ಬೌಲಿಂಗ್ ನಲ್ಲಿ ಮಿಂಚಿದ ಟೀಂ ಇಂಡಿಯಾ – ಆಸ್ಟ್ರೇಲಿಯಾ ವಿರುದ್ಧ ಕೊನೇ ಮ್ಯಾಚ್ ಆದ್ರೂ ಗೆಲ್ತಾರಾ?

ಆಸ್ಟ್ರೇಲಿಯಾ ವಿರುದ್ಧ ಆಲ್ರೆಡಿ ಸರಣಿ ಸೋತಿರೋ ಟೀಂ ಇಂಡಿಯಾ ಕೊನೇ ಮ್ಯಾಚಲ್ಲಾದ್ರೂ ಗೆದ್ದು ವೈಟ್ ವಾಷ್ ಮುಖಭಂಗ ತಪ್ಪಿಸಿಕೊಳ್ಳೋ ಟಾರ್ಗೆಟ್ನಲ್ಲಿ ಕಣಕ್ಕಿಳಿದಿದೆ. ಌಸ್ ಯೂಶುಯಲ್ ಈ ಮ್ಯಾಚಲ್ಲೂ ಭಾರತದ ನಾಯಕ ಶುಭ್ಮನ್ ಗಿಲ್ ಟಾಸ್ ಸೋತ್ರು. ಬಟ್ ಆಸ್ಟ್ರೇಲಿಯಾ ಟಾಸ್ ವಿನ್ ಆದ್ರೂ ಫಸ್ಟ್ ಬ್ಯಾಟಿಂಗ್ನ ಚೂಸ್ ಮಾಡ್ಕೊಂಡ್ರು. ಹೀಗಾಗಿ ಭಾರತ ಫಸ್ಟ್ ಬೌಲಿಂಗ್ ಮಾಡಿದೆ.
ಇದನ್ನೂ ಓದಿ : ಆಸ್ಟ್ರೇಲಿಯಾವನ್ನು 236 ರನ್ಗಳಿಗೆ ನಿಯಂತ್ರಿಸಿದ ಭಾರತ – ಬೌಲಿಂಗ್ನಲ್ಲಿ ರಾಣಾ, ಫೀಲ್ಡಿಂಗ್ನಲ್ಲಿ ಕೊಹ್ಲಿ, ಶ್ರೇಯಸ್ ಕಮಾಲ್
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಮತ್ತು ಕೊನೇ ಏಕದಿನ ಪಂದ್ಯ ಸಿಡ್ನಿಯಲ್ಲಿ ನಡೀತಿದೆ. ಏಕದಿನ ನಾಯಕನಾಗಿ ಶುಭ್ಮನ್ ಗಿಲ್ ಟಾಸ್ನಲ್ಲಿ ಹ್ಯಾಟ್ರಿಕ್ ಸೋಲು ಕಂಡಿದ್ದಾರೆ. ಏಕದಿನ ಮಾದರಿಯಲ್ಲಿ ಈ ಟಾಸ್ ಸೋಲಿನ ಪರ್ವ ಕಂಟಿನ್ಯೂ ಆಗ್ತಾನೇ ಇದೆ. ಅದೂ ಕೂಡ ಬರೋಬ್ಬರಿ 18ನೇ ಬಾರಿಗೆ. ಭಾರತ ಸತತ 18ನೇ ಬಾರಿಗೆ ಏಕದಿನ ಪಂದ್ಯದಲ್ಲಿ ಟಾಸ್ ಸೋತಿದೆ. 19 ನವೆಂಬರ್ 2023 ರಂದು ಏಕದಿನ ವಿಶ್ವಕಪ್ ಫೈನಲ್ ನೊಂದಿಗೆ ಪ್ರಾರಂಭವಾದ ಭಾರತದ ಸೋಲಿನ ಟಾಸ್ ಕಂಟಿನ್ಯೂ ಆಗ್ತಾನೇ ಇದೆ. ಇದು ಏಕದಿನದಲ್ಲಿ ಮಾತ್ರವಲ್ಲ, ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ವಿಶ್ವ ದಾಖಲೆಯಾಗಿದೆ. ಕೆಎಲ್ ರಾಹುಲ್, ರೋಹಿತ್ ಶರ್ಮಾ ಇದೀಗ ಶುಭ್ಮನ್ ಗಿಲ್ ಹೀಗೆ ಮೂರು ನಾಯಕರ ನೇತೃತ್ವದಲ್ಲಿ ಭಾರತ ಆಡಿದರೂ ಟಾಸ್ ಸೋಲಿನ ಶಾಕ್ ಮಾತ್ರ ತಪ್ಪುತ್ತನೇ ಇಲ್ಲ. ಬಟ್ ಇಂಟ್ರೆಸ್ಟಿಂಗ್ ಅಂದ್ರೆ ಭಾರತ ಟಾಸ್ ಸೋತ್ರು ಫಸ್ಟ್ ಬೌಲಿಂಗ್ ಮಾಡಿದೆ. ಅಂದ್ರೆ ಇಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್ ಚೂಸ್ ಮಾಡಿಕೊಳ್ತು. ಇನ್ನು ಈ ಪಂದ್ಯಕ್ಕೆ ಟೀಂ ಇಂಡಿಯಾ 2 ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ.
