ಈ ಮದುವೆಗೆ ಬರುವವರು ಮದ್ಯ, ಮಾಂಸ ಸೇವನೆ ಮಾಡುವಂತಿಲ್ಲ! – ವೈರಲ್ ಆಯ್ತು ವೆಡ್ಡಿಂಗ್ ಕಾರ್ಡ್!

ಮದುವೆ ಸಮಾರಂಭ ಅಂದ್ಮೇಲೆ ಸ್ನೇಹಿತರು, ಕುಟುಂಬಸ್ಥರು ಬಂದಿರುತ್ತಾರೆ. ಮದುವೆ ಬಂದವರಿಗಾಗಿ ವಿವಿಧ ಬಗೆಯ ಖಾದ್ಯಗಳನ್ನ ಕೂಡ ತಯಾರಿಸಲಾಗುತ್ತೆ. ಜೊತೆಗೆ ಫ್ರೆಂಡ್ಸ್‌ಗಾಗಿ ಎಣ್ಣೆ ಪಾರ್ಟಿ ಕೂಡ ಆಯೋಜಿಸಲಾಗುತ್ತದೆ. ಆದ್ರೆ ಇಲ್ಲೊಂದು ಕಡೆ ಮದುವೆಗೆ ಬರುವವರಿಗೆ ವಿಚಿತ್ರ ನಿಯಮ ವಿಧಿಸಲಾಗಿದ್ದು, ಮದುವೆ ಕಾರ್ಡ್ ನೋಡಿ ಎಲ್ಲರು ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಅಮೃತಧಾರೆಯಲ್ಲಿ ಮತ್ತೆ ಭೂಮಿ ಗೌತಮ್ ಒಂದಾಗುವ ಸಮಯ – ಮಕ್ಕಳ ಮುಂದೆ ದಂಪತಿಯ ಪುರ್ನಮಿಲನ
ಮದುವೆ ಅಂದ್ಮೇಲೆ ಸಂಭ್ರಮ ಇದ್ದೇ ಇರುತ್ತದೆ. ತಮ್ಮ ಮದುವೆ ಎಲ್ಲರಿಗಿಂತ ಡಿಫ್ರೆಂಟ್ ಆಗಿರ್ಬೇಕು ಅಂತಾ ವಿವಿಧ ಥೀಮ್ ಇಟ್ಟುಕೊಂಡು ಮದುವೆ ಕಾರ್ಡ್ ಮಾಡಿಸುತ್ತಾರೆ. ಹಾಲ್ ಕೂಡ ಅದಕ್ಕೆ ತಕ್ಕಂತೆ ಡೆಕೊರೇಷನ್ ಮಾಡಿಸ್ತಾರೆ. ಆದ್ರೆ ಇಲ್ಲೊಂದು ಕಡೆ ಮದುವೆ ಆಮಂತ್ರಣದಲ್ಲಿ ಮದುವೆಗೆ ಬರುವವರಿಗೆ ವಿಚಿತ್ತ ರೂಲ್ಸ್ ಮಾಡಲಾಗಿದೆ. ಮದುವೆಗೆ ಬರುವವರು ಮದ್ಯ, ಮಾಂಸ ಸೇವನೆ ಮಾಡಬಾರದು ಎಂದು ನಿಯಮ ವಿಧಿಸಲಾಗಿದೆ. ಇದ್ರ ಫೋಟೋ ವೈರಲ್ ಆಗಿದೆ.
ರಾಜಸ್ಥಾನದ ಸಿಕಾರ್‌ನ ಅಜಿತ್ ಸಿಂಗ್ ಶೇಖಾವತ್ ಅವರ ಕುಟುಂಬಕ್ಕೆ ಸೇರಿದ ಈ ಮದುವೆ ಕಾರ್ಡ್ ಎನ್ನಲಾಗಿದೆ. ಸಂಗ್ರಾಮ್ ಸಿಂಗ್, ಪೂಜಾ ಅವರನ್ನು ನವೆಂಬರ್ 2, 2025 ರಂದು ವಿವಾಹವಾಗಲಿದ್ದಾರೆ. ಯುವರಾಜ್ ಸಿಂಗ್, ಹರ್ಷಿತಾ ರಾಥೋಡ್ ಅವರನ್ನು ನವೆಂಬರ್ 7, 2025 ರಂದು ಮದುವೆಯಾಗಲಿದ್ದಾರೆ. ಇವರ ವಿವಾಹದ ಆಮಂತ್ರಣ ಪತ್ರಿಕೆಯಲ್ಲಿ ವರದಕ್ಷಿಣೆ ರಹಿತ ವಿವಾಹ ಮತ್ತು ಮಾಂಸ ಹಾಗೂ ಮದ್ಯ ನಿಷೇಧವನ್ನು ಸಹ ಹೈಲೈಟ್ ಮಾಡಿತ್ತು. ಮದುವೆಗೆ ಬರುವವರು ಮದ್ಯ, ಹಾಗೂ ಮಾಂಸ ಸೇವನೆ ಮಾಡಬಾರದು ಎಂದು ಬರೆಯಲಾಗಿದೆ. ಇದ್ರ ಫೋಟೋ ವೈರಲ್ ಆಗಿದ್ದು, ಮದುವೆ ಕಾರ್ಡ್‌ನಲ್ಲಿ ಅಂತಹ ಸಂದೇಶವನ್ನು ಸೇರಿಸಿದ್ದಕ್ಕೆ ಅನೇಕರು ಶ್ಲಾಘಿಸಿದ್ದಾರೆ. ಆದರೆ, ಮದ್ಯಪಾನ ಮಾಡುವವರಿಗೆ ಮಾತ್ರ ನಿರಾಸೆಯಾಗಿದೆ.

ನೋಡಿರಿ

