ಶಿವಾಜಿ To ಜೈ ಹನುಮಾನ್.. 6 ಸಿನಿಮಾ.. ರಿಷಬ್ ಶೆಟ್ಟಿ ಲಕ್ ಚೇಂಜ್! – ಕಾಂತಾರ ಚಾಪ್ಟರ್ 3 ಮುಹೂರ್ತ ಫಿಕ್ಸ್?

ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ.. ಸದ್ಯ ಮುಟ್ಟಿದ್ದೆಲ್ಲಾ ಚಿನ್ನ ಅನ್ನೋತರ ಆಗಿದೆ. ಕಾಂತಾರ ಸಿನಿಮಾ ಸಕ್ಸಸ್ ಬೆನ್ನಲ್ಲೇ, ಕಾಂತಾರ ಚಾಪ್ಟರ್ 1 ಮಾಡಿದ್ರು.. ಈ ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತಿದೆ. ಕಳೆದ ಮೂರು ವರ್ಷಗಳಿಂದ ಕಾಂತಾರ ಚಾಪ್ಟರ್1 ಗಾಗಿ ಎಲ್ಲಾ ಪ್ರಾಜೆಕ್ಟ್‌ಗಳನ್ನ ಹೋಲ್ಡ್‌ನಲ್ಲಿಟ್ಟಿದ್ದ ರಿಷಭ್ ಈಗ ಬಿಗ್ ಸಕ್ಸಸ್‌ನ ಖುಷಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಕಾಂತಾರ ಚಾಪ್ಟರ್ 3 ಕೂಡ ಬರಲಿದೆ ಅನ್ನೋದನ್ನ ರಿಷಭ್ ಶೆಟ್ಟಿ ಹೇಳಿದ್ದಾರೆ.. ಅ ಈ ಬೆನ್ನಲ್ಲೇ ಶೆಟ್ರ ಮುಂದಿನ ಫಿಲಂ ಯಾವುದು? ಕಾಂತಾರ ಸಿನಿಮಾದ ಬಳಿಕ ಯಾವೆಲ್ಲಾ ಸಿನಿಮಾಗಳು ರಿಷಭ್ ಕೈಯಲ್ಲಿದೆ ಅನ್ನೋ ಕ್ಯೂರಿಯಾಸಿಟಿ ಫ್ಯಾನ್ಸ್‌ಗಿದೆ. ಅಂದ್ಹಾಗೆ ರಿಷಭ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ.. ಒಂದಾದ ಮೇಲೊಂದು ಸಿನಿಮಾ ತೆರೆಗೆ ಬರಲಿದೆ.
ಇದನ್ನೂ ಓದಿ: ಕಾಶಿ ವಿಶ್ವನಾಥನ ದರ್ಶನ ಪಡೆದ ಕಾಂತಾರ ಶಿವ – ಕಾಶಿ ಯಾತ್ರೆ ಕೈಗೊಂಡ ರಿಷಬ್ ಶೆಟ್ಟಿ!
ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಮಟ್ಟದ ಸ್ಟಾರ್ ಡೈರೆಕ್ಟರ್ ಕಮ್ ಆಕ್ಟರ್. ಕಳೆದ ಒಂಬತ್ತು ವರ್ಷಗಳ ಹಿಂದೆ ಕಾಡಿಬೇಡಿ ಶೋ ಪಡೆಯುವಂತ ಸ್ಥಿತಿಯಲ್ಲಿದ್ದ ರಿಷಬ್ ಕಾಂತಾರ ಸರಣಿಯ ಸಿನಿಮಾಗಳನ್ನು ಮಾಡಿ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತಹ ಫಿಲ್ಮ್ ಮೇಕರ್ ಆಗಿದ್ದಾರೆ. ಇದೀಗ ಶೆಟ್ರು ಕಾಂತಾರ ಸಕ್ಸಸ್ ನ ಖುಷಿಯಲ್ಲಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಬಾಚಿಕೊಂಡಿದೆ ರಿಷಬ್ ಸಿನಿಮಾ. ಕಾಂತಾರ ಚಾಪ್ಟರ್ 1 ಸಕ್ಸಸ್ ಬೆನ್ನಲ್ಲೇ ರಿಷಭ್ ಶೆಟ್ಟಿ ಕೈಯಲ್ಲಿ ಸಾಲು ಸಾಲು ಆಫರ್‌ಗಳಿವೆ.. ಮತ್ತೊಂದ್ಕಡೆ ರಿಷಬ್ ಶೆಟ್ಟಿ ಬಿಗ್ ಬಜೆಟ್ ಸಿನಿಮಾಗಳು ಸೆಟ್ಟೇರುತ್ತಿದೆ. ಈ ಪೈಕಿ ಎರಡು ಸಿನಿಮಾ ದೇಶದ ಕುತೂಹಲ ಕೆರಳಿಸಿದೆ.
