ಗೌತಮ್‌ ರಿಯಲ್‌ ಹೆಂಡ್ತಿ ಯಾರು?  – ಅಪ್ಪನಂತೆ ಮಗಳೂ ಫೇಮಸ್‌ ನಟಿ!

ಗೌತಮ್‌ ರಿಯಲ್‌ ಹೆಂಡ್ತಿ ಯಾರು?  – ಅಪ್ಪನಂತೆ ಮಗಳೂ ಫೇಮಸ್‌ ನಟಿ!

ಸ್ಯಾಂಡಲ್‌ವುಡ್‌ನ ಫೇಮಸ್‌ ನಟರಲ್ಲಿ ರಾಜೇಶ್‌ ನಟರಂಗ ಕೂಡ ಒಬ್ರು.. ಅಮೃತಧಾರೆ ಸೀರಿಯಲ್‌ನಲ್ಲಿ ನಟಿಸಲು ಶುರುಮಾಡಿದ್ಮೇಲೆ ಡುಮ್ಮುಸರ್..‌ಅಂತಾನೇ ಫೇಮಸ್‌ ಆಗಿದ್ದಾರೆ. ಅಷ್ಟರ ಮಟ್ಟಿಗೆ ಆ ಪಾತ್ರ ಅವ್ರಿಗೆ ಜನಪ್ರಿಯತೆಯನ್ನ ತಂದುಕೊಟ್ಟಿದೆ. ಸೀರಿಯಲ್‌ನಲ್ಲಿ ಗೌತಮ್‌ ಮಿಲಿಯನೇರ್ ಬ್ಯುಸಿನೆಸ್‌ ಮ್ಯಾನ್. ಯಾವುದೇ ವ್ಯವಹಾರವನ್ನು ಫಟಾಫಟ್‌‌ ಅಂತ ಮಾಡಿ ಮುಗಿಸ್ತಾರೆ. ಆದರೆ ಪ್ರೀತಿಯ ವಿಷಯ ಬಂದಾಗ ಮಾತ್ರ ಜೀರೋ ಇದ್ದ ಗೌತಮ್​ ಈಗ ಪ್ರೀತಿಯಲ್ಲಿಯೂ ಹೀರೋ ಆಗಿದ್ದಾರೆ. ಅಂದ್ಹಾಗೆ ರಾಜೇಶ್‌ ಅವ್ರ ಸೀರಿಯಲ್‌ ಪಾತ್ರದಂತೆ ರಿಯಲ್‌ ಲೈಫ್‌ ಕೂಡ ಸಖತ್‌ ಇಂಟ್ರೆಸ್ಟಿಂಗ್‌ ಆಗಿದೆ.. ನಿಜ ಜೀವನದಲ್ಲಿ ಗೌತಮ್​ಗೆ ಮದ್ವೆ ಎನ್ನುವುದೇ ದೊಡ್ಡ ಸವಾಲಾಗಿ ಹೋಗಿತ್ತಂತೆ! ಹುಡುಗಿ ಸಿಕ್ಕಿಲ್ಲ ಅಂತ ಮದ್ವೆಯೇ ಬೇಡ ಅಂದಿದ್ರಂತೆ ರಾಜೇಶ್.

ಇದನ್ನೂ ಓದಿ: ದೇಹದಲ್ಲಿ ಈ ಲಕ್ಷಣ ಕಂಡುಬಂದ್ರೆ ಹುಷಾರ್! – ಉಗುರಿನಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು!

ರಾಜೇಶ್ ನಟರಂಗ.. ನೈಜ ನಟನೆಯಿಂದಲೇ ಬಣ್ಣದ ಲೋಕದಲ್ಲಿ ಮಿಂಚುತ್ತಿರುವ  ನಟ.. ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಸಿದ್ದ ರಾಜೇಶ್‌ ಈಗ ಡುಮ್ಮುಸಾರ್‌ ಅಂತಾನೇ ಫೇಮಸ್‌ ಆಗಿದ್ದಾರೆ. ಅಮೃತಧಾರೆ ಸೀರಿಯಲ್‌ನಲ್ಲಿ ರಾಜೇಶ್‌ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.. ಸೀರಿಯಲ್‌ ಕತೆಯಂತೆ ರಾಜೇಶ್‌ ಅವರ ರಿಯಲ್‌ ಲೈಫ್‌ ಕೂಡ ಅಷ್ಟೇ ಇಂಟ್ರೆಸ್ಟಿಂಗ್‌ ಆಗಿದೆ.. ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಅಂತಾ ಜೀವನದಲ್ಲಿ ಒಂಟಿಯಾಗಲು ನಿರ್ಧರಿಸಿದ್ರೆಂತೆ.. ಆ ಹೊತ್ತಲ್ಲೇ ರಾಜೇಶ್‌ ಬಾಳಿಗೆ ಚೈತ್ರಾ ಕಾಲಿಟ್ಟಿದ್ರು.

