“ಬಿಜೆಪಿ ನನ್ನ ಗುರು, ಅವರೇ ನನಗೆ ದಾರಿ ತೋರಿಸುತ್ತಾರೆ” – ವಿರೋಧಿ ಪಕ್ಷದ ಬಗ್ಗೆ ರಾಹುಲ್ ಗಾಂಧಿ ಅಚ್ಚರಿಯ ಹೇಳಿಕೆ
ನವದೆಹಲಿ: ಬಿಜೆಪಿ ತಮ್ಮ ಮೇಲೆ ಆಕ್ರಮಣಕಾರಿಯಾಗಿ ದಾಳಿ ಮಾಡಬೇಕೆಂದು ನಾನು ಬಯಸುತ್ತೇನೆ. ಬಿಜೆಪಿಯನ್ನು ನನ್ನ ಗುರು ಎಂದು ಪರಿಗಣಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ಬಿಜೆಪಿ ನಮ್ಮ ಮೇಲೆ ಆಕ್ರಮಣಕಾರಿಯಾಗಿ ದಾಳಿ ನಡೆಸಲಿ ಎಂದು ನಾನು ಬಯಸುತ್ತೇನೆ. ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಬಿಜೆಪಿಯೇ ನನ್ನ ಗುರು ಎಂದು ಪರಿಗಣಿಸಿದ್ದೇನೆ. ಏನು ಮಾಡಬಾರದು ಎಂಬ ಬಗ್ಗೆ ನನಗೆ ಅವರು ದಾರಿ ತೋರಿಸುತ್ತಿದ್ದಾರೆ ಮತ್ತು ತರಬೇತಿ ನೀಡುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: 2023 ರ ಡಿಸೆಂಬರ್ ನಲ್ಲಿ ಭಾರತದ ಮೊದಲ ನೀರೊಳಗಿನ ಮೆಟ್ರೋ ಸೇವೆ ಪ್ರಾರಂಭ!
“ಭಾರತ್ ಜೋಡೋ ಯಾತ್ರೆಯ ಬಾಗಿಲು ಎಲ್ಲರಿಗೂ ಮುಕ್ತವಾಗಿ ತೆರೆದಿದೆ. ನಮ್ಮನ್ನು ಯಾರೇ ಸೇರಿಕೊಂಡರೂ ಅವರನ್ನು ತಡೆಯುವುದಿಲ್ಲ. ಅಖಿಲೇಶ್, ಮಾಯಾವತಿ ಹಾಗೂ ಇತರರು “ಮೊಹಬ್ಬತ್ ಕಾ ಹಿಂದೂಸ್ಥಾನ್” ಬಯಸಿದ್ದಾರೆ. ನಮ್ಮ ನಡುವೆ ಕೆಲವು ಸೈದ್ಧಾಂತಿಕ ಸಂಬಂಧವಿದೆ” ಎಂದು ಹೇಳಿದ್ದಾರೆ.
“ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಹೋರಾಟವು, ಇನ್ನು ಮುಂದೆ ತಂತ್ರಗಾರಿಕೆಯ ರಾಜಕೀಯ ಹೋರಾಟವಾಗಿ ಉಳಿದಿಲ್ಲ. ಕಾಂಗ್ರೆಸ್ ಮಾತ್ರವೇ ಒದಗಿಸಬಲ್ಲದಾದ ಕೇಂದ್ರೀಯ ಸೈದ್ಧಾಂತಿಕ ಚೌಕಟ್ಟು ವಿರೋಧ ಪಕ್ಷಕ್ಕೆ ಅಗತ್ಯವಿದೆ. ಆದರೆ ವಿರೋಧ ಪಕ್ಷಗಳಿಗೆ ಹಿತಕರ ಎನಿಸುವಂತೆ ಮಾಡುವುದು ಕೂಡ ನಮ್ಮ ಕೆಲಸವಾಗಿದೆ” ಎಂದಿದ್ದಾರೆ.