ಗಂಭೀರ್ ಮೊಂಡಾಟಕ್ಕೆ ಭಾರತ ಬಲಿ? – RO-KO ಯುಗಾಂತ್ಯಕ್ಕೆ ಗಿಲ್ ಗೆ ಪಟ್ಟ?

ಗಂಭೀರ್ ಮೊಂಡಾಟಕ್ಕೆ ಭಾರತ ಬಲಿ? – RO-KO ಯುಗಾಂತ್ಯಕ್ಕೆ ಗಿಲ್ ಗೆ ಪಟ್ಟ?

ಏಷ್ಯಾಕಪ್​ನಲ್ಲಿ ಅಜೇಯವಾಗಿ ಚಾಂಪಿಯನ್ ಪಟ್ಟಕ್ಕೇರಿದ್ರು.. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ರು. ಬಟ್ ಈಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತವೇ ವೈಟ್ ವಾಶ್ ಆಗೋ ಥರ ಕಾಣ್ತಿದೆ. ಆಲ್ರೆಡಿ ಆಡಿರೋ ಎರಡಕ್ಕೆ ಎರಡೂ ಮ್ಯಾಚ್​ಗಳನ್ನ ಸೋತಿದ್ದಾರೆ. ಅದ್ರಲ್ಲೂ ಭಾರತದ ಈ ಹೀನಾಯ ಸೋಲಿಗೆ ಅವ್ರಿಬ್ಬರೇ ಮೇನ್ ರೀಸನ್ ಆಗಿದ್ದಾರೆ.

ಇದನ್ನೂ ಓದಿ : ಎರಡನೇ ಪಂದ್ಯದಲ್ಲೂ ಟಾಸ್‌ ಸೋತ ಭಾರತ – ಬೌಲಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ

ಆಟ ಅಂದ್ಮೇಲೆ ಸೋಲು ಗೆಲುವು ಕಾಮನ್. ಯಾವುದೇ ಕ್ಷಣದಲ್ಲಾದ್ರೂ ಗೇಮ್ ಕಂಪ್ಲೀಟ್ ಟರ್ನ್ ಆಗಿ ಬಿಡುತ್ತೆ. ಬ್ಯಾಡ್ ಲಕ್ ಏನಂದ್ರೆ ಈ ಸಲ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಸೋಲೊಪ್ಪಿಕೊಂಡಿದೆ. ಆದ್ರೆ ಈ ಸೋಲಿಗೆ ಕಾರಣ ಆಟಗಾರರಲ್ಲ ಹೆಡ್​ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅನ್ನೋ ಗಂಭೀರ ಆರೋಪ ಕೇಳಿ ಬರ್ತಿದೆ. ಇವ್ರಿಬ್ಬರ ಹಠಮಾರಿತನವೇ ಭಾರತವನ್ನ ಸೋಲಿಸಿದೆ ಅನ್ನೋದು ಕ್ರಿಕೆಟ್ ವಿಶ್ಲೇಷಕರ ವಾದ.

ಪ್ಲೇಯಿಂಗ್ 11ನಲ್ಲಿ ಎಡವಿದ್ರಾ ಗಂಭೀರ್ & ಅಗರ್ಕರ್!