ಕೊನೇ ಪಂದ್ಯದಲ್ಲಿ ಕುಲ್ದೀಪ್ ಮತ್ತು ಪ್ರಸಿದ್ಧ್ ಎಂಟ್ರಿ!
ಬ್ಯಾಟಿಂಗ್ ಲೈನಪ್ನಲ್ಲಿ ಏನು ಚೇಂಜಸ್ ಇಲ್ದೇ ಇದ್ರೂ ಬೌಲಿಂಗ್ನಲ್ಲಿ ಇಬ್ಬರನ್ನ ಚೇಂಜ್ ಮಾಡಲಾಗಿದೆ. ಚೈನಾಮನ್ ಸ್ಪಿನ್ನರ್ಗಳಲ್ಲಿ ಜಗತ್ತಿನಲ್ಲೇ ನಂಬರ್ 1 ಆಗಿದ್ರೂ ಕಳೆದೆರಡು ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಕುಲ್ದೀಪ್ ಯಾದವ್ ಫೈನಲ್ ಮ್ಯಾಚ್ಗೆ ಅವಕಾಶ ಪಡ್ಕೊಂಡ್ರು. ಸತತ ಎರಡು ಪಂದ್ಯಗಳನ್ನ ಸೋತು ಶೇಪ್ ಔಟ್ ಆದ್ಮೇಲೆ ಮ್ಯಾನೇಜ್ಮೆಂಟ್ ಕೂಡ ಕುಲ್ದೀಪ್ಗೆ ಚಾನ್ಸ್ ನೀಡಿದೆ. ಈ ವರ್ಷದ ಮಾರ್ಚ್ನಲ್ಲಿ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಕುಲ್ದೀಪ್ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಆ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಏಳು ವಿಕೆಟ್ಗಳನ್ನು ಕಬಳಿಸುವ ಮೂಲಕ ಭಾರತದ ಎರಡನೇ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು. ಇನ್ನು ಕನ್ನಡಿಗ ಪ್ರಸಿದ್ಧ್ ಕೃಷ್ಣಗೂ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಕ್ಕಿತ್ತು. ಕಳೆದ ಎರಡು ಪಂದ್ಯಗಳಲ್ಲಿ ಭಾರತದ ಪರ ಕಣಕ್ಕಿಳಿದಿದ್ದ ನಿತೀಶ್ ರೆಡ್ಡಿ ಹಾಗೂ ಅರ್ಶದೀಪ್ ಸಿಂಗ್ರನ್ನ ಕೈಬಿಡಲಾಗಿದೆ.
ಒಳ್ಳೆ ಓಪನಿಂಗ್ ಸಿಕ್ರೂ ನಂತರದಲ್ಲಿ ಸೈಲೆಂಟಾದ ಆಸೀಸ್!
ಇನ್ನು ಟಾಸ್ ಗೆದ್ರೂ ಫಸ್ಟ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಪರ ಮಿಚೆಲ್ ಮಾರ್ಶ್ ಮತ್ತು ಟ್ರಾವಿಸ್ ಹೆಡ್ ಇನ್ನಿಂಗ್ಸ್ ಆರಂಭಿಸಿದ್ರು. ಕಳೆದ ಎರಡು ಪಂದ್ಯಗಳಲ್ಲಿ ಭಾರತಕ್ಕೆ ಕಂಪೇರ್ ಮಾಡಿದ್ರೆ ಆಸೀಸ್ ಆರಂಭದಲ್ಲಿ ಒಳ್ಳೆ ಕಂಟ್ರೋಲ್ನಲ್ಲೇ ಇತ್ತು. ಮಾರ್ಶ್ ಮತ್ತು ಹೆಡ್ ಮೊದಲ ವಿಕೆಟ್ ವೇಳೆಗೆ 61 ರನ್ಸ್ ಕಲೆ ಹಾಕಿದ್ರು. ಹಿಂದಿನ ಪಂದ್ಯಗಳಲ್ಲಿ ಭಾರತದ ಸ್ಕೋರ್ ಮೊದಲ 10 ಓವರ್ಗಳಲ್ಲಿ ಬಿಲೋ 3 ರನ್ರೇಟ್ ಇದ್ರೆ ಆಸ್ಟ್ರೇಲಿಯಾ 6+ ರನ್ರೇಟ್ ಇತ್ತು. 29 ರನ್ ಗಳಿಸಿದ್ದ ಹೆಡ್ರನ್ನ ಔಟ್ ಮಾಡೋ ಮೂಲಕ ಮೊಹಮ್ಮದ್ ಸಿರಾಜ್ ಫಸ್ಟ್ ಬ್ರೇಕ್ ಥ್ರ್ಯೂ ತಂದುಕೊಟ್ರು. ಆ ನಂತ್ರ ಮ್ಯಾಟ್ ಶಾರ್ಟ್ 30 ರನ್ಗಳಿಸಿ ವಾಷಿಂಗ್ಟನ್ ಸುಂದರ್ ಬೌಲಿಂಗ್ನಲ್ಲಿ ಔಟಾದ್ರೆ ನಾಯಕ ಮಾರ್ಶ್ 41 ರನ್ ಗಳಿಸಿ ಅಕ್ಷರ್ ಪಟೇಲ್ ಸ್ಪೆಲ್ನಲ್ಲಿ ಬೌಲ್ಡ್ ಆದ್ರು. ಇನ್ನು ಮ್ಯಾಟ್ ರೆನ್ಷಾ 56 ರನ್ಗಳಿಸಿ ಸುಂದರ್ಗೆ ವಿಕೆಟ್ ಒಪ್ಪಿಸಿದ್ರು. ಅಲೆಕ್ಸ್ ಕ್ಯಾರಿ 24 ರನ್ಗಳಿಗೆ ರಾಣಾ ಬೌಲಿಂಗ್ನಲ್ಲಿ ಔಟಾದ್ರು. ಅಂತಿಮವಾಗಿ 46.4 ಓವರ್ಗಳಲ್ಲಿ 236 ರನ್ ಗಳಿಸಿ ಆಸ್ಟ್ರೇಲಿಯಾ ಆಲ್ಔಟ್ ಆಯ್ತು.
