನ್ನು ತಪ್ಪಿಸಲು, ಪ್ರಯಾಣಿಕರು ತಮ್ಮ ಖರೀದಿ ಬಿಲ್‌ಗಳು, ಚಿನ್ನಾಭರಣದ ತೂಕದ ದಾಖಲೆಗಳು ಇತ್ಯಾದಿಗಳೊಂದಿಗೆ ಪ್ರಯಾಣಿಸಲು ಹಾಗೂ ಅಭರಣವಲ್ಲದ ಚಿನ್ನದ ವಸ್ತುಗಳೊಂದಿಗೆ ಪ್ರಯಾಣ ಮಾಡದಂತೆ ಸಲಹೆ ನೀಡಲಾಗಿದೆ.
  • ಕಡಿಮೆ ಬೆಲೆ ಮತ್ತು ಕಡಿಮೆ ಸ್ಥಳೀಯ ತೆರಿಗೆಗಲಿಂದಾಗಿ ದುಬೈ ಚಿನ್ನದ ಖರೀದಿಗೆ ಜನಪ್ರಿಯ ತಾಣವಾಗಿದೆ. ಆದರೂ, ಚಿನ್ನ ಖರೀದಿಸಲು ಬಯಸುವವರು ಭಾರತದ ಆಮದು ನಿಯಮಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ.

Kishor KV