ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾಗೆ ಮತ್ತೆ ಅವಮಾನ! – ಸೆಡೆ ಎಂದು ಬೈದ ಕಾಕ್ರೋಚ್ ಸುಧಿಗೆ ಕಿಚ್ಚನ ಕ್ಲಾಸ್ ಫಿಕ್ಸ್?!

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಚೆನ್ನಾಗೇ ಆಟ ಆಡ್ತಿದ್ದಾರೆ. ಯಾವುದೇ ಡಬಲ್ ಗೇಮ್ ಆಡದೆ ವೀಕ್ಷಕರಿಗೆ ಇಷ್ಟವಾಗ್ತಿದ್ದಾರೆ. ಆದ್ರೆ ದೊಡ್ಮನೆ ಮಂದಿ ಮಾತ್ರ ರಕ್ಷಿತಾ ಶೆಟ್ಟಿಯನ್ನ ಟಾರ್ಗೆಟ್ ಮಾಡುತ್ತಲೇ ಇದ್ದಾರೆ. ಮೊನ್ನೆಯಷ್ಟೇ ಅಶ್ವಿನಿ ಗೌಡ ರಕ್ಷಿತಾ ಬಟ್ಟೆ ತೋರ್ಸಿ ಅವಮಾನ ಮಾಡಿದ್ದಲ್ಲದೇ, ಶಿ ಈಸ್ ಎ ಎಸ್ ಎಂದು ಹೇಳಿದ್ರು. ಇದೀಗ ಆಕೆ ವಿರುದ್ದ ಕೇಸ್ ದಾಖಲಾಗಿದೆ. ಇದೀಗ ಮತ್ತೆ ದೊಡ್ಮನೆಯಲ್ಲಿ ರಕ್ಷಿತಾಗೆ ಅವಮಾನ ಆಗಿದೆ. ಕಾಕ್ರೋಚ್ ಸುಧಿ ರಕ್ಷಿತಾಗೆ ಕೆಟ್ಟ ಪದ ಬಳಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಸೀಸನ್ 12ರ ಮೊದಲ ಕ್ಯಾಪ್ಟನ್ ರಘು? – ದೊಡ್ಮನೆ ನಾಯಕನಿಗೆ ವಿಶೇಷ ಅಧಿಕಾರ?
ರಕ್ಷಿತಾ ಶೆಟ್ಟಿ ತಮ್ಮ ನೇರ ಮಾತುಗಳಿಂದಲೇ ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾರೆ. ಏನಿದ್ದರೂ ಅದನ್ನು ಧೈರ್ಯವಾಗಿ ಹೇಳುವ ರಕ್ಷಿತಾಗೆ ಬಿಗ್ ಬಾಸ್ ಮನೆಯಲ್ಲಿ ಪದೇ ಪದೇ ಅವಮಾನ ಆಗುತ್ತಿದೆ. ಕಳೇದ ವಾರ ರಕ್ಷಿತಾ ಮೇಲೆ ಅಶ್ವಿನಿ ಗೌಡ ಹಾಗೂ ಜಾನ್ವಿ ಮುಗಿಬಿದ್ದರು. ಗೆಜ್ಜೆ ವಿಚಾರ ಇಟ್ಟುಕೊಂಡು ರಕ್ಷಿತಾಗೆ ಪದೇ ಪದೇ ಕಿರುಕುಳ ಕೊಡುವ ಪ್ರಯತ್ನ ಮಾಡಿದ್ದರು. ಈ ವಿಚಾರವನ್ನು ಸುದೀಪ್ ವೀಕೆಂಡ್ ಬಂದು ಮಾತನಾಡಿ ಅಶ್ವಿನಿ-ಜಾನ್ವಿಯ ಮೈಚಳಿಬಿಡಿಸಿದರು. ಆದ್ರೀಗ ಮತ್ತೆ ರಕ್ಷಿತಾಗೆ ಅವಮಾನ ಆಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಕಾಕ್ರೋಚ್ ಸುಧಿ ಅವರು ರಕ್ಷಿತಾರನ್ನು ಸೆಡೆ ಎಂದು ಕರೆದಿದ್ದಾರೆ.
