ಒಂದೇ ಫಿಲ್ಮ್‌ನಲ್ಲಿ ಶಿವಣ್ಣ, ಉಪ್ಪಿ, ರಾಜ್! – ಮಾರ್ಕ್‌ನ ಹಿಂದಿಕ್ಕುತ್ತಾ 45?

ಮೂವರು ಸ್ಟಾರ್ಸ್.. ಒಂದು ಸಿನಿಮಾ.. ಎಸ್ ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾ ತೆರೆಮೇಲೆ ಅಬ್ಬರಿಸಲು ಸಜ್ಜಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ 45 ಸಿನಿಮಾ ನಟಿಸುತ್ತಿದ್ದು, ಡಿಸೆಂಬರ್ 25ರಂದು ತೆರೆಮೇಲೆ ಬರಲು ಸಜ್ಜಾಗಿದೆ. ಈಗಾಗಲೇ ಚಿತ್ರದ ಟೀಸರ್ ಸಿನಿ ಪ್ರೇಮಿಗಳ ಮನಗೆದ್ದಿದ್ದು, ಚಿತ್ರದ ಮೇಲೆ ಭಾರಿ ನಿರೀಕ್ಷೆ ಮೂಡಿಸಿದೆ.
ಇದನ್ನೂ ಓದಿ: ಜಾತಿ ಸಮೀಕ್ಷೆ ವೇಳೆ ಹೆಂಡ್ತಿ ಫೋಟೋ ತೆಗೆದ ಸರ್ಕಾರಿ ಸಿಬ್ಬಂದಿಗೆ ಕಪಾಳ ಮೋಕ್ಷ!
ಕನ್ನಡ ಸಿನಿ ರಂಗಕ್ಕೆ ಡಿಸೆಂಬರ್ ಅಂದ್ರೆ ಲಕ್ಕಿ ಮಂತ್. ಸ್ಟಾರ್ ನಟರೆಲ್ಲರೂ ಡಿಸೆಂಬರ್‌ನಲ್ಲೇ ತಮ್ಮ ಅದೃಷ್ಟ ಪರೀಕ್ಷೆಗಾಗಿ ನಿಂತಿರ್ತಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ರಿಲೀಸ್ ಆದ ಮ್ಯಾಕ್ಸ್ ಸಿನಿಮಾ ಕಿಚ್ಚ ಸುದೀಪ್‌ಗೆ ಯಶಸ್ಸು ತಂದುಕೊಟ್ಟಿತ್ತು. ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಗಳಿಕೆ ಕಂಡಿತ್ತು. ಈ ವರ್ಷ ಕೂಡ ನಮ್ಮ ಸ್ಟಾರ್ಸ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಡಿಸೆಂಬರ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಅಪ್ಪಳಿಸಲಿವೆ. ಅದ್ರೂಲ್ಲೂ ಒಂದೇ ದಿನ ಎರಡು ಸಿನಿಮಾಗಳು ರಿಲೀಸ್ ಆಗ್ತಿದೆ. ಕಿಚ್ಚ ಸುದೀಪ್ ನಟನೆಯ ಮಾರ್ಕ್ ಹಾಗೂ ಅರ್ಜುನ್ ಜನ್ಯ ನಿರ್ದೇಶನ ಮೊದಲ ಸಿನಿಮಾ 45 ಡಿಸೆಂಬರ್ 25 ರಂದು ರಿಲೀಸ್ ಆಗ್ತಿದೆ. ಇದೀಗ ತೆರೆ ಮೇಲೆ ಸ್ಟಾರ್ ವಾರ್ ನಡೆಯೋದು ಪಕ್ಕಾ ಆಗಿದೆ. ಆದ್ರೆ ಅರ್ಜುನ್ ಜನ್ಯ ನಿರ್ದೇಶನದ 45 ಸಿನಿಮಾದ ಮೇಲೆ ಮಾತ್ರ ಭಾರಿ ನಿರೀಕ್ಷೆ ಹುಟ್ಟಿಕೊಂಡಿದೆ.
