ಚಿನ್ನುಮರಿಗೆ ಹಳ್ಳ ತೋಡಿದ ಜಯಂತ್ – ಸೈಕೋ ಕಾಟಕ್ಕೆ ವಿಶ್ವನ ಆಟಕ್ಕೂ ಬ್ರೇಕ್ ಬೀಳುತ್ತಾ?

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಚಿನ್ನುಮರಿಗಾಗಿ ಸೈಕೋ ಗಂಡ ಜಯಂತ್ ಪರಿತಪಿಸುತ್ತಿದ್ದಾನೆ. ಚಿನ್ನುಮರಿ ಬದುಕಿದ್ದಾಳೆ ಎಂಬ ಸತ್ಯದ ಅರಿವು ನಿಧಾನವಾಗಿ ಆಗುತ್ತಿದೆ. ಇದರಲ್ಲಿ ವಿಶ್ವನ ಕೈವಾಡವಿದೆ ಅನ್ನೋ ಬಲವಾದ ಸಂಶಯವೂ ಇದೆ. ಹೀಗಾಗಿ ಜಯಂತ್, ಚಿನ್ನುಮರಿ ಹಾಗೂ ವಿಶ್ವನಿಗೆ ಸರಿಯಾದ ಪಾಠ ಕಲಿಸಲು ಮುಂದಾಗಿದ್ದಾನೆ.
ಇದನ್ನೂ ಓದಿ:ನಾ ನಿನ್ನ ಬಿಡಲಾರೆ ಸೀರಿಯಲ್‌ನಿಂದ ಹೊರನಡೆದ ರುಹಾನಿ ಶೆಟ್ಟಿ – ಮಾಯಾ ಪಾತ್ರಕ್ಕೆ ರಮ್ಯಾ ಎಂಟ್ರಿ
ಹೇಳಿಕೇಳಿ ಜಯಂತ್ ಮೊದಲೇ ಸೈಕೋ. ಆತನನ್ನ ಭ್ರಮೆಯಲ್ಲಿ ಮುಳುಗಿಸಲು ನೋಡಿದ ವಿಶ್ವನಿಗೆ ಹಳ್ಳ ತೋಡದೆ ಇರ್ತಾನಾ?. ಇದೀಗ ಸೈಕೋ ಜಯಂತ್, ವಿಶ್ವನಿಗೂ ಮತ್ತು ಚಿನ್ನುಮರಿಗೆ ಸರಿಯಾದ ಹಳ್ಳವನ್ನೇ ತೋಡಿದ್ದಾನೆ. ಪತ್ನಿಯ ಶ್ರದ್ಧಾಂಜಲಿ ಕಾರ್ಡ್‌ನಲ್ಲಿ ಆಕೆಯ ಫೋಟೋ ಮುದ್ರಿಸಿ, ಎಲ್ಲರಿಗೂ ಬಲೆ ಬೀಸಿದ್ದಾನೆ. ಈ ಮೂಲಕ ಲಕ್ಷ್ಮೀನಿವಾಸ ಸೀರಿಯಲ್ ಕುತೂಹಲ ಘಟ್ಟ ತಲುಪಿದೆ.
ಜಯಂತ್ಗೆ ಜಾಹ್ನವಿ ಬದುಕಿದ್ದಾಳೆ ಎನ್ನುವ ಸತ್ಯ ತಿಳಿದಿದೆ. ಆಕೆಗೆ ವಿಶ್ವನೇ ಸಪೋರ್ಟ್ ಮಾಡ್ತಿದ್ದಾನೆ ಎನ್ನುವ ವಿಷಯವೂ ತಿಳಿದಿದೆ. ಜೊತೆಗೆ ತನ್ನ ಮನೆ ಕೆಲಸದಾಕೆ ಶಾಂತಮ್ಮ ಕೂಡ ಏನೋ ರಹಸ್ಯ ಮುಚ್ಚಿಡುತ್ತಾಳೆ ಎನ್ನುವುದು ತಿಳಿದಿದೆ. ಇದಕ್ಕಾಗಿಯೇ ಈಗ ಆತ ಭಾರಿ ಪ್ಲ್ಯಾನ್ ಮಾಡಿದ್ದಾನೆ. ಜಾಹ್ನವಿಯ ಬಳೆ ಸಿಗುತ್ತಿದ್ದಂತೆಯೇ ಆಕೆ ತನಗೆ ಮೋಸ ಮಾಡ್ತಿರೋ ವಿಷಯ ಜಯಂತ್ಗೆ ತಿಳಿದಿದೆ. ತನ್ನ ಮನೆಗೆ ಬಂದರೂ ಆಕೆ ತಪ್ಪಿಸಿಕೊಂಡು ತಿರುಗಾಡ್ತಿರೋದು ಕನ್ಫರ್ಮ್ ಆಗಿದೆ. ತನಗೇ ಭ್ರಮೆಯಾಗುತ್ತಿದೆ ಎಂದು ಸಾಬೀತು ಮಾಡಲು ಎಲ್ಲರೂ ಸೇರಿ ನಾಟಕ ಮಾಡ್ತಿರೋ ಅಸಲಿಯತ್ತೂ ಜಯಂತ್ಗೆ ತಿಳಿದಿದೆ. ಹೇಳಿಕೇಳಿ ಆತ ಸೈಕೋ. ಇನ್ನು ಕೇಳಬೇಕೆ? ಮೊದಲಿಗೆ ಪತ್ನಿಯ ಶ್ರದ್ಧಾಂಜಲಿಯ ಕಾರ್ಡ್‌ನಲ್ಲಿ ಆಕೆಯ ಫೋಟೋ ಬೇಡ ಎಂದು ಹೇಳಿದ್ದ ಜಯಂತ್. ಆಗಿನ್ನೂ ಆಕೆ ಬದುಕಿದ್ದಾಳೆ ಎನ್ನುವ ಸತ್ಯ ಯಾವುದೋ ಮೂಲೆಯಲ್ಲಿ ಕಾಡುತ್ತಿತ್ತು. ಆದರೆ ಈಗ ಆಕೆ ತನ್ನ ಕಣ್ಣಿಗೆ ಮಣ್ಣೆರಚುತ್ತಿದ್ದಾಳೆ ಎನ್ನುವ ಸತ್ಯದ ಅರಿವು ಆಗುತ್ತಿದ್ದಂತೆಯೇ ಕಾರ್ಟ್ನಲ್ಲಿ ಆಕೆಯ ಫೋಟೋ ಪ್ರಿಂಟ್ ಮಾಡಿಸಿದ್ದಾನೆ. ಜಯಂತ್ ವಿಶ್ವನಿಗೆ ಕಾರ್ಡ್ ನೀಡಿದ್ದಾನೆ. ವಿಶ್ವ ಆ ಕಾರ್ಡ್ ನ್ನು ಮನೆಯಲ್ಲಿಟ್ಟಿದ್ದಾನೆ. ತನು ಬಂದಾಗ ಆ ಕಾರ್ಡ್ ಕಣ್ಣಿಗೆ ಬಿದ್ದಿದೆ. ಇದೀಗ ತನುಗೆ ಚಿನ್ನುಮರಿ ರಹಸ್ಯ ಗೊತ್ತಾಗುತ್ತಾ?. ಜಾನು ತನು ಕೈಯಲ್ಲಿ ಸಿಕ್ಕಿಬೀಳ್ತಾಳಾ ಅನ್ನೋ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

ನೋಡಿರಿ

