PAK ಪ್ಲೇಯರ್ಸ್ ರೆಕ್ಕೆ ಪುಕ್ಕ ಕಟ್ – ವಿದೇಶಿ ಲೀಗ್ ಗಳಲ್ಲಿ ಬ್ಯಾನ್ ಬಿಸಿ
ಇಂಡೋ-ಪಾಕ್ ಸಂಭಾವನೆ ಹೇಗಿದೆ?

ಆಟಿಡ್ಯೂಡ್ 100 ಪರ್ಸೆಂಟ್.. ಪರ್ಫಾಮೆನ್ಸ್ 0 ಪರ್ಸೆಂಟ್. ಇದು ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಸೆಂಟ್ ಸಿಚುಯೇಷನ್.. ಅದು ಬಾಯ್ಸ್ ಟೀಂ ಆದ್ರೂ ಅಷ್ಟೇ.. ಗರ್ಲ್ಸ್ ಟೀಂ ಆದ್ರೂ ಅಷ್ಟೇ. ನೋ ಡಿಫರೆನ್ಸ್.. ಅತ್ತ ಮೆನ್ಸ್ ಟೀಂ ಏಷ್ಯಾಕಪ್ನಲ್ಲಿ ಭಾರತದ ವಿರುದ್ಧ ಒಂದೇ ಒಂದು ಮ್ಯಾಚ್ ಗೆಲ್ಲೋಕೆ ಆಗ್ಲಿಲ್ಲ.. ಇತ್ತ ಹುಡ್ಗೀರ್ ಟೀಂ ಐಸಿಸಿ ವುಮೆನ್ಸ್ ವರ್ಲ್ಡ್ ಕಪ್ನಲ್ಲಿ ಗೆಲುವನ್ನೇ ಕಂಡಿಲ್ಲ. ಸೋ ಹಿಂಗೇ ಆದ್ರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಚ್ಚೇ ಹೋಗ್ಬಿಡುತ್ತೇನೋ ಅಂತಾ ಪಿಸಿಬಿ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. ಹೀಗಾಗೇ ಆಟಗಾರರ ಮೇಲೆ ನಿಷೇಧ ಅಸ್ತ್ರ ಹೂಡಿದ್ದಾರೆ. ವಿದೇಶಿ ಲೀಗ್ಗಳಲ್ಲಿ ಆಡಿ ದುಡ್ ಮಾಡಿಕೊಳ್ತಿದ್ದವ್ರಿಗೆ ಕಡಿವಾಣ ಹಾಕಿದ್ದಾರೆ.
ಇದನ್ನೂ ಓದಿ : ಪಾಕಿಸ್ತಾನ ಮತ್ತು ಅಫ್ಘಾನ್ ಯುದ್ಧ ನಿಲ್ಲಿಸುತ್ತೇನೆ ಅಮೆರಿಕ ಅಧ್ಯಕ್ಷ ಟ್ರಂಪ್
ವಿದೇಶಿ ಲೀಗ್ ಗಳಲ್ಲಿ ಪಾಕಿಸ್ತಾನಿ ಆಟಗಾರರಿಗಿಲ್ಲ ಪರ್ಮಿಷನ್!
ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆದ್ಮೇಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಅಲ್ಲೋಲ ಕಲ್ಲೋಲವೇ ಆಗ್ತಿದೆ. ಮೂರಕ್ಕೆ ಮೂರೂ ಪಂದ್ಯಗಳನ್ನೂ ಭಾರತ ಗೆದ್ದುಕೊಳ್ತು ಅನ್ನೋ ಉರಿ ಒಂದ್ಕಡೆಯಾದ್ರೆ ಫೈನಲ್ನಲ್ಲಿ ನಮ್ಮಿಂದ ಟ್ರೋಫಿ ತಗೊಳ್ಳಿಲ್ವಲ್ಲ ಅನ್ನೋ ಶೇಪ್ಔಟ್ ಇನ್ನೊಂದ್ಕಡೆ. ಸೋ ಪಿಸಿಬಿಗೆ ಇಂಥಾ ದುಸ್ಥಿತಿ ಬರೋಕೆ ಕಾರಣವೇ ಆಟಗಾರರ ಕಳಪೆ ಪ್ರದರ್ಶನ. ಹೀಗಾಗಿ ಟೀಂ ಸ್ಟ್ರಾಂಗ್ ಮಾಡ್ಬೇಕು ಅಂತಾ ಪಾಕ್ ಆಟಗಾರರಿಗೆ ವಿದೇಶಿ ಲೀಗ್ಗಳಲ್ಲಿ ಆಡದಂತೆ ನಿಷೇಧ ಹೇರಲಾಗಿದೆ. ಅಂದ್ರೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅನುಮೋದನೆಯೊಂದಿಗೆ, ಲೀಗ್ಗಳು ಮತ್ತು ಇತರ ದೇಶೀಯ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಆಟಗಾರರಿಗೆ ನೀಡಲಾಗುವ ಎಲ್ಲಾ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ಅಂದ್ರೆ ಎನ್ಒಸಿಗಳನ್ನ ತಡೆ ಹಿಡಿದಿದ್ದಾರೆ. ಅಂದ್ರೆ ವಿದೇಶಿ ಲೀಗ್ಗಳು ಮತ್ತು ಪಂದ್ಯಾವಳಿಗಳಿಗೆ ಆಟಗಾರರಿಗೆ ಎಲ್ಲಾ ಎನ್ಒಸಿಗಳನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ.