ಕ್ರಿಕೆಟ್ ಅನ್ನೋದು ಟೀಂ ಗೇಮ್. ಓಪನಿಂಗ್ ಬ್ಯಾಟ್ಸ್​ಮನ್ ನಿಂದ ಹಿಡ್ದು ಡೆತ್​ ಓವರ್ ಬೌಲರ್​ವರೆಗೂ ಸಾಥ್ ಕೊಟ್ರಷ್ಟೇ ಮ್ಯಾಚ್ ಗೆಲ್ಲೋಕೆ ಸಾಧ್ಯ. ಆದ್ರೆ ಆಸೀಸ್ ಸರಣಿಯಲ್ಲಿ ಭಾರತದ ಪ್ಲೇಯಿಂಗ್ 11ನ್ನೇ ಚೆನ್ನಾಗಿಲ್ಲ ಅನ್ನೋದು ಕ್ರಿಕೆಟ್ ಪರಿಣಿತರ ವಾಸ. ಌಕ್ಚುಲಿ ಇಲ್ಲಿ ಭಾರತದ ಸೋಲಿಗೆ ತಂಡದ ಕಳಪೆ ಪ್ರದರ್ಶನವೇ ಮುಖ್ಯ ಕಾರಣ ಅನ್ನೋದನ್ನ ಒಪ್ಪಿಕೊಳ್ಳೋಣ. ಆದ್ರೆ ಆಡುವ ಬಳಗವೇ ಸ್ಟ್ರಾಂಗ್ ಇಲ್ಲ ಅನ್ನೋದು ಕೂಡ ಅಷ್ಟೇ ಸತ್ಯ. ಹೇಳಿ ಕೇಳಿ ಆಸ್ಟ್ರೇಲಿಯಾ ಬೌಲಿಂಗ್​ನಲ್ಲಿ ಸೂಪರ್ ಸ್ಟ್ರಾಂಗ್ ಟೀಂ. ಭಾರತ ವಿರುದ್ಧದ ಏಕದಿನ ಸರಣಿಗೆ ಪ್ಯಾಟ್ ಕಮಿನ್ಸ್, ಕ್ಯಾಮರೋನ್ ಗ್ರೀನ್, ಜೋಶ್ ಇಂಗ್ಲಿಸ್, ಅಲೆಕ್ಸ್ ಕ್ಯಾರಿಯಂತಹ ಸ್ಟಾರ್ ಆಟಗಾರರು ಇಲ್ದೇ ಇದ್ರೂ ಸಾಲಿಡ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಜೋಶ್ ಹೇಜಲ್​ವುಡ್, ಮಿಚೆಲ್ ಸ್ಟಾರ್ಕ್, ಌಡಂ ಝಂಪಾ, ಕ್ಸೇವಿಯರ್ ಬಾರ್ಟ್​ಲೆಟ್್ರಂತ ಬೌಲರ್​ಗಳು ಕಂಪ್ಲೀಟ್ ಡಾಮಿನೇಟ್ ಮಾಡಿದ್ದಾರೆ. ಬಟ್ ಟೀಂ ಇಂಡಿಯಾದಲ್ಲಿ ಹಾಗಾಗ್ಲಿಲ್ಲ. ಇದಕ್ಕೆ ಮುಖ್ಯ ಕಾರಣ ಗೌತಮ್ ಗಂಭೀರ್ ಅವ್ರ ಅಜೆಂಡಾ.

ಗಂಭೀರ್ ಹಠಕ್ಕೆ ಭಾರತ ಸೋಲು!