ಅಂದ್ಹಾಗೆ ರಾಜೇಶ್‌ ನಟರಂಗ ಅವ್ರು 1973ರ ಏಪ್ರಿಲ್ 18ರಂದು ಬಾಂಬೆಯಲ್ಲಿ ಹುಟ್ಟಿದ್ರು. ಆದ್ರೆ ಬೆಳೆದಿದ್ದು, ಓದಿದೆಲ್ಲಾ ಬೆಂಗಳೂರಿನಲ್ಲಿ. ಬಸವನ ಗುಡಿಯ ನ್ಯಾಶನಲ್ ಕಾಲೇಜಿನಲ್ಲಿ ಬಿಎಸ್ಸಿ ಎಲೆಕ್ಟ್ರಾನಿಕ್ಸ್ ಓದಿದ್ದಾರೆ. ರಾಜೇಶ್‌ಗೆ ಕಲಿಕೆಯೇ ಜೊತೆಗೆ ನಟನೆಯಲ್ಲೂ ಆಸಕ್ತಿ ಇತ್ತು. ಹೀಗಾಗಿ ನಟನೆ ಕಲಿಬೇಕು ಅಂತ ನಟರಂಗ ರಂಗ ಸಂಸ್ಥೆ ಸೇರಿಕೊಂಡರು. ಅದಾದ ಬಳಿಕ ದೆಹಲಿಗೂ ತೆರಳಿ, ಅಲ್ಲಿಯೂ ತೆರೆಹಿಂದಿನ ಒಂದಷ್ಟು ಕೆಲಸಗಳನ್ನು ಕಲಿತುಕೊಂಡರು. ಬೆಂಗಳೂರಿಗೆ ಬಂದು ನಿರ್ದೇಶಕರಾಗಿ, ನಿರ್ಮಾಣ ವ್ಯವಸ್ಥಾಪಕರಾಗಿಯೂ ಕೆಲಸ ಮಾಡಿದರು. ಬಳಿಕ ಅಂದ್ರೆ 1998ರಲ್ಲಿ ಟಿ.ಎನ್ ಸೀತಾರಾಮ್ ಅವರ ನಿರ್ದೇಶನದ ಡಿಡಿ ಚಂದನದಲ್ಲಿ ಪ್ರಸಾರವಾಗ್ತಿದ್ದ, ಮಾಯಾಮೃಗ ಸೀರಿಯಲ್‌ನಲ್ಲಿ ಶ್ರೀಧ‌ರ್ ಎಂಬ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ರು. ಮಾಯಾಮೃಗ ಸೀರಿಯಲ್ ಸುದೀರ್ಘ ವರ್ಷಗಳ ಕಾಲ ಪ್ರಸಾರ ಕಂಡಿತು. ಅದಾದ ಬಳಿಕ 2003ರಲ್ಲಿ ವಿಜಯ ನಿರ್ದೇಶನದ ಗುಪ್ತಗಾಮಿನಿ ಸೀರಿಯಲ್‌ನಲ್ಲಿಯೂ ನಟಿಸಿದರು. ಈಟಿವಿಯಲ್ಲಿ ಪ್ರಸಾರವಾದ ಈ ಸೀರಿಯಲ್‌ನಲ್ಲಿ ತೇಜಸ್ವಿ ಪಾತ್ರ ನೋಡುಗರ ಗಮನ ಸೆಳೆಯಿತು. ಆದಾಗ ಬಳಿಕ ಅನೇಕ ಸೀರಿಯಲ್‌ಗಳಲ್ಲಿ ಪೋಷಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದ್ರ ಜೊತೆಗೆ 2021ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ನಿನ್ನಿಂದಲೇ ಧಾರಾವಾಹಿಯನ್ನೂ ನಿರ್ಮಾಣ ಮಾಡಿದ್ದರು ರಾಜೇಶ್.

