ರೋಹಿತ್ HERO.. ಕೊಹ್ಲಿ DUCK – 2ನೇ ಮ್ಯಾಚಲ್ಲೂ ಬಳಲಿದ ಬ್ಯಾಟಿಂಗ್!

ಮೊದಲ ಏಕದಿನ ಪಂದ್ಯದಲ್ಲಿ ಗೆದ್ದು ಸರಣಿ ಲಿಡ್ ಸಾಧಿಸಿರೋ ಆಸ್ಟ್ರೇಲಿಯಾ ಎರಡನೇ ಪಂದ್ಯದಲ್ಲೇ ಗೆದ್ದು ಇನ್ನೂ ಒಂದು ಮ್ಯಾಚ್ ಬಾಕಿ ಇರುವಂತೆಯೇ ಸರಣಿಯನ್ನ ಕೈವಶ ಮಾಡಿಕೊಳ್ಳೋ ಕಾನ್ಫಿಡೆನ್ಸ್ನಲ್ಲಿದೆ. ಮತ್ತೊಂದೆಡೆ ಭಾರತ ಪಂದ್ಯವನ್ನ ಗೆದ್ದು ಸರಣಿ ಸಮಬಲ ಸಾಧಿಸ್ಬೇಕು ಅನ್ನೋ ಇಂಟೆನ್ಷನ್ನಲ್ಲೇ ಕಣಕ್ಕಿಳಿದ್ರೂ ಕೂಡ ಬ್ಯಾಟಿಂಗ್ನಲ್ಲಿ ನಿರೀಕ್ಷಿತ ರಿಸಲ್ಟ್ ಬಂದಿಲ್ಲ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಂದರೆ ಪರ್ತ್ನಲ್ಲಿ ಆಡಿದ್ದವ್ರೇ ಇಲ್ಲೂ ಸೇಮ್ ಟೀಂ ಕಣಕ್ಕಿಳಿಸಲಾಗಿತ್ತು. ಇನ್ನು ಶುಭ್ಮನ್ ಗಿಲ್ ಒನ್ಸ್ ಅಗೇನ್ ಎರಡನೇ ಮ್ಯಾಚಲ್ಲೂ ಟಾಸ್ ಸೋತ್ರು.
ಇದನ್ನೂ ಓದಿ : ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಸೊನ್ನೆಗೆ ಔಟ್
ಸ್ಟಾರ್ಟಿಂಗ್ ಟ್ರಬಲ್.. ನಂತ್ರ ಚೇತರಿಸಿಕೊಂಡ ಭಾರತ!
ಟಾಸ್ ಸೋತ ಭಾರತದ ಪರ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದ್ರು. ಬಟ್ ಇಲ್ಲೂ ಕೂಡ ಸ್ಟಾರ್ಟಿಂಗ್ ಓವರ್ಗಳಲ್ಲಿ ನಿರೀಕ್ಷಿತ ಪ್ರದರ್ಶನ ಬರ್ಲಿಲ್ಲ. ಮೊದಲ 10 ಓವರ್ಗಳಲ್ಲಿ ಆಸ್ಟ್ರೇಲಿಯಾ ಕಂಪ್ಲೀಟ್ ಡಾಮಿನೇಟ್ ಮಾಡಿತು. 17 ರನ್ಸ್ ಆಗುವಷ್ಟ್ರಲ್ಲೇ ಪಸ್ಟ್ ವಿಕೆಟ್ ಢಮಾರ್. 9 ರನ್ ಗಳಿಸಿದ್ದ ನಾಯಕ ಶುಭ್ಮನ್ ಗಿಲ್ ವಿಕೆಟ್ ಕಳ್ಕೊಂಡ್ರು. ಇನ್ನು ಮೂರನೇ ಕ್ರಮಾಂಕದಲ್ಲಿ ಬಂದ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಬಟ್ ಕೊಹ್ಲಿ ಮತ್ತೆ ಡಕ್ ಔಟ್. ಇನ್ನು ನೆಕ್ಸ್ಟ್ ಶ್ರೇಯಸ್ ಅಯ್ಯರ್ ಮತ್ತು ರೋಹಿತ್ ನಡುವೆ ಒಳ್ಳೆ ಕಾಂಬಿನೇಷನ್ ಇತ್ತು. 3ನೇ ವಿಕೆಟ್ ವೇಳೆಗೆ 135 ರನ್ಸ್ ಬಂತು. ಅದ್ರಲ್ಲೂ ಹಿಟ್ಮ್ಯಾನ್ ರೋಹಿತ್ ಶರ್ಮಾ 97 ಎಸೆತಗಳಲ್ಲಿ 2 ಸಿಕ್ಸರ್, 7 ಫೋರ್ ಗಳೊಂದಿಗೆ 73 ರನ್ ಗಳಿಸಿದ್ರು. ಬಟ್ ಬ್ಯಾಡ್ ಲಕ್ ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಕ್ಯಾಚ್ ಔಟ್ ಆದ್ರು. ಇನ್ನು ಶ್ರೇಯಸ್ 61 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಇನ್ನು ಕೆಎಲ್ ರಾಹುಲ್ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತಾದ್ರೂ 11 ರನ್ಗಳಿಗಷ್ಟೇ ಸೀಮಿತವಾದ್ರು. ಌಡಂ ಝಂಪಾ ಬೌಲಿಂಗ್ನಲ್ಲಿ ಬಿಗ್ ಹಿಟ್ಗೆ ಕೈ ಹಾಕಿ ಬೌಲ್ಡ್ ಆದ್ರು. ಇನ್ನು ಅಕ್ಷರ್ ಪಟೇಲ್ ವಿಕೆಟ್ ಅಂತೂ ಸಿಕ್ಕಾಪಟ್ಟೆ ಇಂಪ್ರೆಸ್ಸಿವ್ ಆಗಿತ್ತು. 