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಮೂವರು ಆಲ್‌ರೌಂಡರ್ಸ್

ಹರ್ಷಿತ್ ರಾಣಾನ ಪ್ರತೀ ಪಂದ್ಯಗಳಿಗೂ ಸೆಲೆಕ್ಟ್, ಪ್ಲೇಯಿಂಗ್ 11 ಚಾನ್ಸ್

ಮೊದಲ ಪಂದ್ಯ ಸೋತಮೇಲೆ ಪ್ಲೇಯಿಂಗ್ 11ನಲ್ಲಿ ಚೇಂಜಸ್ ಮಾಡಬೇಕಿತ್ತು

ಅಗ್ರ ಸ್ಪಿನ್ನರ್ ಕುಲ್ದೀಪ್ ಯಾದವ್ ಎರಡೂ ಪಂದ್ಯಗಳಿಂದ ಹೊರಗಿಟ್ಟಿದ್ದು

ಕುಲ್ದೀಪ್ ಕೂಡ ಟೀಮ್ ​ನಲ್ಲಿದ್ರೆ ಮಿಡಲ್ ಓವರ್ ​ಗಳಲ್ಲಿ ಡಾಮಿನೇಟ್

ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ಕುಮಾರ್ ರೆಡ್ಡಿ

ಬುಮ್ರಾಗೆ ರೆಸ್ಟ್ ಕೊಟ್ಟವ್ರು ಮೊಹಮ್ಮದ್ ಶಮಿಯಂತ ಅನುಭವಿಯ ಕೊರತೆ

ಪ್ರಸಿದ್ಧ್ ಕೃಷ್ಣ ತಂಡದಲ್ಲಿದ್ರೂ ಆಡಿಸ್ಲಿಲ್ಲ, ಬ್ಯಾಟಿಂಗ್ ಅಡ್ವಾಂಟೇಜ್ ಇಲ್ಲ ನೆಪ

ರಾಣಾ ಬೇರೆಯವ್ರಿಗೆ ಕಂಪೇರ್ ಮಾಡಿದ್ರೆ 20 ರಿಂದ 30 ರನ್ಸ್ ಎಕ್ಸ್​ಟ್ರಾ

ಸಿರಾಜ್ 10 ಓವರ್ 49 ರನ್ಸ್, ಅರ್ಶದೀಪ್ 8.2 ಓವರ್ 41 ರನ್ಸ್

ಸುಂದರ್ 7 ಓವರ್ 37 ರನ್ಸ್, ಅಕ್ಷರ್ ಪಟೇಲ್ 10 ಓವರ್ ​ಗೆ 52 ರನ್ಸ್

ರಾಣಾ 8 ಓವರ್​ನಲ್ಲೇ 59 ರನ್ಸ್, ಅತೀ ಹೆಚ್ಚು ರನ್ಸ್ ಕೊಟ್ಟಿದ್ದು ರಾಣಾನೇ

ಬ್ಯಾಟಿಂಗ್​ ನಲ್ಲಿ ರನ್ಸ್ ಬಂದ್ರೂ ಬೌಲಿಂಗ್​ ನಲ್ಲಿ ಜಾಸ್ತಿ ರನ್ಸ್ ನೇ ಬಿಟ್ಟುಕೊಟ್ರು

ಇನ್ನು ಇದೆಲ್ಲಾ ಒಂದ್ಕಡೆಯಾದ್ರೆ ಶುಭ್​ಮನ್ ಗಿಲ್ ಕೂಡ ಡಮ್ಮಿಯಾಗಿ ಕಾಣ್ತಿದ್ದಾರೆ. ಆಸೀಸ್ ಸರಣಿ ತುಂಬಾನೇ ಹೈಪ್ ಪಡೆಯೋಕೆ ಕಾರಣ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕಮ್ ಬ್ಯಾಕ್ ಮತ್ತು ಶುಭ್​ಮನ್ ಗಿಲ್ ಏಕದಿನ ನಾಯಕನಾಗಿ ಸೆಲೆಕ್ಟ್ ಆಗಿತ್ತು. ಸರಣಿಗೂ ಮುನ್ನ ರೋಹಿತ್ ಶರ್ಮಾರನ್ನ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ಗಿಲ್​ಗೆ ಪಟ್ಟ ಕಟ್ಟಿದ್ರು. ಬಹುಶಃ ರೋಹಿತ್ ಕ್ಯಾಪ್ಟನ್ ಆಗಿ ಕಂಟಿನ್ಯೂ ಆಗಿದ್ರೆ ಹರ್ಷಿತ್ ರಾಣಾನನ್ನ ಪ್ಲೇಯಿಂಗ್ 11ಗೆ ಸೇರಿಸೋಕೆ ಬಿಡ್ತಾನೇ ಇರ್ಲಿಲ್ಲ. ರೋಹಿತ್ ತನ್ನ ಮಾತು ಕೇಳಲ್ಲ ಅಂತಾನೇ ಇಲ್ಲಿ ಗಂಭೀರ್​ಗೆ ಗಿಲ್​ನನ್ನ ನಾಯಕನನ್ನಾಗಿ ಮಾಡಿದ್ದು. ಯಾಕಂದ್ರೆ ರೋಹಿತ್ ಕೊಹ್ಲಿ ಬ್ರೋಮ್ಯಾನ್ಸ್ ಇದ್ದಂಗೆ. ರೋಹಿತ್​ನ ಕೊಹ್ಲಿ ಬಿಟ್ಟುಕೊಡಲ್ಲ. ಕೊಹ್ಲಿನ ರೋಹಿತ್ ಬಿಟ್ಕೊಡಲ್ಲ. ಸೋ ರೋಹಿತ್ ಇದ್ದಿದ್ರೆ ವಿನ್ನಿಂಗ್ ಕಾಂಬಿನೇಷನ್ ಪ್ಲೇಯಿಂಗ್ 11 ಸೆಟ್ ಮಾಡ್ತಿದ್ರು. ಇದೂ ಸಾಲ್ದು ಅಂತಾ ಕೆಎಲ್ ರಾಹುಲ್​ನ ಮತ್ತೆ ಒನ್ ಡೌನ್ ಆರ್ಡರ್​ನಲ್ಲಿ ಬ್ಯಾಟಿಂಗ್ ಮಾಡಿಸ್ತಿದ್ದಾರೆ. ಈ ಆರ್ಡರ್​ಗೆ ಯಾವ ಲಾಜಿಕ್ಕೂ ಇಲ್ಲ.  ರಾಹುಲ್ ಹೇಳಿಕೇಳಿ ಪ್ಯೂರ್ ಬ್ಯಾಟ್ಸ್​ಮನ್. ಕೀಪಿಂಗ್ ಮಾಡೋದು ಅವ್ರ ಅಡಿಶನಲ್ ಸ್ಟ್ರೆಂಥ್ ಅಷ್ಟೇ. ಹೀಗಿದ್ರೂ ಅಕ್ಷರ್ ಪಟೇಲ್​ನ 5ನೇ ಸ್ಥಾನಕ್ಕಿಳಿಸಿ ರಾಹುಲ್​ನ 6ನೇ ಸ್ಥಾನಕ್ಕೆ ಕಳಿಸೋ ಅವಶ್ಯಕತೆ ಇರ್ಲಿಲ್ಲ. ರಾಹುಲ್ ಕ್ರೀಸ್​ನಲ್ಲಿದ್ರೆ ಹತ್ತಿಪ್ಪತ್ತು ರನ್ಸ್​ ಎಕ್ಸ್​ಟ್ರಾ ಬರುತ್ತೆ ಅಂತಾ ಎಕ್ಸ್​ಪೆಕ್ಟ್ ಮಾಡ್ಬೋದು. ಅಕ್ಷರ್ ಪಟೇಲ್ 5ಣೇ ಸ್ಲಾಟ್​ನಲ್ಲಿ ಚೆನ್ನಾಗಿ ಆಡಿದ್ರು ನಿಜ. ಬಟ್ ಇಲ್ಲಿ ರಾಹುಲ್ ಮಿಸ್ ಆಗ್ತಿದ್ದಾರೆ. ಅದೂ ಅಲ್ದೇ ಗಿಲ್ ಕೂಡ ಆನ್ ಫೀಲ್ಡ್​ನಲ್ಲಿ ಡಮ್ಮಿ ಥರ ಕಾಣ್ತಿದ್ದಾರೆ. ಬ್ಯಾಟಿಂಗ್​ನಲ್ಲಿ ರನ್ಸ್ ಬರ್ತಿಲ್ಲ. ಫೀಲ್ಡ್ ಸೆಟ್ಟಿಂಗ್ ಬರ್ತಿಲ್ಲ. ಬಟ್ ತನ್ನ ಮಾತು ಕೇಳಿದ್ರೆ ಸಾಕು ಅನ್ನೋ ಥರದಲ್ಲಿ ಗಿಲ್​ಗೆ ಗಂಭೀರ್ ಕ್ಯಾಪ್ಟನ್ಸಿ ಕೊಟ್ಟಂತೆ ಕಾಣ್ತಾ ಇದೆ. ಆದ್ರೆ ಕಳೆದ ಮೂರು ವರ್ಷಗಳಿಂದ ಏಕದಿನ ಮಾದರಿಯಲ್ಲಿ ಒಂದು ಸ್ಟ್ಯಾಂಡರ್ಡ್​​ ಸೆಟ್ ಮಾಡಿದ್ದ ರೋಹಿತ್ ಶರ್ಮಾ ಮಾತ್ರ ಇದನ್ನೆಲ್ಲಾ ಅರಗಿಸಿಕೊಳ್ಳೋಕೆ ಆಗ್ದೇ ಮೌನವಾಗಿ ಸಹಿಸಿಕೊಳ್ತಿದ್ದಾರೆ.

Shantha Kumari