IAFಗೆ ಬಂತು ಸೂಪರ್ ಫೈಟರ್ ತೇಜಸ್ MK1A ಶಕ್ತಿಗೆ ನಡುಗ್ತಾ ಚೀನಾ?
ವಾಯಪಡೆಯಲ್ಲಿ ನಾವೇ ಸ್ಟ್ರಾಂಗ್

IAFಗೆ ಬಂತು  ಸೂಪರ್ ಫೈಟರ್ ತೇಜಸ್ MK1A ಶಕ್ತಿಗೆ ನಡುಗ್ತಾ ಚೀನಾ?ವಾಯಪಡೆಯಲ್ಲಿ ನಾವೇ ಸ್ಟ್ರಾಂಗ್

ಭಾರತ ಡೇ ಬೈ ಡೇ ಸೂಪರ್ ಸ್ಟ್ರಾಂಗ್ ಆಗ್ತಿದೆ.. ಸೇನೆಯಲ್ಲಿ ಪವರ್ ಫುಲ್ ದೇಶವಾಗಿ ಬೆಳೆಯುತ್ತಿದೆ.. ಮಿಲಿಟರಿ ಶಕ್ತಿಯಲ್ಲಿ 4ನೇ ಸ್ಥಾನದಲ್ಲಿರೋ ಭಾರತ ಈಗ ವಾಯಪಡೆಯಲ್ಲಿ ಚೀನಾವನ್ನ ಹಿಂದಿಕ್ಕಿದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಇಂಡಿಯನ್ ಏರ್‌ಪೋರ್ಸ್‌ ದೇಶಿ ಶಕ್ತಿ ಬಂದಿದೆ. ಕೇಂದ್ರ ಸರ್ಕಾರ ವಾಯಪಡೆಯನ್ನ ಸಖತ್ ಅಪಡೇಟ್ ಮಾಡ್ತಿದೆ.. ಅದ್ದಕ್ಕಾಗಿ ಹೊಸ ಹೊಸ ಶಸ್ತ್ರಾಸ್ತ್ರಗಳನ್ನ ಖರೀದಿ ಮಾಡ್ತಿದೆ.. ಅದ್ರಲ್ಲೂ ನಮ್ಮ ದುಡ್ಡು ವಿದೇಶದ ಪಾಲಾಗುವುದು ಬೇಡ.. ನಮ್ಮ ಹಣವನ್ನ ನಮ್ಮ ಸರ್ಕಾರಿ ಸಂಸ್ಥೆಗಳಿಗೆ ಹೋಗಲಿ ಹಾಗೇ ನಮ್ಮ ದೇಶಿ ಯುದ್ಧ ವಿಮಾನಗಳಿ ಒತ್ತು ನೀಡುವ ನಿಟ್ಟಿನಲ್ಲಿ ಹೆಚ್ಎಎಲ್ ಜೊತೆ ಡೀಲ್ ಮಾಡಿಕೊಳ್ಳಲಾಗಿದೆ. ಇದೆಲ್ಲದರ ಜೊತೆ ಇನ್ನೊಂದು ಖುಷಿ ವಿಚಾರ ಏನಪ್ಪ ಅಂದ್ರೆ ಆಪರೇಷನ್‌ ಸಿಂದೂರದ ಮೂಲಕ ತನ್ನ ಶಕ್ತಿ ಪ್ರದರ್ಶಿಸಿದ್ದ ಭಾರತೀಯ ವಾಯುಪಡೆ WDMMA ರ್ಯಾಕಿಂಗ್‌ಲ್ಲಿ ಚೀನಾವನ್ನು ಹಿಂದಿಕ್ಕಿ ಮೂರನೇ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಅಮೆರಿಕ ಮೊದಲನೇ ಸ್ಥಾನದಲ್ಲಿ ಮುಂದುವರೆದರೆ, ರಷ್ಯಾ ಎರಡನೇ ಸ್ಥಾನದಲ್ಲಿದೆ. ಭಾರತ 3ನೇ ಸ್ಥಾನದಲ್ಲಿದ್ರೆ ಚೀನಾ ವಾಯುಸೇನೆ ನಾಲ್ಕನೇ ಸ್ಥಾನದಲ್ಲಿದೆ..  ಭಾರತಕ್ಕೆ ಹೋಲಿಸಿದರೆ ಚೀನಾವು ಹೆಚ್ಚಿನ ವಿಮಾನಗಳನ್ನು ಹೊಂದಿದೆ. ಜತೆಗೆ, ಆಧುನೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆದರೆ ಚೀನಾಗೆ ಹೋಲಿಸಿದರೆ ಭಾರತೀಯ ಪಡೆಯು ಸಮತೋಲಿತವಾಗಿದೆ.

ಇದನ್ನೂ ಓದಿ:ಫಂಗಸ್ ಡ್ರಾಮಾ.. ಜೈಲಿನ ವ್ಯವಸ್ಥೆ ಬಗ್ಗೆ ದರ್ಶನ್‌ ಸುಳ್ಳು ಹೇಳಿದ್ರಾ? –  ಕಾನೂನು ಪ್ರಾಧಿಕಾರ ವರದಿಯಲ್ಲಿ ಏನಿದೆ?

