ದೊಡ್ಮನೆಗೆ 3 ವೈಲ್ಡ್ ಕಾರ್ಡ್ ಎಂಟ್ರಿ! – ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದು ಯಾರ್ಯಾರು?

ಬಿಗ್ ಬಾಸ್ ಕನ್ನಡ ಸೀಸನ್ 12 ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ತಿದೆ. ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ದಿನವೇ ಕಿಚ್ಚ ಸುದೀಪ್ ಇಷ್ಟು ವರ್ಷ ಒಂದು ಲೆಕ್ಕ ಈ ಬಾರಿ ಬೇರೆಯೇ ಲೆಕ್ಕ ಎಂದಿದ್ದರು. ಈ ಬಾರಿಯ ಸೀಸನ್ ಆರಂಭದಲ್ಲೇ ಹೊಸ ಟ್ವಿಸ್ಟ್ ನೀಡಲಾಗಿದೆ. ಇದೀಗ ಮೂರನೇ ವಾರವೇ ಮೊದಲ ಗ್ರ್ಯಾಂಡ್ ಫಿನಾಲೆ ನಡೆದಿದೆ. ಕ್ರಾಕ್ರೋಚ್ ಸುಧಿ ಮೊದಲ ಫಿನಾಲೆಯಲ್ಲಿ ಗೆದ್ದಿದ್ದಾರೆ. ಅಷ್ಟೇ ಅಲ್ಲ ಈ ವಾರ ಮೂವರು ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡಿದ್ದು, ಇದೀಗ ದೊಡ್ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ.
ಇದನ್ನೂ ಓದಿ: ಕಿಚ್ಚ ಬೈದ್ರೂ ಅಶ್ವಿನಿ, ಜಾಹ್ನವಿಗೆ ನಾಚಿಕೆ ಇಲ್ವಾ? – ಕಿಚ್ಚನಿಗೆ ಬಿಗ್ ಬಾಸ್ ಸರ್‌ಪ್ರೈಸ್!
ಈ ಸೀಸನ್ ನಲ್ಲಿ ಮಾಸ್ ಎಲಿಮಿನೇಶನ್ ಇರಲಿದೆ ಎಂದು ಮೊದಲೇ ಕಿಚ್ಚ ಸುದೀಪ್ ಸುಳಿವು ನೀಡಿದ್ದರು. ಅದ್ರಂತೆ 19 ಮಂದಿ ಸ್ಪರ್ಧಿಗಳಲ್ಲಿ ಮೂರೇ ವಾರಕ್ಕೆ 5 ಮಂದಿ ಸ್ಪರ್ಧಿಗಳು ಔಟ್ ಆಗಿದ್ದಾರೆ. ಮೊದಲ ವಾರ ಆರ್‌ಜೆ ಅಮಿತ್, ಕರಿಬಸಪ್ಪ ಅವರು ಎಲಿಮಿನೇಟ್ ಆಗಿದ್ದರು. ಎರಡನೇ ವಾರ ಯಾರೂ ಕೂಡ ಎಲಿಮಿನೇಟ್ ಆಗಿರಲಿಲ್ಲ. ಈಗ ಮೂರನೇ ವಾರದಲ್ಲಿ ಮಿಡ್ ವೀಕ್ ಎಲಿಮಿನೇಶನ್ ನಡೆದಿದ್ದು, ಸತೀಶ್ ಕ್ಯಾಡಬಮ್ಸ್ ಅವರು ಎಲಿಮಿನೇಟ್ ಆಗಿದ್ದರು. ಇನ್ನು ಶನಿವಾರ ಮಂಜುಭಾಷಿಣಿ, ಅಶ್ವಿನಿ ಎಸ್ ಎಸ್ ಎಲಿಮಿನೇಟ್ ಆಗಿದ್ದಾರೆ. ಆಗಿದೆ. ಸದ್ಯ ದೊಡ್ಮನೆಯಲ್ಲಿ 14 ಜನ ಮಾತ್ರ ಇದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದು ಪ್ರೋಮೊ ರಿಲೀಸ್ ಆಗಿದೆ. ಆದ್ರೆ ಅವರ ಮುಖವನ್ನ ರಿವೀಲ್ ಮಾಡಲಾಗಿಲ್ಲ.
ಕಲರ್ಸ್ ಕನ್ನಡದ ರಿಲೀಸ್ ಮಾಡಿರೋ ಪ್ರೊಮೋದಲ್ಲಿ ಸಾಕಷ್ಟು ಟ್ವಿಸ್ಟ್ ಕೊಡಲಾಗಿದೆ. ಇವರನ್ನು ನೋಡಿದರೆ ವೈಲ್ಡ್ ಕಾರ್ಡ್ ಎಂಟ್ರಿ ಇವರೇನಾ, ಅವರೇನಾ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಯಾರ ಮುಖವನ್ನೂ ತೋರಿಸದೇ ಸೀಕ್ರೇಟ್ ಇಡಲಾಗಿದೆ.
ದೊಡ್ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಕಾಂತಾರ ಚಾಪ್ಟರ್ 1, ಕ್ರಾಂತಿ, ಕಾಟೇರ ಸಿನಿಮಾ ನಟ ರಾಘವೇಂದ್ರ ಎಸ್ ಹೊಂಡದಕೇರಿ ಅವರು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎನ್ನಲಾಗ್ತಿದೆ. ಇನ್ನು ಎರಡನೇ ವೈಲ್ಡ್ ಕಾರ್ಡ್ ಸ್ಪರ್ಧಿ ಯಾರು ಅನ್ನೋದು ಕೂಡ ರಿವೀಲ್ ಆಗಿದ್ದು, ಕನ್ನಡದ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ರಿಷಾ ಗೌಡ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕೊಡಗು ಮೂಲದ ರಿಷಾ ಅವರು ಕ್ರೇಜಿ ಕೀರ್ತಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಧರ್ಮಕೀರ್ತಿರಾಜ್ ಅವರ ಬೆಂಗಳೂರು ಇನ್, ಪ್ರಮೋದ್ ಶೆಟ್ಟಿ ಅವರ ಪರಾಕ್ರಮಿ ಸಿನಿಮಾದಲ್ಲೂ ಅವರು ನಟಿಸಿದ್ದಾರೆ.
ಮೂರನೇ ವೈಲ್ಡ್ ಕಾರ್ಡ್ ಅಭ್ಯರ್ಥಿಯಾಗಿ ಕೆನಡಾದಲ್ಲಿರುವ ಫಿಟ್ನೆಸ್ ಮಾಡೆಲ್, ಬಾಡಿ ಬಿಲ್ಡರ್ ಸೂರಜ್ ಸಿಂಗ್ ಅವರು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಫಿಟ್ ಆಂಡ್ ಫೈನ್ ಆಗಿರುವ ಸೂರಜ್ ಸಿಂಗ್ ಅವರ ವಿಶೇಷತೆ ಏನು ಅನ್ನೋದು ಸಂಜೆ ತಿಳಿದು ಬರಲಿದೆ.

ನೋಡಿರಿ