4 ವಿಕೆಟ್ ಕಿತ್ತ ಗಂಭೀರ್ ಶಿಷ್ಯ ರಾಣಾ!
ಪ್ರತೀ ಸಲ ಹರ್ಷಿತ್ ರಾಣಾನನ್ನ ಟೀಮ್ಗೆ ಸೆಲೆಕ್ಟ್ ಮಾಡಿಕೊಂಡಾಗ್ಲೂ ಟೀಕೆಗಳು ಕೇಳಿ ಬರ್ತಾನೇ ಇತ್ತು. ಯಾಕಂದ್ರೆ ಅವ್ರ ಬೌಲಿಂಗ್ನಲ್ಲಿ ಅಂಥಾ ಎಫೆಕ್ಟೀವ್ ಆಗಿರಲಿಲ್ಲ. ಹೀಗಾಗಿ ಗಂಭೀರ್ ಕೋಟಾ ಆಟಗಾರ ಅಂತೆಲ್ಲಾ ಟೀಸ್ ಮಾಡ್ತಿದ್ರು. ಫೈನಲಿ ತನ್ನಲ್ಲೂ ಸ್ಕಿಲ್ ಇದೆ ಅನ್ನೋದನ್ನ ಹರ್ಷಿತ್ ರಾಣಾ ಪ್ರೂವ್ ಮಾಡಿದ್ರು. ಮೂರನೇ ಪಂದ್ಯದಲ್ಲಿ ರಣಬೇಟೆಗಾರನಾಗಿ ಮೇನ್ ವಿಕೆಟ್ ಟೇಕರ್ ಆದ್ರು. ಆಸ್ಟ್ರೇಲಿಯಾದ ನಾಲ್ಕು ವಿಕೆಟ್ಗಳನ್ನ ಬೇಟೆಯಾಡಿ ಆಲೌಟ್ ಮಾಡುವಲ್ಲಿ ನೆರವಾದ್ರು. ಉಳಿದಂತೆ 2 ವಿಕೆಟ್ ತಗೊಂಡ್ರೆ ಸಿರಾಜ್, ಕುಲ್ದೀಪ್, ಪ್ರಸಿದ್ಧ್, ಅಕ್ಷರ್ ಒಂದೊಂದು ವಿಕೆಟ್ ತಗೊಂಡ್ರು. ಈ ಮ್ಯಾಚಲ್ಲಿ ಎಲ್ರೂ ಬಿಲೋ 5 ರನ್ ರೇಟ್ ಇದ್ರೆ ಪ್ರಸಿದ್ಧ್ ಕೃಷ್ಣ ಮಾತ್ರ ದುಬಾರಿಯಾದ್ರು. 7.43 ಎಕಾನಮಿಯಲ್ಲಿ ರನ್ಸ್ ಬಿಟ್ಟುಕೊಟ್ಟು ದುಬಾರಿಯಾದ್ರು. ಇನ್ನು ಕಳೆದೆರಡು ಪಂದ್ಯಗಳಿಂದ ಫಸ್ಟ್ ಬ್ಯಾಟಿಂಗ್ ಮಾಡಿ ಸೋತಿದ್ದ ಭಾರತಕ್ಕೆ ಈ ಪಂದ್ಯದಲ್ಲಿ ಚೇಸಿಂಗ್ ಅವಕಾಶ ಸಿಕ್ಕಿದೆ. 237 ರನ್ಗಳನ್ನ ಚೇಸ್ ಮಾಡ್ಬೇಕಿದೆ.

ನೋಡಿರಿ