ಭಾರತೀಯ ವಾಯುಸೇನೆಯ ಶೇ.31.6ರಷ್ಟು ವಿಮಾನಗಳು ಯುದ್ಧವಿಮಾನಗಳಾಗಿವೆ. ಶೇ.29ರಷ್ಟು ಹೆಲಿಕಾಪ್ಟರ್‌ಗಳಾಗಿದ್ದರೆ, ಶೇ.21.8ರಷ್ಟು ತರಬೇತಿ ವಿಮಾನಗಳನ್ನು ಹೊಂದಿದೆ. ಇನ್ನು ಚೀನಾದ ವಾಯುಸೇನೆಯ ಒಟ್ಟು ಸಾಮರ್ಥ್ಯದ ಶೇ.52.9ರಷ್ಟು ಯುದ್ಧವಿಮಾನಗಳಾಗಿದ್ದರೆ, ಶೇ.28.4ರಷ್ಟು ತರಬೇತಿ ವಿಮಾನಗಳಾಗಿವೆ ಎಂದು WDMMA ವರದಿ ಹೇಳಿದೆ.

ಸದ್ಯ ಭಾರತೀಯ ವಾಯುಸೇನೆಯಲ್ಲಿ 4.5 ತಲೆಮಾರಿನ ಯುದ್ಧವಿಮಾನಗಳಾದ ರಫೇಲ್‌, ಸುಖೋಯ್‌ ಎಸ್‌ಯು-30 ಎಂಕೆಐ, ತೇಜಸ್‌, ನಾಲ್ಕನೇ ತಲೆಮಾರಿನ ಮಿರಾಜ್‌-2000 ವಿಮಾನಗಳನ್ನು ಹೊಂದಿದೆ.   ಮಿಗ್‌-29 ಇತ್ತು, ಅದು ಇತ್ತೀಚೆಗೆ ನಿವೃತ್ತಿಯಾಗಿದೆ.. ಜೊತೆಗೆ  ಭಾರತವು ಸ್ವದೇಶಿ ನಿರ್ಮಿತ ಎಲ್‌ಸಿಎ-ಎಂಕೆ2, ಎಂಆರ್‌ಎಫ್‌ಎ ಮತ್ತು ಎಎಂಸಿಎ ನಂಥ ವಿಮಾನಗಳನ್ನೂ ಸೇರ್ಪಡೆ ಮಾಡಲು ಒಪ್ಪಂದ ಆಗಿದೆ. ಒಪ್ಪಂದ ಆಗಿರೋದ್ರಲ್ಲಿ ಎಲ್‌ಸಿಎ-ಎಂಕೆ1ಎ, ಅಂದ್ರೆ ತೆಜಸ್ಸ್ MK1A ಯುದ್ದ ವಿಮಾನ ಇದೇ ಅಕ್ಬೋಬರ್ 17 ರಂದು ಯಶಸ್ವಿಯಾಗಿ ಹಾರಾಟ ನಡೆಸಿದೆ. ಕೆಲ ತಿಂಗಳ ಹಿಂದೆ HAL ಜೊತೆ  97 ತೇಜಸ್ ಎಂಕೆ1ಎ ಲಘು ಯುದ್ಧ ವಿಮಾನಗಳನ್ನು ಖರೀದಿಸಲು 62,370 ಕೋಟಿ ರೂಪಾಯಿಗಳ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಇದ್ರಲ್ಲಿ ಈಗ ಎರಡು ವಿಮಾನಗಳು ಹಾರಾಟ ಯಶಸ್ವಿಯಾಗಿ ಹೋರಾಟ ನಡೆಸಿವೆ. ಹೆಚ್ಎಲ್ ಜೊತೆ ಎಲ್ಲಾ ಡೀಲ್ ಆಗಿರೋ ಎಲ್ಲಾ ವಿಮಾನಗಳು ಬಂದ್ರೆ ಭಾರತದ ಏರ್‌ಪೋರ್ಸ್‌ಗೆ ಫುಲ್ ಪವರ್ ಬರಲಿದೆ.  ಹಾಗಿದ್ರೆ ಈ ಟೆಸ್ಟ್ ಡ್ರೈವ್ ಮಾಡಿರೋ  ತೇಜಸ್ MK1A ಎಷ್ಟು ಪವರ್ ಫುಲ್ ಹಾಗೇ ಸಂಪೂರ್ಣ ವಿಮಾನಗಳು ಯಾವಾಗ ಬರುತ್ತೆ ಅಂತ ನೋಡೋಣ..