44 ರನ್ ಗಳಿಸಿ ಸಿಕ್ಸ್ ಮೂಲಕ ಅರ್ಧಶತಕ ಕಂಪ್ಲೀಟ್ ಮಾಡಿಕೊಳ್ಳೋಕೆ ದೊಡ್ಡ ಹೊಡೆತಕ್ಕೆ ಕೈಹಾಕಿದ್ರು. ಬಟ್ ಬೌಂಡರಿ ಲೈನ್ ಬಳಿ ಬಾಲ್ ಹಿಡಿದ ಸ್ಟಾರ್ಕ್ ನಂತ್ರ ಬಾಲ್ ಮೇಲೆ ಎಸೆದು ಬೌಂಡರಿ ಲೈನ್ ಆಚೆ ಹೋಗಿ ಮತ್ತೆ ವಾಪಸ್ ಬಂದು ಕ್ಯಾಚ್ ಕಂಪ್ಲೀಟ್ ಮಾಡಿದ್ರು. ನಿತೀಶ್ ರೆಡ್ಡಿ 8 ರನ್ಸ್ ಕಲೆ ಹಾಕಿದ್ರೆ ಹರ್ಷಿತ್ ರಾಣಾ ಲಾಸ್ಟ್ ಮೂಮೆಂಟ್ನಲ್ಲಿ ಇಂಪ್ರೆಸ್ಸಿವ್ ಇನ್ನಿಂಗ್ಸ್ ಆಡಿದ್ರು. ಬ್ಯಾಕ್ ಟು ಬ್ಯಾಕ್ ಫೋರ್ ಸಿಡಿಸಿದ್ರು. ಹಾಗೇ ಅರ್ಶದೀಪ್ ಸಿಂಗ್ ಕೂಡ ಫೋರ್ಗಳನ್ನ ಸಿಡಿಸಿದ್ದು ವಿಶೇಷವಾಗಿತ್ತು. ಅರ್ಶದೀಪ್ 13 ರನ್ ಗಳಿಸಿ ಔಟಾದ್ರೆ ರಾಣಾ 24 ರನ್ ಗಳಿಸಿ ಅಜೇಯರಾಗಿ ಉಳಿದ್ರು. ಭಾರತ 9 ವಿಕೆಟ್ ನಷ್ಟಕ್ಕೆ 264 ರನ್ಗಳನ್ನ ಕಲೆ ಹಾಕಿದೆ.
ಆಸೀಸ್ ನೆಲದಲ್ಲಿ ದಾಖಲೆ ಬರೆದ ಹಿಟ್ ಮ್ಯಾನ್!
ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಇನ್ನಿಂಗ್ಸ್ ತುಂಬಾನೇ ಸ್ಪೆಷಲ್ ಆಗಿತ್ತು. ಫಸ್ಟ್ ಮ್ಯಾಚಲ್ಲಿ ಸೌಂಡ್ ಮಾಡದೇ ಇದ್ರೂ ಸೆಕೆಂಡ್ ಮ್ಯಾಚಲ್ಲಿ ಶೈನ್ ಆದ್ರು. 73 ರನ್ ಗಳಿಸಿ ತಂಡದ ಪರ ಹೈಯೆಸ್ಟ್ ರನ್ ಸ್ಕೋರರ್ ಆಗೋದ್ರ ಜೊತೆಗೆ ಆಸ್ಟ್ರೇಲಿಯಾದಲ್ಲಿ ಆಸೀಸ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡರು. ಆಸ್ಟ್ರೇಲಿಯಾದಲ್ಲಿ 21 ಏಕದಿನ ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 4 ಭರ್ಜರಿ ಶತಕ ಹಾಗೂ 3 ಅರ್ಧ ಶತಕಗಳೊಂದಿಗೆ ಒಟ್ಟು 1033 ರನ್ ಕಲೆಹಾಕಿದ್ದಾರೆ.
ವಿರಾಟ್ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಡಕ್ ಔಟ್!
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಕಿಂಗ್ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ಹೋಪ್ಸ್ ಇತ್ತು. ಬಟ್ ಸತತ ಎರಡು ಪಂದ್ಯಗಳಲ್ಲೂ ಕೊಹ್ಲಿ ಡಕ್ ಔಟ್ ಆಗಿದ್ದಾರೆ. ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ 4 ಬಾಲ್ ಫೇಸ್ ಮಾಡಿ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿದ್ರು. ಬಲಗೈ ವೇಗಿ ಕ್ಸೇವಿಯರ್ ಬಾರ್ಟ್ಲೆಟ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ರು. ಇದಕ್ಕೂ ಮುನ್ನ ಪರ್ತ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಶೂನ್ಯಕ್ಕೆ ಕ್ಯಾಚಿತ್ತು ನಿರ್ಗಮಿಸಿದ್ದರು. ಇದೀಗ ಮತ್ತೊಮ್ಮೆ ಸೊನ್ನೆ ಸುತ್ತುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ನೋಡಿರಿ

