ಫಂಗಸ್ ಡ್ರಾಮಾ.. ಜೈಲಿನ ವ್ಯವಸ್ಥೆ ಬಗ್ಗೆ ದರ್ಶನ್‌ ಸುಳ್ಳು ಹೇಳಿದ್ರಾ? –  ಕಾನೂನು ಪ್ರಾಧಿಕಾರ ವರದಿಯಲ್ಲಿ ಏನಿದೆ?

ಫಂಗಸ್ ಡ್ರಾಮಾ.. ಜೈಲಿನ ವ್ಯವಸ್ಥೆ ಬಗ್ಗೆ ದರ್ಶನ್‌ ಸುಳ್ಳು ಹೇಳಿದ್ರಾ? –  ಕಾನೂನು ಪ್ರಾಧಿಕಾರ ವರದಿಯಲ್ಲಿ ಏನಿದೆ?

ರೇಣುಕಾಸ್ವಾಮಿ ಕೊಲೆ ಕೇಸ್‌ ನಟ ದರ್ಶನ್‌ಗೆ ಕಗ್ಗಂಟಾಗಿ ಪರಿಣಮಿಸಿದೆ. ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್‌ಗೆ ನೆಮ್ಮದಿಯೇ ಇಲ್ಲದಾಗಿ ಹೋಗಿದೆ. ಜೈಲಿನಲ್ಲಿ ಮೂಲ ಸೌಕರ್ಯ ಕೂಡ ನೀಡುತ್ತಿಲ್ಲ ಎಂದು ಆರೋಪ ಮಾಡಿದ್ದರು. ಇದೀಗ ಕಾನೂನು ಸೇವೆಗಳ ಪ್ರಾಧಿಕಾರವು ಜೈಲಿಗೆ ಭೇಟಿ ನೀಡಿ ದರ್ಶನ್ ಸ್ಥಿತಿಯನ್ನು ಪರಿಶೀಲನೆ ನಡೆಸಿದ್ದು, 57 ನೇ ಸಿಸಿಹೆಚ್ ಕೋರ್ಟ್​​ಗೆ ವರದಿ ಸಲ್ಲಿಸಿದೆ.

ಇದನ್ನೂ ಓದಿ: ತಪ್ಪಾಗಿ ಆಡಿದ ಮಾತಿಗೆ ಬುದ್ಧಿ ಕಲಿಸದೇ ಬಿಡಲ್ಲ! – ರಕ್ಷಿತಾ ಪರ ನಿಂತ ಕಿಚ್ಚ ಸುದೀಪ್!‌

ನಟ ದರ್ಶನ್‌ ಜೈಲಿನಲ್ಲಿರುವ ವ್ಯವಸ್ಥೆಗಳ ಬಗ್ಗೆ ಒಂದಲ್ಲ ಒಂದು ದೂರುಗಳನ್ನು ಹೇಳುತ್ತಲೇ ಬಂದಿದ್ದಾರೆ. ಜೈಲಿನಲ್ಲಿ ತಮಗೆ ಕೆಲ ಪ್ರಮುಖ ಸೌಲಭ್ಯಗಳನ್ನು ನೀಡಲಾಗಿತ್ತಿಲ್ಲ ಎಂದು ದರ್ಶನ್ ಆರೋಪಿಸಿ, ಸ್ವತಃ ನ್ಯಾಯಾಧೀಶರೆ ಜೈಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕೆಂದು ಕೋರಿದ್ದರು. ಈ ಬೆನ್ನಲ್ಲೇ ಕಾನೂನು ಸೇವೆಗಳ ಪ್ರಾಧಿಕಾರವು ಜೈಲಿಗೆ ಭೇಟಿ ನೀಡಿ ದರ್ಶನ್ ಸ್ಥಿತಿಯನ್ನು ಪರಿಶೀಲನೆ ನಡೆಸಿ, 57 ನೇ ಸಿಸಿಹೆಚ್ ಕೋರ್ಟ್​​ಗೆ ವರದಿ ಸಲ್ಲಿಸಿದೆ. ದರ್ಶನ್‌ಗೆ ಬಿಸಿಲು ಹೊರತುಪಡಿಸಿದ್ರೆ ಜೈಲು ಮ್ಯಾನ್ಯುವಲ್‌ ಪ್ರಕಾರ, ಉಳಿದೆಲ್ಲ ಸೌಲಭ್ಯಗಳು ಸಿಗುತ್ತಿವೆ ಎಂದು ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ದರ್ಶನ್‌ ಫಂಗಸ್‌ ನಾಟಕಕ್ಕೂ ವರದಿಯಲ್ಲಿ ಉತ್ತರ ಕೊಡಲಾಗಿದೆ.