ಮ್ಯೂಸಿಕಲ್ ಕಂಪೋಸರ್ ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅದೂ ಕೂಡ ಮೂವರು ಸ್ಟಾರ್ ಹಿರೋಗಳನ್ನ ಇಟ್ಟುಕೊಂಡು ಸಿನಿಮಾ ಮಾಡ್ತಿದ್ದಾರೆ. ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ಕ್ಕೆ ಸಿನಿಮಾ ಪ್ರೇಕ್ಷಕರ ಮುಂದೆ ಬರಬೇಕಿತ್ತು. ಪೋಸ್ಟ್ ಪ್ರೊಡಕ್ಷನ್ ತಡವಾಗಿ ರಿಲೀಸ್ ಡೇಟ್ ಬದಲಿಸುವಂತಾಗಿತ್ತು. 45 ಸಿನಿಮಾ ಡಿಸೆಂಬರ್ 25 ರಂದು ಬಿಡುಗಡೆ ಆಗಲಿದೆ. ಅರ್ಜುನ್ ಜನ್ಯ ತಮ್ಮ ಮೊದಲ ಚಿತ್ರವನ್ನ ಪಕ್ಕಾ ಪ್ಲಾನ್ ಮಾಡಿಯೇ ತೆಗೆದಿದ್ದಾರೆ. ಮೇಕಿಂಗ್ ಹಂತದಲ್ಲೇ 45 ಸಿನಿಮಾ ಬಹಳ ಸದ್ದು ಮಾಡ್ತಿದೆ. ಈ ಸಿನಿಮಾದಲ್ಲಿ 40% VFX ಇದೆ. ಇದರಿಂದ ದೂರದ ಕೆನಡಾದಲ್ಲಿ ಈ ಚಿತ್ರದ ವಿಎಫ್‌ಎಕ್ಸ್ ಕೆಲಸ ಮಾಡಿಸಲಾಗ್ತಿದೆ. ಆಸ್ಕರ್ ವಿಜೇತ ಹಾಲಿವುಡ್ ಸಿನಿಮಾಗಳಿಗೆ ವಿಎಫ್‌ಎಕ್ಸ್ ಮಾಡಿರುವ ಮಾರ್ಜ್ ಸಂಸ್ಥೆ45 ಸಿನಿಮಾಗೂ ವಿಎಫ್‌ಎಕ್ಸ್ ಮಾಡುತ್ತಿದೆ. ಸಿನಿಮಾನಲ್ಲಿ ಗ್ರಾಫಿಕ್ಸ್ ಮತ್ತು ವಿಎಫ್‌ಎಕ್ಸ್ ಪ್ರಮುಖವಾಗಿದೆ. ಹೀಗಾಗೇ ಸಿನಿಮಾ ರಿಲೀಸ್ ಡೇಟ್ ಕೂಡ ಮುಂದಕ್ಕೆ ಹಾಕಲಾಯ್ತು ಅಂತಾ ಹೇಳಲಾಗ್ತಿದೆ.
ಇನ್ನು ಸಿನಿಮಾದ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, 45 ದಿನಗಳಲ್ಲಿ ನಡೆಯುವ ಕಥೆ ಇದು ಎನ್ನುವುದು ಗೊತ್ತಾಗುತ್ತಿದೆ. ಪುರಾಣದ ವಿಚಾರಗಳನ್ನು ಸೇರಿಕೊಂಡು ಜನ್ಯಾ ಬಹಳ ವಿಭಿನ್ನ ಕಥೆ ಕಟ್ಟಿಕೊಟ್ಟಿದ್ದಾರೆ. ಶಿವಣ್ಣನ ಲುಕ್, ಉಪ್ಪಿಯ ಖಡಕ್ ಡೈಲಾಗ್, ರಾಜ್‌ಬಿ ಶೆಟ್ಟಿಯ ಆ್ಯಕ್ಷನ್‌ಗೆ ಫ್ಯಾನ್ಸ್‌ಮನಸೋತಿದ್ದಾರೆ. ಅರ್ಜುನ್ ಜನ್ಯ ತಮ್ಮ ಫಸ್ಟ್ ಚಿತ್ರದಲ್ಲಿಯೇ ಮೂವರು ಸ್ಟಾರ್ಸ್‌ಗೆ ಹೇಳಿಮಾಡಿಸಿದಂತ ಕ್ಯಾರೆಕ್ಟರ್ ಕೊಟ್ಟಂತೆ ಕಾಣ್ತಿದೆ. ಅಷ್ಟೇ ಅಲ್ಲ ತಾವೇ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.
ಒಟ್ಟಾರೆ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾ 45 ಭಾರಿ ಕುತೂಹಲ ಮೂಡಿಸಿದೆ. ಸಂಗೀತ ನಿರ್ದೇಶಕರಾಗಿ ಗೆದ್ದಿರುವ ಅರ್ಜುನ್ ಜನ್ಯಾ ಇದೀಗ ಸಿನಿಮಾ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಡಿಸೆಂಬರ್ ಕೊನೆ ವಾರ ಕನ್ನಡ ಚಿತ್ರರಂಗಕ್ಕೆ ಬಹಳ ಲಕ್ಕಿ ಎಂಬ ಮಾತಿದೆ. ಇದೀಗ ಒಂದೇ ದಿನ ಅರ್ಜುನ್ ಜನ್ಯ, ಕಿಚ್ಚ ಸುದೀಪ್ ಮುಖಾಮುಖಿಯಾಗುತ್ತಿದ್ದು, ಡಿಸೆಂಬರ್ 25 ಯಾರಿಗೆ ಅದೃಷ್ಟ ತಂದು ಕೊಡಲಿದೆ ಅನ್ನೋದನ್ನ ಕಾದು ನೋಡ್ಬೇಕು.

ನೋಡಿರಿ

