ಟಾಸ್ ಸೋಲು.. ಮಳೆಯೇ ವಿಲನ್ – ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯ ಸೋಲು!
ಮ್ಯಾಚ್ ಗೆದ್ದ ಆಸೀಸ್ ಗೆ ಅದೃಷ್ಟ

ಟಾಸ್ ಸೋಲು.. ಮಳೆಯೇ ವಿಲನ್ – ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯ ಸೋಲು!ಮ್ಯಾಚ್ ಗೆದ್ದ ಆಸೀಸ್ ಗೆ ಅದೃಷ್ಟ

ಒಂದ್ಕಡೆ ಟಾಸ್ ಸೋಲು.. ಇನ್ನೊಂದ್ಕಡೆ ಮಳೆ ಕಣ್ಣಾಮುಚ್ಚಾಲೆ.. ಮತ್ತೊಂದ್ಕಡೆ ಬ್ಯಾಕ್ ಟು ಬ್ಯಾಕ್ ವಿಕೆಟ್.. ಬ್ಯಾಟಿಂಗ್​ನಲ್ಲೂ ಸದ್ದು ಮಾಡ್ಲಿಲ್ಲ. ಬೌಲಿಂಗ್​ನಲ್ಲೂ ಠಕ್ಕರ್ ಕೊಡ್ಲಿಲ್ಲ. ಟೋಟಲಿ ಆಲ್​ರೌಂಡ್ ಫೇಲ್ಯೂರ್​.. ಪರ್ತ್​ನಲ್ಲಿ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದ ಭಾರತ ಫೈಟೇ ಕೊಡದೆ ಸೋಲೊಪ್ಪಿಕೊಂಡಿದೆ. ಮೂರು ದಿನಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಡ್ರೇಲಿಯಾ ತಂಡ ಫೀಲ್ಡಿಂಗ್ ಚೂಸ್ ಮಾಡಿಕೊಳ್ತು. ಈ ಪಂದ್ಯಕ್ಕೆ ಐವರು ಬ್ಯಾಟರ್ಸ್ ಅಂದ್ರೆ ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್​ರನ್ನ ಕಣಕ್ಕಿಳಿಸಿತ್ತು. ಹಾಗೇ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ ಮೂವರು ಆಲ್ ರೌಂಡರ್ಸ್ ಇದ್ರು. ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಸೇರಿ ಮೂವರು ಸ್ಪೆಷಲಿಸ್ಟ್ ವೇಗಿಗಳಿಗೆ ಚಾನ್ಸ್ ನೀಡಿದ್ರು. ಒಡಿದ ಮಾದರಿಗೆ ಕ್ಯಾಪ್ಟನ್ ಆಗಿ ಫಸ್ಟ್ ಮ್ಯಾಚಲ್ಲೇ ಶುಭ್​ಮನ್ ಗಿಲ್ ಟಾಸ್ ಸೋತ್ರು. ಹೀಗಾಗಿ ಬ್ಯಾಟಿಂಗ್​ಗಿಳಿದ ಭಾರತಕ್ಕೆ ಮಳೆಯೇ ದೊಡ್ಡ ವಿಲನ್ ಆಗಿತ್ತು.

ಇದನ್ನೂ ಓದಿ : RCB ಫ್ರಾಂಚೈಸಿ ಸೇಲ್ ಸೇಲ್ – 17,587 ಕೋಟಿ ರೂ.. 6 ಕಂಪನಿ ರೇಸ್

ಮಳೆ ಕಾಟದ ನಡುವೆ ಬ್ಯಾಕ್ ಟು ಬ್ಯಾಕ್ ವಿಕೆಟ್!