ಇನ್ನು ರಾಜೇಶ್‌ ನಟರಂಗ ಸೀರಿಯಲ್ ಮಾತ್ರವಲ್ಲ, ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಾಜೇಶ್ ನಟರಂಗ ಚಂದನವನಕ್ಕೆ ಕಾಲಿಟ್ಟಿದ್ದು 2002ರಲ್ಲಿ.. ಇವರ ಮೊದಲ ಸಿನಿಮಾ ನಾಗರಹಾವು..  ಅಲ್ಲಿಂದ ಇಲ್ಲಿಯವರೆಗೂ 80ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್​ ಮತ್ತು ಭೂಮಿಕಾ ಪ್ರೀತಿಗೆ ಮನಸೋಲದವರೇ ಇಲ್ಲ. ಇದ್ದರೆ ಇಂಥ ಕಪಲ್​ ಇರಬೇಕು ಎನ್ನುವವರೇ ಹೆಚ್ಚು. ಅದರಲ್ಲಿಯೂ ಇದ್ದರೆ ಗೌತಮ್​ನಂಥ ಪತಿ ಇರಬೇಕು ಯುವತಿಯರು ಬಯಸ್ತಾರೆ.. ಅಂದ್ಹಾಗೆ ರಾಜೇಶ್‌ ರಿಯಲ್​ ಲೈಫ್​ನಲ್ಲಿಯೂ ಬೆಸ್ಟ್​ ದಾಂಪತ್ಯ ನಡೆಸುತ್ತಿದ್ದಾರೆ. ರಿಯಲ್​ ಲೈಫ್​ನಲ್ಲಿ ಚೈತ್ರಾ ಮಡಿಯಾಗಿದ್ದು, ಮಗಳೂ ಇದ್ದಾಳೆ.

ಅಂದ್ಹಾಗೆ ರಾಜೇಶ್‌ ಗೆ ಮದುವೆಯಾಗು ಎಂದು ಮನೆಯಲ್ಲಿ ತುಂಬಾ ಒತ್ತಾಯ ಮಾಡ್ತಿದ್ರಂತೆ.. ಆದ್ರೆ ಆ ಟೈಮ್‌ನಲ್ಲಿ ರಾಜೇಶ್‌ ಅವ್ರಿಗೆ ಯಾರು ಹುಡುಗಿ ಕೊಟ್ಟಿರ್ಲಿಲ್ಲವಂತೆ. ಈ ಟೈಮ್‌ನಲ್ಲಿ ರಾಜೇಶ್‌ ಮದ್ವೆಯೇ ಬೇಡ ಅಂತಾ ಡಿಸೈಡ್‌ ಮಾಡಿದ್ರಂತೆ.. ಈ ಟೈಮ್‌ನಲ್ಲಿ ಸಂಬಂಧಿಕರ ಕಡೆಯಿಂದ ರಾಜೇಶ್ ಅವರಿಗೆ ಒಂದು ಫೋಟೋ ಬರುತ್ತೆ. ಮನೆಗೆ ಹೋಗಿ ಹುಡುಗಿ ನೋಡುವ ಶಾಸ್ತ್ರವನ್ನೂ ಮುಗಿಸುತ್ತಾರೆ. ಹುಡುಗಿ ಇಷ್ಟಾನೂ ಆಗ್ತಾರೆ. ಅಷ್ಟೊತ್ತಿಗೆ ನನ್ನ ಶೂಟಿಂಗ್ ಇದೆ ಎಂದು ಹೊರಟು ಬಿಟ್ಟಿದ್ರಂತೆ.. ಚೈತ್ರಾಗೂ ಇಷ್ಟವಾಗಿದ್ರು.. ಹಾಗೇ ಕಲಾವಿದ ಅನ್ನೋ ಕಾರಣಕ್ಕೆ ಮದುವೆಗೆ ಚೈತ್ರಾ ಮನೆಯವರು ಒಪ್ಪಿದ್ರಂತೆ. ಪತ್ನಿ ಚೈತ್ರಾ ಸ್ನೇಹಿತರ ಜತೆ ಇಂಟಿರಿಯರ್ ಡಿಸೈನಿಂಗ್ ಕಂಪನಿಯಲ್ಲಿ ನಡೆಸುತ್ತಿದ್ದಾರೆ.

ಇನ್ನು ಈ ದಂಪತಿಗೆ ಮುದ್ದಾದ ಮಗಳು ಕೂಡ ಇದ್ದಾಳೆ. ಮಗಳಿಗೆ ಧ್ವನಿ ಎಂದು ಹೆಸರಿಟ್ಟಿದ್ದಾರೆ. ಧ್ವನಿ, ಪಿಇಎಸ್ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದಾರೆ.. ಮಗಳು ಧ್ವನಿ ಚಿಕ್ಕಂದಿನಲ್ಲಿಯೇ ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಇರಾನಿ ನಿರ್ದೇಶಕ ಮಜಿದ್ ಮಜಿದಿ ನಿರ್ದೇಶನದ ಬಿಯಾಂಡ್ ದಿ ಕೌಡ್ಸ್ ಸಿನಿಮಾದಲ್ಲಿಯೂ ಬಾಲ ಕಲಾವಿದೆಯಾಗಿ ಧ್ವನಿ ನಟಿಸಿದ್ದಾರೆ. ಮಲಯಾಳಂ ಸಿನಿಮಾದಲ್ಲಿಯೂ ಧ್ವನಿ ನಟಿಸಿದ್ದಾರೆ.

Shwetha M