ಸಫಾರಿ ಜೀಪ್ ಬೆನ್ನಟ್ಟಿದ ಘೇಂಡಾಮೃಗ – ಪ್ರವಾಸಿಗರು ಪಾರಾಗಿದ್ದೇ ರೋಚಕ

ಸಫಾರಿ ಜೀಪ್ ಬೆನ್ನಟ್ಟಿದ ಘೇಂಡಾಮೃಗ – ಪ್ರವಾಸಿಗರು ಪಾರಾಗಿದ್ದೇ ರೋಚಕ

ಭಾರತದಲ್ಲಿ ಸಫಾರಿ ಪ್ರಿಯರಿಗೆ ಕಡಿಮೆಯಿಲ್ಲ. ರಜಾ ಅವಧಿಯಲ್ಲಿ ಅನೇಕರು ಸಫಾರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಅಭಯಾರಣ್ಯದೊಳಗಿನ ಸಫಾರಿ ವೇಳೆ ಕೆಲವೊಮ್ಮೆ ಹುಲಿ, ಸಿಂಹ ಆನೆಗಳು ಪ್ರವಾಸಿಗರ ವಾಹನದ ಮುಂದೆ ದಿಢೀರನೆ ಪ್ರತ್ಯಕ್ಷವಾಗುವುದುಂಟು. ಅಸ್ಸಾಮಿನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿನ ವಿಡಿಯೋವೊಂದು ಲಭ್ಯವಾಗಿದ್ದು, ಘೇಂಡಾಮೃಗ ಅಪಾಯಕಾರಿ ರೀತಿಯಲ್ಲಿ ಪ್ರವಾಸಿಗರ ವಾಹನವನ್ನು ಬೆನ್ನಟ್ಟಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ: ನೋಡಲು ಹೂವಿನಂತಿದ್ರೂ ಇದು ಹೂವಲ್ಲ – ಕೀಟಗಳ ಲೋಕವೇ ಅದ್ಬುತ

ವೈರಲ್ ಆದ ವಿಡಿಯೋದಲ್ಲಿ, ಪ್ರವಾಸಿಗರು ಸಫಾರಿ ವಾಹನದಲ್ಲಿ ತೆರಳುತ್ತಿದ್ದ ವೇಳೆ ಘೇಂಡಾಮೃಗವೊಂದು ಪ್ರತ್ಯಕ್ಷವಾಗಿದೆ. ಘೇಂಡಾಮೃಗ ಸಫಾರಿ ವಾಹನವನ್ನು ಬೆನ್ನಟ್ಟಲು ಆರಂಭಿಸಿದೆ. ಅಪಾಯದ ಸೂಚನೆ ಅರಿತ ಜೀಪಿನ ಚಾಲಕ ವಾಹನವನ್ನು ವೇಗವಾಗಿ ಮುಂದಕ್ಕೆ ಚಲಾಯಿಸಿದ್ದಾನೆ. ವಾಹನದಲ್ಲಿದ್ದ ಪ್ರವಾಸಿಗರು ಆತಂಕದಿಂದ ‘ಓಡು’ ಅಂತ ಅರಚುವುದನ್ನು ಕೇಳಿಸಿಕೊಳ್ಳಬಹುದು. ಕೆಲ ಕಿ.ಮೀ.ಗಳವರೆಗೆ ಅವರ ಹಿಂದೆ ಓಡಿ ದಣಿಯುವ ಘೇಂಡಾಮೃಗ ನಂತರ ಪೊದೆಗಳಲ್ಲಿ ಮಾಯವಾಗಿದೆ! ಅದೃಷ್ಟವಶಾತ್ ವಾಹನಗಳಲ್ಲಿದ್ದ ಯಾವುದೇ ಪ್ರವಾಸಿಗರಿಗೆ ಗಾಯವಾಗಿಲ್ಲ.

ಇದೇ ರೀತಿ, ಅಸ್ಸಾಮಿನ ಮಾನಸ್ ರಾಷ್ಟ್ರೀಯ ಉದ್ಯಾವನದಲ್ಲೂ ಘೇಂಡಾಮೃಗವೊಂದು ಸಫಾರಿ ವಾಹನವೊಂದರ ಹಿಂದೆ ಓಡಿದ ಘಟನೆ ಸಂಭವಿಸಿತ್ತು. ಸಫಾರಿ ಜೀಪ್ ಅರಣ್ಯ ಪ್ರದೇಶದಲ್ಲಿ ಚಲಿಸುತ್ತಿದ್ದಾಗ, ಇದ್ದಕ್ಕಿದ್ದಂತೆ ಪೊದೆಯೊಂದರಿಂದ ಪ್ರತ್ಯಕ್ಷವಾದ ಘೇಂಡಾಮೃಗ ವಾಹನವನ್ನು ಬೆನ್ನಟ್ಟಿತ್ತು. ಅಪಾಯದ ಸೂಚನೆ ಅರಿತ ಜೀಪಿನ ಚಾಲಕ ವೇಗವನನ್ನು ಹೆಚ್ಚಿಸಿ ಅದರಿಂದ ಪಾರಾಗಿದ್ದ.

suddiyaana