ಸಂದೀಪ್ ಸಿಂಗ್ ನಿರ್ದೇಶನದ ಗ್ ಬಜೆಟ್ ಹಿಂದಿ ಸಿನಿಮಾ ಛತ್ರಪತಿ ಶಿವಾಜಿ ಮಹಾರಾಜ್.. ಛತ್ರಪತಿ ಶಿವಾಜಿ ಮಹಾರಾಜರ ಜೀವನವನ್ನು ಆಧರಿಸಿದ ಚಿತ್ರವಾಗಿದ್ದು, ಇದ್ರಲ್ಲಿ ರಿಷಭ್ ಶೆಟ್ಟಿ ನಾಯಕನಾಗಿ ನಟಿಸಲಿದ್ದಾರೆ. ಈ ಚಿತ್ರದ ಪೋಸ್ಟರ್ ಈಗಾಗಲೇ ರಿಲೀಸ್ ಆಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಈ ಸಿನಿಮಾ ಶೂಟಿಂಗ್ 2026ರಲ್ಲಿ ಆರಂಭಗೊಳ್ಳುತ್ತಿದೆ. ಚಿತ್ರದ ಸ್ಕ್ರಿಪ್ಟ್ ಸೇರಿದಂತೆ ಇತರ ಕೆಲಸಗಳು ಬಹುತೇಕ ಪೂರ್ಣಗೊಂಡಿದೆ. ಈ ಸಿನಿಮಾ ಕೂಡ ರಿಷಭ್‌ಗೆ ಸಕ್ಸಸ್ ತಂದುಕೊಡುತ್ತಾ ಅನ್ನೋ ಕ್ಯೂರಿಯಾಸಿಟಿ ಮೂಡಿಸಿದೆ.
ಇನ್ನು ರಿಷಬ್ ಶೆಟ್ಟಿ ಅವರ ಇನ್ನೊಂದು ಸಿನಿಮಾ ಅಂದ್ರೆ ಅದು ಜೈ ಹನುಮಾನ್.. ಪ್ರಶಾಂತ್ ವರ್ಮಾ ನಿರ್ದೇಶನದ ಜೈ ಹನುಮಾನ್ ಸಿನಿಮಾವನ್ನ ರಿಷಬ್ ಶೆಟ್ಟಿ ಒಪ್ಪಿಕೊಂಡು ತುಂಬಾ ಟೈಮ್ ಆಗಿತ್ತು.. ಆದ್ರೆ ಕಾಂತಾರ ಚಾಪ್ಟರ್ 1 ಸಿನಿಮಾ ಕಾರಣದಿಂದಾಗಿ ಈ ಸಿನಿಮಾದ ಶೂಟಿಂಗ್ ಆರಂಭಗೊಂಡಿರಲಿಲ್ಲ. ಈಗಾಗಲೇ ಸಿನಿಮಾದ ಕೆಲಸಗಳು ನಡೆಯುತ್ತಿದ್ದು, ಚಿತ್ರದ ಪೋಸ್ಟರ್ ಭಾರಿ ಸದ್ದು ಮಾಡುತ್ತಿದೆ. ಡಿಸೆಂಬರ್ ನಿಂದ ಈ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.
ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡ ಬೆಲ್ ಬಾಟಂ ಸಿನಿಮಾದ ಎರಡನೇ ಭಾಗ ತೆರೆಗೆ ಬರುತ್ತಿದೆ. ಈ ಕುರಿತು ತಯಾರಿಗಳು ನಡೆಯುತ್ತಿದೆ. ಜಯತೀರ್ಥ ನಿರ್ದೇಶನದ ಈ ಸಿನಿಮಾ ಕನ್ನಡ ಸಿನಿಮಾ ರಂಗದಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಇದೀಗ ಇದರ ಎರಡನೇ ಭಾಗ ಬರುತ್ತಿದೆ. ಬೆಲ್ ಬಾಟಂ ಸಿನಿಮಾದ ಎರಡನೇ ಸಿನಿಮಾ ಶೆಟ್ರಿಗೆ ಮತ್ತಷ್ಟು ಸಕ್ಸಸ್ ತಂದುಕೊಡುತ್ತಾ ಅಂತಾ ಕಾದುನೋಡ್ಬೇಕು..
ಇನ್ನು ರಿಷಬ್ ಶೆಟ್ಟಿ ನಿರ್ದೇಶನದ ರುದ್ರಪ್ರಯಾಗ್ ಸಿನಿಮಾ ತಯಾರಿಗಳು ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇದ್ರ ಜೊತೆಗೆ ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ನಾಥುರಾಮ್ ಸಿನಿಮಾ ಕೂಡ ಸೆಟ್ಟೇರುತ್ತಿದೆ ಎಂದು ಹೇಳಲಾಗ್ತಿದೆ. ಇದೀಗ ಶೆಟ್ರು ಕಾಂತಾರ ಚಾಪ್ಟರ್ 1 ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲೇ ಕಾಂತಾರ ಚಾಪ್ಟರ್ 3 ಸಿನಿಮಾದ ಸುಳಿವನ್ನ ಬಿಟ್ಟುಕೊಟ್ಟಿದ್ದಾರೆ. ಆದ್ರೆ ಯಾವಾಗ ಆ ಸಿನಿಮಾ ಸಿನಿಮಾ ಬರಲಿದೆ ಅನ್ನೋ ಗುಟ್ಟು ಬಿಟ್ಟುಕೊಟ್ಟಿಲ್ಲ.. ಒಟ್ಟಾರೆ ಕಾಂತಾರ ಚಾಪ್ಟರ್ 1 ಸಕ್ಸಸ್‌ನಲ್ಲಿರೋ ರಿಷಭ್ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿವೆ. ಕಾಂತಾರ ಚಾಪ್ಟರ್ 1ರಷ್ಟೇ ಈ ಸಿನಿಮಾಗಳು ಯಶಸ್ಸು ಕಾಣುತ್ತಾ ಅಂತಾ ಕಾದು ನೋಡ್ಬೇಕು.

ನೋಡಿರಿ

