ರೈಲು ಪ್ರಯಾಣದ ವೇಳೆ ಕೊಡುವ ಬೆಡ್‌ಶೀಟ್‌ಗಳನ್ನ ಎಷ್ಟು ದಿನಗಳಿಗೆ ಒಮ್ಮೆ ವಾಷ್‌ ಮಾಡಲಾಗುತ್ತೆ?  

ರೈಲು ಪ್ರಯಾಣದ ವೇಳೆ ಕೊಡುವ ಬೆಡ್‌ಶೀಟ್‌ಗಳನ್ನ ಎಷ್ಟು ದಿನಗಳಿಗೆ ಒಮ್ಮೆ ವಾಷ್‌ ಮಾಡಲಾಗುತ್ತೆ?  

ದೂರದ ಊರುಗಳಿಗೆ ತೆರಳುವಾಗ ಪ್ರಯಾಣಕ್ಕೆ ಹೆಚ್ಚಿನವರ ಆಯ್ಕೆ ರೈಲು ಆಗಿರುತ್ತೆ. ಯಾಕಂದ್ರೆ ರೈಲಿನಲ್ಲಿ ಊಟದ ವ್ಯವಸ್ಥೆ, ಮಲಗಲು ಬೆಡ್‌ಶೀಟ್‌ ಸೇರಿದಂತೆ ಕೆಲ ಸೌಲಭ್ಯಗಳು ಸಿಗುತ್ತವೆ. ಹೀಗಾಗಿ ಅನೇಕರು ದೂರದ ಪ್ರಯಾಣಕ್ಕೆ ರೈಲಿನಲ್ಲಿ ತೆರಳುವುದು ಸೂಕ್ತ ಎಂದು ಹೇಳುತ್ತಾರೆ. ಪ್ರಯಾಣದ ವೇಳೆ ರೈಲಿನಲ್ಲಿ ಬೆಡ್‌ಶೀಟ್‌ ಕೊಡಲಾಗುತ್ತದೆ. ಆದ್ರೆ ಈ ಬೆಡ್‌ಶೀಟ್ ಗಳನ್ನ ಎಷ್ಟು ಬಾರಿ ವಾಷ್‌ ಮಾಡ್ತಾರೆ ಅನ್ನೋ ಪ್ರಶ್ನೆ ಅನೇಕರಿಗಿದೆ. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಇದನ್ನೂ ಓದಿ:ಹೃದಯದ ಆರೋಗ್ಯಕ್ಕೆ ಈ ವ್ಯಾಯಾಮ ಬೆಸ್ಟ್!‌ – ದಿನಕ್ಕೆ 20 ನಿಮಿಷ ಹೀಗೆ ಮಾಡಿದ್ರೆ ಆಯಸ್ಸು ಹೆಚ್ಚಾಗುತ್ತೆ!

ಭಾರತದಲ್ಲಿ ರೈಲಿನಲ್ಲಿ ನಿತ್ಯಾ ಲಕಾಂತರ ಮಂದಿ ಪ್ರಯಾಣಿಸುತ್ತಾರೆ. ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಕೋಚ್‌ಗಳಲ್ಲಿ ಪ್ರಯಾಣಿಸುತ್ತಾರೆ. ಅವುಗಳನ್ನು ಎಸಿ ಕೋಚ್‌, ಸಾಮಾನ್ಯ ಕೋಚ್‌ಗಳೆಂದು ವಿಭಾಗಿಸಲಾಗುತ್ತದೆ. ಹೆಚ್ಚಿನ ಬೆಲೆಯ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಕೆಲವು ಸೌಲಭ್ಯಗಳನ್ನು ಪಡೆಯುತ್ತಾರೆ. ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವ ಸಮಯದಲ್ಲಿ ನಿಮಗೆ ನೀಡುವ ಬೆಡ್‌ಶೀಟ್‌ಗಳನ್ನು ನೀಡಲಾಗುತ್ತೆ. ಈ ಬೆಡ್‌ಶೀಟ್‌ಗಳನ್ನ ಎಷ್ಟು ದಿನಗಳಿಗೊಮ್ಮೆ ವಾಷ್‌ ಮಾಡಲಾಗುತ್ತೆ? ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಂಬಳಿಗಳ ಜೊತೆಗೆ ಬೇರೆ ಏನೆಲ್ಲಾ ಸೌಲಭ್ಯ ನೀಡಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

ಬೆಡ್‌ಶೀಟ್‌ಗಳನ್ನ ಎಷ್ಟು ದಿನಗಳಿಗೊಮ್ಮೆ ವಾಶ್‌ ಮಾಡಲಾಗುತ್ತೆ?