ಮನೆಯಲ್ಲಿ ಸ್ಪರ್ಧಿಗಳೆಲ್ಲ ಸೇರಿ ಕ್ಲೀನಿಂಗ್ ವಿಚಾರವಾಗಿ ಮಾತನಾಡುತ್ತಿದ್ದರು. ಯಾರಿಗೆ ಏನು ಕೆಲಸ ನೀಡಬೇಕು ಎಂಬುದು ಇದರ ಇದ್ದೇಶ ಆಗಿತ್ತು. ಆದರೆ ಪ್ರತಿಬಾರಿಯಂತೆ ಈ ಬಾರಿಯೂ ಸಹ ಮೀಟಿಂಗ್ ಗೊಂದಲ ಮಯವಾಯ್ತು, ಯಾರು ಯಾವ ಕೆಲಸ ವಹಿಸಿಕೊಳ್ಳಬೇಕು ಎಂಬ ಚರ್ಚೆ ಬಿಟ್ಟು ಪರಸ್ಪರ ದೂಷಣೆ ಶುರುವಾಯಿತು. ಈ ಸಂದರ್ಭ ರಕ್ಷಿತಾ ಶೆಟ್ಟಿ ಮತ್ತು ಸುಧಿ ನಡುವೆ ಒಂದಷ್ಟು ವಿಚಾರಗಳಿಗೆ ಮಾತಿನ ಚಕಮಕಿ ಆರಂಭವಾಯಿತು. ರಕ್ಷಿತಾ ಮೇಲೆ ಕೆಲ ಆರೋಪಗಳನ್ನು ಮಾಡುತ್ತಾ ಸುಧಿ ಹೊರನಡೆದರು. ನಾನು ಕರೆದಾಗ ಮಾತನಾಡಲಿಲ್ಲ ಎಂದು ಸಿಟ್ಟು ಮಾಡಿಕೊಂಡರು. ಬಲಿಕ ಅವಳ್ಯಾರೋ ನಿನ್ನೆ ಮೊನ್ನೆ ಬಂದಿರೋ ಸೆಡೆ ಮಾತಾಡ್ತಾನೇ ಇದ್ದಾಳೆ.. ಐದು ಸಲ ಕರೆದರೆ ತಿರಗೋದಿಲ್ಲ ಅವಳು.. ಒಬ್ಬಳೇ ಕಿಲಾಡಿ ಥರ ಮಾತಾಡ್ತಾಳೆ. ಮರ್ಯಾದೆ ಕೊಟ್ಟರೆ ಮರ್ಯಾದೆ.. ಎಂದು ಕೂಗಾಡಿದ್ದಾರೆ. ಇದು ಅಲ್ಲಿದ್ದ ಹಲವರಿಗೆ ಬೇಸರ ತರಿಸಿತು, ಗಿಲ್ಲಿ, ಜಾನ್ವಿ ಅವರು ಸುಧಿ ಮಾತನ್ನು ವಿರೋಧಿಸಿದ್ದಾರೆ. ನೀನು ಹುಡುಗರಿಗೆ ಆ ಮಾತು ಅನ್ನು.. ಆದರೆ ಹುಡುಗಿಗೆ ಅದರಲ್ಲೂ ಪುಟ್ಟ ಹುಡುಗಿಗೆ ಹಾಗೆ ಅನ್ನಬಾರದಿತ್ತು ಎಂದು ಗಿಲ್ಲಿ ಹೇಳಿದ್ದಕ್ಕೆ, ನಮ್ ಏರಿಯಾದಲ್ಲಿ ಸೆಡೆ ಅನ್ನೋ ಪದ ತುಂಬಾ ಕಾಮನ್ ವರ್ಡ್. ದೇವ್ರಾಣೆಗೂ ಸೆಡೆ ಅಂದ್ರೆ ನಮ್ ಕಡೆ ತುಂಬಾ ಚಿಕ್ಕೋಳು ನೀನು ಅಂತ ಎಂದು ಹೇಳಿದ್ದಾರೆ. ಸದ್ಯ ಈ ವಿಚಾರ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ. ಇದರಿಂದ ರಕ್ಷಿತಾ ಅಭಿಮಾನಿಗಳು ಮಾತ್ರ ಗರಂ ಆಗಿದ್ದಾರೆ.

ನೋಡಿರಿ