ಇವತ್ತಿನ ಮ್ಯಾಚಲ್ಲಿ ಎಲ್ಲರ ಕಣ್ಣಿದ್ದಿದ್ದೇ ಕೊಹ್ಲಿ-ರೋಹಿತ್ ಮೇಲೆ. ಆದ್ರೆ ರೋಹಿತ್ 8 ರನ್ ಗಳಿಸಿದ್ದಾಗ ಜೋಶ್ ಹೇಜಲ್​ವುಡ್ ಬೌಲಿಂಗ್​ನಲ್ಲಿ ಕ್ಯಾಚ್ ಔಟ್ ಆಗ್ತಾರೆ. 13 ರನ್ಸ್​ಗೆ ಫಸ್ಟ್ ವಿಕೆಟ್ ಢಮಾರ್. ಌಂಡ್ ನೆಕ್ಸ್​ಟ್ ಕೊಹ್ಲಿ ನಂಬರ್ 3ನಲ್ಲಿ ಬರ್ತಾರೆ. ಖಾತೆ ತೆರೆಯದೇ ಮಿಚೆಲ್ ಸ್ಟಾರ್ಕ್ ಬೌಲಿಂಗ್​ನಲ್ಲಿ ಡಕ್​ಔಟ್. 21 ರನ್​ಗಳಿಗೆ ಸೆಕೆಂಡ್ ವಿಕೆಟ್. ಌಂಡ್ ದೆನ್ 10 ರನ್ ಗಳಿಸಿದ್ದ ಶುಭ್​ಮನ್ ಗಿಲ್ ನಾಥನ್ ಎಲ್ಲಿಸ್ ಅವ್ರ ಫಸ್ಟ್ ಬಾಲ್​ನಲ್ಲೇ ವಿಕೆಟ್. ಭಾರತದ ಸ್ಕೋರ್ 25 ರನ್ಸ್ ಇದ್ದಾಗ 3 ವಿಕೆಟ್. ಆ ನಂತ್ರ ಶ್ರೇಯಸ್ ಅಯ್ಯರ್ 11 ರನ್​ಗಳಿಗೆ ಔಟ್. ಇನ್ನು ರಾಹುಲ್ ಮತ್ತು ಅಕ್ಷರ್ ಪಟೇಲ್ ನಡುವೆ ಬೆಟರ್ ಪರ್ಫಾಮೆನ್ಸ್ ಬಂತು. ಆದ್ರೆ ಅಕ್ಷರ್ 31 ರನ್ ಗಳಿಸಿ ಔಟಾದ್ರೆ ರಾಹುಲ್ 38 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಸುಂದರ್ 10 ರನ್, ರೆಡ್ಡಿ 19 ರನ್ ಕಲೆ ಹಾಕಿದ್ರು. ಅದ್ರಲ್ಲೂ ಲಾಸ್ಟ್ ಓವರ್​ನಲ್ಲಿ ರೆಡ್ಡಿ 2 ಸಿಕ್ಸರ್ ಸಿಡಿಸಿದ್ದಕ್ಕೆ ಭಾರತ 26 ಓವರ್​ಗಳಲ್ಲಿ 136 ರನ್ ಕಲೆ ಹಾಕೋಕೆ ಸಾಧ್ಯವಾಯ್ತು.

3 ಸಲ ಮಳೆಯಿಂದ ಪಂದ್ಯ ಸ್ಥಗಿತ.. 26 ಓವರ್​ಗಳಿಗೆ ಸೀಮಿತ!

ಭಾರತದ ಬ್ಯಾಟಿಂಗ್ ವೇಳೆ ಮಳೆ ಕಣ್ಣಾಮುಚ್ಚಾಲೆ ಆಡಿದಂತಿತ್ತು. ಮೂರು ಸಲ ಮಳೆಯಿಂದ ಪಂದ್ಯವನ್ನ ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಮೊದ್ಲಿಗೆ ಮಳೆ ನಿಂತಾಗ 35 ಓವರ್​ಗಳಿಗೆ ಸೀಮಿತ ಮಾಡಿದ್ರು. ಎರಡನೇ ಸಲ ಮಳೆ ಬಂದಾಗ 32 ಓವರ್​ಗಳಿಗೆ ಸೀಮಿತ ಮಾಡಿದ್ರು. ಌಂಡ್ ಮೂರನೇ ಸಲ ಮಳೆ ಬಂದಾಗ 26 ಓವರ್​ಗಳಿಗೆ ಸೀಮಿತ ಮಾಡಿದ್ರು. ಈ ಮಳೆ ಕಾರಣದಿಂದಲೇ ಸ್ಲೋವಾಗಿ ರನ್ಸ್ ಕಲೆ ಹಾಕ್ತಿದ್ದ ಭಾರತಕ್ಕೆ ಲಾಸ್ಟ್ ಮೂಮೆಂಟ್​ನಲ್ಲಿ ಬಿಗ್ ಇನ್ನಿಂಗ್ಸ್ ಗಳಿಸೋಕೆ ಸಾಧ್ಯವಾಗ್ಲಿಲ್ಲ. ಯಾಕಂದ್ರೆ ಪಂದ್ಯವನ್ನ 26 ಓವರ್​ಗಳಿಗೆ ಸೀಮಿತ ಮಾಡೋ ಅಷ್ಟ್ರಲ್ಲಿ 16.4 ಓವರ್ ಮುಗಿದಾಗಿತ್ತು. ಒಂದ್ಕಡೆ ಭಾರತ ಹೀಗೆ ಶಾಕ್ ಮೇಲೆ ಶಾಕ್ ಎದುರಿಸಿದ್ರೆ ಅತ್ತ ಆಸ್ಟ್ರೇಲಿಯಾ ಮಾತ್ರ ಪ್ರತೀ ಹೆಜ್ಜೆಯಲ್ಲೂ ಅಡ್ವಾಂಟೇಜ್ ಗಳಿಸ್ತಾನೇ ಬಂತು.