ಭಾರತೀಯ ರೈಲ್ವೆಯಲ್ಲಿ ಎಸಿ ಕೋಚ್‌ಗಳಲ್ಲಿ ಬೆಡ್‌ಶೀಟ್‌ಗಳನ್ನ ನೀಡಲಾಗುತ್ತೆ.ಬೇರೆ ಪ್ರಯಾಣಿಕರು ಬಳಸಿದ ಬೆಡ್‌ಶೀಟ್‌ ಬಳಸುವುದು ಎಷ್ಟು ಸೇಫ್? ಇದನ್ನ ವಾಶ್‌ ಮಾಡುತ್ತಾರಾ? ಇಲ್ವಾ ಅನ್ನೋ ಗೊಂದಲ ಅನೇಕರಿಗಿದೆ. ಬೆಡ್‌ಶೀಟ್‌ ಎಷ್ಟು ಬಾರಿ ತೊಳೆಯುತ್ತದೆ ಎಂಬ ಪ್ರಶ್ನೆಗೆ ಉತ್ತರವಾಗಿ, ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ, ಪ್ರಯಾಣಿಕರಿಗೆ ಒದಗಿಸಲಾದ ಲಿನಿನ್, ಅಂದರೆ ಹಾಳೆಗಳು ಮತ್ತು ದಿಂಬಿನ ಕವರ್‌ಗಳನ್ನು ಪ್ರತಿ ಬಳಕೆಯ ನಂತರ ತೊಳೆಯಲಾಗುತ್ತದೆ ಎಂದು ತಿಳಿಸಿದೆ. ಆದರೆ ಉಣ್ಣೆಯ ಕಂಬಳಿಗಳನ್ನು “ಕನಿಷ್ಠ ತಿಂಗಳಿಗೊಮ್ಮೆ ಅಥವಾ ಗರಿಷ್ಠ ತಿಂಗಳಿಗೆ ಎರಡು ಬಾರಿ” ತೊಳೆಯಲಾಗುತ್ತದೆ ಎಂದು ಹೇಳಿದೆ. ವರದಿಗಳ ಪ್ರಕಾರ, ರೈಲ್ವೆ ಹೌಸ್‌ಕೀಪಿಂಗ್ ಸಿಬ್ಬಂದಿ ಹೇಳುವಂತೆ ಕಂಬಳಿಗಳನ್ನು ತಿಂಗಳಿಗೊಮ್ಮೆ ಮಾತ್ರ ತೊಳೆಯಲಾಗುತ್ತದೆ. ಒಂದು ವೇಳೆ ಆಹಾರದಿಂದ ಕಲೆಯಾಗಿದ್ದರೆ ಅಥವಾ ಕೆಟ್ಟ ವಾಸನೆ ಬಂದರೆ, ಅವುಗಳನ್ನು ಹೆಚ್ಚಾಗಿ ತೊಳೆಯಲಾಗುತ್ತದೆ ಎಂದಿದ್ದಾರೆ.

 ಎಸಿ ಕೋಚ್‌ಗಳಲ್ಲಿ ಏನೆಲ್ಲಾ ಸೌಲಭ್ಯ ಇದೆ?

ಭಾರತೀಯ ರೈಲ್ವೆಯು ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಂಬಳಿಗಳು, ಬೆಡ್‌ಶೀಟ್‌ಗಳು ಮತ್ತು ದಿಂಬಿನ ಕವರ್‌ಗಳನ್ನು ಒದಗಿಸುತ್ತದೆ. ಇವುಗಳ ಶುಲ್ಕವನ್ನು ಟಿಕೆಟ್‌ನಲ್ಲಿ ಸೇರಿಸಲಾಗುತ್ತದೆ. ಇದಲ್ಲದೆ, ಗರೀಬ್ ರಥ್ ಮತ್ತು ಡುರೊಂಟೊದಂತಹ ರೈಲುಗಳಲ್ಲಿ ನೀವು ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ಬೆಡ್‌ರೋಲ್ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಹೆಚ್ಚುವರಿ ಶುಲ್ಕವನ್ನು ಪಾವತಿ ಮಾಡಬೇಕು. ಇನ್ನು ಫಸ್ಟ್ ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಂಬಳಿಗಳು, ಹಾಳೆಗಳು, ಟವೆಲ್‌ಗಳು, ದಿಂಬಿನ ಕವರ್‌ಗಳು, ಓದುವ ದೀಪಗಳು, ಚಾರ್ಜಿಂಗ್ ಸೌಲಭ್ಯಗಳು, ಚಹಾ, ಕಾಫಿ, ಉಪಹಾರ ಮತ್ತು ಭೋಜನವನ್ನು ಒದಗಿಸಲಾಗುತ್ತದೆ.

Shwetha M