ಪ್ರಾಧಿಕಾರದ ವರದಿಯಲ್ಲಿ ಏನಿದೆ?

ದರ್ಶನ್ ಇರುವ ಬ್ಯಾರಕ್‌ನಲ್ಲಿ 1 ಇಂಡಿಯನ್‌ ಟಾಯ್ಲೆಟ್‌, 2 ವೆಸ್ಟ್ರನ್ ಟಾಯ್ಲೆಟ್ ಇದೆ. ದರ್ಶನ್ 2 ಬಾತ್ ರೂಂಗಳು (ಸ್ನಾನಗೃಹ) ಇವೆ. ದರ್ಶನ್ ಬ್ಯಾರಕ್‌ನಲ್ಲಿ ಸಿಬ್ಬಂದಿಯ ಬಾಡಿ ಓರ್ನ್ ಕ್ಯಾಮೆರಾ ಕೂಡ ಪರಿಶೀಲಿಸಲಾಗಿದೆ. ದರ್ಶನ್ ಇರುವ ಬ್ಯಾರಕ್‌ನಲ್ಲಿ ಅಗತ್ಯ ಬೆಳಕಿನ ವ್ಯವಸ್ಥೆ ಇದೆ. ಇಡೀ ರಾತ್ರಿ ಲೈಟ್ ಆನ್‌ ಇರೋದ್ರಿಂದ ನಿದ್ರೆಗೆ ಸಮಸ್ಯೆಯಾಗ್ತಿದೆ. ಸಂಜೆ 6 ಗಂಟೆಗೆ ಲೈಟ್ ಹಾಕೋದ್ರಿಂದ ನಿದ್ರೆ ಮಾಡೋದಕ್ಕೆ ಆಗ್ತಿಲ್ಲ ಅನ್ನೋದು ದರ್ಶನ್‌ ಆರೋಪ ಮಾಡಿದ್ರು. ಆದ್ರೆ ಕೈದಿಗಳ   ಭದ್ರತೆಯ ಕಾರಣಕ್ಕೆ ಇಡೀ ರಾತ್ರಿ ಲೈಟ್ ಹಾಕಲಾಗುತ್ತೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಇನ್ನು ದರ್ಶನ್‌ ದಿಂಬು ಹಾಸಿಗೆ ಕೇಳಿದ್ದಾರೆ. ಶಿಕ್ಷಿತ ಅಪರಾಧಿಗಳಿಗೆ (ಸಜಾ ಖೈದಿ) ಮಾತ್ರ ಹಾಸಿಗೆ, ದಿಂಬು ಹೊದಿಕೆ ನೀಡಲು ಅವಕಾಶ ಇದೆ. ವಿಚಾರಾಣಾಧೀನ ಕೈದಿಗೆ ಹಾಸಿಗೆ, ದಿಂಬು ನೀಡಲು ಜೈಲ್‌ ಮ್ಯಾನುವಲ್‌ನಲ್ಲಿ ಅವಕಾಶ ಇಲ್ಲ. ಅಲ್ಲದೇ ದರ್ಶನ್ ಸೆಲೆಬ್ರಿಟಿ ಆಗಿರೋದ್ರಿಂದ ಕಾರಿಡಾರ್‌ನಲ್ಲಿ ವಾಕಿಂಗ್ ಮಾಡುವಾಗ ಇತರೆ ಕೈದಿಗಳು ಕಿರುಚುತ್ತಾರೆ. ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ಗಳಿಂದ ದರ್ಶನ್ ಫೋಟೋ ತೆಗೆಯುವ ಸಾಧ್ಯತೆ ಇದೆ. ಆದ್ದರಿಂದ ಜೈಲು ಮ್ಯಾನುವಲ್ ಪ್ರಕಾರ 1 ಗಂಟೆಗೆ ವಾಕಿಂಗ್‌ಗೆ, ಆಟಕ್ಕೆ ಅವಕಾಶ ಕೊಡಲಾಗಿದೆ. ಎಲ್ಲ ಸೌಲಭ್ಯಗಳನ್ನ ನೀಡಲಾಗಿದೆ. ಅಗತ್ಯಬಿದ್ದರೆ ಜೈಲಿನಲ್ಲಿ ಶಿಸ್ತುಪಾಲನೆ, ನಿರ್ವಹಣೆಗಾಗಿ ವಾಕಿಂಗ್/ಆಟಕ್ಕೂ ನಿರ್ಬಂಧ ಏರಬಹುದು ಎಂದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನೂ ದರ್ಶನ್‌ ಕಾಲಿನಲ್ಲಿ ಫಂಗಸ್‌ ಬಂದಿದೆ ಅಂತ ದರ್ಶನ್‌ ಆರೋಪ ಮಾಡಿದ್ದಾರೆ. ಆದ್ರೆ ಅದು ಫಂಗಸ್ ಅಲ್ಲ, ಚರ್ಮ ಒಡೆದಿರೋದು (ಕಾಲಿನಲ್ಲಿ ಆಗಿರೋ ಬಿರುಕು) ಅಷ್ಟೇ. ಚರ್ಮರೋಗ ತಜ್ಞೆ ಡಾ.ಜ್ಯೋತಿ ಬಾಯ್ ಅವರಿಂದ ದರ್ಶನ್‌ಗೆ ಚಿಕಿತ್ಸೆ ಕೊಡಿಸಲಾಗಿದೆ. ಜೊತೆಗೆ ಜೈಲಿನ ವೈದ್ಯರಿಂದ ಫಿಸಿಯೋ ತೆರಪಿ ಕೂಡ ಮಾಡಿಸಲಾಗಿದೆ. ಸೊಳ್ಳೆಬತ್ತಿ, ಕನ್ನಡಿ ಮತ್ತು ಬಾಚಣಿಗೆ ನೀಡಿಲ್ಲ ಎಂಬುದು ದರ್ಶನ್‌ ಆರೋಪ, ಶಿಕ್ಷಿತ ಅಪರಾಧಿಗೆ ಮಾತ್ರ ಇದೆಲ್ಲ ನೀಡಲು ಅವಕಾಶ ಇದೆ. ವಿಚಾರಾಣಾಧೀನ ಖೈದಿಗಳಿಗೆ ನೀಡಲು ಅವಕಾಶ ಇಲ್ಲ. ಅಲ್ಲದೇ ಕನ್ನಡಿ ಬಾಚಣಿಗೆ ನೀಡಿದ್ರೆ ಅನಾಹುತ ಆಗುವ ಸಾಧ್ಯತೆ ಇದೆ. ಹಾಗಾಗಿ ಹೆಚ್ಚುವರಿ ಸೌಲಭ್ಯ ನೀಡೋಕಾಗೋದಿಲ್ಲ ಎಂದು ಕಾನೂನು ಸೇವಾ ಪ್ರಾಧಿಕಾರ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Shwetha M