ಬಿಗ್‌ ಬಾಸ್‌ ಸೀಸನ್‌ 12ರ ಮೊದಲ ಕ್ಯಾಪ್ಟನ್‌ ರಘು? – ‌ದೊಡ್ಮನೆ ನಾಯಕನಿಗೆ ವಿಶೇಷ ಅಧಿಕಾರ?

ಬಿಗ್‌ ಬಾಸ್‌ ಸೀಸನ್‌ 12ರ ಮೊದಲ ಕ್ಯಾಪ್ಟನ್‌ ರಘು? – ‌ದೊಡ್ಮನೆ ನಾಯಕನಿಗೆ ವಿಶೇಷ ಅಧಿಕಾರ?

ಬಿಗ್‌ ಬಾಸ್‌ ಮನೆಯ ಆಟ ದಿನದಿಂದ ದಿನಕ್ಕೆ ರಂಗೇರಿದೆ. ದೊಡ್ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗ್ತಿದ್ದಂತೆ ಫಿಸಿಕಲ್‌ ಟಾಸ್ಕ್‌ ಕೂಡ ಶುರುವಾಗಿದೆ. ಅಷ್ಟೇ ಅಲ್ಲ ಈ ಸೀಸನ್‌ ನ ಮೊದಲ ಕ್ಯಾಪ್ಟನ್‌ ಆಯ್ಕೆಗಾಗಿ ಬಿಗ್‌ ಬಾಸ್‌ ಟಾಸ್ಕ್‌ ನೀಡಿದ್ದಾರೆ. ಮೊದಲ ಕಾಪ್ಟನ್‌ ಆಗಲು ರಿಷಾ ಹಾಗೂ ರಘು ಮಧ್ಯೆ ಫೈಟ್‌ ಶುರುವಾಗಿದೆ.

ಇದನ್ನೂ ಓದಿ: ತಗ್ಗಿದ ಕಾಂತಾರ ಚಾಪ್ಟರ್‌ 1 ಅಬ್ಬರ – ಮೊದಲ ಬಾರಿಗೆ ಅತೀ ಕಡಿಮೆ ಕಲೆಕ್ಷನ್ ಮಾಡಿದ ಶೆಟ್ರ ಸಿನಿಮಾ!

ಬಿಗ್ ಬಾಸ್ ಕನ್ನಡ ಸೀಸನ್ 12 ರ ಮೊದಲ ಮೂರು ವಾರ ಯಾರೂ ಕ್ಯಾಪ್ಟನ್ ಇರಲಿಲ್ಲ. ಉಸ್ತುವಾರಿ ಹಾಗೂ ಎಲ್ಲ ಟಾಸ್ಕ್ ಗಳನ್ನ ಬಿಗ್ ಬಾಸ್ ನೋಡಿಕೊಳ್ಳುತ್ತಿದ್ದರು. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಕ್ಯಾಪ್ಟನ್ ಆಯ್ಕೆಗಾಗಿ ಟಾಸ್ಕ್‌ ಶುರುವಾಗಿದೆ. ಈ ವಾರದ ಆರಂಭದಲ್ಲಿ ಬಿಗ್ ​​ಬಾಸ್ ಈ ಮನೆಯ ಮೊದಲ ಕ್ಯಾಪ್ಟನ್ ಆಯ್ಕೆ ಮಾಡಲು ಮನೆಯ ಸದಸ್ಯರನ್ನು ಮೂರು ತಂಡಗಳನ್ನಾಗಿ ಮಾಡಿ ಒಂದು ಟಾಸ್ಕ್ ನೀಡಿದ್ದರು. ವಿವಿಧ ಮುಖಬೆಲೆಯ ನಕಲಿ ನಾಣ್ಯಗಳು ಗಾರ್ಡನ್ ಏರಿಯಾದಲ್ಲಿ ಕಾಲಕಾಲಕ್ಕೆ ಸುರಿಯುತ್ತದೆ. ಯಾರು ಹೆಚ್ಚು ನಾಣ್ಯಗಳನ್ನು ಹೊಂದುತ್ತಾರೊ ಆ ತಂಡ ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆಯುತ್ತದೆ ಎಂದಿತ್ತು. ಈ ತಂಡಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಸೂರಜ್ ಸಿಂಗ್, ಮ್ಯೂಟೆಂಟ್ ರಘು ಹಾಗೂ ರಿಷಾ ಗೌಡ ಕ್ಯಾಪ್ಟನ್ ಆಗಿದ್ದರು. ಆದರೆ, ಗುರುವಾರ ಬಿಗ್ ಬಾಸ್ ಮೂವರು ಕನ್ಫೆಷನ್ ರೂಂಗೆ ಕರೆಸಿ ಮೂವರಿಗೂ ವಿಶೇಷ ಆಫರ್ ನೀಡಿದರು.  ಮೂವರಿಗೂ ವಿಶೇಷ ನಾಣ್ಯ ನೀಡಿ, ಆ ನಾಣ್ಯವನ್ನು ತೆಗೆದುಕೊಂಡವರು ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್​​ಗೆ ಆಯ್ಕೆ ಆಗುತ್ತಾರೆ. ಆದರೆ ಅವರ ತಂಡ ಕ್ಯಾಪ್ಟೆನ್ಸಿ ಟಾಸ್ಕ್​​ನಿಂದ ಹೊರಗೆ ಉಳಿಯುತ್ತದೆ ಎಂಬ ನಿಯಮ ಹಾಕಿದರು. ಆ ಆಫರ್ ಅನ್ನು ರಘು ಮತ್ತು ರಿಷಾ ಪಡೆದುಕೊಂಡರು. ಆದರೆ ಸೂರಜ್ ತೆಗೆದುಕೊಳ್ಳಲಿಲ್ಲ. ಅಂತಿಮವಾಗಿ ನಾಣ್ಯಗಳ ಟಾಸ್ಕ್ ಮುಗಿದಾಗ ಸೂರಜ್ ತಂಡ ಸೋತು, ಸೂರಜ್ ಅವರು ಕ್ಯಾಪ್ಟೆನ್ಸಿ ಟಾಸ್ಕ್​​ಗೆ ಆಯ್ಕೆ ಆಗಲಿಲ್ಲ.

