ಅಮೃತಧಾರೆಯಲ್ಲಿ ಮತ್ತೆ ಭೂಮಿ ಗೌತಮ್ ಒಂದಾಗುವ ಸಮಯ – ಮಕ್ಕಳ ಮುಂದೆ ದಂಪತಿಯ ಪುರ್ನಮಿಲನ

ಅಮೃತಧಾರೆಯಲ್ಲಿ ಮತ್ತೆ ಭೂಮಿ ಗೌತಮ್ ಒಂದಾಗುವ ಸಮಯ – ಮಕ್ಕಳ ಮುಂದೆ ದಂಪತಿಯ ಪುರ್ನಮಿಲನ

ಅಮೃತಧಾರೆ ಧಾರಾವಾಹಿಯಲ್ಲಿ ವೀಕ್ಷಕರು ಕಾಯುತ್ತಿದ್ದ ದಿನ ಬಂದೇ  ಬಿಟ್ಟಿದೆ. ಒಂದೇ ವಠಾರದಲ್ಲಿ ಗೌತಮ್ ಭೂಮಿ ಇರುವುದು ವೀಕ್ಷಕರಿಗೆ ಇಷ್ಟವಾದರೂ ಕೂಡಾ ಇಬ್ಬರೂ ಒಂದಾಗಲಿ ಅಂತಾ ಅದೆಷ್ಟೋ ಅಭಿಮಾನಿಗಳು ಕಾಯುತ್ತಿದ್ದರು. ಈಗ ಆ ಸಮಯವೂ ಹತ್ತಿರವಾಗಿದೆ. ಗಂಡ ಹೆಂಡತಿ ಒಂದಾಗುವ ಗಳಿಗೆ ಬಂದೇ ಬಿಟ್ಟಿದೆ.

ಇದನ್ನೂ ಓದಿ:ಭೂಮಿಕಾ ಮತ್ತು ಗೌತಮ್ ಒಂದಾಗೋ ಕಾಲ – ವಠಾರದಲ್ಲಿ ಡುಮ್ಮ ಸಾರ್ ಮತ್ತು ಟೀಚರ್ ಲವ್ ಸ್ಟೋರಿ ರೀ ಸ್ಟಾರ್ಟ್..!

ಗೌತಮ್ ಮತ್ತು ಭೂಮಿಯ ಹುಸಿ ಮುನಿಸು, ವಿರಹವೇದನೆ, ಮಕ್ಕಳಿಗಾಗಿ ಮಿಡಿಯುವ ಹೃದಯ. ಈ ರೀತಿ ಭಾವನಾತ್ಮಕ ಧಾರಾವಾಹಿ ನೋಡುವುದೇ ವೀಕ್ಷಕರಿಗೆ ಒಂದು ರೀತಿಯ ಸಂಭ್ರಮ. ಅಮೃತಧಾರೆ ಧಾರಾವಾಹಿ ಇಷ್ಟವಾಗುವುದು ಕೂಡಾ ಇದೇ ಕಾರಣಕ್ಕೆ. ಇದೀಗ ಮಕ್ಕಳ ಎದುರು ಗೌತಮ್ ಮತ್ತು ಭೂಮಿ ಒಂದಾಗುವ ಸಮಯ ಬಂದೇ ಬಿಟ್ಟಿದೆ. ಅದಕ್ಕೂ ಮೊದಲು ಜೈದೇವ್ ಲೆಕ್ಕ ಚುಕ್ತಾ ಆಗಬೇಕಿದೆ.

ಜಯದೇವ್‌ಗೆ 600 ಕೋಟಿ ರೂಪಾಯಿ ಸಾಲವನ್ನು ತೀರಿಸಬೇಕಿದೆ. ಶಕುಂತಲಾ ಬಳಿ ಆಸ್ತಿಯಿದ್ದರೂ ಕೂಡ 600 ಕೋಟಿ ರೂಪಾಯಿ ಸಾಲ ಇದೆ. ತನ್ನ ಆಸ್ತಿಯನ್ನು ಮಾತ್ರ ಈ ಸಾಲಕ್ಕೆ ಕೊಡೋದಿಲ್ಲ ಎಂದು ಜಯದೇವ್‌ ಹೇಳಿದ್ದಾನೆ, ಇನ್ನೊಂದು ಕಡೆ ಭೂಮಿಕಾ ಹಾಗೂ ಅವನ ಮಗು ಸಹಿ ಹಾಕಿದರೆ ಮಾತ್ರ ಗೌತಮ್‌ ಆಸ್ತಿಯನ್ನು ಅವರು ಮಾರಾಟ ಮಾಡಬಹುದು. ಭೂಮಿಕಾ ಹಾಗೂ ಮಗುವನ್ನು ನಾವು ಕರೆದುಕೊಂಡು ಬಂದ್ರೆ, ಗೌತಮ್ ಬಂದೇ ಬರುತ್ತಾನೆ ಎಂದು ಜಯದೇವ್‌ ಪ್ಲ್ಯಾನ್‌ ಮಾಡಿದ್ದಾನೆ. ಜಯದೇವ್‌ ಪ್ಲ್ಯಾನ್‌ ಈಗ ಲಕ್ಷ್ಮೀಕಾಂತ್‌ ಮಾವನಿಗೆ ಗೊತ್ತಾಗಿದೆ. ಅವನು ಈ ವಿಷಯವನ್ನು ಹೇಗಾದರೂ ಮಾಡಿ ಗೌತಮ್‌ಗೆ ತಿಳಿಸಬೇಕು ಎಂದುಕೊಂಡಿದ್ದಾನೆ. ಹಾಗಾದರೆ ಭೂಮಿಕಾ ಹಾಗೂ ಅವನ ಮಗ ಸೇಫ್‌ ಆಗ್ತಾರಾ ಎಂಬ ಪ್ರಶ್ನೆ ಎದುರಾಗಿದೆ.

ಇನ್ನೊಂದು ಕಡೆ ಗೌತಮ್‌ ಜೊತೆಗಿರುವ ಆ ಮಗು, ಮಿಂಚು ಅಸಲಿಗೆ ಯಾರದ್ದು ಎನ್ನುವ ಪ್ರಶ್ನೆ ಕೂಡ ಎದುರಾಗಿದೆ. ಭೂಮಿ ಈ ಪ್ರಶ್ನೆಗೆ ಉತ್ತರ ಸಿಗದೆ ಒದ್ದಾಡುತ್ತಿದ್ದಾಳೆ. ಆಗ ಕಾವೇರಿ ಬಂದು “ನನಗೆ ಈ ಪ್ರಶ್ನೆಗೆ ಉತ್ತರ ಗೊತ್ತು” ಎಂದು ಹೇಳಿದ್ದಾಳೆ. ಹಾಗಾದರೆ ಗೌತಮ್‌, ದತ್ತು ತಗೊಂಡಿದ್ದಾನೆ ಎಂದು ಹೇಳುತ್ತಾಳೋ ಅಥವಾ ಅವಳಿಗೆ ಕಿಡ್ನ್ಯಾಪ್‌ ಕೇಸ್‌ನಲ್ಲಿ ಸಿಕ್ಕ ಮಗು ಎಂದು ಹೇಳುತ್ತಾಳೋ ಎಂದು ಕಾದು ನೋಡಬೇಕಿದೆ.

Sulekha