137 ರನ್ ಗಳ ಟಾರ್ಗೆಟ್ ಚೇಸ್ ಮಾಡಿದ ಆಸ್ಟ್ರೇಲಿಯಾ!

ಟೀಂ ಇಂಡಿಯಾವನ್ನ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದ್ದ ಆಸ್ಟ್ರೇಲಿಯಾಗೆ 137 ರನ್​ಗಳು ಟಾರ್ಗೆಟ್ ಅನ್ನಿಸ್ಲೇ ಇಲ್ಲ. ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್ ಇನ್ನಿಂಗ್ಸ್ ಆರಂಭಿಸಿದ್ರು. ಹೆಡ್ ಎರಡನೇ ಓವರ್​ನಲ್ಲಿ 8 ರನ್​ಗೆ ವಿಕೆಟ್ ಒಪ್ಪಿಸಿದ್ರು. ಹಾಗೇ ಮ್ಯಾಟ್ ಶಾರ್ಟ್ 8 ರನ್​ಗೆ ಆಟ ಮುಗಿಸಿದ್ರು. ಆದ್ರೆ ಮಿಚೆಲ್ ಮಾರ್ಷ್ ಮತ್ತು ಜಾನ್ ಪಿಲಿಪ್ ಜೋಡಿ ಒಳ್ಳೆ ಜೊತೆಯಾಟ ನೀಡಿತು. ಪಿಲಿಪ್ 37 ರನ್ಸ್ ಕಲೆ ಹಾಕಿ ಔಟ್ ಆದ್ರು. ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಏನಪ್ಪಾ ಅಂದ್ರೆ ಭಾರತ 136 ರನ್ಸ್ ಕಲೆ ಹಾಕಿದ್ರೂ DLS ಕಾರಣದಿಂದಾಗಿ ಆಸ್ಟ್ರೇಲಿಯಾಕ್ಕೆ 5 ರನ್​ ಕಡಿತಗೊಳಿಸಿ 131 ರನ್‌ಗಳ ಟಾರ್ಗೆಟ್ ನೀಡಲಾಯ್ತು. ಅಂತಿಮವಾಗಿ ಕಾಂಗರೂ ಪಡೆ 21.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 46 ಗಳಿಸಿ ಮಿಚೆಲ್ ಮಾರ್ಷ್ ಮತ್ತು 21 ರನ್ ಗಳಿಸಿದ್ದ ಮ್ಯಾಟ್ ರೆನ್ಷಾ ಅಜೇಯರಾಗಿ ಉಳಿದ್ರು,

ಭಾರತದ ಸೋಲಿಗೆ ಕಾರಣಗಳು!

ನಂಬರ್ 1 : ಟಾಸ್ ಸೋಲು

ನಂಬರ್ 2 : ಮಳೆಯ ಕಣ್ಣಾಮುಚ್ಚಾಲೆ

ನಂಬರ್ 3 : ಪಿಚ್ ತೇವಾಂಶ

ನಂಬರ್ 4 : ಭಾರತದ ಬ್ಯಾಟಿಂಗ್ ಫೇಲ್

ನಂಬರ್ 5 : ಆಸೀಸ್ ಬೌಲಿಂಗ್ ಸ್ಟ್ರಾಂಗ್

ನಂಬರ್ 6 : ಆಸ್ಟ್ರೇಲಿಯಾ ಫೀಲ್ಡ್ ಸೆಟ್ಟಿಂಗ್

ನಂಬರ್ 7 : 26 ಓವರ್ ಗೆ ಸೀಮಿತ

ನಂಬರ್ 8 : ಆಸೀಸ್ ಗೆ ಚೇಸಿಂಗ್ ಪ್ಲಸ್

ನಂಬರ್ 9 : ಹೋಂ ಪಿಚ್ ಅಡ್ವಾಂಟೇಜ್

ನಂಬರ್ 10 : 137 ರನ್ ಗಳ ಈಸಿ ಟಾರ್ಗೆಟ್

Shantha Kumari