ತಗ್ಗಿದ ಕಾಂತಾರ ಚಾಪ್ಟರ್‌ 1 ಅಬ್ಬರ – ಮೊದಲ ಬಾರಿಗೆ ಅತೀ ಕಡಿಮೆ ಕಲೆಕ್ಷನ್ ಮಾಡಿದ ಶೆಟ್ರ ಸಿನಿಮಾ!

ತಗ್ಗಿದ ಕಾಂತಾರ ಚಾಪ್ಟರ್‌ 1 ಅಬ್ಬರ – ಮೊದಲ ಬಾರಿಗೆ ಅತೀ ಕಡಿಮೆ ಕಲೆಕ್ಷನ್ ಮಾಡಿದ ಶೆಟ್ರ ಸಿನಿಮಾ!

ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಚಾಪ್ಟರ್‌ 1 ಸಿನಿಮಾ ಮೊದಲ ದಿನದಿಂದಲೂ ಅಬ್ಬರಿಸುತ್ತಿದೆ. ಬಾಕ್ಸ್‌ ಆಫೀಸ್‌ನಲ್ಲಿ ಈಗಾಗಲೇ ಸಾಕಷ್ಟು ದಾಖಲೆ ಬರೆದಿದೆ. ಆದ್ರೀಗ ಕಾಂತಾರ ಚಾಪ್ಟರ್‌ 1 ಸಿನಿಮಾ ಇದೇ ಮೊದಲ ಬಾರಿಗೆ ಬಾಕ್ಸ್‌ ಆಫೀಸ್‌ನಲ್ಲಿ ಕೇವಲ ಒಂದಂಕಿ ಕಲೆಕ್ಷನ್‌ ಮಾಡಿದೆ.

ಇದನ್ನೂ ಓದಿ: ಬೆಂಗಳೂರಿಗೆ ಹೊರಟಿದ್ದ ಬಸ್‌ನಲ್ಲಿ ಬೆಂಕಿ! – 20ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕಾಂತಾರ ಚಾಪ್ಟರ್‌ 1 ಸಿನಿಮಾ ರಿಲೀಸ್‌ ಆಗಿ ಮೂರು ವಾರ ಕಳೆದಿದೆ. ಈಗಾಗಲೇ ಅನೇಕರು ಸಿನಿಮಾನ ಎರಡು-ಮೂರು ಬಾರಿ ನೋಡಿದ್ದಾರೆ. ಆದೀಗ ಈ ಚಿತ್ರದ ದಿನದ ಗಳಿಕೆ ಮೂರು ವಾರಗಳಲ್ಲಿ ಮೂರನೇ ಬಾರಿಗೆ ಒಂದಂಕಿಗೆ ಇಳಿದಿದೆ. ಈ ವಾರದ ಮೊದಲ ಮೂರು ದಿನ ಡಬಲ್ ಡಿಜಿಟ್ ಕಲೆಕ್ಷನ್ ಮಾಡಿದೆ. ಇದಕ್ಕೆ ಕಾರಣ ಆಗಿದ್ದು, ದೀಪಾವಳಿ ಹಬ್ಬ. ಈಗ ಸಿನಿಮಾ ಅಕ್ಟೋಬರ್ 23ರಂದು ಕೇವಲ 6 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹೊಸ ಸಿನಿಮಾಗಳ ಬಿಡುಗಡೆ ಹಾಗೂ ವಿವಿಧ ಕಾರಣಕ್ಕೆ ಕಾಂತಾರ: ಚಾಪ್ಟರ್ 1 ಚಿತ್ರದ ಕಲೆಕ್ಷನ್ ಒಂದಂಕಿಗೆ ಇಳಿಕೆ ಆಗಿದೆ. ವೀಕೆಂಡ್ ಹೊರತುಪಡಿಸಿ ಮುಂದಿನ ದಿನಗಳಲ್ಲಿ ಗಳಿಕೆ ಕಡಿಮೆ ಆಗುವ ಸಾಧ್ಯತೆ ಇದೆ.

ಹಿಂದಿಯಲ್ಲಿ ಥಾಮಾ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಕಾಂತಾರ: ಚಾಪ್ಟರ್ 1  ಸಿನಿಮಾದ ಹಿಂದಿ ವರ್ಷನ್ ಮೇಲೆ ಈ ಚಿತ್ರದ ರಿಲೀಸ್ ಅಷ್ಟಾಗಿ ಪ್ರಭಾವ ಬೀರಿಲ್ಲ. ಹಿಂದಿಯಲ್ಲೂ ಕಾಂತಾರ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಗುರುವಾರ (ಅಕ್ಟೋಬರ್ 23) ಸಿನಿಮಾ ಸಾಧಾರಣ ಗಳಿಕೆ ಮಾಡಿದೆ.

ಕಾಂತಾರ: ಚಾಪ್ಟರ್ 1 ಚಿತ್ರದ ಒಟ್ಟಾರೆ ಕಲೆಕ್ಷನ್ ಸಾವಿರ ಕೋಟಿ ರೂಪಾಯಿ ತಲುಪುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಸದ್ಯ ಚಿತ್ರದ ವಿಶ್ವ ಮಟ್ಟದ ಕಲೆಕ್ಷನ್ 900 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ. ನಿಧಾನವಾಗಿ ಕಲೆಕ್ಷನ್ ಆದರೂ ಇನ್ನೊಂದು ತಿಂಗಳಲ್ಲಿ ಸಿನಿಮಾ 1000 ಕೋಟಿ ರೂಪಾಯಿ ತಲುಪಬಹುದು ಎಂದು ಊಹಿಸಲಾಗುತ್ತಿದೆ.

Shwetha M