ರಘು ಅವರ ತಂಡ ಗೆದ್ದಿತಾದರೂ ರಘು, ಆಫರ್ ಸ್ವೀಕಾರ ಮಾಡಿದ್ದರಿಂದ ಅವರ ತಂಡ, ಕ್ಯಾಪ್ಟೆನ್ಸಿ ಟಾಸ್ಕ್​​ಗೆ ಹೋಗಲಿಲ್ಲ. ಅತ್ಯಂತ ಕಡಿಮೆ ನಾಣ್ಯಗಳನ್ನು ಸಂಗ್ರಹಿಸಿದ್ದ ರಿಷಾ ಸಹ ಕ್ಯಾಪ್ಟೆನ್ಸಿ ಟಾಸ್ಕ್​​ಗೆ ಆಯ್ಕೆ ಆದ್ರು. ಈಗ ರಘು ಮತ್ತು ರಿಷಾ ಮಾತ್ರವೇ ಕ್ಯಾಪ್ಟೆನ್ಸಿ ಫೈನಲ್ ಟಾಸ್ಕ್​​​ಗೆ ಅರ್ಹತೆ ಪಡೆದಿದ್ದಾರೆ. ಅದರಂತೆ ಇಂದು ಇವರಿಬ್ಬರ ಮಧ್ಯೆ ಕ್ಯಾಪ್ಟನ್ಸಿ ಟಾಸ್ಕ್ ನಡೆಯಲಿದೆ. ಆ್ಯಕ್ಟಿವಿಟಿ ರೂಮ್​ನಲ್ಲಿ ಕಗ್ಗತ್ತಲ ವಾತಾವರಣ ಸೃಷ್ಟಿಸಲಾಗಿದೆ. ಇಲ್ಲಿ ತನ್ನ ಹೆಸರಿನ ಅಕ್ಷರಗಳನ್ನು ಹುಡುಕಬೇಕು. ಅದನ್ನು ಸರಿಯಾಗಿ ಜೋಡಿಸಬೇಕು.. ಅತಿ ಕಡಿಮೆ ಸಮಯದಲ್ಲಿ ಈ ಟಾಸ್ಕ್ ಅನ್ನು ಯಶಸ್ವಿಯಾಗಿ ಮುಗಿಸಿದ ಸದಸ್ಯ ಬಿಬಿಕೆ 12ರ ಮೊದಲ ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಾರೆ. ಮೂಲಗಳ ಪ್ರಕಾರ ಈ ಟಾಸ್ಕ್ ಅನ್ನು ಮ್ಯೂಟೆಂಟ್ ರಘು ಗೆದ್ದು ಕ್ಯಾಪ್ಟನ್ ಆಗಿದ್ದಾರೆ ಎಂದು ಹೇಳಲಾಗ್ತಿದೆ.

Shwetha M