ತೇಜಸ್‌ ಎಂಕೆ1ಎ ಯುದ್ಧ ವಿಮಾನವು ತೇಜಸ್‌ ವಿಮಾನದ ಅತ್ಯಾಧುನಿಕ ಆವೃತ್ತಿಯಾಗಿದೆ. ಇದರಲ್ಲಿ ಸುಮಾರು 40ಕ್ಕೂ ಹೆಚ್ಚು ಮಹತ್ವದ ಸುಧಾರಣೆಗಳನ್ನು ಮಾಡಲಾಗಿದೆ. ಇದರಲ್ಲಿ GE ಏರೋಸ್ಪೇಸ್‌ನ ಎಫ್‌404 ಎಂಜಿನ್ ಉಪಯೋಗಿಸಿ ತಯಾರಿಸಲಾಗಿದೆ. ಇದು ಒಂದೇ ಎಂಜಿನ್‌ನಿಂದ ಕೂಡಿದ್ದು, 4.5 ಜನರೇಷನ್‌ ವಿಮಾನವಾಗಿದೆ.   “ಉತ್ತಮ್‌’ ಎನ್ನುವ ಆಕ್ಟಿವ್‌ ಎಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ ರಾಡಾರ್‌  ಅಳವಡಿಸಲಾಗಿದ್ದು, ಇದು ವಿಮಾನದ ಕಣ್ಣಿನಂತೆ ಕೆಲಸ ಮಾಡುತ್ತದೆ.  ಇದು ದೂರದ ಗುರಿಗಳನ್ನು ನಿಖರವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಶತ್ರುಗಳ ರಾಡಾರ್‌ಗಳಿಂದ ತಪ್ಪಿಸಿ­ಕೊಳ್ಳಲು ಮತ್ತು ಅವರ ಕ್ಷಿಪಣಿಗಳನ್ನು ದಾರಿತಪ್ಪಿಸಲು ಸ್ವಯಂ ರಕ್ಷಾ ಕವಚ ಮತ್ತು ಅತ್ಯಾಧುನಿಕ ಎಲೆಕ್ಟ್ರಾನಿಕ್‌ ಯುದ್ಧ ತಂತ್ರಜ್ಞಾನ ಹೊಂದಿದೆ.  ಇದು ಸೂಪರ್‌ಸಾನಿಕ್‌ ಸ್ಪೀಡ್‌ ಹೊಂದಿದ್ದು, 1.8 ಮ್ಯಾಕ್‌ ವೇಗದಲ್ಲಿ ಅಂದ್ರೆ 1 ಗಂಟೆಗೆ 2220 ಕಿ.ಮೀ. ವೇಗ  ಸಂಚರಿಸಲಿದೆ. 

. ತೇಜಸ್ MK1A ಅನ್ನು ವಾಯುಪಡೆಗೆ ಸೇರಿಸುವ ದಿನಾಂಕಗಳನ್ನು ಘೋಷಿಸಲಾಗಿಲ್ಲ. ಆದ್ರೆ ಇತ್ತೀಚೆಗೆ ನಿವೃತ್ತಿ ಪಡೆದ ಮಿಗ್‌ 21 ಯುದ್ಧ­ವಿಮಾ­­ನಗಳ ಸ್ಥಾನವನ್ನು ಈ ತೇಜಸ್‌ ಎಂಕೆ 1ಎ ತುಂಬಲಿದೆ. ಆದ್ದರಿಂದ ಭಾರತೀಯ ವಾಯುಪಡೆಗೆ ಇದೊಂದು ಮೈಲಿಗ­ಲ್ಲಾ­­ಗಲಿದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಎಚ್‌ಎಎಲ್‌ ಕೇಂದ್ರದಲ್ಲಿ ಈ ಲಘು ಯುದ್ಧ ವಿಮಾನಗಳು ತಯಾರಾಗುತ್ತಿವೆ.  2034ರವರೆಗೆ HAL ಒಟ್ಟು 180 ವಿಮಾನ ಪೂರೈಸಬೇಕಿದೆ  ನಾಸಿಕ್‌ನಲ್ಲಿರುವ HAL ನ ವಿಮಾನ ಉತ್ಪಾದನಾ ವಿಭಾಗವು ಪ್ರತಿ ವರ್ಷ ಎಂಟು ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಹೊರತಾಗಿ, ತೇಜಸ್‌ನ ಎರಡು ಉತ್ಪಾದನಾ ಘಟಕಗಳು ಬೆಂಗಳೂರಿನಲ್ಲಿದ್ದು ಪ್ರತಿ ವರ್ಷ 16 ಯುದ್ಧ ವಿಮಾನಗಳನ್ನು ತಯಾರಿಸಲಾಗುತ್ತಿದೆ. ಈ ರೀತಿಯಾಗಿ, ನಾಸಿಕ್‌ನ ಉತ್ಪಾದನಾ ಘಟಕ ಪ್ರಾರಂಭವಾದ ನಂತರ, ಪ್ರತಿ ವರ್ಷ 24 ಯುದ್ಧ ವಿಮಾನಗಳನ್ನು ತಯಾರಿಸಲಾಗುವುದು. ಇನ್ನೂ ಕೇಲವೇ ಕೆಲವು ವರ್ಷದದಲ್ಲಿ ಭಾರತೀಯ ವಾಯಪಡೆ ಮತ್ತಷ್ಟು ಬಲಿಷ್ಠ ಆಗಲಿದ್ದು, ಅಮೆರಿಕಾ, ಚೀನಾಗೂ ಸೆಡ್ಡು ಹೊಡೆಯೋದು ಪಕ್ಕಾ.

Kishor KV