ಪಿಸಿಬಿಯ ನಿರ್ಧಾರದಿಂದಾಗಿ ಅಮೇರಿಕನ್ ಮತ್ತು ಕೆನಡಿಯನ್ ಲೀಗ್ಗಳಲ್ಲಿ ಆಡ್ತಿದ್ದ ಆಟಗಾರರಿಗೆ ಹೊಡೆತ ಬಿದ್ದಿದೆ. ಯುಎಸ್ನಲ್ಲಿನ ಫ್ರಾಂಚೈಸ್ ಲೀಗ್ಗಳಲ್ಲಿ, ಸೊಹೈಲ್ ತನ್ವೀರ್ (ಅಟ್ಲಾಂಟಾ ಕಿಂಗ್ಸ್), ವಹಾಬ್ ರಿಯಾಜ್ (ಚಿಕಾಗೋ ಕ್ರಿಕೆಟ್ ಕ್ಲಬ್), ಮತ್ತು ರುಮ್ಮನ್ ರಯೀಸ್ (ಲಾಸ್ ಏಂಜಲೀಸ್ ವೇವ್ಸ್) ನಂತಹ ಅನುಭವಿ ಆಟಗಾರರು ಕೂಡ ಹೊಸ ಎನ್ಓಸಿ ಸಿಗೋವರೆಗೂ ಆಡುವುದನ್ನು ನಿಷೇಧಿಸಲಾಯಿತು. ಬಟ್ ಲಾಸ್ಟ್ ಮೂಮೆಂಟ್ನಲ್ಲಿ ನಿವೃತ್ತ ಆಟಗಾರರ ಎನ್ಒಸಿಗೆ ಒಪ್ಪಿಗೆ ನೀಡಿದ್ರೂ ಕೂಡ ಸಕ್ರಿಯ ಆಟಗಾರರ ನಿಷೇಧವನ್ನ ಕಂಟಿನ್ಯೂ ಮಾಡಿದ್ದಾರೆ.
ಬಿಬಿಎಲ್ ಗೆ ಪಾಕಿಸ್ತಾನಿ ಆಟಗಾರರ ಪ್ರವೇಶ ನಿರ್ಬಂಧ?
ಸದ್ಯ ಪಾಕಿಸ್ತಾನಿ ಕ್ರಿಕೆಟಿಗರು ಡಿಸೆಂಬರ್ 14 ರಂದು ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ 2025-26 ಬಿಗ್ ಬ್ಯಾಷ್ ಲೀಗ್ (BBL) ಮೇಲೆ ಕಣ್ಣಿಟ್ಟಿದ್ದಾರೆ. ಬಾಬರ್ ಅಜಮ್ (ಸಿಡ್ನಿ ಸಿಕ್ಸರ್ಸ್), ಶಾಹೀನ್ ಶಾ ಅಫ್ರಿದಿ (ಬ್ರಿಸ್ಬೇನ್ ಹೀಟ್), ಮೊಹಮ್ಮದ್ ರಿಜ್ವಾನ್ (ಮೆಲ್ಬೋರ್ನ್ ರೆನೆಗೇಡ್ಸ್), ಹ್ಯಾರಿಸ್ ರೌಫ್, ಫಹೀಮ್ ಅಶ್ರಫ್ ಮತ್ತು ಶಾದಾಬ್ ಖಾನ್ ಸೇರಿದಂತೆ ಏಳು ಪಾಕಿಸ್ತಾನಿ ತಾರೆಯರನ್ನು ಈಗಾಗಲೇ ಬಿಬಿಎಲ್ಗೆ ಆಯ್ಕೆ ಮಾಡಲಾಗಿತ್ತು. ಆದ್ರೆ ಪಿಸಿಬಿ ಎನ್ಒಸಿಯನ್ನ ತಡೆ ಹಿಡಿದಿರೋದ್ರಿಂದ ಪರ್ಮಿಷನ್ ಸಿಗುತ್ತೋ ಇಲ್ವೋ ಅನ್ನೋ ಕನ್ಫ್ಯೂಷನ್ನಲ್ಲಿದ್ದಾರೆ. ಌಕ್ಚುಲಿ ಪಾಕಿಸ್ತಾನಿ ಕ್ರಿಕೆಟಿಗರಿಗೆ ಅವ್ರ ರಾಷ್ಟ್ರಕ್ಕಿಂತ ವಿದೇಶಿ ಲೀಗ್ಗಳಲ್ಲಿ ಆಡೋದ್ರಿಂದಲೇ ಜಾಸ್ತಿ ಲಾಭ. ಯಾಕಂದ್ರೆ ಮೊದ್ಲೇ ದಿವಾಳಿ ಎದ್ದಿರೋ ಪಾಕಿಸ್ತಾನದಲ್ಲಿ ಆಟಗಾರರಿಗೆ ಕೊಡೋ ಸಂಭಾವನೆಯೇ ಚಿಲ್ರೆ ಕಾಸು. ಸೋ ಬೇರೆ ಲೀಗ್ಗಳಲ್ಲಿ ಆಡಿಯಾದ್ರೂ ದುಡ್ ಮಾಡ್ಕೊಳ್ಳೋಣ ಅಂದ್ರೆ ಅದಕ್ಕೂ ಕಲ್ಲು ಹಾಕ್ತಿದ್ದಾರೆ.
