ಪ್ರತಿನಿತ್ಯ ದೇವರ ಪೂಜೆ ಮಾಡುವಾಗ ಈ ತಪ್ಪುಗಳನ್ನ ಮಾಡಲೇ ಬೇಡಿ

ಹಿಂದೂ ಧರ್ಮದಲ್ಲಿ ಪೂಜೆಯನ್ನು ಅತ್ಯಂತ ಮಹತ್ವದ ಕಾರ್ಯವೆಂದು, ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ದೇವರ ಪೂಜೆ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ. ಬದಲಾಗಿ, ಆತ್ಮ ಮತ್ತು ದೇವರ ನಡುವೆ ನಡೆಯುವ ಅರ್ಥಪೂರ್ಣ ಸಂಭಾಷಣೆಯಾಗಿದೆ. ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಶಾಂತಿಯು ನೆಲೆಯಾಗುತ್ತದೆ. ದೇವರನ್ನು ಪೂಜಿಸುವ ವಿಧಾನವು ನಮ್ಮನ್ನು ದೇವರೊಂದಿಗೆ ಸಂಪರ್ಕವನ್ನು ಸಾಧಿಸುವ ಸಾಧನವಾಗಿದೆ. ಪೂರ್ಣ ಭಕ್ತಿ ಹಾಗೂ ಶಿಸ್ತಿನಿಂದ ಪೂಜೆಯನ್ನು ಮಾಡಿದಾಗ ಅದು ಆಧ್ಯಾತ್ಮಿಕ ಶಾಂತಿಯನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ದೇವರ ಪೂಜೆಯನ್ನು ಮಾಡುವಂತಹ ಸಮಯದಲ್ಲಿ ನಾವು ಈ 6 ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಪೂಜೆಯನ್ನು ಮಾಡಬೇಕು.
ಪೂಜೆಯ ಮಧ್ಯದಲ್ಲಿ ಪೂಜೆ ಸಾಮಾಗ್ರಿಗಳನ್ನು ಹುಡುಕಿಕೊಂಡು ಎದ್ದು ಹೋಗಬಾರದು
ದೇವರ ಪೂಜೆಯನ್ನು ಮಾಡುವಾಗ ನಾವು ಪೂಜೆಗೆ ಅವಶ್ಯಕವಾದ ಎಲ್ಲಾ ರೀತಿಯ ವಸ್ತುಗಳನ್ನು ನಮ್ಮೊಂದಿಗೆ ಇಟ್ಟುಕೊಂಡಿರಬೇಕು. ಪೂಜೆಯ ಮಧ್ಯದಲ್ಲಿ ಪೂಜೆ ಸಾಮಾಗ್ರಿಗಳನ್ನು ಹುಡುಕಿಕೊಂಡು ಎದ್ದು ಹೋಗಬಾರದು. ಪೂಜೆಯ ಸಮಯದಲ್ಲಿ ನಾವು ಶಕ್ತಿಯ ಸಮತೋಲನವನ್ನು ಮತ್ತು ಶುದ್ಧತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಪೂಜೆಗೆ ಬಳಸುವ ದೀಪಗಳನ್ನು, ಧೂಪ ದ್ರವ್ಯವನ್ನು ಯಾವಾಗಲೂ ನಾವು ನಮ್ಮ ಬಲಭಾಗಕ್ಕೆ ಇಟ್ಟುಕೊಂಡಿರಬೇಕು.
ಗೊಂದಲಗಳನ್ನು ಇಟ್ಟುಕೊಂಡು ಪೂಜೆ ಮಾಡುವುದನ್ನು ತಪ್ಪಿಸಬೇಕು
ಪೂಜೆಯ ಸಮಯದಲ್ಲಿ ಮೊಬೈಲ್ ಫೋನ್ಗಳು ಅಥವಾ ಇತರ ಗೊಂದಲಗಳನ್ನು ಇಟ್ಟುಕೊಂಡು ಪೂಜೆ ಮಾಡುವುದನ್ನು ತಪ್ಪಿಸಬೇಕು. ಪ್ರಾರ್ಥನೆ ಮಾಡುವಾಗ ನಿಮ್ಮ ಮನಸ್ಸನ್ನು ದೇವರ ಮೇಲೆ ಕೇಂದ್ರೀಕರಿಸುವುದು ಮುಖ್ಯ, ಆದ್ದರಿಂದ ಯಾವುದೇ ಗೊಂದಲಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ಪ್ರಶಾಂತವಾದ ಮನಸ್ಸಿನಿಂದ ಮಾತ್ರ ನಾವು ದೇವರ ಪೂಜೆಯನ್ನು ಮಾಡಬೇಕು.
