ನಾ ನಿನ್ನ ಬಿಡಲಾರೆ ಸೀರಿಯಲ್‌ನಿಂದ ಹೊರನಡೆದ ರುಹಾನಿ ಶೆಟ್ಟಿ – ಮಾಯಾ ಪಾತ್ರಕ್ಕೆ ರಮ್ಯಾ ಎಂಟ್ರಿ

ನಾ ನಿನ್ನ ಬಿಡಲಾರೆ ಸೀರಿಯಲ್‌ನಿಂದ ಹೊರನಡೆದ ರುಹಾನಿ ಶೆಟ್ಟಿ – ಮಾಯಾ ಪಾತ್ರಕ್ಕೆ ರಮ್ಯಾ ಎಂಟ್ರಿ

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಿಂದ ಏಕಾಏಕಿ ಹೊರ ನಡೆದ ಮಾಯಾ ಪಾತ್ರಧಾರಿ ರುಹಾನಿ ನಾ ನಿನ್ನ ಬಿಡಲಾರೆ ಧಾರಾವಾಹಿ ಜನಪ್ರಿಯತೆ ಪಡೆದುಕೊಂಡಿದೆ. ಹೀಗಿರುವಾಗಲೇ ಮಾಯಾ ಪಾತ್ರಧಾರಿ ರುಹಾನಿ ಶೆಟ್ಟಿ ಸೀರಿಯಲ್‌ನಿಂದ ಹೊರ ನಡೆದಿದ್ದಾರೆ. ಅವರ ಸ್ಥಾನಕ್ಕೆ ರಮ್ಯಾಶ್ರೀ ಬಾಲಕೃಷ್ಣ ಅವರು ಬಂದಿದ್ದಾರೆ.

ಇದನ್ನೂ ಓದಿ:ಅಮೃತಧಾರೆಯಲ್ಲಿ ಮತ್ತೆ ಭೂಮಿ ಗೌತಮ್ ಒಂದಾಗುವ ಸಮಯ – ಮಕ್ಕಳ ಮುಂದೆ ದಂಪತಿಯ ಪುರ್ನಮಿಲನ

‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಮಹಿಳಾ ವೀಕ್ಷಕರು ಸೀರಿಯಲ್‌ನ್ನು ಇಷ್ಟಪಡುತ್ತಿದ್ದಾರೆ. ಹೀಗಿರುವಾಗಲೇ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಿಂದ ಮಾಯಾ ಪಾತ್ರಧಾರಿ ರುಹಾನಿ ಶೆಟ್ಟಿ ಹೊರ ನಡೆದಿದ್ದಾರೆ. ರುಹಾನಿ ಶೆಟ್ಟಿ ಅವರು ಮಾಯಾ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಗೊತ್ತೇ ಇದೆ. ಕಥಾ ನಾಯಕ ಶರತ್​ನ ವಿವಾಹ ಆಗಬೇಕು ಎಂದು ಆಕೆ ಬಯಸಿದ್ದಳು. ಈ ಕಾರಣದಿಂದಲೇ ಆಕೆ ಸಾಕಷ್ಟು ತಂತ್ರ ಉಪಯೋಗಿಸುತ್ತಿದ್ದಾಳೆ. ಆಕೆ ಇನ್ನೇನು ಶರತ್​ನ ಮದುವೆ ಆಗೇ ಬಿಟ್ಟಳು ಎಂಬಂತೆ ಆಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ತಿರುವು ಬಂತು. ಇಬ್ಬರ ಮದುವೆ ಮುರಿದು ಬಿತ್ತು. ಇತ್ತೀಚಿನ ಎಪಿಸೋಡ್​ನಲ್ಲಿ ರುಹಾನಿ ಶೆಟ್ಟಿ ಅವರು ಕಾಣಿಸಿಕೊಳ್ಳುತ್ತಾ ಇರಲಿಲ್ಲ. ಮಾಯಾ ಪಾತ್ರ ಎಲ್ಲೋಯ್ತು ಎಂಬ ಪ್ರಶ್ನೆ ಅನೇಕರಿಗೆ ಮೂಡಿತ್ತು. ಈಗ ಅವರ ಪಾತ್ರ ಬದಲಾಗಿದೆ. ಈ ಧಾರಾವಾಹಿಯ ಹೊಸ ಪ್ರೋಮೋ ಬಿಡುಗಡೆ ಕಂಡಿದೆ. ಇದರಲ್ಲಿ ಮಾಯಾ ಪಾತ್ರಕ್ಕೆ ಬೇರೆಯವರು ಬಂದಿರೋದು ಗೊತ್ತಾಗಿದೆ. ಇದು ರುಹಾನಿ ಶೆಟ್ಟಿ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.

ನಾ ನಿನ್ನ ಬಿಡಲಾರೆ ಧಾರಾವಾಹಿ ಅಭಿಮಾನಿಗಳು ಮಾಯಾ ಪಾತ್ರಧಾರಿ ರುಹಾನಿ ಶೆಟ್ಟಿಯವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ರುಹಾನಿ ಶೆಟ್ಟಿ ಅಭಿಮಾನಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ನಿಮ್ಮೆಲ್ಲರ ಮೆಸೇಜ್ ಹಾಗೂ ಕಮೆಂಟ್ ಓದುತ್ತಿದ್ದೇನೆ. ನೀವು ಸೂಪರ್. ನಿಮ್ಮಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ. ನಿಮ್ಮ ಪ್ರೀತಿಗೆ ಧನ್ಯವಾದ. ಹೊಸ ಪ್ರಾಜೆಕ್ಟ್​ನೊಂದಿಗೆ ಬರುತ್ತೇನೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ’ ಎಂದು ರುಹಾನಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ರಮ್ಯಾ ಬಾಲಕೃಷ್ಣ ಸದ್ಯ ರುಹಾನಿ ಮಾಡುತ್ತಿದ್ದ ಮಾಯಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಮ್ಯಾ ಕೂಡಾ ಫೇಮಸ್ ಕಿರುತೆರೆ ನಟಿ. ಇನ್ನುಮುಂದೆ ಮಾಯಾ ಪಾತ್ರದಲ್ಲಿ ರಮ್ಯಾ ವೀಕ್ಷಕರನ ಗಮನ ಸೆಳೆಯಲಿದ್ದಾರೆ.

Sulekha