ಟ್ರಾಫಿಕ್‌ನಲ್ಲಿ ಸಿಲುಕಿದ ಎಂಟು ತಿಂಗಳ ಗರ್ಭಿಣಿ! – ಬೆಂಗಳೂರಿನಲ್ಲಿ ಆಸ್ಪತ್ರೆಗೆ ತಲುಪೋದು ಬಲು ಕಷ್ಟ!

ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡೋದು ಕಷ್ಟವಾಗಿದೆ. ಎಲ್ಲಿ ನೋಡಿದ್ರೂ ಟ್ರಾಫಿಕ್ ಜಾಮ್.. ಗಂಟೆಗಟ್ಟಲೆ ರಸ್ತೆಯಲ್ಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಬೆಂಗಳೂರಿನಲ್ಲಿ ಆಸ್ಪತ್ರೆಗೆ ಹೊರಟಿದ್ದ ಎಂಟು ತಿಂಗಳ ಗರ್ಭಿಣಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಫಂಗಸ್ ಡ್ರಾಮಾ.. ಜೈಲಿನ ವ್ಯವಸ್ಥೆ ಬಗ್ಗೆ ದರ್ಶನ್ ಸುಳ್ಳು ಹೇಳಿದ್ರಾ? – ಕಾನೂನು ಪ್ರಾಧಿಕಾರ ವರದಿಯಲ್ಲಿ ಏನಿದೆ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ವಾಹನ ಸವಾರರು, ಕೆಲಸಕ್ಕೆ ಹೋಗೋರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುವಂತಾಗಿದೆ. ಇದೀಗ ಬೆಂಗಳೂರಿನ ನಿವಾಸಿಯೊಬ್ಬರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದು, ತಮ್ಮ ಕಹಿ ಅನುಭವವನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಎಂಟು ತಿಂಗಳ ಗರ್ಭಿಣಿ ಪತ್ನಿಯನ್ನು ತಪಾಸಣೆಗೆ ಕರೆದುಕೊಂಡು ಹೋಗುವ ವೇಳೆ ಟ್ರಾಫಿಕ್ ನಲ್ಲಿ ಸಿಲುಕಿದ್ದು, ಏಳು ಕಿಮೀ ಕ್ರಮಿಸಲು ಒಂದೂವರೆ ಗಂಟೆ ತೆಗೆದುಕೊಂಡಿದ್ದಾರೆ.
@nshl ಹೆಸರಿನ ರೆಡ್ಡಿಟ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದು ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಎಷ್ಟೆಲ್ಲಾ ಒತ್ತಡವನ್ನು ಉಂಟು ಮಾಡುತ್ತದೆ ಎಂದು ವಿವರಿಸಿದ್ದಾರೆ. 7.ಕಿಮೀಗೆ ಒಂದೂವರೆ ಗಂಟೆಗಳ ಪ್ರಯಾಣ, ಪಕ್ಕದಲ್ಲಿ 8 ತಿಂಗಳ ಗರ್ಭಿಣಿ ಪತ್ನಿ . ಬೆಂಗಳೂರು ಇನ್ನು ಮುಂದೆ ವಾಸಿಸಲು ಯೋಗ್ಯವೇ? ಎಂದು ಪ್ರಶ್ನಿಸಿದ್ದಾರೆ. ತನ್ನ ಎಂಟು ತಿಂಗಳ ಗರ್ಭಿಣಿ ಪತ್ನಿಯನ್ನು ಸಂಜೆ ವರ್ತೂರು ಬಳಿಯ HAL ರಸ್ತೆಯಲ್ಲಿ ನಿಯಮಿತ ತಪಾಸಣೆಗೆ ಹೇಗೆ ಕರೆದೊಯ್ಯುತ್ತಿದ್ದನೆಂದು ತಿಳಿಸಿದ್ದಾರೆ. ಈ ವೇಳೆ ಏಳು ಕಿಮೀ ಕ್ರಮಿಸಲು ಒಂದೂವರೆ ಗಂಟೆಗಳ ಕಾಲ ತೆಗೆದುಕೊಂಡೆ. ನಾನು ಯೋಚಿಸುತ್ತಲೇ ಇದ್ದೆ, ಇದು ನಿಜವಾದ ತುರ್ತು ಪರಿಸ್ಥಿತಿಯಾಗಿದ್ದರೆ? ಅವಳಿಗೆ ಈಗ ಹೆರಿಗೆ ನೋವು ಕಾಣಿಸಿಕೊಂಡರೆ ಏನು ಮಾಡೋದು. ಚಲಿಸಲು ಸಾಧ್ಯವಾಗದೆ ಕಾರಿನಲ್ಲಿ ಬಹಳ ಹೊತ್ತು ಸಿಲುಕಿಕೊಂಡಿದ್ದು ಅಸಹಾಯಕತೆಯೂ ಉಸಿರುಗಟ್ಟಿಸುತ್ತಿತ್ತು. ನೀವು ಕಾರಿನ ಒಳಗೆ ಸಿಲುಕಿಕೊಂಡು, ಗಡಿಯಾರದ ಟಿಕ್ ಟಿಕ್ ಟಿಕ್ ಅನ್ನು ನೋಡುತ್ತಾ ಕುಳಿತಿದ್ದೀರಿ. ಈ ರೀತಿಯಾದ್ರೆ ಈ ನಗರವು ನಾಶವಾಗಲಿದೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ ಎಂದು ಕಹಿ ಸತ್ಯ ಹೇಳಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರರು ಇದು ತುರ್ತು ಪರಿಸ್ಥಿತಿಯಾಗಿದ್ದರೆ ನೀವು ತಾತ್ಕಾಲಿಕವಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಗೊಳ್ಳಬೇಕು ಎಂದಿದ್ದಾರೆ. ಮತ್ತೊಬ್ಬರು, ನನ್ನ ಅಮ್ಮ ಮತ್ತು ತಂಗಿ ಅಪಘಾತಕ್ಕೀಡಾಗಿದ್ದರು. ನಾನು ಅವರನ್ನು ಆಸ್ಪತ್ರೆಗೆ ಭೇಟಿ ಮಾಡಲು ಧಾವಿಸಬೇಕಾಯಿತು. ಬೆಳ್ಳಂದೂರು ಬಳಿಯ ಆ ಯು-ಟರ್ನ್‌ನಲ್ಲಿ ನಾನು ಸಿಲುಕಿಕೊಂಡೆ. ನನ್ನ ಜೀವನದ ಅತ್ಯಂತ ದೀರ್ಘವಾದ 45 ನಿಮಿಷಗಳಾಗಿತ್ತು ಎಂದು ಕಹಿ ಅನುಭವದ ಬಗ್ಗೆ ಹೇಳಿದ್ದಾರೆ.

ನೋಡಿರಿ