ಮಂತ್ರಗಳನ್ನು ಯಾವುದೇ ಲೋಪಗಳಿಲ್ಲದೆ ಪಠಿಸಬೇಕು
ದೇವರ ಪೂಜೆಯನ್ನು ಮಾಡುವಂತಹ ಸಂದರ್ಭದಲ್ಲಿ ನಾವು ಮಂತ್ರಗಳನ್ನು ಯಾವುದೇ ಲೋಪಗಳಿಲ್ಲದೆ ಪಠಿಸಬೇಕು. ಮಂತ್ರಗಳನ್ನು ತಪ್ಪಾದ ರೀತಿಯಲ್ಲಿ ಎಂದಿಗೂ ಪಠಿಸಬಾರದು. ಒಂದು ವೇಳೆ ನಿಮಗೆ ಯಾವುದೇ ದೇವರ ಮಂತ್ರ ಅಥವಾ ಸ್ತೋತ್ರಗಳನ್ನು ತಿಳಿಯದೇ ಇದ್ದರೆ ಅಂತಹ ಸಂದರ್ಭದಲ್ಲಿ ನೀವು ಓಂ ಎನ್ನುವ ಶಬ್ಧವನ್ನು ಪಠಿಸುತ್ತಾ ಪೂಜೆಯನ್ನು ಮಾಡಬಹುದಾಗಿದೆ.
ಶುದ್ಧವಾದ ಹೂವು ಹಾಗೂ ಹಣ್ಣುಗಳನ್ನೇ ಬಳಸಬೇಕು
ನಾವು ದೇವರನ್ನು ಪೂಜಿಸುವಂತಹ ಸಂದರ್ಭದಲ್ಲಿ ಶುದ್ಧವಾದ ಹೂವು ಹಾಗೂ ಹಣ್ಣುಗಳನ್ನೇ ಬಳಸಬೇಕು. ಹಳೆಯ ಹೂವುಗಳನ್ನು ಅಂದರೆ, ನಿನ್ನೆ ಪೂಜೆಯಲ್ಲಿ ಅರ್ಪಿಸಿದ ಹೂವನ್ನೇ ಅರ್ಪಿಸುವುದು ಅಥವಾ ಮಾರುಕಟ್ಟೆಯಿಂದ ಹಳೆಯ ಹೂವುಗಳನ್ನು ತಂದು ಅರ್ಪಿಸುವುದು, ಮುದುಡಿದ ಹೂವನ್ನು ಅರ್ಪಿಸುವುದು ಅಥವಾ ಒಣಗಿದ ಹೂವನ್ನು ಅರ್ಪಿಸುವುದು ಸರಿಯಲ್ಲ. ತಾಜಾ ಹೂವುಗಳನ್ನು ತಂದು ದೇವರಿಗೆ ಅರ್ಪಿಸುವ ಮುನ್ನ ನೀರಿನಲ್ಲಿ ಅದ್ದಿ ನಂತರ ಅರ್ಪಿಸಬೇಕು. ಗಾಯಗೊಂಡ ಅಥವಾ ಹಾಳಾದ ಹಣ್ಣುಗಳನ್ನು ಕೂಡ ದೇವರಿಗೆ ನಾವು ಅರ್ಪಿಸಬಾರದು. ಇಂತಹ ವಸ್ತುಗಳನ್ನು ದೇವರಿಗೆ ಅರ್ಪಿಸುವುದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ.

ನೋಡಿರಿ