ಪಾಕ್ ಆಟಗಾರರ ಸಂಭಾವನೆ!
ವರ್ಗ ವೇತನ (INR) ಆಟಗಾರರ ಸಂಖ್ಯೆ
ಎ 13.14 ಲಕ್ಷ 0
ಬಿ 8.76 ಲಕ್ಷ 10
ಸಿ 4.38 ಲಕ್ಷ 10
ಡಿ 2.19 ಲಕ್ಷ 10
ಪಾಕಿಸ್ತಾನಿ ರಾಷ್ಟ್ರೀಯ ತಂಡದ ಆಟಗಾರರು ಪಡೆಯೋ ವೇತನ 13 ಲಕ್ಷ. ಅದೇ ನಮ್ಮ ಐಪಿಎಲ್ನಲ್ಲಿ ಬೇಸಿಕ್ ಪ್ರೈಸೇ 50 ಲಕ್ಷ. ಇನ್ನು ಟೀಂ ಇಂಡಿಯಾ ಪರ ಆಡೋ ಆಟಗಾರರು ಕೋಟಿಗಳ ಲೆಕ್ಕದಲ್ಲಿ ವೇತನ ಪಡೀತಾರೆ. ನಮ್ಮಲ್ಲಿ ಎ+, ಎ, ಬಿ, ಸಿ ಅಂತಾ ನಾಲ್ಕು ಕೆಟಗರಿ ಇದೆ. ಸೋ ಯಾವೆಲ್ಲಾ ಪ್ಲೇಯರ್ಸ್ ಯಾವ ವರ್ಗದಲ್ಲಿದ್ದಾರೆ. ಅವ್ರ ವೇತನ ಎಷ್ಟಿದೆ ಅದನ್ನೂ ಕೂಡ ನೋಡೋಣ.
ಟೀಂ ಇಂಡಿಯಾ ಸಂಭಾವನೆ!
ವರ್ಗ ವೇತನ (INR) ಆಟಗಾರರ ಸಂಖ್ಯೆ
ಎ+ 7 ಕೋಟಿ 4
ಎ 5 ಕೋಟಿ 6
ಬಿ 3 ಕೋಟಿ 5
ಸಿ 1 ಕೋಟಿ 19
ಇದೆಲ್ಲ ಬಿಸಿಸಿಐನಿಂದ ವಾರ್ಷಿಕವಾಗಿ ಸಿಗೋ ವೇತನ. ಇಷ್ಟೇ ಅಲ್ದೇ ಟೆಸ್ಟ್, ಟಿ-20 ಹಾಗೇ ಒಡಿಐ ಮಾದರಿಯ ಪಂದ್ಯಗಳಲ್ಲಿ ಪತ್ಯೇಕವಾಗಿ ಸಂಭಾವನೆ ಕೂಡ ಸಿಗುತ್ತೆ. ಅದೆಲ್ಲಕ್ಕಿಂತ ಹೆಚ್ಚಾಗಿ ಐಪಿಎಲ್ನಲ್ಲೇ ಜಸ್ಟ್ ಮೂರೇ ತಿಂಗಳಿಗೆ ಕೋಟಿ ಕೋಟಿ ಬಾಚಿಕೊಳ್ತಾರೆ. ಬಟ್ ಪಾಕಿಸ್ತಾನಿಯರ ಕಥೆ ಹಿಂಗಲ್ಲ. ಪಿಸಿಬಿಯಿಂದ ಸಿಗೋದೇ ಅಲ್ಪಸ್ಪಲ್ಪ ಸಂಭಾವನೆ. ಈಗ ವಿದೇಶಿ ಲೀಗ್ಗಳಿಗೂ ಕಲ್ಲಾಕಿದ್ದಾರೆ. ಎನ್ಒಸಿ ಸಿಗದಿದ್ರೆ ಮುಂದೆ ಹೇಗಪ್ಪಾ ಅಂತಾ ಅಲ್ಲಿನ ಆಟಗಾರರು ತಲೆ ಕೆಡಿಸಿಕೊಂಡಿದ್ದಾರೆ. ಆದ್ರೆ ಪಿಸಿಬಿ ಮಾತ್ರ ಹಿಂಗಾದ್ರೂ ಚೆನ್ನಾಗಿ ಆಡ್ಲಿ ಅಂತಾ ನಿಷೇಧದ ಟ್ರಿಕ್ಸ್ ಬಳಸಿದೆ.

ನೋಡಿರಿ

