ಪವಿತ್ರಾ ಲೋಕೇಶ್ಗೆ ನರೇಶ್ ಲಿಪ್ ಕಿಸ್ – ಶೀಘ್ರದಲ್ಲೇ ಮದುವೆಯಾಗುವುದಾಗಿ ಘೋಷಣೆ
ಟಾಲಿವುಡ್ ಸಿನಿಮಾ ನಟ ನರೇಶ್ ಮತ್ತು ಸ್ಯಾಂಡಲ್ವುಡ್ ನಟಿ ಪವಿತ್ರಾ ಲೋಕೇಶ್ ಈಗ ಮದುವೆಯಾಗುವುದು ಪಕ್ಕಾ ಆಗಿದೆ. ಇಷ್ಟು ದಿನಗಳವರೆಗೆ ಇವರಿಬ್ಬರ ನಡುವೆ ಏನೋ ಇದೆ ಅಂತಾ ಗುಸು ಗುಸು ಕೇಳಿಬರ್ತಿತ್ತು. ಇವರಿಬ್ಬರು ಜೊತೆಯಲ್ಲೇ ಇದ್ದಾರೆ ಅನ್ನೋ ಮಾತು ಕೂಡಾ ಕೇಳಿ ಬರ್ತಿತ್ತು. ಇದೀಗ ಹೊಸ ವರ್ಷದ ಸಂದರ್ಭದಲ್ಲಿ ಪವಿತ್ರಾ ಹಾಗೂ ನರೇಶ್ ಶೀಘ್ರದಲ್ಲೇ ಮದುವೆಯಾಗುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: ಪೊನ್ನಿಯನ್ ಸೆಲ್ವನ್ ಸೀಕ್ವೆಲ್ 2 ಸಿನಿಮಾ ರಿಲೀಸ್ಗೆ ಡೇಟ್ ಫಿಕ್ಸ್
ಕೆಲ ತಿಂಗಳಿಂದ ನರೇಶ್ ಮತ್ತು ಪವಿತ್ರಾ ಲೋಕೇಶ್ ಅಫೇರ್ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿತ್ತು. ಇದರ ಜೊತೆಗೆ ಈ ಜೋಡಿ ಸಹಜೀವನ ನಡೆಸುತ್ತಿರುವುದು ಕೂಡಾ ಈಗ ಗುಟ್ಟಾಗಿ ಉಳಿದಿಲ್ಲ. ಇದೀಗ ಈ ಜೋಡಿ ಶೀಘ್ರದಲ್ಲೇ ಮದುವೆಯಾಗುವುದಾಗಿ ಘೋಷಿಸಿದ್ದಾರೆ. ಮೇಲಾಗಿ ನರೇಶ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪವಿತ್ರಾಗೆ ಲಿಪ್ ಕಿಸ್ ನೀಡಿದ ವಿಡಿಯೋ ಪೋಸ್ಟ್ ಮಾಡಿದ್ದು, ಮದುವೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ನರೇಶ್ ಅವರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಇಬ್ಬರೂ ಕೇಕ್ ಕತ್ತರಿಸಿ ನಂತರ ಪರಸ್ಪರ ಕೇಕ್ ತಿನ್ನಿಸಿದರು. ನಂತರ ಇಬ್ಬರು ಲಿಪ್ ಲಾಕ್ ಮಾಡಿದ್ದಾರೆ. ಈಗ ಈ ವಿಡಿಯೋ ಟ್ರೆಂಡಿಂಗ್ ಆಗಿದೆ. ಅಲ್ಲದೇ ನರೇಶ್, ಹೊಸ ವರ್ಷದಲ್ಲಿ ನಾವು ಹೊಸ ಜೀವನ ಆರಂಭಿಸುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದವನ್ನು ಬಯಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನರೇಶ್ ಈಗಾಗಲೇ ಮೂರು ಮದುವೆಯಾಗಿದ್ದಾರೆ. ಪವಿತ್ರಾಗೆ ಇದು ಎರಡನೇ ಮದುವೆ. ಇದಕ್ಕೂ ಮುನ್ನ ನರೇಶ್ ಪವಿತ್ರಾ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸಿದ್ದರು. ನಾವು ಒಟ್ಟಿಗೆ ವಾಸಿಸುತ್ತಿದ್ದೇವೆ. ಮದುವೆಯಾಗಿಲ್ಲ ಎಂದಿದ್ದರು.